About Me

My photo
ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.

Tuesday, June 14, 2011

ಪಾಪಿಯ ಲೋಕದಿಂದ ಪಾರಾದಳು ಸುಪ್ರಿಯಾ

ಅಪ್ಪನಂತೆನ್ನುತ್ತಲೇ ಅಪ್ಪಿಕೊಳ್ಳಹೋದ (ನಿವೇದಿತಾ)

ಮೂಲೆಯೊಂದರಲ್ಲಿ ಕುಳಿತು ಬಿಕ್ಕಳಿಸಿ ಅಳುತ್ತಿದ್ದಾಳೆ ಅವಳು. ಮನೆಗೆ ಬಂದ ಆತ ಬಾಚಿ ತಬ್ಬಿಕೊಂಡು ರಮಿಸಲು ಪ್ರಯತ್ನಿಸುತ್ತಾನೆ. ಆದರೆ ಅವಳು "ಮೊದಲು ಇಲ್ಲಿಂದ ಹೊರಡೋಣ. ಒಂದು ಕ್ಷಣವೂ ಇಲ್ಲಿ ಇರೋದು ಬೇಡ' ಎಂದು ಖಡಾ ಖಂಡಿತವಾಗಿ ಹೇಳುತ್ತಾಳೆ.



"ಬುದ್ಧಿ ಕೆಟ್ಟಿದೆಯಾ ನಿನಗೆ? ನಾವು ಇಲ್ಲಿಂದ ಹೋದರೆ ರಕ್ಷಣೆ ಸಿಗುತ್ತಾ?'
ಅವನ ಪ್ರಶ್ನೆ. "ಏನಾದರು ಆಗಲಿ. ಆದರೆ ಇಲ್ಲಿ ನಾನು ಒಂದು ಕ್ಷಣವೂ ಇರುವುದಿಲ್ಲ, ಮೊದಲು ನನ್ನ ಫೋನ್ ನಂಬರ್ ಬದಲಾಯಿಸಿ ಬೇರೆ ಎಲ್ಲಿಗಾದರೂ ಹೋಗೋಣ...' ಆಕೆಯದ್ದು ಒಂದೇ ವರಾತ.
"ಹಾಗಾದರೆ ನೀನು ನನ್ನನ್ನು ಪ್ರೀತಿಸಿದ್ದು ಸುಳ್ಳಾ?' ಹಾಗಂತ ಅವನು ಕೇಳಿದ್ದೇ ತಡ, ಕೆಂಡಾಮಂಡಲವಾದ ಆಕೆ ಕೆನ್ನೆಗೆ ಬಾರಿಸಿಯೇಬಿಟ್ಟಳು! ತಾನು ಮಾಡಿದ ತಪ್ಪೇನು ಎಂಬುದು ಅರಿವಾಗದೆ ಉರಿಯುತ್ತಿರುವ ಕೆನ್ನೆಯನ್ನು ಸವರಿಕೊಳ್ಳುತ್ತಾ ಅವಳನ್ನೇ ದಿಟ್ಟಿಸಿ ನೋಡುತ್ತಿದ್ದಾನೆ ಆತ. ಮುಖ ಎತ್ತಿ ನೋಡಿದ ಅವಳಿಗೆ ಪಶ್ಚಾತ್ತಾಪ ಕಾಡಿ ಓಡಿ ಬಂದು ಅವನನ್ನು ತಬ್ಬಿಕೊಂಡು ಒಂದೇ ಸಮನೆ ಅಳತೊಡುಗುತ್ತಾಳೆ. ಅವಳ ಕಣ್ಣೀರು ಧಾರೆಯಾಗಿ ಅವನ ಅಂಗಿಯ ತೋಳನ್ನು ತೋಯಿಸುತ್ತಿದ್ದರೆ ಆತ ಏನೂ ಅರ್ಥವಾಗದೆ ಸುಮ್ಮನೆ ನೋಡುತ್ತಿದ್ದಾನೆ...
ಇದು ಯಾವುದೋ ಸಿನಿಮಾ ಸನ್ನಿವೇಶವಲ್ಲ. ನಿಜವಾಗಲೂ ನಡೆದ ಒಂದು ಘಟನೆ; ಅದೂ ಉದ್ಯಾನ ನಗರಿಯ ನಡುವೆಯೇ! ಸತ್ಯ ಕಥೆಯ ಪೂರ್ಣ ವಿವರ
ಅರಿವಾಗಬೇಕಾದರೆ ನೀವು ಎರಡು ತಿಂಗಳ ಹಿಂದೆ ಹೋಗಬೇಕು...




***
ಅದು ಕರಾವಳಿ ತೀರದ ಮಂಗಳೂರಿಗೆ ಸಮೀಪದ ಪುತ್ತೂರು. ಅವಳ ಹೆಸರು ಸುಪ್ರಿಯಾ (ಹೆಸರು ಬದಲಿಸಿದೆ) ಮಣಿಪಾಲ್್ನಲ್ಲಿ ಎಂಬಿಎ ಓದುತ್ತಿದ್ದಾಳೆ. ಮನೆಯವರು ಆರ್ಥಿಕವಾಗಿ ಅಷ್ಟೇನೂ ಉತ್ತಮವಾಗಿಲ್ಲದಿದ್ದರೂ ಯಾವುದೇ ತೊಂದರೆಗಳಿಲ್ಲದ ಕುಟುಂಬ. ಒಬ್ಬಳೆ ಮಗಳಾದ ಕಾರಣ ಪ್ರೀತಿಯಿಂದ ಬೆಳೆಸಿದ್ದಾರೆ. ಅಲ್ಲಿಂದ ಕೂಗಳತೆಯ ದೂರದಲ್ಲಿದೆ ಸೋಮನತಡಕ ಎಂಬ ಕುಗ್ರಾಮ. ಅಲ್ಲಿಂದ ಮಣಿಪಾಲ್ ಗೆ ಓದಲು ಬರುತ್ತಿದ್ದವನ ಹೆಸರು ವಿನಯಚಂದ್ರ.
ಅವನೂ ಮಧ್ಯಮವರ್ಗದ ಕುಟುಂಬದವನೆ. ಆದರೆ ಪ್ರೀತಿಗೆ ಆರ್ಥಿಕ ಮಟ್ಟದ ಅಗತ್ಯವೇನಿದೆ ಹೇಳಿ ? ವಿನಯಚಂದ್ರ ಮತ್ತು ಸುಪ್ರಿಯಾ ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ಕಾರಣವೋ, ಒಂದೇ ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಕಾರಣವೋ ಒಟ್ಟಿನಲ್ಲಿ ಇವರಿಬ್ಬರ ನಡುವೆ ಪ್ರೀತಿ ಅಂಕುರಿಸಿತು.
ಓದುವ ದಿನಗಳಲ್ಲಿ ಪ್ರೀತಿ ಎಂಬ ವಿಷಯ ಇವರಿಬ್ಬರಿಗೆ ಮಾತ್ರ ಸೀಮಿತವಾಗಿತ್ತು. ಓದು ಮುಗಿದು ಸುಪ್ರಿಯಾ ಮನೆಯಲ್ಲಿ ಹುಡುಗನ ಹುಡುಕಾಟ ಆರಂಭವಾದ ಕೂಡಲೇ ಪ್ರೇಮಿಗಳ ವಿರಹ ವೇದನೆ ಮುಗಿಲು ಮುಟ್ಟಿತು. ಇನ್ನು ಅಗಲಿರಲು ತಮ್ಮಿಂದ ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ಇವರ ಪ್ರೀತಿ ಮುಟ್ಟಿತ್ತು. ಮನೆಯಲ್ಲಿ ತಿಳಿಯದ ಹಾಗೆ ಇವರು ಭೇಟಿಯಾಗುತ್ತಿದ್ದರು. ಆದರೆ ಅದೊಂದು ದಿನ ವಿಷಯ ಸುಪ್ರಿಯಾ ಮನೆಗೆ ತಿಳಿಯಿತು.
ವಿದ್ಯಾವಂತ ಹುಡುಗ ವಿನಯಚಂದ್ರನಿಗೆ ಮದುವೆ ಮಾಡಲು ಜಾತಿಯು ಅಡ್ಡಿಯಾಗಿತ್ತು. ಹಾಗಾಗಿ ಎರಡೂ ಕುಟುಂಬಗಳಿಂದ ಇವರ ಪ್ರೀತಿಗೆ ವಿರೋಧ ವ್ಯಕ್ತವಾಯಿತು. ಇದೇ ಕಾರಣಕ್ಕೆ ಅವರು ಮನೆಯವರಿಂದ ದೂರವಾಗಿ ಮದುವೆಯಾಗಲು ನಿರ್ಧರಿಸಿ ಹೇಳದೆ ಕೇಳದೆ ಮನೆಯಿಂದ ಬೆಂಗಳೂರಿಗೆ ಓಡಿ ಬಂದರು.
ಅದು ಗೋಮುಖ ವ್ಯಾಘ್ರ
ಅದುವರೆಗೆ ಬೆಂಗಳೂರು ಮುಖ ನೋಡದ ಅವರು ಹೋಗುವುದಾದರು ಎಲ್ಲಿಗೆ ? ಏನು ಮಾಡುವುದು ಎಂಬ ಆತಂಕ ಇಬ್ಬರನ್ನೂ ಕಾಡತೊಡಗಿತು. ಅದೇ ಸಮಯಕ್ಕೆ ಅವರಿಗೆ ನೆನಪಾಗಿದ್ದು ಪತ್ರಕರ್ತ ಸೂರ್ಯ ಬಿಳಿಗಿರಿ!
ಪರಮಹಂಸರ ಖಾಸಾ ಸಹೋದರ, ಮದರ್ ಥೆರೇಸಾರ ಮೊಮ್ಮಗ ಎಂಬಿತ್ಯಾದಿ ಬಿರುದುಗಳೊಂದಿಗೆ ಬಿಂಬಿಸಿಕೊಂಡ, ಪೀತ ಪತ್ರಿಕೋದ್ಯಮದ ಅಷ್ಟೂ ಪಟ್ಟುಗಳನ್ನು ಕರಗತ ಮಾಡಿಕೊಂಡ ಬಿಳಿಗಿರಿ ಬರೆಯುವುದೆಲ್ಲಾ ಪರರಿಗಾಗಿ, ತಾನು ಮಾಡುವುದೆಲ್ಲಾ ಬರೆಯಬಾರದು ಎಂಬ ಕಠಿಣ ಸಿದ್ಧಾಂತವನ್ನು ತಪ್ಪದೆ ಪಾಲಿಸುವವ ಎಂಬ ಸತ್ಯ, ಈ ಜೋಡಿ ಸೇರಿದಂತೆ ಅವನ ಬರಹ ಓದುವ ಹಲವಾರು ಜನರಿಗೆ ಗೊತ್ತಿರಲಿಲ್ಲ. ಹಾಗಾಗಿಯೆ
ಅವರು ನೇರವಾಗಿ ಹೋಗಿ ಬಿಳಿಗಿರಿಯನ್ನು ಭೇಟಿಯಾಗಲು ತೀರ್ಮಾನಿಸಿದರು.
ಪ್ರೀತಿಸಿ ಹಿರಿಯರ ವಿರೋಧ ಎದುರಿಸಲಾರದೆ ಓಡಿ ಬಂದ ಅವರಿಬ್ಬರ ಮಾತುಗಳನ್ನು ತುಂಬಾ ಕುತೂಹಲ ದಿಂದ ಕೇಳಿದ ಬಿಳಿಗಿರಿ, ತನ್ನ ಕಚೇರಿಗೆ ಸಮೀಪದ ಒಂದು ಪುಟ್ಟ ಮನೆಯಲ್ಲಿ
ಅವರಿಬ್ಬರನ್ನು ಉಳಿಯಲು ಏರ್ಪಾಟು ಮಾಡಿದ. "ಆರ್ಥಿಕವಾಗಿ ನೀವು ಸಬಲರಾಗಬೇಕು, ನಿಮ್ಮ ದುಡಿಮೆಯಲ್ಲಿ ನೀವು ಬದುಕುವ ಆರ್ಥಿಕ ಸ್ಥಿರತೆ ಬಂದು, ನಿಮ್ಮ ಕಾಲ ಮೇಲೆ ನೀವು ನಿಲ್ಲುವ ನಂಬಿಕೆ ಬಂದ ಕೂಡಲೇ ನಾನೇ ಮುಂದೆ ನಿಂತು ನಿಮ್ಮಿಬ್ಬರ ಮದುವೆ ಮಾಡಿಸುತ್ತೇನೆ ಮಗಳೆ' ಎಂದು ತಲೆ ಸವರುತ್ತಾ ಅವನು ಹೇಳುತ್ತಿದ್ದರೆ ಸುಪ್ರಿಯಾ ಕಣ್ಣಲ್ಲಿ ನೀರು ಜಾರುತ್ತಿತ್ತು. ಹೆತ್ತ ತಂದೆಗಿಂತ ಹೆಚ್ಚಿನ ಮುತುವರ್ಜಿವಹಿಸಿ ತಮ್ಮ ಮದುವೆ ಮಾಡಲು ಇಷ್ಟೆಲ್ಲಾ ತೊಂದರೆ ತೆಗೆದುಕೊಳ್ಳುತ್ತಿರುವ "ಬಿಳಿಗಿರಿ ಸರ್' ಬಗ್ಗೆ ಅವರಿಬ್ಬರಿಗೆ ಎಲ್ಲಿಲ್ಲದ ಗೌರವ ಉಕ್ಕಿ ಬಂತು.
ಅವರು ಓಡಿ ಬಂದು ಎರಡು ದಿನ, ಬಿಳಿಗಿರಿ ಬಳಿ ಬಂದು ಒಂದು ದಿನ ಕಳೆದಿತ್ತು. ಮಾರನೆ ದಿನ ಸಂಜೆ ಅವರಿಬ್ಬರೂ ಇದ್ದ ಶೀಟ್ ಮನೆ ಬಾಗಿಲಲ್ಲಿ ಬಿಳಿಗಿರಿ ಸರ್ ಪ್ರತ್ಯಕ್ಷ! ತಾವಿರುವ ಮನೆಗೆ
ಅವರೇ ಸ್ವತಃಬಂದಿರುವುದು ಕಂಡು ಆ ಯುವ ಜೋಡಿಗೆ ಅಚ್ಚರಿಯಾಯಿತು. ತಾವು, ತಮ್ಮಂತಹ ಅದೆಷ್ಟೋ ಯುವ ಜೋಡಿಗಳಿಗೆ ಮಾರ್ಗದರ್ಶಕರಾಗಿ, ಒಬ್ಬ ಅನಾಮಿಕರನ್ನೂ ತಮ್ಮ ಮಕ್ಕಳಂತೆ ಮುತುವರ್ಜಿಯಿಂದ ನೋಡಿಕೊಳ್ಳುವ ಬಿಳಿಗಿರಿ ಸರ್ ಬಗ್ಗೆ ಆ ಎರಡೂ ಯುವ ಹೃದಯಗಳಲ್ಲಿ ಎಲ್ಲಿಲ್ಲದ ಗೌರವ ಮೂಡಿಬಂತು.
ಮನೆಯಿಂದ ಅವರಿಬ್ಬರನ್ನೂ ಕಚೇರಿಗೆ ಕರೆತಂದ ಬಿಳಿಗಿರಿ, ಎದುರಿಗೆ ಕೂರಿಸಿಕೊಂಡು ತನ್ನ ಪತ್ರಿಕೋದ್ಯಮದ ಸಾಧನೆಯ ಬಗ್ಗೆ ದೀರ್ಘ ಉಪನ್ಯಾಸ ನೀಡಿದ. ನಂತರ "ಇನ್ನು ನೀವು ಹೊರಡಿ, ಎರಡು ಮೂರು ದಿನದಲ್ಲಿ ಒಂದು ಕೆಲಸ ಹುಡುಕುತ್ತೇನೆ. ಇಬ್ಬರೂ ದುಡಿಯಲಿಲ್ಲ ಅಂದರೆ ಬೆಂಗಳೂರಿನಲ್ಲಿ ಬದುಕುವುದು ತುಂಬಾ ಕಷ್ಟ' ಎಂದ ಬಿಳಿಗಿರಿ "ಈಗಲೇ ಬೆಂಗಳೂರಿನಲ್ಲಿ ಓಡಾಡಿ, ಪರಿಚಯಿಸಿಕೊಳ್ಳಿ' ಎಂದು ತನ್ನ ಜೇಬಿನಿಂದ ಐನೂರರ ನೋಟನ್ನು ತೆಗೆದು ಕೊಟ್ಟ. ಅವರು ಹೊರಡುತ್ತಿದ್ದ ಸಮಯದಲ್ಲಿ "ಎಲ್ಲಿ ನಿನ್ನ ಫೋನ್ ನಂಬರ್ ಕೊಡಮ್ಮ ಸುಪ್ರಿಯಾ, ಯಾವಾಗಾದರೂ ಅವನ ಫೋನ್ ಸಿಗಲಿಲ್ಲ ಎಂದರೆ ನಿನ್ನ ಕಾಂಟ್ಯಾಕ್ಟ್ ಮಾಡಬಹುದು' ಎಂದು ಅವಳ ಫೋನ್ ನಂಬರ್ ಪಡೆದು ಒಂದು ಮಿಸ್ಡ್ ಕಾಲ್ ಕೊಟ್ಟ. ಅವರಿಬ್ಬರಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗಿತ್ತು. ಆದರೆ ಆಗಲೇ ಅವರಿಬ್ಬರ ಗೃಹಗತಿಯಲ್ಲಿ ಸಾಡೇ ಸಾತಿ ಪ್ರವೇಶವಾಗಿದೆ ಎಂದು ಅರಿವಾಗಲು ಅವರಿಗೆ ಹೆಚ್ಚು ಕಾಲ ಬೇಕಾಗಲಿಲ್ಲ.
ಹುಡುಗಿ ಸುಪ್ರಿಯಾಳ ಫೋನ್ ನಂಬರ್ ಪಡೆದ ಬಿಳಿಗಿರಿ ಅಂದಿನ ತಡ ರಾತ್ರಿಯೇ ಎಸ್ ಎಂಎಸ್ ಶುರು ಮಾಡಿದ. ಏನೋ ತಂದೆಯಂಥವರು ಎಂದು ಅವಳು ಸುಮ್ಮನಿದ್ದಳು. ಎರಡು ದಿನ ಕಳೆಯುವುದರಲ್ಲಿ ವಿನಯಚಂದ್ರನಿಗೆ ಯಾವುದೋ ಒಂದು ಸೆಕ್ಯೂರಿಟಿ ಕಂಪನಿಯಲ್ಲಿ ಕೆಲಸ ದೊರೆಯಿತು. ಕೆಲಸ ದೊರೆತ ದಿನದಿಂದ ಆತನಿಗೆ ರಾತ್ರಿ ಪಾಳಿಯಲ್ಲಿ ಕೆಲಸ. ಇಡೀ ರಾತ್ರಿ ದುಡಿಯುವ ಆತ ಹಗಲಿಡೀ ನಿದ್ದೆಗೆ ಜಾರುತ್ತಿದ್ದ. ರಾತ್ರಿ ಸಮಯದಲ್ಲಿ ಮನೆಯಲ್ಲಿ ಒಬ್ಬಳೇ ಇರುತ್ತಿದ್ದ ಸುಪ್ರಿಯಾ ಫೋನ್್ಗೆ ಇತ್ತ ಬಿಳಿಗಿರಿ ಅಸಹ್ಯ ಸಂದೇಶಗಳ ರವಾನೆ ಆರಂಭವಾಯಿತು. ಮನುಷ್ಯರಾದವರು ಓದಲು ಅಸಹ್ಯ ಪಡುವ ರೀತಿಯ ಸಂದೇಶಗಳನ್ನು ನೋಡಿದ ಸುಪ್ರಿಯಾ ಒಂದು ದಿನ ವಿನಯಚಂದ್ರನಿಗೆ ತೋರಿಸಿದಳು "ಅವೆಲ್ಲಾ ಈಗಿನ ಕಾಲದಲ್ಲಿ ಮಾಮೂಲಿ. ಅದೇನು ಮಹಾ ಅಪರಾಧ ಎಂದು ಹೇಳುತ್ತೀಯ ಸುಮ್ನಿರು. ಅವರು ನಮಗಾಗಿ ಎಷ್ಟೆಲ್ಲಾ ಕಷ್ಟ ಪಟ್ಟಿದ್ದಾರೆ. ಹೀಗೆಲ್ಲಾ ಅಪಾರ್ಥ ಮಾಡಿಕೋಬೇಡ' ಎಂದು ಅವಳನ್ನೇ ಗದರಿಸಿದ. ಇದರಿಂದ ಅವಳು ಇನ್ನಷ್ಟು ಖಿನ್ನಳಾಗತೊಡಗಿದಳು.
ಒಂದು ದಿನ ಅವಳೇ ನೇರವಾಗಿ ಕೇಳಿದಳು "ನನಗೆ ಬೇಗ ಒಂದು ಕೆಲಸ ನೋಡಿ ಸಾರ್, ಇಬ್ಬರೂ ದುಡಿದು ಬೇಗ ಮದುವೆ ಆಗ್ತೀವಿ' ಎನ್ನುತ್ತಲೇ ಬಾಲ ತುಳಿದ ನಾಗರ ಹಾವಿನಂತಾದ ಬಿಳಿಗಿರಿ! "ಏನಮ್ಮ ವಿರಹ ಭರಿಸಲಾಗುತ್ತಿಲ್ಲವೆ? ಅಷ್ಟು ಆತುರ ಪಡ್ತಿದ್ದೀಯ. ಅಷ್ಟು ಬೇಕು ಅನ್ನೋದಾದರೆ ನಾನಿದ್ದೀನಿ ಹೇಳು. ಯಾವ ಸಮಯದಲ್ಲಿ ಬೇಕಾದರೂ ನನ್ನ ಫೋನ್ ಆನ್್ನಲ್ಲೇ ಇರುತ್ತೆ. ಒಂದು ಮಿಸ್ಡ್್ಕಾಲ್ ಕೊಡು ನೇರವಾಗಿ ನಿನ್ನ ತೋಳಿನಲ್ಲಿ ಬಂದು ಇಳೀತೀನಿ. ಹೇಗೂ ಅವನಿಗೆ ನೈಟ್ ಶಿಫ್ಟ್ ಅಲ್ಲವಾ, ಒಬ್ಬಳೇ ಬೇಜಾರು ಅನ್ನೋದಾದರೆ ನಾನು ಕಂಪನಿ ಕೊಡ್ತೀನಿ ಹೆದರಬೇಡ. ಇನ್ನೂ ನೀವು ಒಬ್ಬರನ್ನೊಬ್ಬರು ಪೂರ್ತಿ ಅರ್ಥ ಮಾಡಿಕೋಬೇಕು' ಎಂದು ತನ್ನ ಪುಂಗಿ ಊದುತ್ತಿರುವಾಗಲೇ ಅವಳ ಕಣ್ಣು ತುಂಬಿ ಬಂದಿತ್ತು. ಪೂರ್ತಿ ಕೇಳಿಸಿಕೊಳ್ಳುವ ಗೋಜಿಗೆ ಹೋಗದೆ ಎದ್ದು ನೇರವಾಗಿ ಮನೆಗೆ ಬಂದು ಗೊಳೋ ಎಂದು ಅತ್ತಿದ್ದಳು. ಹಾಗೆ ಅವಳು ಅಳುತ್ತಿರುವಾಗಲೇ ಮತ್ತೆ ಬಿಳಿಗಿರಿಯಿಂದ ಫೋನ್ ಬಂದಿತ್ತು. ಆದರೆ ಅವಳು ತೆಗೆಯುವ ಸಾಹಸ ಮಾಡಲಿಲ್ಲ. ಫೋನ್ ಒಂದೇ ಸಮನೆ ಹೊಡೆದುಕೊಳ್ಳುವುದು ನೋಡಿ ಕೊನೆಗೆ ತೆಗೆದಳು. "ಬೇಜಾರಾಯಿತಾ ಮಗಳೆ, ನಿಮ್ಮಿಬ್ಬರ ಪ್ರೀತಿ ಎಷ್ಟು ಗಾಢವಾಗಿದೆ ಎಂದು ಪರೀಕ್ಷೆ ಮಾಡಲು ಹಾಗೆ ಮಾತಾಡಿದೆ ಬೇಜಾರಾಗ್ಬೇಡ' ಎಂದ.
ಇವನ ನಡತೆ ಮತ್ತು ಅಂದು ನಡೆದ ವಿಚಾರದ ಬಗ್ಗೆ ವಿನಯಚಂದ್ರನಿಗೆ ಹೇಳುವುದಾ ? ಬೇಡವಾ? ಸಂದಿಗ್ಧತೆಯಲ್ಲಿ ತೊಳಲಾಡಿದಳು ಸುಪ್ರಿಯಾ. ಒಂದು ವೇಳೆ ತನ್ನನ್ನು ಪರೀಕ್ಷೆ ಮಾಡಲೇ ಹಾಗೆ ವರ್ತಿಸಿರಬಹುದು. ಬಿಳಿಗಿರಿ ಸರ್್ರನ್ನು ತಾನೇ ಅನವಶ್ಯಕ ಅಪಾರ್ಥ ಮಾಡಿಕೊಂಡೆ ಎಂದು ತನಗೆ ತಾನೆ ಸಮಾಧಾನ ಪಡಿಸಿಕೊಂಡು ಸುಮ್ಮನಾದಳು.
ಈ ಘಟನೆ ನಡೆದ ನಂತರ ಬಿಳಿಗಿರಿಯ ಮೇಲೆ ಒಂದು ರೀತಿಯ ನಿರುತ್ಸಾಹ ಭಾವನೆಯನ್ನು ಅವಳು ತಾಳಿದ್ದಳು. ಆದರೂ ಅದನ್ನು ಅವನೆದುರಿಗೆ ತೋರ್ಪಡಿಸುತ್ತಿರಲಿಲ್ಲ. ವಿನಯಚಂದ್ರ ಇಲ್ಲದ ಸಮಯದಲ್ಲಿ ಬಿಳಿಗಿರಿಯ ಫೋನ್ ತೆಗೆಯುವುದು ಕಡಿಮೆ ಮಾಡಿದಳು. ರಾತ್ರಿ ಸಮಯದಲ್ಲಿ ಫೋನ್ ಆಫ್ ಮಾಡತೊಡಗಿದಳು. ಇವಳ ಈ ನಡವಳಿಕೆಗಳು ಬಿಳಿಗಿರಿಗೆ ಸಹಿಸಲಸಾಧ್ಯವಾಯಿತು.
ಇನ್ನೂ ವಿಚಿತ್ರ ನಡೆದದ್ದು ಆಗಲೇ. ಆಧುನಿಕ ತಾಂತ್ರಿಕತೆಯ ಗಂಧ ಗಾಳಿ ಗೊತ್ತಿಲ್ಲದ ಬಿಳಿಗಿರಿ, ಇಂದಿಗೂ ಬರೆಯುತ್ತಾನೆಯೇ ಹೊರತು ಕಂಪ್ಯೂಟರ್ ನಲ್ಲಿ ಟೈಪ್ ಮಾಡಲು ಬರುವುದಿಲ್ಲ. ಇಂತಹ ಬಿಳಿಗಿರಿ ಸಿಕ್ಕಿಹಾಕಿಕೊಂಡಿದ್ದು ಇದೇ ಕೈಬರಹದಲ್ಲಿ! ತನಗಿರುವ ಇಬ್ಬರು ಹೆಣ್ಣು ಮಕ್ಕಳಿಗಿಂತ ಕಿರಿಯವಳಾದ ಸುಪ್ರಿಯಾಳಿಗೆ, ಐವತೈದು ವರ್ಷದ ಬಿಳಿಗಿರಿ ಪ್ರೇಮ ಪತ್ರವೊಂದನ್ನು ಬರೆದೇ ಬಿಡುತ್ತಾನೆ! ಅದರಲ್ಲಿ "ನೀನಿಲ್ಲದೆ ನನ್ನ ಬದುಕೇ ಶೂನ್ಯ, ಮರುಭೂಮಿಯಂಥ ನನ್ನ ಹೃದಯದಲ್ಲಿ ಓಯಸಿಸ್್ನಂತೆ ನಿನ್ನ ಪ್ರವೇಶವಾಗಿದೆ ದಯವಿಟ್ಟು ನನ್ನ ಕೈ ಬಿಡದೆ ಒಪ್ಪಿಕೋ. ನಿನ್ನನ್ನು ಮಹಾರಾಣಿಯಂತೆ ನೋಡಿಕೊಳ್ಳುತ್ತೇನೆ' ಎಂದು ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾನೆ. ಅಲ್ಲಿಗೆ ಅವಳ ಸಹನೆಯ ಕಟ್ಟೆ ಒಡೆಯುತ್ತದೆ. ಗೋಮುಖ ವ್ಯಾಘ್ರನ ಅಸಲಿ ಮುಖ ಅರಿವಾಗುತ್ತದೆ. ಅಲ್ಲಿಯವರೆಗೆ "ಪ್ರೀತಿ ಪರೀಕ್ಷೆ' ಎನ್ನುತ್ತಿದ್ದ ಕಪಟ ಮಾತುಗಳು ಅವಳ ಅರಿವಿಗೆ ಬರುತ್ತವೆ. "ಮಗಳೆ' ಎಂದು ಬೊಗಳೆ ಬಿಡುತ್ತಿದ್ದವನ ನೀಚತನದ ಅರಿವಾಗುತ್ತೆ. ಇಂಥ ದುಃಖದ ಮಡುವಿನಲ್ಲಿ ಕುಳಿತಿದ್ದ ಸುಪ್ರಿಯಾ, ವಿನಯಚಂದ್ರ ಕೇಳಿದ ಪ್ರಶ್ನೆಗೆ ಕೆನ್ನೆಗೆ ಬಾರಿಸಿದ್ದು ಸಹಜವಿತ್ತು.
ಆಮೇಲೆ...?
ಕಾಮ ಪಿಪಾಸುವಿನ ಪ್ರೇಮ ಪತ್ರವನ್ನು ವಿನಯಚಂದ್ರನಿಗೆ ತೋರಿಸುತ್ತಾಳೆ ಆಕೆ. ಅವನಿಗೂ ಅರ್ಥವಾಗುತ್ತದೆ ತಾನೇಕೆ ರಾತ್ರಿಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂಬ ಸತ್ಯ. ತಾವು ಇಲ್ಲಿಗೆ ಬಂದು ತಿಂಗಳು ಕಳೆಯುತ್ತಾ ಬಂದರೂ ಮದುವೆ ವಿಷಯ ಎತ್ತದ ಬಿಳಿಗಿರಿಯ ಅಸಲಿತನದ ಪರಿಚಯವಾಗಿ ಏನೂ ಮಾಡಲು ತೋಚದೆ ತಲೆ ಮೇಲೆ ಕೈ ಹೊತ್ತು ಕೂರುತ್ತಾರೆ. ಆದರೂ ತಾವಿರುವ ಪರಿಸ್ಥಿತಿಯ ಅರಿವಾಗಿ ತಮ್ಮ ಆರ್ಥಿಕ ಮಟ್ಟ ಸುದಾರಿಸುವವರೆಗೆ ತಡೆಯಲು ಹೇಳುತ್ತಾನೆ.
ಇದು ಅವಳಿಗೆ ಸಹಿಸಲಾಗುವುದಿಲ. ಅವನ ಮೇಲೆಯೇ ಅನುಮಾನ ಮೂಡಲಾರಂಭಿಸುತ್ತದೆ. ಅಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಎದೆಗುಂದದ ಸುಪ್ರಿಯಾಗೆ ತಾಯಿಯ ನೆನಪಾಗಿ ಅವಳಿಗೆ ಫೋನ್ ಮಾಡುತ್ತಾಳೆ. ಮನೆ ಬಿಟ್ಟು ಬಂದಾಗಲಿಂದ ನಡೆದ ಎಲ್ಲಾ ವಿಚಾರಗಳ ಬಗ್ಗೆ ವಿವರಿಸುತ್ತಾಳೆ. ಎಲ್ಲವನ್ನೂ ಕೇಳಿದ ಮಾತೃ ಹೃದಯದಲ್ಲಿ ದುಃಖದ ಕಟ್ಟೆ ಒಡೆಯುತ್ತದೆ. ಪಾಪಿಯ ಕೂಪದಲ್ಲಿ ಮಗಳು ಅನುಭವಿಸಿದ ಪ್ರತ್ಯಕ್ಷ ನರಕದ ನೆನಪಾಗಿ, ತಾಯಿ ಕೂಡಲೇ ಕಾರ್ಯ ಪ್ರವೃತ್ತಳಾಗುತ್ತಾಳೆ.
ಕೂಡಲೆ ಗಂಡನ ಜೊತೆ ಚರ್ಚಿಸುತ್ತಾಳೆ. ವಿಷಯ ತಿಳಿದ ಸುಪ್ರಿಯಾ ತಂದೆ ಕೆಲ ಗ್ರಾಮಸ್ಥರ ಜೊತೆ ನೇರವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ. ಭೂತದ ಬಾಯಲ್ಲಿ ಭಗವದ್ಗೀತೆ ಬೋಧನೆ ಕೇಳಿ, ಬಿಳಿಗಿರಿಯನ್ನು ಹಿಗ್ಗಾ ಮುಗ್ಗಾ ಥಳಿಸುತ್ತಾರೆ. ಇದ್ದ ಒಬ್ಬಳೇ ಮಗಳನ್ನು ಹಾದಿ ತಪ್ಪಿಸಿ ನರಕದ ಕೂಪಕ್ಕೆ ತಳ್ಳುವ ಪ್ರಯತ್ನ ಮಾಡಿದ ಎಂಬ ಕಾರಣಕ್ಕೆ ವಿನಯಚಂದ್ರನಿಗೂ ಗೂಸಾ ಬೀಳುತ್ತೆ.

ಕ್ಲೈಮ್ಯಾಕ್ಸ್...
ಬಿಳಿಗಿರಿ ಮಾಡಿದ ಎಲ್ಲಾ ಪಾಪದಲ್ಲೂ ವಿನಯಚಂದ್ರನ ಕೈವಾಡವಿದೆ ಎಂದು ಸುಪ್ರಿಯಾ ಕೂಡಾ ನಂಬುತ್ತಾಳೆ. ಸದ್ಯಕ್ಕೆ ಈ ಪಾಪಿಯಿಂದ ದೂರವಾದರೆ ಸಾಕು ಎಂಬ ನಿರ್ಧಾರಕ್ಕೆ ಬಂದಿದ್ದ ಸುಪ್ರಿಯಾ ತನ್ನ ಪ್ರೀತಿಯನ್ನು ಕೂಡಾ ಮರೆಯುತ್ತಾಳೆ. ವಿನಯಚಂದ್ರನನ್ನು ಬಿಟ್ಟು ತನ್ನ ತಂದೆಯ ಜೊತೆ ಊರಿಗೆ ಹೊರಡುತ್ತಾಳೆ. ತನ್ನ ತಪ್ಪೇ ಇಲ್ಲದೆ ಘಟಿಸಿದ ಬೆಳವಣಿಗೆಗಳ ಅರಿವಾಗದೆ ಚಿಂತಾಕ್ರಾಂತನಾಗುತ್ತಾನೆ ವಿನಯಚಂದ್ರ. ಸುಪ್ರಿಯಾ ಮನೆ ಬಿಟ್ಟ ಮಾರನೇ ದಿನವೇ ವಿನಯಚಂದ್ರನನ್ನು ಮನೆ ಖಾಲಿ ಮಾಡಿಸುತ್ತಾನೆ ಬಿಳಿಗಿರಿ. ಗೊತ್ತಿಲ್ಲದ ಊರಿನಲ್ಲಿ ನೆಲೆಯಿಲ್ಲದೆ ಪರದಾಡಲಾಗದೆ ಮತ್ತೆ ಊರು ಸೇರುತ್ತಾನೆ. ಸುಪ್ರಿಯಾಳನ್ನು ಪಡೆಯಲು ಮತ್ತೆ ಪ್ರಯತ್ನ ಮುಂದುವರೆಸುತ್ತಾನೆ. ಆದರೆ ಅವಳಿಗೆ ಮತ್ತು ಅವಳ ಕುಟುಂಬಕ್ಕೆ
ಅವನ ಮೇಲೆ ನಂಬಿಕೆಯಿಲ್ಲದೆ ಹೊರದಬ್ಬುತ್ತಾರೆ. ಅದೊಂದು ದಿನ ಸುಪ್ರಿಯಾಳಿಗೆ ಬೇರೊಬ್ಬನ ಜೊತೆ ಮದುವೆಯೂ ಆಗುತ್ತದೆ. ಪ್ರೀತಿಸಿದ ಹುಡುಗಿ ದೂರವಾದ ಗುಂಗಿನಲ್ಲಿ ವಿನಯಚಂದ್ರನಿಗೆ ಹುಚ್ಚು ಹಿಡಿದು ಮತ್ತೆ ಬೆಂಗಳೂರಿನ ನಿಮ್ಹಾನ್ಸ್ ಸೇರುತ್ತಾನೆ. ಪ್ರೇಮಿಗಳನ್ನು ದೂರ ಮಾಡಿದ ಪಾಪ ಹೊತ್ತ ಬಿಳಿಗಿರಿ ಮಾತ್ರ ಮತ್ತೊಂದು ಜೋಡಿ ತನ್ನನ್ನು ಹುಡುಕಿ ಬರುತ್ತದೆ, ಅವಳಿಗೆ ಗಾಳ ಹಾಕಬಹುದು ಎಂದು ಕಾಯುತ್ತಲೇ ಇದ್ದಾನೆ; ಯುವಕ ಯುವತಿಯರೆ ಹುಷಾರ್ !

Thursday, May 19, 2011

ಶಿಕಾರಿಗೆ ಸಿಕ್ಕ ಪಶು

ಹಸನಾಯಿತು ಸಹನೆಯ ಬಾಳು
ವೆಂಕಟರೆಡ್ಡಿ, ಆ ಲಾಡ್ಜ್ ನ ರಿಸೆಪ್ಷನ್ ನಲ್ಲಿ ಕೂತಿದ್ದರೂ ಆತನ ದೃಷ್ಟಿ ಎಲ್ಲಾ ಮುಂದಿನ ರಸ್ತೆ ಮೇಲೆಯೇ ಬಿದ್ದಿದೆ. ಅವನು ಬರ್ತಾನಾ ? ಬಂದೇ ಬರ್ತಾನೆ. ದೇಹ ಮಾರಿಕೊಂಡು ತುತ್ತು ತಿನ್ನೋ ಮಹಿಳೆಯರನ್ನೂ ಬಿಡದ, ಮಾನ, ಮರ್ಯಾದೆ, ನಾಚಿಕೆ ಇಲ್ಲದ ಅವನು ಇಲ್ಲಿಗೆ ಬರದೇ ಇರಲು ಸಾಧ್ಯವೇ? ಹೀಗಂತ ಬೆಳಗ್ಗೆ ಎದ್ದಾಗಲಿಂದ ಅದೆಷ್ಟು ಬಾರಿ ತನಗೆ ತಾನೆ ಈ ಪ್ರಶ್ನೆಯನ್ನು ಕೇಳಿಕೊಂಡಿದ್ದನೋ.
---
ಪ್ರತಿ ದಿನ ಎದ್ದ ಕೂಡಲೇ ರಿಸೆಪ್ಷನ್ ನಲ್ಲಿರುವ ತಿರುಪತಿ ವೆಂಕಟರಮಣಸ್ವಾಮಿ ಫೋಟೋಗೆ ಹೂಮಾಲೆ ಹಾಕಿ, ಊದುಬತ್ತಿ ಹಚ್ಚಿ ವೇಟರ್ ತಂದುಕೊಟ್ಟ ಕಾಫಿ ಕುಡಿದು ದೂರದ ಊರುಗಳಿಂದ ಬರುವ ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ತಾನು ಭೋಗ್ಯಕ್ಕೆ ಪಡೆದಿರುವ ಹಿಮವಂತ್ ಲಾಡ್ಜ್ ನ ರಿಸೆಪ್ಷನ್ ನಲ್ಲಿ ಕೂತರೆ ಗಮನವೆಲ್ಲವೂ ಬರುವ ಗಿರಾಕಿಗಳ ಮೇಲೆಯೇ.

ಆತನ ಹೆಸರು ವೆಂಕಟರೆಡ್ಡಿ. ಆತ್ಮೀಯರು ಆತನನ್ನು ರೆಡ್ಡಿ ಎಂದು ಕರೆಯುತ್ತಾರೆ. ಆಂಧ್ರ ಮೂಲದವನು. ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದವ, ಸ್ವಲ್ಪ ಹಣ ಕೂಡಿಟ್ಟು ಬೆಂಗಳೂರಿನ ಮೆಜೆಸ್ಟಿಕ್ ಸಮೀಪದ ಕಾಟನ್ ಪೇಟೆಯಲ್ಲಿರುವ ಲಾಡ್ಜ್ ಒಂದನ್ನು ಲೀಸ್ ಗೆ ಪಡೆದಿದ್ದಾನೆ. ಈತನಿಗೆ ಒಬ್ಬ ಮಗ ಮತ್ತು ಮಗಳು. ಆಕೆ ತುಂಬಾ ರೂಪವಂತೆ. ಅದೇ ಅವನ ಇಂದಿನ ಗಾಬರಿಗೆ ಕಾರಣ!

ಹಾಗಂತ ಅವಳೇನೂ ಯಾರನ್ನೂ ಪ್ರೀತಿಸಿ ಓಡಿ ಹೋಗಿಲ್ಲ. ಆದರೆ, ಬೆಳ್ಳಗಿರುವುದೆಲ್ಲಾ ಹಾಲು ಎಂದು ನಂಬಿದ್ದಳಷ್ಟೇ. ಪದವಿ ಮುಗಿಸಿದ ಬಳಿಕ ತಂದೆಗೆ ಸಹಾಯ ಮಾಡುವ ದೃಷ್ಟಿಯಿಂದ ಮತ್ತು ಸುಂದರವಾದ ಹುಡುಗಿ ರಿಸೆಪ್ಷನ್್ನಲ್ಲಿದ್ದರೆ ಗಿರಾಕಿಗಳನ್ನು ಸೆಳೆಯಬಹುದು ಎಂಬ ವ್ಯಾಪಾರ ತಂತ್ರದಿಂದ ಆಗಾಗ್ಗೆ ರಿಸೆಪ್ಷನ್್ನಲ್ಲಿ ಕೂರುತ್ತಿದ್ದಳು. ಅದೇ ಅವಳಿಗೆ ಮುಳುವಾಗುತ್ತೆ ಎಂಬುದನ್ನು ಪಾಪ, ರೆಡ್ಡಿ ಊಹಿಸಲೇ ಇಲ್ಲ.
--
ದುಗುಡಕ್ಕೆ ಕಾರಣ

ಬಿಳಿಗಿರಿ ರಂಗನಬೆಟ್ಟ ಗೊತ್ತಲ್ಲ ? ಅದರ ಪಕ್ಕದಲ್ಲೇ ಇದೆ ರಾಂಪುರ. ಸುಮಾರು 20 ಮನೆಗಳಿರುವ ಈ ಹಳ್ಳಿ ಹೊರ ಜಗತ್ತಿನ ಮಟ್ಟಿಗೆ ಅನಾಮಿಕ. ಹಾಗಾಗಿ, ಆ ಊರಿನ ಯಾರೇ ಆಗಲಿ ಮೈಸೂರು ಅಥವಾ ಬೆಂಗಳೂರಿಗೆ ಬಂದಾಗ ಎಲ್ಲರೂ ಊರ ಹೆಸರು ಹೇಳಬೇಕಾದರೆ ಬಿಳಿಗಿರಿರಂಗನ ಬೆಟ್ಟ ಎಂದೇ ಹೇಳುತ್ತಾರೆ.

ಅದೇ ಊರಿಂದ ಬಂದವನು ಸೂರ್ಯ. ಯಾರಾದರು ಊರ ಹೆಸರು ಕೇಳಲಿ ಕೇಳದಿರಲಿ, ಅವನು ಬಿಳಿಗಿರಿ ಎಂದು ಹೇಳುತ್ತಿದ್ದ. ತನ್ನನ್ನು ತಾನು ಸೂರ್ಯ ಬಿಳಿಗಿರಿ ಎಂದೇ ಕರೆಸಿಕೊಂಡಿದ್ದ. ಅವನೂ ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದವನೇ. ಕೆಲ ದಿನ ಊರಿನ ಕಾಲೇಜೊಂದರಲ್ಲಿ ಪಾಠ ಮಾಡಿಕೊಂಡಿದ್ದ ಪದವೀಧರ. ಆದರೆ, ತನ್ನ ವಿದ್ಯಾರ್ಥಿನಿ ಜತೆಯೇ ಅಸಭ್ಯವಾಗಿ ವರ್ತಿಸಿ ಗೂಸಾ ತಿಂದು ಓಡಿ ಬಂದವ. ತಾನೊಬ್ಬ ಖುಷ್ವಂತ್್ಸಿಂಗ್್ನಂತೆ ಆಗಬೇಕು ಎಂಬುದು ಅವನ ಆಸೆ. ಆದ್ದರಿಂದಲೇ ಅವನು ಪತ್ರಿಕೋದ್ಯಮಕ್ಕೆ ವಕ್ಕರಿಸಿ ಅವನಿಗಿಂತ ಮೊದಲೇ ಆರಂಭವಾಗಿದ್ದ ಪೀತ ಪತ್ರಿಕೋದ್ಯಮದ ಸದಸ್ಯನಾದ.

ಪತ್ರಕರ್ತನಾದವನು ಹೊಟ್ಟೆಪಾಡಿಗಾಗಿ ಮತ್ತೇನಾದರೂ ಕಸುಬು ಮಾಡಲೇಬೇಕಾದ ಸ್ಥಿತಿ ಇದ್ದ ಸಮಯವದು. ಆದರೆ, ಈ ಬಿಳಿಗಿರಿ ಆಯ್ದಕೊಂಡಿದ್ದೇ ಬೇರೆ ಕಸಬು! ಮೆಜೆಸ್ಟಿಕ್್ನ ಅಕ್ಕಪಕ್ಕದ ಕೆಲವು ಲಾಡ್ಜ್ ಸೇರಿದಂತೆ ಕೆ. ಆರ್. ಮಾರುಕಟ್ಟೆಯ ಕೆಲವು ಲಾಡ್ಜ್ ಗಳಲ್ಲಿ ಇಂದಿಗೂ ಅವ್ಯಾಹತವಾಗಿ ವೇಶ್ಯಾವಾಟಿಕೆ ನಡೆಯುತ್ತಿದೆ. ಇದು ಗೊತ್ತಿದ್ದರೂ ಪೊಲೀಸರು ಜಾಣ ಕುರುಡು ಪ್ರದರ್ಶಿಸುತ್ತಾರೆ. ಅದಕ್ಕೆ ಕಾರಣ ಹೊಟ್ಟೆಪಾಡಿಗಾಗಿ ಪರದಾಡುವ ಹೆಣ್ಣುಗಳ ಬಗ್ಗೆ ಸ್ವಲ್ಪ ಮಟ್ಟಿಗಿನ ಕನಿಕರದ ಜೊತೆಗೆ ಲಾಡ್ಜ್ ಗಳಿಂದ ತಿಂಗಳು ತಿಂಗಳು ಬರುವ ಮಾಮೂಲಿಯೂ ಒಂದು ಕಾರಣ.

ಈ ಗುಟ್ಟನ್ನು ಮೊದಲು ಗುರ್ತಿಸಿದವನು ಬಿಳಿಗಿರಿ. ಮೊದಲೇ ಭಗನಿ ಕಳ್ಳು, ನಾಟಿ ಸಾರಾಯಿ ಕುಡಿದು ಬೆಳೆಸಿದ್ದ ದೇಹಕ್ಕೆ ಪ್ರತಿ ದಿನ ಮದ್ಯ, ಮಾನಿನಿ ಇಲ್ಲದೆ ಕಾಲ ಕಳೆಯುವುದು ಅಸಾಧ್ಯವಾಗಿತ್ತು. ಇಂಥ ಸಂದರ್ಭದಲ್ಲಿ ಇವನು ಬಳಸಿಕೊಂಡಿದ್ದು ಪೀತ ಪತ್ರಿಕೋದ್ಯಮವನ್ನು. ಲಾಡ್ಜ್ ನಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಪತ್ರಿಕೆಯಲ್ಲಿ ಬರೆಯುವುದಾಗಿ ಹೆದರಿಸಿ ಲಾಡ್ಜ್್ಗಳಿಂದ ತಿಂಗಳ ಮಾಮೂಲಿ ವಸೂಲಿ ಮಾಡಲು ಆರಂಭಿಸಿದ. ಲಾಡ್ಜ್್ನವರೂ ಪತ್ರಿಕೆಯವರನ್ನು ಎದುರು ಹಾಕಿಕೊಳ್ಳುವುದು ಯಾಕೆ ಎಂದು ಚಿಲ್ಲರೆ ಕೊಟ್ಟು ಕಳುಹಿಸುತ್ತಿದ್ದರು.

ಇದರ ರುಚಿ ಕಂಡ ಬಿಳಿಗಿರಿ ಹೊಟ್ಟೆ ಪಾಡಿಗಾಗಿ ಮೈಮಾರಿಕೊಳ್ಳುವ ಹೆಂಗಸರನ್ನೂ ಬಿಡಲಿಲ್ಲ. ಲಾಡ್ಜ್್ಗಳಲ್ಲಿ ದುಡಿಯುವ ಹೆಂಗಸರು ಇವನಿಗೆ ಉಚಿತವಾಗಿ ಸಿಗಬೇಕಿತ್ತು! ಪ್ರಶ್ನಿಸಿದರೆ ಪತ್ರಿಕೆಯಲ್ಲಿ ಬರೆಯುವ ಬೆದರಿಕೆ. ವಿಧಿ ಇಲ್ಲದೆ ಅವರೂ ಇವನ ಹಿಂಸೆಯನ್ನು ತಡೆದುಕೊಳ್ಳಬೇಕಿತ್ತು. ಇಂಥ ಗುಳ್ಳೆ ನರಿಯ ಬಿಳಿಗಿರಿ ರೆಡ್ಡಿಗೆ ಪರಿಚಯವಾಗಿದ್ದು ಒಂದು ಅನಿರೀಕ್ಷಿತ ಸನ್ನಿವೇಶದಲ್ಲಿ.
--
ಹಿಮವಂತ್ ಲಾಡ್ಜ್ ಪಕ್ಕದಲ್ಲೇ ಇದ್ದ ಒಂದು ಲಾಡ್ಜ್ ನಲ್ಲಿ ಅಕ್ರಮ ಚಟುವಟಿಕೆಗಳು ಹೇರಳವಾಗಿ ನಡೆಯುತ್ತಿರುತ್ತವೆ. ಒಂದು ದಿನ ಆ ಲಾಡ್ಜ್್ನಲ್ಲಿ ಒಬ್ಬ ಹೆಂಗಸಿನ ಕೊಲೆಯಾಗುತ್ತದೆ. ಇದರ ಜತೆ ರೆಡ್ಡಿ ಲಾಡ್ಜ್ ಗೆ ವ್ಯಾಪಾರ ಪೈಪೋಟಿ ಇತ್ತಾದರೂ ರೆಡ್ಡಿ ಲಾಡ್ಜ್್ನಲ್ಲಿ ಯಾವುದೇ ಅಕ್ರಮಗಳು ನಡೆಯದ ಕಾರಣ, ಸಂಪ್ರದಾಯಸ್ಥರು ಮಾತ್ರ ಹಿಮವಂತ್ ಲಾಡ್ಜ್್ಗೆ ಬಂದು ವ್ಯಾಪಾರ ಕಡಿಮೆ ಇರುತ್ತಿತ್ತು. ಕೊಲೆಯಾದಾಗ ಅದನ್ನು ಪತ್ರಿಕೆಯಲ್ಲಿ ಬರೆಸಿದರೆ ತಮ್ಮ ಲಾಡ್ಜ್ ವ್ಯಾಪಾರದಲ್ಲಿ ಮುಂದುವರಿಯುತ್ತದೆ ಎಂಬ ಯೋಚನೆಯಿಂದ ರೆಡ್ಡಿ ಮೊದಲ ಬಾರಿಗೆ ಬಿಳಿಗಿರಿಗೆ ಪುಡಿಗಾಸು, ಅಗ್ಗದ ಮದ್ಯ ನೀಡಿ ಪತ್ರಿಕೆಯಲ್ಲಿ ಬರೆಸಿದ. ಒಂದು ಬಾರಿ ರುಚಿ ಕಂಡರೆ ಬಿಡುವವನಲ್ಲ ಬಿಳಿಗಿರಿ. ಎಲ್ಲೂ ಎಣ್ಣೆ ಸಿಗಲಿಲ್ಲವೆಂದರೆ ರೆಡ್ಡಿ ಬಳಿ ಬಂದು ಜೊಲ್ಲು ಸುರಿಸುತ್ತಿದ್ದ. ಹಾಗೆ ಪರಿಚಯವಾದ ಅವರ ಸ್ನೇಹ ಮನೆವರೆಗೂ ಮುಟ್ಟಿತು. ಬಿಳಿಗಿರಿಯ ನರಿ ಬುದ್ಧಿ ತಿಳಿಯದ ರೆಡ್ಡಿ ಯಾವಾಗ ಮನೆಗೆ ಬಿಟ್ಟುಕೊಂಡನೋ ಅದೇ ದಿನ ಅವನ ಮನೆಗೆ ಗೂಬೆ ಪ್ರವೇಶವಾದಂತಾಗಿತ್ತು!

ಮೊದಲಿಗೆ ರೆಡ್ಡಿ ಇದ್ದಾಗ ಬರುತ್ತಿದ್ದ ಬಿಳಿಗಿರಿ ಕ್ರಮೇಣ ರೆಡ್ಡಿ ಇಲ್ಲದ ಸಮಯದಲ್ಲೇ ಬರತೊಡಗಿದ. ಮೊದಲಿಗೆ ಏನೂ ತಿಳಿಯದ ರೆಡ್ಡಿ ಸುಮ್ಮನಿದ್ದ. ಆದರೆ, ಕ್ರಮೇಣ ಹೆಂಡತಿಯಲ್ಲಿ ಕೆಲ ಬದಲಾವಣೆಗಳನ್ನು ಕಂಡ. ಬಿಳಿಗಿರಿ ಮಾಡುತ್ತಿರುವ ದ್ರೋಹಕ್ಕೆ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ರೆಡ್ಡಿ ಒದ್ದಾಡತೊಡಗಿದ. ಹೆಂಡತಿ ವಿಚಾರವಾಗಿ ಸಹಿಸಿಕೊಂಡಿದ್ದ ರೆಡ್ಡಿಗೆ ಮತ್ತೊಂದು ಶಾಕ್; ಮಗಳು ಕೂಡಾ ಅದೇ ಬಿಳಿಗಿರಿಯ ಮೋಸದ ಜಾಲದಲ್ಲಿ ಸಿಲುಕಿದ್ದಳು! ಇದನ್ನು ತಿಳಿದು ಹೌಹಾರಿದ ರೆಡ್ಡಿ ಮಗಳಿಗೆ ಬುದ್ಧಿ ಹೇಳಿದ. ಆದರೆ, ಪ್ರಯೊಜನ ಆಗಲಿಲ್ಲ. ಮೊದಲೆಲ್ಲಾ ತಂದೆಗೆ ತಿಳಿಯದ ಹಾಗೆ ಓಡಾಡುತ್ತಿದ್ದ ಮಗಳು ಈಗ ನಿರ್ಭಯವಾಗಿ ತಂದೆಯ ಎದುರಿಗೇ ಓಡಾಡಲು ಆರಂಭಿಸಿದ್ದಳು. ಇದೆಲ್ಲವೂ ನಡೆಯುತ್ತಿರುವಾಗಲೇ

ಅವಳಿಗೆ ಅರಿವಾಗತೊಡಗಿತು; ಇವನು ಕೇವಲ ತನ್ನನ್ನು ಬಳಸಿಕೊಳ್ಳುತ್ತಾನೆ, ಹೊರತು ಬಾಳು ಕೊಡುವುದಿಲ್ಲ ಎಂಬುದು. ಅಷ್ಟರಲ್ಲಾಗಲೇ ಆಕೆ ಬಹುದೂರ ಬಂದಾಗಿತ್ತು. ಅವನಿಂದ ದೂರವಾಗುವ ಪ್ರಯತ್ನ ಮಾಡತೊಡಗಿದಳು. ಅದು ಸುಲಭವಿರಲಿಲ್ಲ. ಮಗಳ ಸ್ಥಿತಿ, ತಾನು ಮಾಡಿದ ತಪ್ಪಿನ ಅರಿವಾಗ ತೊಡಗಿತ್ತು ರೆಡ್ಡಿಯ ಹೆಂಡತಿಗೆ. ಆಕೆ ಕೂಡಾ ಬಿಳಿಗಿರಿಯ ತೆಕ್ಕೆಯಿಂದ ದೂರವಾದಳು. ಆದರೆ, ಇವರ ಅಗಲಿಕೆ ಬಿಳಿಗಿರಿಯ ಕೋಪಕ್ಕೆ ತಿರುಗಿತು.

'ತನಗೆ ಅವಶ್ಯವಿರುವ ಅಷ್ಟೂ ದಿನ ತನ್ನಿಂದ ದೂರವಾಗಲು ಬಿಡುವುದಿಲ್ಲ. ಒಂದು ವೇಳೆ ದೂರವಾಗುವ ಪ್ರಯತ್ನ ಮಾಡಿದರೆ ನಿಮ್ಮ ನನ್ನ ನಡುವಿನ ಸಂಬಂಧದ ಬಗ್ಗೆ ಪತ್ರಿಕೆಯಲ್ಲಿ ಬರೆಯುತ್ತೇನೆ. ಅಷ್ಟೇ ಅಲ್ಲ, ನಿಮ್ಮ ತಂದೆ ನಡೆಸುತ್ತಿರುವ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಪೊಲೀಸ್ ರೈಡ್ ಮಾಡಿಸುತ್ತೇನೆ' ಎಂಬ ಬೆದರಿಕೆ ಹಾಕತೊಡಗಿದ. ಸಹಜವಾಗಿ ಇಡೀ ಕುಟುಂಬದ ನೆಮ್ಮದಿ ಹಾಳಾಯಿತು.

ಇವನಿಗೆ ತಿಳಿಯದ ಹಾಗೆ ಮಗಳ ಮದುವೆ ಮಾಡಿ ಮುಗಿಸಿದರೆ ಮುಂದೆ ತಮ್ಮ ಬಾಳು ಹೇಗಾದರೂ ಆಗಲಿ ಎಂಬ ತೀರ್ಮಾನಕ್ಕೆ ರೆಡ್ಡಿ ದಂಪತಿ ಬಂದರು. ಹುಡುಗಿಗೆ ಒಂದು ಒಳ್ಳೆಯ ಸಂಬಂಧವೂ ಗೊತ್ತಾಯಿತು. ಈ ಸಂಬಂಧ ಒಪ್ಪಿದರೆ ಮಗಳು ವಿದೇಶದಲ್ಲಿ ನೆಲೆಸುತ್ತಾಳೆ. ನಂತರವಾದರೂ ಈ ಬಿಳಿಗಿರಿಯಿಂದ ಮುಕ್ತಿ ಸಿಗುತ್ತದೆ ಎಂಬುದು ರೆಡ್ಡಿಯ ಯೋಚನೆ. ಇದಕ್ಕೆ ಮಗಳೂ ಒಪ್ಪಿದಳು. ಆದರೆ, ಈ ವಿಷಯವನ್ನು ಹೇಗೋ ತಿಳಿದ ಬಿಳಿಗಿರಿ ಹಿಂದಿನ ದಿನದ ರಾತ್ರಿ ಫೋನ್ ಮಾಡಿ ನಾಳೆ ಬಂದು ಹುಡುಗನ ಮುಂದೆ ಎಲ್ಲಾ ವಿಚಾರ ಹೇಳುವುದಾಗಿ ಧಮಕಿ ಹಾಕಿದ. ಅದೇ ಕಾರಣಕ್ಕೆ ಇಂದು ರೆಡ್ಡಿ ತೀರಾ ತಲೆ ಕೆಡಿಸಿಕೊಂಡು ಪದೇ ಪದೇ ರಸ್ತೆಯ ಕಡೆ ನೋಡುತ್ತಿದ್ದಾನೆ.
--
ಬಂತು ಗುಳ್ಳೆನರಿ!

ಲಾಡ್ಜ್ ಮುಂದೆ ಕೆಂಪು ಬಣ್ಣದ ಸ್ಕೋಡಾ ಕಾರು ಬಂದು ನಿಂತಿತೆಂದರೆ ಸಾಕು ರೆಡ್ಡಿಯ ಎದೆ ಬಡಿತ ಹೊರಗೆ ಕೇಳಿಸುವಷ್ಟು ಗಟ್ಟಿಯಾಗಿ ಬಡಿದುಕೊಳ್ಳುತ್ತದೆ. ಯಾಕೆಂದರೆ, ಆ ಕಾರು ಬಿಳಿಗಿರಿಯದು ಎಂದು ಅವನಿಗೆ ಚೆನ್ನಾಗಿ ಗೊತ್ತಿದೆ. ಅನೇಕ ಮಾಂಸದ ಮನೆಗಳ ಅದೆಷ್ಟೋ ಹೆಣ್ಣುಮಕ್ಕಳು ಬೆವರು ಸುರಿಸಿ ರಾತ್ರಿ ಹಗಲು ದುಡಿದು ಸಂಪಾದಿಸಿದ ಹಣದಲ್ಲೂ ಪಾಲು ಪಡೆದು ಈ ಕಾರು ಪಡೆದಿದ್ದಾನೆ ಎಂಬ ಸತ್ಯವೂ ರೆಡ್ಡಿಗೆ ಗೊತ್ತು. ಆದರೆ, ಏನು ಮಾಡಲೂ ರೆಡ್ಡಿ ನಿಸ್ಸಾಹಯಕ. ಯಾಕೆಂದರೆ, ಅವನಿಗೆ ಪತ್ರಕರ್ತನೆಂಬ ಹಣೆಪಟ್ಟಿಯಿದೆ; ಅದೇ ಕಾರಣಕ್ಕೆ ಪೊಲೀಸ್ ಅಧಿಕಾರಿಗಳ ಸ್ನೇಹವಿದೆ, ರಾಜಕಾರಣಿಗಳ ಬೆಂಬಲವಿದೆ!

ಕಾರಿಳಿದು ಒಳಬರುತ್ತಿರುವ ಬಿಳಿಗಿರಿಯನ್ನು ಕಂಡ ರೆಡ್ಡಿ ಕೈ ಮುಗಿದು ಬೇಡಿಕೊಳ್ಳುತ್ತಾನೆ. ಆದರೆ, ಕೇಳುವುದಕ್ಕೆ ಬಿಳಿಗಿರಿ ಅನ್ನೋ ಪ್ರಾಣಿಗೆ ಮಾನವೀಯತೆ ಅನ್ನೋದು ಇದ್ದರೆ ತಾನೆ? ಇದ್ಯಾವುದಕ್ಕೂ ಸೊಪ್ಪು ಹಾಕದ ಅವನು ನೇರವಾಗಿ ಮನೆಯೊಳಗೆ ಹೋಗಿ ರೆಡ್ಡಿ ಮಗಳನ್ನು ತನ್ನ ಜೊತೆ ಬರುವಂತೆ ಆದೇಶಿಸುತ್ತಾನೆ. ಆದರೆ, ಇದನ್ನು ಮೊದಲೇ ಊಹಿಸಿದ್ದ ಅವಳು ನೇರವಾಗಿ ಮುಖದ ಮೇಲೆ ಕ್ಯಾಕರಿಸಿ ಉಗಿದು ನಿರಾಕರಿಸುತ್ತಾಳೆ. ಇಂಥ ಅಸಹ್ಯಗಳನ್ನು ಅದೆಷ್ಟೋ ನೋಡಿರುವ

ಅವನಿಗೆ ಇದೇನು ಮಹಾ ಲೆಕ್ಕ? ಮುಖದ ಮೇಲಿನ ಉಗುಳನ್ನು ಒರೆಸಿಕೊಂಡು 'ನೋಡಿಕೊಳ್ಳುತ್ತೇನೆ' ಎಂಬ ಧಮಕಿ ಹಾಕಿ ಹೊರಬಂದ. ಅದೇ ಸಮಯಕ್ಕೆ ಗಂಡಿನ ಕಡೆಯಿಂದ ಫೋನು ಬಂದು ಅಂದು ನಡೆಯಲಿರುವ ವಧು ಪರೀಕ್ಷೆ ಮುಂದೂಡಿರುವ ಬಗ್ಗೆ ತಿಳಿಸುತ್ತಾರೆ. ಇದರಿಂದ ರೆಡ್ಡಿ ಕುಟುಂಬ ಸ್ವಲ್ಪ ಮಟ್ಟಿಗೆ ನಿರಾಳವಾಗುತ್ತೆ ನಿಜ. ಆದರೆ, ಈ ಬಿಳಿಗಿರಿಯಿಂದ ಪಾರಾಗುವ ಮಾರ್ಗದ ಬಗ್ಗೆ ದಿಕ್ಕು ಕಾಣದೆ ಪರದಾಡುತ್ತಾರೆ.

ಮುಂದೇನಾಯ್ತು?

ಶತ್ರುವಿನ ಶತ್ರು ಮಿತ್ರ ಅಂತಾರೆ; ಇಲ್ಲಿ ಆಗಿದ್ದು ಅದೇ. ಈ ಬಿಳಿಗಿರಿ ಇದ್ದಾನಲ್ಲಾ ಇವನಿಗೆ ಸಜ್ಜನರನ್ನು ಕಂಡರೆ ಅವನ ಅಪ್ಪನಾಣೆಗೂ ಆಗೋದಿಲ್ಲ. ಒಳ್ಳೆಯ ವ್ಯಕ್ತಿಗಳ ಮೇಲೆ ಕೆಟ್ಟ ಸುದ್ದಿ ಹಬ್ಬಿಸೋದು

ಅವನ ಜಾಯಮಾನ. ಹಾಗಂತ ಅವನು ಹೇಳಿದ್ದೆಲ್ಲಾ ಸತ್ಯ ಎಂದು ನಂಬುವವರಿಲ್ಲ ಅದು ಬೇರೆ ಪ್ರಶ್ನೆ. ಆದರೂ ಮಾನವಂತರಾದವರಿಗೆ ಇವನ ಗಾಸಿಪ್ ಗಳಿಗೆ ಇರುಸು ಮುರುಸಾಗುವುದು ತಪ್ಪುತ್ತಿರಲಿಲ್ಲ. ಅಂಥ ಅನವಶ್ಯಕ ಗಾಸಿಪ್್ಗಳಿಗೆ ತುತ್ತಾಗಿದ್ದ ವ್ಯಕ್ತಿಯೊಬ್ಬರಿಗೆ ರೆಡ್ಡಿಯ ದುಃಖ ತಿಳಿಯಿತು. (ಅವರ ಹೆಸರು ಇಲ್ಲಿ ಅಪ್ರಸ್ತುತ) ಕೂಡಲೇ ಧಾವಿಸಿ ಬಂದ ಅವರು ರೆಡ್ಡಿಯ ಬೆನ್ನಿಗೆ ನಿಂತರು. ರೆಡ್ಡಿಯ ಹಿಂದೆ ಆ ಪ್ರಮುಖ ವ್ಯಕ್ತಿ ಇರುವುದನ್ನು ತಿಳಿದ ಬಿಳಿಗಿರಿ ಬಾಲ ಮುದುರಿಕೊಂಡು ಆ ಕಡೆ ಮುಖ ಹಾಕುವುದನ್ನು ಬಿಟ್ಟ. ಹಾಗಾಗಿ, ಯಾವುದೇ ಅಡ್ಡಿ ಇಲ್ಲದೆ ರೆಡ್ಡಿಯ ಮಗಳ ಮದುವೆಯಾಗಿದೆ. ಆಕೆ ಸದ್ಯ ಆಸ್ಟ್ರೇಲಿಯಾದಲ್ಲಿ ನೆಮ್ಮದಿಯಿಂದ ಇದ್ದಾಳೆ. ಬಿಳಿಗಿರಿ ಇನ್ನೂ ಇಂಥ ಹಲವು ಹೆಣ್ಣು ಮಕ್ಕಳ ಬಾಳು ಹಾಳು ಮಾಡುವ ಸಂಚು ಮುಂದುವರಿಸಿದ್ದಾನೆ. ಹೆಣ್ಣು ಹೆತ್ತವರೇ ಎಚ್ಚರ, ಆತ ಇನ್ನೂ ನಮ್ಮ ನಡುವೆ ಇದ್ದಾನೆ !
- ಅಶ್ವಪ್ರಭ

Friday, April 29, 2011

ತಪ್ಪಾಯ್ತು ತಿದ್ಕೋತೀನಿ!

ಹೌದು, ಹಾಗೊಂದು ತಪ್ಪೊಪ್ಪಿಗೆಯನ್ನು ನಿಮ್ಮಗಳ ಮುಂದೆ ಇಡಲೇಬೇಕಾಗಿ ಬಂದಿದೆ. ಎರಡು ಕಾರಣಕ್ಕಾಗಿ. ಮೊದಲನೆಯದಾಗಿ, ಮತ್ತೆ ಎಲ್ಲೊ ಒಂದು ಕಡೆ ಕೊಳೆಗೇರಿ ನಿರ್ಮಲನೆಯ ಕಾರ್ಯವನ್ನು ಮರೆತು ನನ್ನಷ್ಟಕ್ಕೆ ನಾನು ನನ್ನ ಕೆಲಸ, `ಸಖಿ' ನಿರ್ವಹಣೆಯಲ್ಲಿ ಮುಳುಗಿ ಹೋಗಿದ್ದೆ. ಕೆಲಸದ ಭರ, ಒತ್ತಡದಲ್ಲಿ ನಾನೇ ಕೈಗೆತ್ತಿಕೊಂಡಿದ್ದ ಮತ್ತು ಮೇಲಿಂದ ಮೇಲೆ ನೀವು ಹಕ್ಕೊತ್ತಾಯದಲ್ಲಿ ಮಂಡಿಸಿದ್ದ ಕೊಳೆಗೇರಿ ನಿರ್ಮೂಲನೆಯ ಈ ಆಂದೋಲನ ಅರ್ಧಕ್ಕೆ ನಿಂತು ಹೋಗಿತ್ತು. ಹಾಗಂತ ಅದನ್ನು ಮರೆತಿದ್ದೆ ಎಂದಲ್ಲ.

ಇಲ್ಲಿ ಕಾರಣಗಳು ಹಲವು. ಮೊದಲ ಆದ್ಯತೆ ನಿಮ್ಮೆಲ್ಲರ ನಿರೀಕ್ಷೆಯಂತೆ ಬರವಣಿಗೆಯನ್ನು ಮತ್ತೆ ಪ್ರಾರಂಭಿಸುವುದಾಗಿತ್ತು. ಮುಖ್ಯವಾಹಿನಿಯಲ್ಲಿನ ಬರಹ, ನೀರಿನ ಕುರಿತಾದ ಕೆಲಸಗಳನ್ನು ಪುನರಾರಂಭಿಸಲೇಬೇಕೆಂಬ ಒತ್ತಾಸೆಯೊಂದಿಗೆ ಉಳಿದೆಲ್ಲವನ್ನೂ ಬದಿಗೊತ್ತಿ ಲೇಖನಿಯನ್ನು ಹಿಡಿದಿದ್ದೆ. ಮೊದಲು ಈ ಕರ್ತವ್ಯ. ಜತೆಗೆ ಅನಿರೀಕ್ಷಿತವಾಗಿ ಜತೆಗೂಡಿದ ಸಖಿ. ಕನ್ನಡಕ್ಕೆ ಉತ್ತಮ ನಿಯತಕಾಲಿಕೆಯೊಂದನ್ನು ಕೊಡಲೇಬೇಕೆಂಬ ವ್ರತವನ್ನು ಸ್ವೀಕರಿಸಿ ಅದರಲ್ಲಿ ಮುಳುಗಿ ಹೋಗಿದ್ದೆ.

ನನಗೆ ಗೊತ್ತು, ಕೆಲಸವಿಲ್ಲದೇ ಮೂರು ತಿಂಗಳು ಮನೆಯಲ್ಲಿ ಕುಳಿತಿದ್ದಾಗ ನನ್ನನ್ನು ಸ್ಥಿತಪ್ರಜ್ಞ ರೀತಿಯಲ್ಲಿ ಇಟ್ಟದ್ದು ನಿಮ್ಮ ಬೆಂಬಲವೇ. ಜತೆಗೆ ಕೊಳೆಗೇರೆಯಂಥವನ ವಿರುದ್ಧ ಹೋರಾಟಕ್ಕೆ ನೈತಿಕ ಸ್ಥೈರ್ಯ ನೀಡಿದ್ದೂ ನೀವೇ. ಹೀಗಾಗಿ ನಿಮ್ಮ ಅಣತಿಯನ್ನು ಮೀರುವಂತೆಯೇ ಇಲ್ಲ. ಅದನ್ನು ಅರ್ಧಕ್ಕೆ ನಿಲ್ಲಿಸುವ ಪ್ರಮೇಯವೂ ಇಲ್ಲ.

ಕೆಲವು ಸತ್ಯ ಜಗತ್ತಿಗೆ ಗೊತ್ತಾಗಲೇಬೇಕು. ಅದನ್ನು ಎಲ್ಲಿಯವರೆಗೆ ಮುಚ್ಚಿಟ್ಟುಕೊಳ್ಳಲು ಸಾಧ್ಯ ? ಅಂಥ ಸತ್ಯವನ್ನು ಸಾರುವ ಕೆಲಸವನ್ನು ಮಾಡುವವರು ಯಾರು? ಎಲ್ಲರೂ `ಹಾಳಾಗಿ ಹೋಗಲಿ, ಅವನ ಕರ್ಮ, ಅವನು ಅನುಭವಿಸುತ್ತಾನೆ' ಎಂಬರ್ಥದಲ್ಲಿ ಸುಮ್ಮನಿದ್ದುಬಿಟ್ಟರೆ ಬೆಕ್ಕಿಗೆ ಗಂಟೆ ಕಟ್ಟುವವರು...ಅಲ್ಲಲ್ಲ ನರಿಗೆ ಬುದ್ಧಿ ಕಲಿಸುವವರಾದರೂ ಯಾರು ? ಜನರ ಮುಂದೆ ವಾಸ್ತವವನ್ನು ಬಿಚ್ಚಿಡಬೇಕು. ನಮ್ಮ ನಡುವಿನ ಸೋಗುಗಾರರ ಅಸಲೀ ವಿಕೃತಿಯನ್ನು ಸಾರಬೇಕು. ತನ್ಮೂಲಕ ಈ ಸಮಾಜ ಎಚ್ಚೆತ್ತುಕೊಳ್ಳುಬೇಕು. ತಾನು ಹೇಳಿದ್ದೇ ಸತ್ಯವೆಂದು ನಂಬಿಸಿ, ಮನಸ್ಸಿಗೆ ಬಂದ್ದದ್ದನ್ನು ಬರೆದು ಅಕ್ಷರ ಹಾದರ ಮಾಡುತ್ತಾ, ಅದನ್ನೇ ಸಾಧನೆಯೆಂದು ಬಿಂಬಿಸಿಕೊಳ್ಳುತ್ತಾ ವ್ಯಾಪಾರಕ್ಕಿಳಿದಿರುವ `ದೈತ್ಯ ಬರಹಗಾರ'ರನ್ನು ತಿರಸ್ಕರಿಸುವಂತಾಗಬೇಕು. ಕನ್ನಡ ಓದುಗರು ಸದಭಿರುಚಿಯುಳ್ಳವರು, ಕ್ರಿಯಾಶೀಲ, ರಚನಾತ್ಮಕವಾದುದಷ್ಟೇ ಓದುತ್ತಾರೆ ಎಂಬ ಸಂದೇಶ ಇಂಥ ಟ್ಯಾಬ್ಲಾಯ್ಡ್ ಪತ್ರಕರ್ತರಿಗೆ ತಲುಪಲೇಬೇಕು. ಅದಕ್ಕಾಗಿ ನನ್ನ ಆಂದೋಲನ.

ಅವನು ಅಸಹಾಯಕತೆಯ ಪರೋಚ್ಚ ಸ್ಥಿತಿಯನ್ನು ತಲುಪಿದ್ದಾನೆ. ಕೈಲಾಗದವನು ಮೈ ಪರಚಿಕೊಂಡ ಎಂಬಂತೆ ನನ್ನ ಹೆಂಡತಿ, ಹತ್ತು ವರ್ಷದ ಮಗಳ ಬಗ್ಗೆಯೆಲ್ಲಾ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದಾನೆ. ನಿಮ್ಮ ಬೆಂಬಲ ಇರುವವರೆಗೆ ಇಂಥದಕ್ಕೆಲ್ಲಾ ಬಗ್ಗುವವನು ನಾನಲ್ಲ. ಅವನ ವಿಕೃತಿಯ ಪರಾಕಾಷ್ಠೆಯ ಬಗ್ಗೆ ಪೋಲಿಸರಿಗೆ ದೂರಿದ್ದೇನೆ. ಸಮರ ಮುಂದುವರಿಯಲಿದೆ.

ಅದೆಲ್ಲಾ ಇರಲಿ, ಅವನ ವಿಚಾರ ಬದಿಗಿಟ್ಟು ಸದ್ಯಕ್ಕೆ ನಿಮಗೆ ನಾನು ಮಾಡುವ ಮನವಿ ಇಷ್ಟೇ, ನೀವು ಸಖಿಯನ್ನು ಓದಲೇಬೇಕು; ಹಾಗೂ ಓದುತ್ತಲೇ ಇರಬೇಕು.


Friday, April 1, 2011

`ಬೆಳದಿಂಗಳು'-ನಿಮಗೇನನ್ನಿಸುತ್ತೆ ?

`ಬೆಳದಿಂಗಳು'

ಸುಂದರವಾದ ಒಂದು ವಾಕ್ಯದಲ್ಲಿ ಇದನ್ನು ನಿಮ್ಮಿಂದ ವ್ಯಾಖ್ಯಾನಿಸಲು ಸಾಧ್ಯವೇ?


ಸಾಲು ಕಾವ್ಯಾತ್ಮಕವಾಗಿದ್ದರೆ ಒಳಿತು.


ಇಲ್ಲವೇ ಪಂಚ್ ನೀಡಲಿ.


ಕಲ್ಪನೆಗೆ ಸಾಕಷ್ಟು ಅವಕಾಶವಿದೆ.


ಕೊಡುತ್ತೀರಾ ಪ್ಲೀಸ್ !



ಉದಾ: ಬಂಡೆಯ ಮೇಲೆ ಚೆಲ್ಲಿ ಹೋದ ನೊರೆವಾಲ ತೆರೆ...


ಭೂಮಿಯ ಮಹಾಮಜ್ಜನಕ್ಕೆ ತಿಂಗಳನು ತಂದಿಟ್ಟ ಕೆನೆ ಹಾಲು...


ನಿಶಾ ದೇವಿಯ ಮುಖಾರವಿಂದಕೆ ಲೇಪಿತ ಕಾಂತಿ ವರ್ಧಕ...

Thursday, March 10, 2011

ಮತ್ತೆ ಬರೆಯುತ್ತಿದ್ದೇನೆ...ಅಂಕಣವನ್ನೂ ಸಹ

ಇದಕ್ಕೆ ಕ್ಷಮೆ ಇಲ್ಲ. ಖಂಡಿತಾ ನಾನಾಗಿದ್ದರೆ ಇದನ್ನು ಸಹಿಸುತ್ತಿರಲಿಲ್ಲ. ಸರಿ ಸುಮಾರು 22 ದಿನಗಳಿಂದ ಒಂದಕ್ಷರವನ್ನೂ ಬ್ಲಾಗ್ಗೆ ಬರೆಯಲಿಲ್ಲ. ನನಗೆ ಗೊತ್ತು ಪ್ರತಿದಿನವೂ ಹೊಸತರ ಕಾತರದಲ್ಲಿ ನೀವು ಬ್ಲಾಗ್ ತೆರೆಯುವುದು ಮತ್ತದೇ ಹಳೆಯ ಹೆಡ್ಡಿಂಗ್ಗಳನ್ನು ನೋಡಿ ಬೇಸರದಿಂದ ಮನದಲ್ಲೇ "ಇವನಿಗೇನಾಗಿದೆ ಧಾಡಿ, ಹೊಸ ಪತ್ರಿಕೆ ಸೇರುತ್ತಿದ್ದಂತೆಯೇ ನಮ್ಮನ್ನು ಮರೆತೇಬಿಟ್ಟಿದ್ದಾನಲ್ಲಾ ?" ಎಂದು ಮನದಲ್ಲೇ ಶಪಿಸುತ್ತಾ ವಿಂಡೋ ಕ್ಲೋಸ್ ಮಾಡುವುದು ನಡೆಸಿಯೇ ಇರುತ್ತೀರಿ. ನಿಮ್ಮ ಗೊಣಗಾಟದಲ್ಲೂ ಅರ್ಥ ಇದೆ. ಆದರೇನು ಮಾಡಲಿ. ಒಮ್ಮಿಂದೊಮ್ಮಲೇ ಬ್ಯುಸಿ ಆಗಿಬಿಟ್ಟದ್ದು ನಿಜ. ಇಂಥದ್ದೊಂದು ಕೆಲಸಬಾಕತನಕ್ಕಾಗಿ ಎರಡೂವರೆ ತಿಂಗಳು ನಾನು ತಪಸ್ಸು ಮಾಡಿದ್ದು ಗೊತ್ತೇ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಹೊಸ ಪತ್ರಿಕೆ, ಹೊಸ ಪರಿಸರ, ಹೊಸ ವ್ಯವಸ್ಥೆ, ಹೊಸ ಮುಖಗಳು...ಹೀಗೆ ಎಲ್ಲ ಹೊಸತರ ನಡುವೆ ನಾವು ಮಾತ್ರ ಮುಖ ಸಿಂಡರಿಸಿಕೊಂಡು, ತಲೆ ಬಗ್ಗಿಸಿ ಮೂದೇವಿ ಥರ ಕುಳಿತುಬಿಡೋದರಲ್ಲಿ ಏನು ಅರ್ಥವಿದೆ ಹೇಳಿ. ಎಲ್ಲರಿಗೂ ಹೊಂದಿಕೊಳ್ಳಬೇಕು. ನಗುನಗುತ್ತಾ ಸ್ವಾಗತಿಸಬೇಕು. ನಮ್ಮ ಸ್ನೇಹದ ತೆಕ್ಕೆಯೊಳಕ್ಕೆ ಅವರನ್ನು ಎಳೆದುಕೊಳ್ಳಬೇಕು. ಅವರನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮನ್ನು ಅವರಿಗೆ ಅರ್ಥ ಮಾಡಿಸಿಬೇಕು. ಈ ಎಲ್ಲದರ ನಂತರ ಹೊಸ ಸಾಫ್ಟ್ವೇರ್ ಕಲಿಕೆಯೊಂದು ತಲೆಬಿಸಿ. ಇವನ್ನೆಲ್ಲಾ ಅರಗಿಸಿಕೊಳ್ಳಬೇಕೆನ್ನುವಾಗಲೇ ಹೊಸ "ಸಖಿ' ನನ್ನ ಬೆನ್ನುಬಿದ್ದುಬಿಡಬೇಕೇ? ಅತ್ಯಂತ ತುಂಟಿಯಾಕೆ. ಮೊದಲ ನೋಟದಲ್ಲೇ ನನ್ನ ಸೆಳೆದುಬಿಟ್ಟಳು ಚಕೋರಿ. ಅಷ್ಟೆ, ಸತ್ಯ ಹೇಳಬೇಕೆಂದರೆ ಆಕೆ ಸಿಕ್ಕ ಕ್ಷಣದಿಂದ ಎಲ್ಲೆವೆಂದರೆ ಎಲ್ಲವೂ, ಈ ಜಗತ್ತನ್ನೇ ಮರೆತುಬಿಟ್ಟೆ ನಾನು. ಮೊದಲೇ ರೂಪವತಿ. ತುಸುವೇ ಹಚ್ಚಿಕೊಂಡರೂ ಆಪ್ತವಾಗಿಬಿಡುತ್ತಾಳೆ. ಆದರೆ ಪೆದ್ದುಮುಂಡೇದು. ಏನೇನೋ ಹರಟುತ್ತಾಳೆ, ಸ್ವಲ್ಪ ಶಿಸ್ತುಕಡಿಮೆ. ಒಂಚೂರು ಜತೆಗಿದ್ದು, ಗಮನಕೊಟ್ಟು ತಿದ್ದಿದರೆ ಜಗತ್ತನ್ನೇ ಗೆಲ್ಲಬಲ್ಲಳು. ನನಗೆ ಸಿಕ್ಕ ಈ ಹೊಸ ಗೆಳತಿಯನ್ನು ಎಲ್ಲ ರೀತಿಯಿಂದಲೂ ಸವರ್ಾಂಗ ಸುಂದರಗೊಳಿಸಿ ನಿಮ್ಮೆದುರು ತಂದು ನಿಲ್ಲಿಸುವವರೆಗೆ ನನಗೆ ಸಮಾಧಾನವಿರಲಿಲ್ಲ. ಅದಕ್ಕಾಗಿ ಇಷ್ಟು ದಿನ ನಿಮ್ಮ ಜತೆ ಈ ಬ್ಲಾಗ್ ತಾಣದಲ್ಲಿ ಸಂವಾದಿಸಲು ಆಗಲಿಲ್ಲ. ಅರ್ಥ ಮಾಡಿಕೊಳ್ಳುತ್ತೀರಲ್ಲಾ ? ಪ್ಲೀಸ್...

ನನಗೆ ಗೊತ್ತು ನಿಮ್ಮದು ಹುಸಿ ಮುನಿಸು. ಈ ಬರಹ ನೋಡುತ್ತಿದ್ದಂತೆಯೇ ಕೋಪ ಕರಗಿ ಹೋಗಿರುತ್ತದೆ. ಹಾಗೆಂದು ನಿಮ್ಮ ಅವ್ಯಾಜ್ಯ ಪ್ರೇಮಕ್ಕೆ ದ್ರೋಹ ಬಗೆಯಲಾರೆ. ಕೊಟ್ಟ ಮಾತಿಗೆ ತಪ್ಪಿ ನಡೆಯಲಾರೆ. ತೀರಾ ಪ್ರತಿ ದಿನವಲ್ಲದಿದ್ದರೂ ಆಗಾಗ, ನಿಯಮಿತವಾಗಿ ನಿಮ್ಮ ಜತೆ ಸಂವಾದಿಸುತ್ತಿರುತ್ತೇನೆ. ಈಗ ಹೇಳಿ, "ಕನ್ನಡ ಪ್ರಭ' ಹೇಗನ್ನಿಸುತ್ತಿದೆ ? ನಮ್ಮ ಬದಲಾವಣೆಗಳು ನಿಮಗೆ ಇಷ್ಟವಾಗುತ್ತಿದೆಯಲ್ಲವೇ ? ಹೊಸ ಪುರವಣಿ ಸಖಿಯ ನನ್ನ ಪಾಲಿನ ಮೊದಲ ಸಂಚಿಕೆಯ ಕೆಲಸವನ್ನು ನಿನ್ನೆಯಷ್ಟೇ ಮುಗಿಸಿ ನಿಮ್ಮೊಂದಿಗೆ ಹರಟಲು ಕುಳಿತಿದ್ದೇನೆ.


ಇನ್ನೇನು ಈ ತಿಂಗಳ ಹದಿನೈದರ ಹೊತ್ತಿಗೆ ಆಕೆಯೂ ನಿಮ್ಮೆದುರು ಬಂದುಬಿಡುತ್ತಾಳೆ. ಆಕೆಯನ್ನೂ ಒಂದಷ್ಟು ಹೊಸರೂಪದಲ್ಲಿ ನೋಡಲು ಪ್ರಯತ್ನಿಸಿದ್ದೇನೆ. ಅದು ಆಕೆಗೆ ಚೆಂದ ಕಾಣುತ್ತದೆಯೋ ಇಲ್ಲವೋ ಎಂಬುದನ್ನು ನೋಡಿ ಹೇಳುತ್ತೀರಲ್ಲಾ ? ಬಹಳಷ್ಟು ಅಲ್ಲದಿದ್ದರೂ ಒಂದಷ್ಟು ಆಕೆಯನ್ನು ಬದಲಿಸಿದೇನೆ. ಇಷ್ಟರವರೆಗೆ ಕೇವಲ ಮಹಿಳೆಯರ ಗೆಳತಿಯಷ್ಟೇ ಆಗಿ ಉಳಿದಿದ್ದ ಆಕೆ, ಇನ್ನು ಮುಂದೆ ಎಲ್ಲ ಯುವ ಮನಸ್ಸುಗಳ ಸನಿಹಕ್ಕೆ ಆಕೆಯನ್ನು ಕರೆದೊಯ್ಯಲು ನಿರ್ಧರಿಸಿದ್ದೇನೆ. ಹಾಗೆಂದು ಮತ್ತೆ ಯುವಕರಿಗಷ್ಟೇ ಸೀಮಿತವೆಂತಲ್ಲ. ಅನುಭವ ಮಾಗಿದ, ಮನಸ್ಸು ಇನ್ನೂ ಯವ್ವನವನ್ನು ಕಳೆದುಕೊಳ್ಳದ ಎಲ್ಲ ಸಹೃದಯೀಗಳು ಪ್ರೀತಿಯಿಂದ ಸ್ವೀಕರಿಸುವ ಸಂಚಿಕೆಗಳನ್ನು ತರಬೇಕೆಂಬ ಹಂಬಲ ನನ್ನದು. ಆ ನಿಟ್ಟಿನಲ್ಲಿ ನಿಮ್ಮ ಬೆಂಬಲ.


ಹಾಂ...ಮರೆತಿದ್ದೆ, ನಾಳೆಯಿಂದ ನನ್ನ ಅಂಕಣ "ಕನ್ನಡಪ್ರಭ"ದಲ್ಲಿ ಮತ್ತೆ ಪ್ರತ್ಯಕ್ಷವಾಗುತ್ತಿದೆ; ಒಂದಷ್ಟು ಬದಲಾವಣೆಗಳೊಂದಿಗೆ. ಹಾಗೆಂದು, ನೀರ ದಾಹವನ್ನು ಬತ್ತಿಸಿಕೊಂಡಿಲ್ಲ. ಬರಹದ ಕ್ಯಾನ್ವಾಸನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವ ಆಸೆ ನನ್ನದು. ನೀರಿಗಾಗಿ ಸೀಮಿತವಾದ ನನ್ನ ಅಂಕಣ ಆರಂಭವಾದ ದಿನವಿನ್ನೂ ನನಗೆ ಚೆನ್ನಾಗಿ ನೆನಪಿದೆ. ಅಂದು ನಾನು ಯಾರೆಂಬುದೇ ಓದುಗರಿಗೆ ಗೊತ್ತಿರಲಿಲ್ಲ. ಅಷ್ಟು ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದರೂ, ಸಂಯುಕ್ತ ಕನರ್ಾಟಕ, ಕರ್ಮವೀರ, ಕಸ್ತೂರಿ, ವಿಜಯ ಕನರ್ಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಆಗಾಗ ಬರೆಯುತ್ತಿದ್ದರೂ ನನ್ನದೇ ಅಂತ ಒಂದು ವೇದಿಕೆ ಸಿಕ್ಕಿರಲಿಲ್ಲ. ಅಂಥದ್ದೊಂದು ಅಪರೂಪದ ಅವಕಾಶವನ್ನು ಒದಗಿಸಿಕೊಟ್ಟವರು ನನ್ನ ನೆಚ್ಚಿನ ಸಂಪಾದಕ ಶ್ರೀ ವಿಶ್ವೇಶ್ವರ ಭಟ್ಟರು. ಮೂರ್ನಾಲ್ಕು ವರ್ಷಗಳಿಂದ ನೀರಿನ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದರೂ ಅದನ್ನು ಬರೆದಿಡುವ, ನಿಯಮಿತವಾಗಿ ದಾಖಲಿಸಿಡುವ ಗೋಜಿಗೆ ಹೋಗಿರಲೇ ಇಲ್ಲ. ನನ್ನೊಳಗಿನ ಈ ಆಸಕ್ತಿಯನ್ನು ಗುರುತಿಸಿ ಶ್ರೀ ಭಟ್ಟರು ಅಂಕಣ ಬರೆಯಲು ಹಚ್ಚಿದರು. ಹಲವು ದಿನಗಳಿಂದ ಇಂಥದ್ದೊಂದು ಬಯಕೆಯನ್ನು ಅವರ ಮುಂದಿಟ್ಟು ಅವಕಾಶಕ್ಕಾಗಿ ಪೀಡಿಸುತ್ತಲೇ ಇದ್ದೆ. ನೀರಿನ ಬಗ್ಗೆ ಬರೆದರೂ ಎಷ್ಟು ಬರೆದಾನು ? ಅದು ಅಂಕಣಕ್ಕೆ ಸೂಕ್ತ ವಸ್ತುವೇ ? ಇಂಥ ಶುಷ್ಕ ವಿಷಯದ ಮೇಲೆ ಬರೆದರೆ ಓದುಗರು ಒಪ್ಪಿಕೊಂಡಾರೆ...ಎಂಬಿತ್ಯಾದಿ ಸಂಶಯಗಳು ಅವರಲ್ಲಿದ್ದಂತಿತ್ತು. ಬಹುಶಃ ಅವರಲ್ಲಿದ್ದುದಕ್ಕಿಂತ ಹೆಚ್ಚಿನ ಅನುಮಾನ ನನ್ನೊಳಗಿತ್ತು. ಆದರೆ ನೀರಿನ ಮೇಲಿರುವ ನನ್ನ ಪ್ರೀತಿ, ಮತ್ತು ಏನಾದರೂ ಹೊಸತನ್ನು ಕೊಡಬೇಕೆಂಬ ಹಂಬಲ, ಅದು ಅಭಿವೃದ್ಧಿಪರ ಬರವಣಿಗೇ ಆಗಿರಬೇಕೆಂಬ ಸಂಕಲ್ಪ ನನ್ನನ್ನು ನೀರಿನ ಮೇಲಿನ ಅಂಕಣಕ್ಕೆ ಪ್ರೇರೇಪಿಸಿತ್ತು.


ಅಂತೂ ಈಗ್ಗೆ ಆರು ವರ್ಷದ ಕೆಳಗೆ ಇದೇ ಮಾಚರ್್ ಮೊದಲ ಶುಕ್ರವಾರ "ನೀರು-ನೆರಳು" ಎಂಬ ಹೆಸರಿನಡಿ ನನ್ನ ಮೊದಲ ಅಂಕಣ ವಿಜಯ ಕನರ್ಾಟಕದ ಸಂಪಾದಕೀಯ ಪುಟದಲ್ಲಿ ಪ್ರಕಟವಾಗಿಯೇ ಬಿಟ್ಟಿತು. ಮೊದಲ ಲೇಖನವನ್ನು ಈಗ ಓದಿಕೊಂಡರೆ ನನಗೇ ನಾಚಿಕೆಯಾಗುತ್ತದೆ. ಅಷ್ಟೊಂದು ಬಾಲೀಶವಾಗಿತ್ತು. ಮುಂದಿನದಕ್ಕೆ ಸಾಕಷ್ಟು ಹಿಂಜರಿಕೆ ಕಾಡಿತು. ಆದರೆ ಓದುಗರು ಹಿಂಜರಿಯಲಿಲ್ಲ. ಅದನ್ನು ಮುಕ್ತವಾಗಿ ಸ್ವೀಕರಿಸಿದರು. ಸುಧಾರಣೆಗಾಗಿ ಕಾದರು. ಮೊದಲ ಹತ್ತು ಹನ್ನೆರಡು ವಾರದ ವರೆಗೂ ಅದೇ ಸ್ಥಿತಿ ಮುಂದುವರಿಕೆ. ನನ್ನ ಸಂಪಾದಕರೂ ತಾಳ್ಮೆ ಕಳೆದುಕೊಳ್ಳಲಿಲ್ಲ. ಅಷ್ಟರಲ್ಲಿ ಒಂದಷ್ಟು ಹಿಡಿತ ಸಿಕ್ಕಿತ್ತು. ಹಿತೈಷಿಗಳು, ವಿಷಯ ತಜ್ಞರು, ಹಿರಿಯರು ನನ್ನ ಬೆಂಬಲಕ್ಕೆ ನಿಂತರು. ಅಂಕಣವೊಂದಕ್ಕೆ ಬೇಕಾದ ಅಧ್ಯಯನ ಶಿಸ್ತು, ಗಾಂಭೀರ್ಯ, ನಿಯಮಿತತೆ, ಭಾಷೆ, ಓದಿಸಿಕೊಳ್ಳು ಶೈಲಿ, ವಿಯ ನಿರೂಪಣೆಗೆ ಅಗತ್ಯ ನವಿರು ಇತ್ಯಾದಿಗಳನ್ನು ಒಂದೊಂದಾಗಿಒ ಅವರು ನನಗೆ ಹೇಳಿಕೊಟ್ಟರು. ಅಲ್ಲಿಗೆ ನನ್ನಲ್ಲಿ ಒಂದು ರೀತಿಯ ವಿಶ್ವಾಸ ಮೂಡಿತ್ತು. ಇದನ್ನುಳಿದು ಮುಂದಿನದೆಲ್ಲವೂ ಓದುಗರದ್ದೇ ಸಿಂಹಪಾಲು. ಅವರು ನನ್ನ ಬೆನ್ನಿಗೆ ನಿಂತು ಕಾಯ್ದರು. ಆರು ವರ್ಷಗಳ ಬಳಿಕ ಇಂದು ನಾಡಿನಲ್ಲಿ ನನಗಿಂತ ನೀರು-ನೆರಳು ಜನಪ್ರಿಯ. ಆನಂತರ ಬೇರೆ, ಬೇರೆ ಜವಾಬ್ದಾರಿಗಳನ್ನು ಪತ್ರಿಕಾ ಕ್ಷೇತ್ರದಲ್ಲಿ ನಿರ್ವಹಿಸಿದ್ದೇನೆ. ಬೇರೆ ಅದೆಷ್ಟನ್ನೋ ಬರೆದಿದ್ದೇನೆ. ವೈಯಕ್ತಿಕವಾಗಿ ಅವೆಲ್ಲವೂ ಕೊಟ್ಟ ಖುಷಿಗಿಂತ ನೀರಿನ ಬಗೆಗಿನ ಬರಹ ನನ್ನಗೆ ತೃಪ್ತಿ ತಂದಿದೆ. ಅದು ನನಗೆ ತಂದುಕೊಟ್ಟ ಇಮೇಜಿನ ಮುಂದೆ ಉಳಿದೆಲ್ಲವೂ ಗೌಣ ಎಂದುಕೊಳ್ಳುತ್ತೇನೆ.


ನೀರಿನ ಬಗೆಗಿನ ನನ್ನ ಪ್ರಾಮಾಣಿಕ ಪ್ರೀತಿಯನ್ನು ಓದುಗರು ಗುರುತಿಸಿದ್ದಾರೆ. ಅಷ್ಟು ಸಾಕು. ಅದಕ್ಕಿಂತ ಇನ್ನೇನು ಬೇಕು ನನಗೆ ?ಇದೀಗ ಕನ್ನಡಪ್ರಭದಲ್ಲಿ ಮತ್ತೆ ಬರೆಯುವ ಹುಚ್ಚು ಸಾಹಸಕ್ಕೆ ಮುಂದಾಗುತ್ತಿದ್ದೇನೆ; ನೀವೆಲ್ಲ ನನ್ನ ಜತೆಗಿದ್ದೀರಿ ಎಂಬ ಧೈರ್ಯದೊಂದಿಗೆ. ನಾಳೆ ಅಂಕಣ ಓದಿ ಏನಾಗಿದೆ? ಏನಾಗಬೇಕಿತ್ತು ಎಂಬುದನ್ನು ತಿಳಿಸುತ್ತೀರಲ್ಲಾ ? ನಿಮ್ಮ ಉತ್ತರಕ್ಕಾಗಿ ಕಾದಿರುತ್ತೇನೆ. ಪ್ಲೀಸ್ ಮರೆಯದಿರಿ. ಬರಲೇ ?

Tuesday, February 22, 2011

ಪ್ರೀತಿಯ ಸೇಸೆಗೆ ಶಿರವೊಡ್ಡಿ...


ಆ ಸುಂದರ ಸಂಜೆಯ ಮಳೆಯಲ್ಲಿ ನೆನೆದು ತೊಪ್ಪೆಯಾಗಿಬಿಡಬೇಕೆಂಬ ತವಕ. ಹುಚ್ಚೆದ್ದು ಕುಣಿಯುವ ಉತ್ಸಾಹ....


ಅದೇಕೋ ಕಾಣೆ, ಕಳೆದು ಮೂರ‍್ನಾಲ್ಕು ದಿನಗಳಿಂದ ಬೆಂಗಳೂರೆಂಬ ಬೆಂಗಳೂರಿನ ವಾತಾವರಣ ಇನ್ನಿಲ್ಲದಂತೆ ಜನರನ್ನು ಕಾದು ಕಂಗೆಡಿಸಿಬಿಟ್ಟಿತ್ತು. ಮೈಮನಗಳೆಲ್ಲ ಗಾರು ಗಬರೆದ್ದುಹೋಗಿತ್ತು. ನಡುವೆಯೇ ಹಾದು ಹೋದ ಹುಣ್ಣಿಮೆಯ ಬೆಳದಿಂಗಳ ರಾತ್ರಿಯೂ ಸಹ ತಣ್ಣನೆಯ ಅನುಭವನ್ನು ಕಸಿದುಕೊಂಡುಬಿಟ್ಟಿತ್ತು. ಶಿವರಾತ್ರಿಗೆ ಇನ್ನೂ ಹದಿನೈದು ದಿನಗಳಿವೆ ಎಂಬಾಗಲೇ ಚಳಿ ಸುಳಿವಿಲ್ಲದಂತೆ ಓಡಿ ಹೋಗಿತ್ತು. ಅದೆಂಥದ್ದೋ ಅರ್ಥವಿಲ್ಲದ ಅಸಹನೆ, ಆಯಾಸ, ದುಗುಡಗಳು ಸುಳಿದಾಡುತ್ತಿದ್ದವು. ಒಂದಕ್ಕೂ ಉತ್ತರ ಸಿಕ್ಕುತ್ತಿರಲಿಲ್ಲ. ಸುದೀರ್ಘ ತಾಳ್ಮೆಯ ಎಳೆ ಎಲ್ಲೋ ಬಿಚ್ಚಿಕೊಳ್ಳಲಾರಂಭಿಸಿದ ಅನುಭವ. ವ್ಯಾಖ್ಯಾನಕ್ಕೆ ಸಿಗದ ಬೇಸರ. ಇವೆಲ್ಲದರ ಪ್ರತೀಕವೋ ಎಂಬಂತೆ ನಿನ್ನೆ ಸೋಮವಾರದ ಬೆಳಗು ಎಂದಿನಂತಿರಲಿಲ್ಲ. ಸೂರ್ಯ ಮೂಡಿ ತಾಸು ಎರಡಾದರೂ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ. ಹಾಗಿದ್ದರೂ ಒಳಗೊಳಗೇ ಬೆವರು ಕಿತ್ತು ಬರುತ್ತಿತ್ತು. ಸ್ವಲ್ಪ ಹೊತ್ತಷ್ಟೇ ಮತ್ತೆ ಬಿಸಿಲು ಕಣ್ಬಿಟ್ಟಿತ್ತು. ಬಹುಶಃ ಮನದ ಸ್ಥಿತಿಯೂ ಅದೇ ಆಗಿತ್ತೇನೋ ?


ಇದ್ದ ಬದ್ದ ಉತ್ಸಾಹವನ್ನೆಲ್ಲಾ ಒಟ್ಟುಗೂಡಿಸಿಕೊಂಡು ಹೊರಟರೂ ಲವಲವಿಕೆಯ ಸುಳಿವಿಲ್ಲ. ಬಹುತೇಕ ಅದೇ ಸ್ಥಿತಿಯಲ್ಲೇ ರಾಜವೀಥಿಯ ಮಗ್ಗುಲಲ್ಲೇ ಮೇಲೆದ್ದು ನಿಂತಿರುವ ‘ಕನ್ನಡಪ್ರಭ’ಕಟ್ಟಡದ ನಾಲ್ಕನೇ ಮಹಡಿಯನ್ನೇರಿದ್ದೆ. ಬಿಸಿಲು ಅದೇ ಪರಿ ಬಾರಿಸುತ್ತಲೇ ಇತ್ತು. ನೆಚ್ಚಿನ ಸಂಪಾದಕರ ಕೊಠಡಿಯನ್ನು ಪ್ರವೇಶಿಸಿದಾಗ ೩.೪೦. ಐದೇ ನಿಮಿಷದಲ್ಲಿ ಪತ್ರಿಕೆಯ ಸಹಾಯಕ ಸಂಪಾದಕ ಹುದ್ದೆಯ ಆದೇಶ ಕೈ ಸೇರಿತ್ತು. ಔಪಚಾರಿಕ ಪ್ರಕ್ರಿಯೆ ಮುಗಿದು ಹೊಸ ಸಹೋದ್ಯೋಗಿಗಳತ್ತ ಸ್ನೇಹದ ಹಸ್ತ ಚಾಚಿದರೆ ಅಭೂತಪೂರ್ವ ಪ್ರತಿಕ್ರಿಯೆ. ಯಾರೊಬ್ಬರೂ ಹೊಸಬರಂತೆ ಅನ್ನಿಸಲೇ ಇಲ್ಲ. ಅರ್ಧಕ್ಕಿಂತ ಹೆಚ್ಚುಮಂದಿ ವೃತ್ತಿಯಿಂದ ಪರಿಚಿತರೇ. ಉಳಿದವರದ್ದು ಹೊಸ ಮುಖ. ಒಂದು ಸುತ್ತು ಮುಗಿಸಿ ಕಿಟಕಿಯಿಂದ ಹೊರಗಿಣುಕಿದರೆ ಬೆಳಗ್ಗೆ ಕಂಡದ್ದಕ್ಕಿಂತಲೂ ದಟ್ಟ ಮೋಡ ಕಚೇರಿಯ ಮೇಲಿನ ಬಾನಿನಲ್ಲಿ ಆವರಿಸಿದಂತೆ ಕಂಡುಬರುತ್ತಿತ್ತು. ಒಮ್ಮೆ ಆಗಸದತ್ತ ಮುಖಮಾಡಿ ನಿಟ್ಟುಸಿರು ಬಿಟ್ಟು ಬರುವ ಬಯಕೆಯಾಗಿ ಹೊರ ಬಂದರೆ, ಇದ್ದಕ್ಕಿದ್ದಂತೆ ನಾಲ್ಕಾರು ಹನಿಗಳ ಸಿಂಚನ. ಹನಿಗಳ ಸಂಖ್ಯೆ ಬೆಳೆಯುತ್ತಲೇ ಹೋಯಿತು. ಇದ್ದಕ್ಕಿದ್ದಂತೆ ಧೋ ಗುಟ್ಟುತ್ತಾ ಮಳೆ ಸುರಿಯಲಾರಂಭಿಸಿತು. ಪಕ್ಕದಲ್ಲಿದ್ದ ಗೆಳೆಯರಾರೋ ಪ್ರಶ್ನಿಸಿದರು; ಇದೆಂಥಾ ಮಳೆ ? ಸ್ವಗತವೆಂಬಂತೆ ಆದರೆ, ಸ್ವರ ಬಿಟ್ಟೇ ಉಸುರಿದ್ದೆ ಒನಕೆಮಳೆ’, ಮುಸಲಧಾರೆ !


ಬಿಟ್ಟೂಬಿಡದೇ ಅರ್ಧ ತಾಸು ನನ್ನ ನೆಚ್ಚಿನ ಮಳೆ ಸುರಿಯುತ್ತಲೇ ಇತ್ತು. ಹೊಸ ಮಿತ್ರರಲ್ಲಿ ಕೆಲವರು ರೇಗಿಸಿದರು; ನೆರಳೂ ಸಿಕ್ಕಿತ್ತು, ಜತೆಗೆ ನೀರೂ ಬಂತು. ಅವರದನ್ನು ಹಾಗೇ ಸುಮ್ಮನೇ ಹೇಳಿದ್ದರೂ ನನ್ನ ಪಾಲಿಗೆ ನೀರು-ನೆರಳೆರಡೂ ಹೊಸ ಕಚೇರಿಯ ಬಾಗಿಲಲ್ಲೇ ದಕ್ಕಿತ್ತು.


ಕೊನೆಗೂ ಎರಡೂವರೆ ತಿಂಗಳ ವನವಾಸಕ್ಕೆ ಮಂಗಳ ಹಾಡಿದ್ದೆ. ಡಿಸೆಂಬರ್ ೮, ೨೦೧೦ರ ಮಧ್ಯಾಹ್ನ ವಿಜಯ ಕರ್ನಾಟಕವನ್ನು ತೊರೆದು ಬಂದ ಬಳಿಕ ಪತ್ರಿಕಾ ಕಚೇರಿಗಳ ಕಡೆ ಮುಖ ಹಾಕಿ ನೋಡಿರಲಿಲ್ಲ. ಇಷ್ಟು ಸುದೀರ್ಘ ವಿಶ್ರಾಂತಿಯೆಂದರೆ ನಿಜವಾದ ಪತ್ರಕರ್ತನೊಬ್ಬನಿಗೆ ಅದಕ್ಕಿಂತಲೂ ಕಠಿಣ ಶಿಕ್ಷೆ ಬೇರೊಂದು ಇರಲಾರದು. ಆದರೆ ಇದೊಂದು ರೀತಿಯ ಅದ್ಭುತ ಅನುಭವ. ಜೀವನದಲ್ಲಿ ಮ್ಮೆಯಾದರೂ ಇಂಥ ಸಮಯ ಬರದಿದ್ದರೆ ನಮ್ಮನ್ನು ನಾವು ಅವಲೋಕಿಸಿಕೊಳ್ಳಲೇ ಆಗದೇನೋ. ನಾವೇನು ಎಂಬುದನ್ನು ಕಂಡುಕೊಳ್ಳುವುದರ ಜತೆಗೆ ನಿಜವಾಗಿ ನಮ್ಮವರು ಯಾರು ಎಂಬುದನ್ನು ಅರಿಯಲು ಸಾಧ್ಯವಾದದ್ದು ಈ ಅವಯ ಲಾಭ. ಹಾಗೆ ನೋಡಿದರೆ ನಿಜವಾಗಿ ನನ್ನ ಜತೆಗೆ ನಿಂತವರು ನನ್ನ ಅಭಿಮಾನಿ ಓದುಗರು. ಯಾವುದೇ ಕಾರಣವಿಲ್ಲದೇ ಕೇವಲ ನನ್ನ ಬರಹಗಳಿಗಾಗಿಯೇ ನನ್ನನ್ನು ಪ್ರೀತಿಸಿದವರು ಅವರು. ನಾವು ಪತ್ರಿಕೆಯ ಒಳಗಿದ್ದಾಗಲೂ ಹೊರಗಿದ್ದಾಗಲೂ ಒಂದೇ ರೀತಿಯಲ್ಲಿ ಕಂಡವರು. ಏನಂದರೆ ಏನನ್ನೂ ಅಪೇಕ್ಷಿಸದೇ ನಿಷ್ಕಲ್ಮಷವಾದ ಪ್ರೀತಿಯ ಧಾರೆ ಹರಿಸಿದರು. ಅದೇ ನನ್ನಲ್ಲಿ ಧೈರ್ಯ, ವಿಶ್ವಾಸ ಮೂಡಿಸಿದವು. ಮತ್ತೆ ಹೊಸ ಸಾಹಸಕ್ಕೆ ಹುರಿದುಂಬಿಸಿದವು. ಯಾರ‍್ಯಾರೋ ಏನೇನೋ ಬರೆದರು, ಹೀಗಳೆದರು, ನಿಂದಿಸಿದರು, ಬಿದ್ದಾಗಲೇ ಕಲ್ಲು ಎಸೆಯಲು ಹವಣಿಸಿದರು, ಮತ್ತೆ ಕೆಲವರು ಹೊಗಳಿದರು, ಸಹಾನುಭೂತಿಯನ್ನೂ ವ್ಯಕ್ತಪಡಿಸಿದರು, ವೃಥಾ ಅನುಕಂಪ ತೋರಿದವರಿಗೂ ಕಡಿಮೆ ಇಲ್ಲ. ಇದಾವುದಕ್ಕೂ ನನ್ನ ಓದುಗರು ತಲೆ ಕೆಡಿಸಿಕೊಳ್ಳಲಿಲ್ಲ. ಅವರಿಗೆ ಗೊತ್ತಿರುವುದು ನಿಷ್ಕಪಟ ಪ್ರೀತಿ. ಅದನ್ನು ನಿರಂತರ ನೀಡಿ, ನನ್ನಲ್ಲಿ ಬರಹ ಪ್ರೀತಿಯನ್ನು ಹೆಚ್ಚಿಸಿದರು.


ಹೆಚ್ಚಿಗೆ ಹೇಳಲೇನು ? ಮತ್ತೆ ಲೇಖನಿಗೆ ಸಾಣೆ ಹಿಡಿದುಕೊಂಡು ಸಜ್ಜಾಗಿದ್ದೇನೆ ಓದುಗರ ಅಪ್ಪಣೆಯ ಪಾಲಿಸಲು. ಮತ್ತದೇ ತುಂತುರು ಮಳೆ ಮನಕ್ಕೆ ಹಿತ ನೀಡುತ್ತಿದೆ. ಒಬ್ಬೊಬ್ಬ ಓದುಗನ ಪ್ರೀತಿಯೂ ಒಂದೊಂದು ಹನಿಯ ರೂಪದಲ್ಲಿ ಸೇಸೆಯಾಗುತ್ತಿದೆ. ಅದಕ್ಕೆ ತಲೆ ಒಡ್ಡಿದೇನೆ....ಇನ್ನೇನು ಬೇಕು ಜೀವನದಲ್ಲಿ ?

Monday, February 7, 2011

ನಿಜವಾದ ಬ್ರೇಕಿಂಗ್ ನ್ಯೂಸ್

ಬೆಸ್ಟ್ ವಿಷಸ್ ಟು ವಿಷ್ ಭಟ್....

ಅಬ್ಬಾ, ಕೊನೆಗೂ ನಾವು ಕಾಯುತ್ತಿದ್ದ ಕಾಲ ಬಂದೇ ಬಿಟ್ಟಿದೆ. ‘ಒಂದಾಟ ಭಟ್ರುದ್ದು’ ಎಂಬ ವಿನೂತನ ನಾಟಕವನ್ನು ರಂಗದ ಮೇಲೆ ತರಲು ಅತ್ತ ನಾಟಕಕಾರ ಯಶವಂತ ಸರದೇಶಪಾಂಡೆ ರಿಹರ್ಸಲ್ ನಡೆಸುತ್ತಿದ್ದಾಗಲೇ ನಮ್ಮ ಭಟ್ರು ಆಟ ಶುರು ಮಾಡೇಬಿಟ್ಟಿದ್ದಾರೆ ಕಣ್ರಿ.


ನಿಜವಾದ ಬ್ರೇಕಿಂಗ್ ನ್ಯೂಸ್ ಇದು ಸ್ವಾಮಿ, ನಮ್ಮ ನೆಚ್ಚಿನ ಸಂಪಾದಕ ವಿಶ್ವೇಶ್ವರ ಭಟ್ಟರು ‘ಕನ್ನಡ ಪ್ರಭ’ದ ಮುಖ್ಯ ಸಂಪಾದಕರಾಗಿ ಇವತ್ತು (ಸೋಮವಾರ, ೦೭.೦೨.೨೦೧೧) ಮಧ್ಯಾಹ್ನ ಅಭಿಜಿನ್ ಮೂಹೂರ್ತದಲ್ಲಿ ಅಕಾರ ಸ್ವೀಕರಿಸಿದ್ದಾರೆ. ಕನ್ನಡದ ಓದುಗರಿಗೆ ಇದಕ್ಕಿಂತ ಒಳ್ಳೆಯ ಬ್ರೇಕಿಂಗ್ ನ್ಯೂಸ್ ಬೇರಾವುದು ಇದ್ದೀತು ? ಅದೇ ಕ್ಷಣಕ್ಕೆ ಕೆಲವರ ಪಾಲಿಗೆ ಇದು ಹಾರ್ಟ್ ಬ್ರೇಕಿಂಗ್ ನ್ಯೂಸ್ ಆಗಿಯೂ ಕಾಡಿರುತ್ತದೆ ಎಂಬ ಅರಿವು ಇದ್ದೇ ಇದೆ. ಏನು ಮಾಡೋದು ? ತಲೆಗೆ ಹೊಯ್ದ ನೀರು ಕಾಲಿಗೆ ಇಳಿಯಲೇ ಬೇಕಲ್ಲಾ ?

ಈ ಎರಡು ತಿಂಗಳಲ್ಲಿ ಯಾರ‍್ಯಾರೋ ತಲೆಗೆ ಏರಿಸಿಕೊಂಡಿದ್ದರು, ಯಾರ‍್ಯಾರದೋ ತಲೆ ತಿರುಗಿತ್ತು, ಇನ್ಯಾರ‍್ಯಾರೋ ತಲೆ ಕೆಡಿಸಿಕೊಂಡಿದ್ದರು...ಆಗೋದೆಲ್ಲಾ ಒಳ್ಳೇದಕ್ಕೇ ಎಂಬ ಪಾಸಿಟೀವ್ ಥಿಂಕಿಂಗ್ ನಮ್ಮದಾಗಿತ್ತು. ಒಂದು ರೀತಿಯಲ್ಲಿ ನಮ್ಮ ಸಾಮರ್ಥ್ಯದ ನೈಜ ಅರಿವು ಆದದ್ದೇ ಈ ಅವಯಲ್ಲಿ. ಎಲ್ಲಕ್ಕಿಂತ ಹೆಚ್ಚಾಗಿ ಈ ಅವಯಲ್ಲಿ ಬಹಳಷ್ಟು ‘ಮಿತ್ರರ’ ಮುಖವಾಡ ಕಳಚಿಬಿದ್ದಿದೆ. ಎಲ್ಲವನ್ನು ಕೊಡವಿಕೊಂಡು ಹೊಸ ಹುಮ್ಮಸ್ಸಿನೊಂದಿಗೆ ಆಟ ಶುರು ಮಾಡಿದ್ದಾರೆ ಭಟ್ಟರು. ನಾವುಗಳೂ ವೀರ ಯೋಧರಂತೆ ಭಟ್ಟರ ಸಮರ್ಥ ಸೇನಾಪತ್ಯದಲ್ಲಿ ಮುನ್ನುಗ್ಗಲು ಸಜ್ಜಾಗಿದ್ದೇವೆ. ಇನ್ನೇನು ಅಕೋ, ಇಕೋ ಎನ್ನುವಷ್ಟರಲ್ಲಿ ಒಂದೇ ಮನಸ್ಸಿನಲ್ಲಿ ಮತ್ತೆ ಓದುಗ ದೊರೆಯ ದಾಹ ತಣಿಸಲು ಹೊರಡುತ್ತೇವೆ.

ಒಬ್ಬೊಬ್ಬ ಓದುಗನೂ ತಾನೇ ಸಂಪಾದಕ ಹುದ್ದೆಗೇರಿದಷ್ಟು ಸಂಭ್ರಮ ಪಡುತ್ತಿದ್ದಾನೆ. ಒಬ್ಬೊಬ್ಬರ ಉತ್ಸಾಹವನ್ನೂ ನೀವು ನೋಡಬೇಕು. ಬೆಳಗ್ಗಿನಿಂದ ಫೋನ್ ಕಾಲ್‌ಗಳದ್ದೇ ಪಾರುಪತ್ಯ. ಖಂಡಿತಾ ಓದುಗರ ನಿರೀಕ್ಷೆ ನಮ್ಮನ್ನು ದಂಗಾಗಿಸಿದೆ. ಇಂಥದ್ದೊಂದು ಭೀಮ ಬಲದೊಂದಿಗೆ ಪತ್ರಿಕೋದ್ಯಮದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಲು ಹೊರಡುತ್ತೇವೆ. ನಿಮ್ಮೆಲ್ಲರ ಕಣ್ಕಾಪು ಎಚ್ಚರ ತಪ್ಪದಂತೆ ಸರಿದಾರಿಯಲ್ಲಿ ನಮ್ಮನ್ನು ಕೊಂಡೊಯ್ಯುತ್ತದೆ ಎಂಬ ವಿಶ್ವಾಸ ನಮಗಿದೆ. ಗುರಿ ಮುಟ್ಟುವರೆಗೆ ಇನ್ನು ವಿರಮಿಸುವ ಪ್ರಶ್ನೆಯೇ ಇಲ್ಲ. ಮನ ಹುಚ್ಚೆದ್ದು ಕುಣಿಯುತ್ತಿದೆ. ಹೆಚ್ಚು ಬರೆಯಲು ಇವತ್ತು ಸಾಧ್ಯವೇ ಇಲ್ಲ. ಪತ್ರಿಕೆಗಳಲ್ಲಿ ಬರೆಯಲು ಇನ್ನೂ ಸಾಕಷ್ಟಿದೆಯಲ್ಲಾ ? ಇನ್ನು ದಿನವಿಲ್ಲ. ಲೇಖನಿಗೆ ಸಾಣೆ ಹಿಡಿದುಕೊಳ್ಳಬೇಕು. ಬರಲೇ...?

ನಿಮ್ಮ
ಗಿಂಡಿ ಮಾಣಿ

Saturday, February 5, 2011

ಈ ಪರಿ ದ್ವೇಷ ಅವನ ತಪ್ಪಲ್ಲ, ಮಾನಸಿಕ ವಿಕೃತಿ


ದು ಮೂಲಭೂತ ಪ್ರಶ್ನೆ. ಕೊಡೆ ಹಿಡಿಯಲು ಕಾರಣವೇನು ?
ಉತ್ತರ ಬಹಳ ಸರಳ. ಒಂದೇ ಮಳೆ ಸುರಿಯುತ್ತಿರಬೇಕು. ಇಲ್ಲವೇ ಬಿಸಿಲು ಭಾರಿಸುತ್ತಿರಬೇಕು. ‘ನೀರು-ನೆರಳು’ಎರಡೇ ಕಾರಣಕ್ಕೆ ಕೊಡೆ ಉಪಯೋಗಿಸುವುದು. ಇದನ್ನು ಹೊರತಾಗಿ ಒಮ್ಮೊಮ್ಮೆ ಅದನ್ನು ಬಳಸುವುದೆಂದರೆ ಕೆಲ ‘ಛತ್ರಿ’ ಮಂದಿ ರಸ್ತೆಯಲ್ಲಿ ಕೆಸರು ಎರಚಿಕೊಂಡು ಹೋಗುತ್ತಿರುತ್ತಾರೆ. ಅದು ನಮ್ಮತ್ತ ರಾಚದಿರಲಿ ಎಂಬ ಕಾರಣಕ್ಕೆ ಕೊಡೆಯನ್ನು ಅಡ್ಡಲಾಗಿ ಹಿಡಿಯುವುದೂ ಉಂಟೆನ್ನಿ.


ಇದ್ದಕ್ಕಿದ್ದಂತೆ ಕೊಡೆಯ ವಿಚಾರವನ್ನು ಇಲ್ಲಿ ಪ್ರಸ್ತಾಪಿಸುವುದಕ್ಕೂ ಕಾರಣವಿದೆ. ಒಪ್ಪಿಕೊಳ್ಳುತ್ತೇನೆ. ಈ ಸಮಾಜದಲ್ಲಿ ನಮ್ಮ ಎಲ್ಲ ನಡೆಗಳಿಗೂ ನಾವು ಉತ್ತರಿಸಲೇಬೇಕಿಲ್ಲ. ಹಾಗೆ ಮಾಡಿದರೆ ಹೀಗೆ, ಹೀಗೆ ಮಾಡಿದರೆ ಹಾಗೆ ಪ್ರಶ್ನಿಸುವ ಜನ ಇದ್ದೇ ಇರುತ್ತಾರೆ. ನಮ್ಮ ಆತ್ಮ ಸಾಕ್ಷಿಗನುಗುಣವಾಗಿ ನಾವು ನಡೆದುಕೊಳ್ಳುವುದೇ ಸೂಕ್ತ. ಇನ್ನು ಕೆಲವೊಂದಕ್ಕೆ ಕಾಲವೇ ಉತ್ತರಿಸುತ್ತದೆ. ಹೀಗಿದ್ದೂ ಛತ್ರಿ ಮಂದಿ ವಿನಾಕಾರಣ ಕೆಸರು ಎರಚಲು ಬಂದಾಗ ಕೊಡೆಯನ್ನು ಅಡ್ಡ ಹಿಡಿಯಲೇಬೇಕಾಗುತ್ತದೆ. ಮಾತ್ರವಲ್ಲ ಅಂಥವರನ್ನು ನಿಲ್ಲಿಸಿ ಚೆನ್ನಾಗಿ ಉಗಿದು ಮುಖದ ನೀರಿಳಿಸವುದೂ ಅಗತ್ಯವಾಗುತ್ತದೆ.


ನಾನು ‘ನೀರ್‌ಸಾಧಕ್’ನನ್ನು ಬಿಟ್ಟು ‘ಗಿಂಡಿಮಾಣಿ’ಯ ಬೆನ್ನು ಹತ್ತಿದಾಗ ಬಹಳಷ್ಟು ಮಂದಿ ಇದರ ಔಚಿತ್ಯವನ್ನು ಪ್ರಶ್ನೆ ಮಾಡಿದರು. ಅದು ಸಹಜವೂ ಸಹ. ಹಾಗೆಂದು ಎಲ್ಲದಕ್ಕೂ ಉತ್ತರಿಸಲೇಬೇಕೆಂದೇನೂ ಇಲ್ಲ. ಏಕೆಂದರೆ ಇಂಥ ಬ್ಲಾಗ್‌ಗಳನ್ನು ಓದುವುದೂ, ಬಿಡುವುದು ಓದುಗರ ಸ್ವಾತಂತ್ರ್ಯಕ್ಕೆ ಬಿಟ್ಟ ವಿಚಾರ. ಪತ್ರಿಕೆಗಳಲ್ಲಿ ಅಂಕಣವಾದರೆ ಹಾಗಲ್ಲ. ಅಲ್ಲಿ ಓದುಗ ದೊರೆಯ ಆಜ್ಞೆಯೇ ಅಂತಿಮ. ಹೀಗಿದ್ದರೂ ನನ್ನ ತೀರಾ ಅಭಿಮಾನಿ ಓದುಗರಲ್ಲಿ ಕೆಲವರು; ಶ್ರೀನಿವಾಸ್, ಗುರು(ಮಯೂರ), ಹರಿಹರಭಟ್ ಮತ್ತಿತರರಂಥವರು ನರಿಕೊಳಗೆರೆ ಮತ್ತು ನಮ್ಮ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಪ್ರಶ್ನಿಸಿದರು. ಅಂಥ ಆತ್ಮೀಯ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವುದು ನನ್ನ ಕರ್ತವ್ಯ ಎಂಬ ಕಾರಣಕ್ಕೆ ಈ ಬರಹ.


ಒಂದು ವಿಚಾರವನ್ನು ಮೊದಲೇ ಸ್ಪಷ್ಟ ಪಡಿಸಿಬಿಡುತ್ತೇನೆ. ಕೊಳಗೆರೆಗೂ ನನಗೂ ಯಾವತ್ತೂ ಸ್ನೇಹವೆಂಬುದು ಇರಲೇ ಇಲ್ಲ. ಆತನ ಪತ್ರಿಕೆಯನ್ನು ನಾನು ಯಾವತ್ತೂ ಗಂಭೀರವಾಗಿ ಪರಿಗಣಿಸಿಯೂ ಇರಲಿಲ್ಲ. ಏಕೆಂದರೆ ಯಾವುದೇ ಅಧ್ಯಯನವಿಲ್ಲದೇ, ಹೆಚ್ಚಿನ ಶ್ರಮವಿಲ್ಲದೇ ಕೇವಲ ಭಾವನಾತ್ಮಕ ಬರಹಗಳಿಂದ, ಪ್ರಚೋದಕ ಸಾಹಿತ್ಯದಿಂದ, ಅತಿರಂಜಿತ ವರದಿಗಳಿಂದ, ರತಿ-ಅಪರಾಯ ವಿಷಯಗಳಿಂದಲೇ ಓದುಗರ ಮನಸ್ಸನ್ನು ಕದಡುವುದು ನನ್ನ ದೃಷಿಯಲ್ಲಿ ಅತ್ಯಾಚಾರವೆಂದೇ ಪರಿಗಣಿತ. ಅದೇನೂ ಮಹಾ ವಿದ್ಯೆಯೂ ಅಲ್ಲ; ಸಾಧನೆಯೂ ಅಲ್ಲ. ಆದರೆ ನೀರಿನಂಥ ಪಕ್ಕಾ ವಿಜ್ಞಾನವನ್ನು ಓದಿಸುವುದು ಎಂಥ ಸಾಹಸವೆಂಬುದು ನಾನು ನನ್ನಂಥವನಿಗೆ ಮಾತ್ರ ಗೊತ್ತು. ನಾಲ್ಕು ಗೋಡೆಗಳ ನಡುವೆ ಕುಳಿತು, ಇಂಟರ್‌ನೆಟ್ ಸಹಾಯದಿಂದಲೋ, ನಾಲ್ಕಾರು ಪುಸ್ತಕಗಳ ಸಾಲನ್ನು ಕದ್ದೋ ಬರೆಯವುದು ಇಂಥ ವಿಚಾರಗಳಲ್ಲಿ ಸಾಧ್ಯವೇ ಇಲ್ಲ. ಇದಕ್ಕೊಂದು ಅಧ್ಯಯನದ ಶಿಸ್ತು ಬೇಕು. ನಾಲ್ಕಾರು ಮಂದಿಯ ಜತೆ ಚರ್ಚಿಸಬೇಕು. ನೂರಕ್ಕೆ ನೂರು ಕ್ಷೇತ್ರ ಕಾರ್ಯವನ್ನು ಬೇಡುವ ಕೆಲಸವದು. ಕಳೆದ ಹತ್ತು ವರ್ಷ ನಾನಿದನ್ನು ಮಾಡಿದ್ದೇನೆ ಎಂಬುದಕ್ಕೆ ನನ್ನ ಓದುಗರೇ ಸಾಕ್ಷಿ.


ಕ್ಷುಲ್ಲಕ ವಿಷಯಗಳನ್ನು ನಾನು ಎಂದೂ ಬರೆದವನಲ್ಲ. ಹೀಗಾಗಿ ನನ್ನ ಅಂಕಣಗಳಲ್ಲಾಗಲೀ, ನಾನು ಕಾರ್ಯ ನಿರ್ವಹಿಸಿದ ಯಾವುದೇ ಪತ್ರಿಕಾ ವಿಭಾಗದಲ್ಲಾಗಲೀ ಈ ಕೊಳಗೆರೆಯ ವಿಚಾರವನ್ನು ಪ್ರಸ್ತಾಪಿಸುವ ಔಚಿತ್ಯ ಕಾಣಲಿಲ್ಲ. ಇಲ್ಲೂ ಬರೆಯುತ್ತಿರಲಿಲ್ಲವೇನೋ. ಆದರೆ ನಾವು ನೀರು ನೆರಳಿನಿಂದ ಹೊರಬಂದು ನಿಶ್ಯಸ್ತ್ರರಾಗಿ ನಿಂತದ್ದನ್ನು ನೋಡಿಯೇ ಈತ ಕಲ್ಲು ಬೀಸಲಾರಂಭಿಸಿದ್ದು. ಅದೂ ತಾನು ಗಾಜಿನ ಮನೆಯಲ್ಲಿ ನಿಂತು. ಹಾಗೆಂದು ನಾವೇನೂ ಆತ ಬೀಸಿದ ಕಲ್ಲಿಗೆಲ್ಲಾ ಗುರಿಯಾಗಬೇಕೆಂದೇನೂ ಇಲ್ಲವಲ್ಲಾ? ಅಥವಾ ನಾವು ಕನಿಷ್ಠ ಪ್ರತಿಭಟನೆಯನ್ನೂ ತೋರದ ದುರ್ಬಲರೂ ಆಗಿರಲಿಲ್ಲ.


ಶ್ರೀ ವಿಶ್ವೇಶ್ವರ ಭಟ್ ಮತ್ತು ಅವರ ನಡುವೆ ಸ್ನೇಹವಿದ್ದುದು ನಿಜ. ಭಟ್ಟರನ್ನು ಬಲ್ಲ ಎಲ್ಲರಿಗೂ ಗೊತ್ತು ಅವರ ಸ್ವಭಾವ ಎಂಥದ್ದು ಎಂಬುದು. ಸ್ನೇಹಶೀಲರಾದ ಅವರು ಯಾವತ್ತಿಗೂ ಯಾರ ಸ್ನೇಹವನ್ನೂ ನಿರಾಕರಿಸಿದ್ದಿಲ್ಲ. ಸುದ್ದಿಮನೆಯ ಒಳಗಿರಲಿ, ಹೊರಗಿರಲಿ ಅದನ್ನು ಸದುಪಯೋಗಪಡಿಸಿಕೊಂಡಿದ್ದಕ್ಕಿಂತ ದುರುಪಯೋಗಪಡಿಸಿಕೊಂಡವರೇ ಹೆಚ್ಚು. ಅದೇ ಸಾಲಿಗೆ ಈ ಕೊಳಗೆರೆಯೂ ಸೇರುತ್ತಾನೆ. ಸುದ್ದಿಮನೆಯ ಹೊರಗೆ ಇವನಾದರೆ ಒಳಗೆ ಆತನ ಒಂದಷ್ಟು ಶಿಷ್ಯರೂ ಇದ್ದಾರೆ. ಹಾಗೆಂದು ಯಾವತ್ತಿಗೂ ಇವ ನನ್ನ ಗೆಳೆಯ ಎಂದು ಭಟ್ಟರು ಸಾರಿಕೊಳ್ಳುತ್ತಾ ಹೋಗಲಿಲ್ಲ. ಇಂದಿಗೂ ಅವರದ್ದು ‘ಜನ್ಮೇಪಿ ಗೆಳೆತನ’ವೇ. ಅದನ್ನು ಉಳಿಸಿಕೊಳ್ಳುವುದು ಬಿಡುವುದು ಅವರವರಿಗೆ ಬಿಟ್ಟದ್ದು.


ಇನ್ನು ಪ್ರತಾಪ ಸಿಂಹ ಪಕ್ಕಾ ಸೈದ್ಧಾಂತಿಕ ಮನುಷ್ಯ. ಪ್ರತಾಪನ ವಿಚಾರಗಳು ನಮಗೆ ಸರಿ ಕಾಣುತ್ತಿಲ್ಲ ಎಂಬ ಮಾತ್ರಕ್ಕೆ ಆತನನ್ನು ವೈಯಕ್ತಿಕವಾಗಿ ಟೀಕಿಸುವುದು, ದ್ವೇಷಿಸುವುದು ಸರಿಯೇ ? ಇಲ್ಲಿ ಸಿದ್ಧಾಂತದ ವಿರೋಧ ಎನ್ನುವುದಕ್ಕಿಂತ ಪ್ರತಾಪನ ಜನಪ್ರಿಯತೆ, ಅಂಕಣಕಾರನಾಗಿ ಆತ ಬೆಳೆಯುತ್ತಿರುವ ವೇಗ ಕೊಳಗೆರೆಯಂಥವನಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂಬುದು ನನ್ನ ಭಾವನೆ. ಇದೂ ಸಹ ಅವರಿಬ್ಬರಿಗೆ ಸೇರಿದ್ದು.


ಹಾಗೆಂದು ನಾವುಗಳು ಪೂಜಿಸುವ ನಮ್ಮ ಸುದ್ದಿಮನೆಗೂ ಕೊಳಗೆರೆಯಂಥವನನ್ನು ಎಳೆದು ತಂದು, ಆತನ ಕಲ್ಯಾಣಗುಣಗಳನ್ನು ನಮ್ಮ ನಮ್ಮ ಅಂಕಣಗಳಲ್ಲಿ ಸಾರಬೇಕಿತ್ತೇ ? ಹಾಗೊಮ್ಮೆ ಮಾಡಿದ್ದರೆ ಕೊಳಗೆರೆಗೂ ನಮಗೂ ಉಳಿಯುವ ವ್ಯತ್ಯಾಸವಾದರೂ ಏನು ? ಅವನಂತೆ ಬೇರೆಯವರ ಬಗ್ಗೆ ಬರೆದೇ, ಯಾರದ್ದೋ ಚಾರಿತ್ರ್ಯ ವಧೆ ಮಾಡಿಯೇ ನಾವು ಅನ್ನ ಕಾಣಬೇಕಿಲ್ಲ; ಓದುಗರನ್ನು ಹೆಚ್ಚಿಸಿಕೊಳ್ಳಬೇಕಿಲ್ಲ. ಅದಕ್ಕಾಗಿ ಈವರೆಗೆ ಆತನ ಬಗ್ಗೆ ಎಲ್ಲ ಗೊತ್ತಿದ್ದೂ ಬರೆಯು ಪ್ರಸಂಗ ಬಂದಿರಲಿಲ್ಲ. ಮತ್ತು ನಮ್ಮ ಪತ್ರಿಕೆ ಅಂಥದ್ದಕ್ಕೆ ಸೂಕ್ತ ವೇದಿಕೆಯೂ ಅಲ್ಲ; ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವುದು ನಮ್ಮ ಜಾಯಮಾನವೂ ಅಲ್ಲ. ನನಗಂತೂ ಮೊನ್ನೆ ಮೊನ್ನೆ ನಾನು ‘ವಿಕ’ವನ್ನು ತೊರೆದು, ಆತ ನನ್ನ ಬಗ್ಗೆ ವೃಥಾ ಕೆಸರೆರಚುವವರೆಗೆ ಆತನೊಂದಿಗೆ ಸ್ನೇಹವೂ ಇರಲಿಲ್ಲ, ದ್ವೇಷವೂ ಇರಲಿಲ್ಲ.


ಹಾಗೆ ನೋಡಿದರೆ ಆ ಮನುಷ್ಯನ ಜತೆಗೆ ನಾನು ಮೊನ್ನೆ ಮೊನ್ನೆ ಫೊನ್‌ನಲ್ಲಿ ಮಾತನಾಡಿದ್ದೇ ಎರಡನೇ ಬಾರಿಯೋ, ಮೂರನೇ ಬಾರಿಯೋ. ಹಿಂದೊಮ್ಮೆ ಆತ ಕರ್ಮವೀರದ ಸಂಪಾದಕರಾಗಿದ್ದಾಗ ನಾನು ಆಗಷ್ಟೇ ಸಂಯುಕ್ತ ಕರ್ನಾಟಕಕ್ಕೆ ಸೇರಿದ್ದೆ. ಅದಾದ ಮೂರು ತಿಂಗಳಲ್ಲೇ ಆತನ ‘ಲೋಕ’ ಕೆ. ಶಾಮರಾವ್ ಅವರ ಮುಂದೆ ತೆರೆದುಕೊಂಡಿತ್ತು. ಅಷ್ಟೆ, ಅಕ್ಷರಶಃ ಅಲ್ಲಿಂದ ಓಡಿಸಿದ್ದರು ರಾಯರು. ಆನಂತರ ಕಪ್ಪು ಸುಂದರಿಯನ್ನು ಆರಂಭಿಸಿದ್ದು, ಪದ್ಮನಾಭ ನಗರದ ಸ್ಕೂಟರ್ ಗ್ಯಾರೇಜ್‌ನಲ್ಲಿ ಬೋರೆಂದು ಅತ್ತಿದ್ದು, ಯಾರ‍್ಯಾರೋ ಅವರ ತುತ್ತಿನ ಚೀಲ ತುಂಬಿದ್ದು, ಕೊನೆಗೂ ಪ್ರತಿಭಾ ನಂದಕುಮಾರ್ ಜತೆಗೆ ಬಂದು ಸಂಸ್ಥೆಗೆ ಕೊಡಬೇಕಿದ್ದ ಬಾಕಿ ಹಣವನ್ನು ಕಟ್ಟಿ ತಮ್ಮ ದ್ವಿಚಕ್ರ ವಾಹನವನ್ನು ಬಿಡಿಸಿಕೊಂಡು ಹೋಗಿದ್ದು, ವರ್ಷದಲ್ಲಿ ವಾರದ ಅಚ್ಚರಿಯೆನ್ನುತ್ತಲೇ ಬೊಗಳೆ ಬಿಟ್ಟು, ಸ್ವ ಕುಚ ಮರ್ಧನ ಮಾಡಿಕೊಳ್ಳುತ್ತಲೇ ಮತ್ತೆ ನಿಗರಿಕೊಂಡದ್ದು ಎಲ್ಲವೂ ಇತಿಹಾಸ...


ಆಗ್ಯಾವತ್ತೂ ಆತನನ್ನು ನೇರಾ ನೇರವಾಗಿ ಮಾತನಾಡಿಸಿದ್ದಿರಲಿಲ್ಲ. ಇದಾಗಿ ಸರಿ ಸುಮಾರು ಹತ್ತು ಹದಿನೈದು ವರ್ಷಗಳೇ ಕಳೆದಿದ್ದಿರಬಹುದು. ಒಂದು ದಿನ, ಅಲ್ಲಲ್ಲ...ರಾತ್ರಿ, ಇಂಥದ್ದೇ ‘ಮದ್ಯ’ರಾತ್ರಿ ಶ್ರೀ ವಿಶ್ವೇಶ್ವರ ಭಟ್ಟರ ಮನೆಯ ಮಹಡಿಯ ಮೇಲೆ, ತೀರಾ ಮರೆತು ಹೋದವನಂತೆ, ಹೊಸದಾಗಿ ಪರಿಚಯ ಮಾಡಿಕೊಂಡು ‘ಓ ಅಪ್ಪಿ...ಆರಾಮಿದ್ಯನೋ...ಮತ್ತೇನೋ ಮಾಣಿ...’ ಎಂದು ಪಕ್ಕಾ ಹವ್ಯಕ ಶೈಲಿಯಲ್ಲೇ ನನ್ನನ್ನು ಮಾತನಾಡಿಸಿದ್ದ. ಇನ್ನಿಲ್ಲದ ಅಚ್ಚೆಯಿಂದ ಬಿಗಿದಪ್ಪಿಕೊಂಡು ಬೆನ್ನು ಸವರಿದ್ದ. ಇಂಥವೆಲ್ಲ ಕಲೆಯಲ್ಲಿ ಆತ ನಿಷ್ಣಾತ ಎಂಬುದು ಗೊತ್ತಿದ್ದದ್ದೇ. ಆದರೂ ಸೌಜನ್ಯ ಮೀರಲಾರದೇ ಒಂದೆರಡು ಮಾತನಾಡಿ ಬಂದಿದ್ದೆ.


ಅದಾದ ಮೇಲೆ ಆತ ಮಾತನಾಡಿದ್ದು ನಾನು ‘ಲವಲವಿಕೆ’ಯ ಮುಖ್ಯಸ್ಥನಾದ ಮೇಲೆಯೇ. ಯಾವುದೋ ಲೇಖನ, ಯಾರ ಬಗ್ಗೆಯೋ ಬರೆದು ಕಳುಹಿಸಿದ್ದ. ಬಹುಶಃ ಅದನ್ನು ಪ್ರಕಟಿಸಲೇಬೇಕೆಂದು ಭಟ್ಟರ ಮೇಲೆ ಒತ್ತಡವನ್ನೂ ತಂದಿದ್ದಿರಬೇಕು. ಅದು ನನ್ನ ಟೇಬಲ್‌ಗೆ ಬರುವವರೆಗೂ ಈ ಮಹಾನುಭಾವನ ಲೇಖನವೆಂಬುದು ನನಗೆ ಅರಿವಿರಲಿಲ್ಲ. ಅಷ್ಟರಲ್ಲಾಗಲೇ ಅವರೇ ಪೋನ್ ಮಾಡಿದ್ದರಿಂದ ವಿಷಯ ಗೊತ್ತಾಯಿತು. ಆ ಹೊತ್ತಿಗಾಗಲೇ ವಿಜಯ ಕರ್ನಾಟಕಕ್ಕೆ ತನ್ನ ಎಂದಿನ ಹಳಸಲು, ಯಾವತ್ತೋ ಬರೆದಿಟ್ಟ (ವಾರದ ಅಚ್ಚರಿಯಲ್ಲಿ ಪ್ರಕಟಗೊಂಡು, ಪುಸ್ತಕವಾಗಿಯೂ ಹೊರ ಬಂದ) ಕಂತೆ ಪುರಾಣವನ್ನು ಹೊಚ್ಚ ಹೊಸ ವಿಚಾರವೆಂಬಂತೆ ಕೊಡುತ್ತಿದ್ದ. ಹತ್ತು ವರ್ಷಗಳಿಂದ ಅದು ಪ್ರಕಟಗೊಳ್ಳುತ್ತಾ ಜಾಗ ತಿನ್ನುತ್ತಲೂ ಇತ್ತು. ಇದೀಗ ಲವಲವಿಕೆಗೂ ಲೇಖನ ಕೊಡುತ್ತಿದ್ದಾನೆಂಬುದು ನನಗೆ (ಬಹುಶಃ ನಮ್ಮ ಸಂಪಾದಕರಿಗೆ ಸಹ ಅಂದುಕೊಳ್ಳುತ್ತೇನೆ) ನುಂಗಲಾರದ ತುತ್ತಾಗಿತ್ತು. ಇದ್ಯಾವ ‘ಕರ್ಮ’ ಗಂಟು ಬಿತ್ತು ಎಂಬ ಮನದಿಂಗಿತ ಅರಿವಿಲ್ಲದೇ ಸ್ವಗತ ರೂಪ ಪಡಕೊಂಡಿತ್ತು. ಅದೇ ನಾನು ಮಾಡಿದ ಮೊದಲನೆಯ ತಪ್ಪೇನೋ. ನಾನು ತೀರಾ ಅಕ್ಕರೆಯಿಂದ ರೂಪಿಸುತ್ತಿರುವ ಲವಲವಿಕೆಯಲ್ಲಿ ಇಂಥ ಲೇಖನಗಳನ್ನು (ರಾಜಕಾರಣಿಯೊಬ್ಬರ ಬಗ್ಗೆ ಬರೆದು ಕಳುಹಿಸಿದ್ದ) ನಾನು ನಿರೀಕ್ಷಿರಲಿಲ್ಲ. ಹೀಗಾಗಿ ಅದನ್ನು ‘ಕರ್ಮ’ ಎನ್ನದೇ ವಿ ಇರಲಿಲ್ಲ. ನಮ್ಮ ಪತ್ರಿಕಾ ಕಚೇರಿಯೊಳಗೇ ಇದ್ದು ಆತ ಬಿಸಾಕುವ ಬಿಸ್ಕೆಟ್‌ಗೆ ಜೊಲ್ಲು ಸುರಿಸುತ್ತಾ ಕದ್ದು ಕಚೇರಿಯ ಆಂತರಿಕ ವಿಚಾರಗಳನ್ನೂ ಆತನಿಗೆ ಪೂರೈಸುತ್ತಿದ್ದ ನಾಯಿಗಳು ಈ ‘ಕರ್ಮ’ಕ್ಕೆ ಉಪ್ಪು ಖಾರ ಸೇರಿಸಿ ತಕ್ಷಣ ವರದಿ ಮಾಡಿದರು. ಅಲ್ಲಿಂದಲೇ ಆತ ಸಮಯಕ್ಕಾಗಿ ಕಾಯುತ್ತಿದ್ದಿರಬೇಕು.


ಅದು ಬಿಟ್ಟರೆ ನಾನು ಶ್ರೀ ಭಟ್ಟರನ್ನು ಪತ್ರಿಕೋದ್ಯಮದಲ್ಲಿ ಮಾದರಿ ವ್ಯಕ್ತಿಯನ್ನಾಗಿ ಸ್ವೀಕರಿಸಿದ್ದೇನೆ ಎಂಬುದೂ ಅವನ ಇಂಥ ಕೃತ್ಯಕ್ಕೆ ಕಾರಣವಾದರೆ ಅದಕ್ಕೆ ನಾನು ಹೊಣೆಯಲ್ಲ. ಭಟ್ಟರಿಗಿಂತ ಯೋಗ್ಯ ವ್ಯಕ್ತಿ ಸದ್ಯಕ್ಕೆ ನನಗೆ ಪತ್ರಿಕೋದ್ಯಮದಲ್ಲಿ ಬೇರಾರೂ ಕಾಣುತ್ತಿಲ್ಲ. ಒಂದೊಮ್ಮೆ ಅಂಥ ಯೋಗ್ಯತೆಯನ್ನು ಆತ ಪ್ರದರ್ಶಿಸುವ ಕನಸನ್ನೂ ನಾವಿಂದು ಕಾಣಲು ಸಾಧ್ಯವಿಲ್ಲ. ಛೆ, ಎಂಥಾ ಅಸಂಬದ್ಧ ಹೋಲಿಕೆ; ಕ್ಷಮಿಸಿ.


ಆತ ನನ್ನನ್ನು ದ್ವೇಷಿಸಲು ಇರುವ ಇನ್ನೊಂದು ಕಾರಣವೆಂದರೆ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ. ಅನುಮಾನವೇ ಇಲ್ಲ, ನೂರಕ್ಕೆ ನೂರು ಶ್ರೀಗಳನ್ನು ನಾನು ಅಪಾರವಾಗಿ ಗೌರವಿಸುತ್ತೇನೆ. ಅದು ವ್ಯಕ್ತಿಗತವಾಗಿಯಷ್ಟೇ ಇರುವ ಪ್ರೀತಿಯಲ್ಲ. ಗೋ ಸಂರಕ್ಷಣೆಯ ನಿಟ್ಟಿನಲ್ಲಿ ಅವರು ಮಾಡಿದ ಕೆಲಸವೇ ಅಂಥದ್ದು. ತಮ್ಮ ಇಡೀ ಜೀವನವನ್ನು ಇಂಥ ಒಂದು ಅಭಿವೃದ್ಧಿಪರ ಕೆಲಸಕ್ಕೆ ಸಮರ್ಪಿಸಿಕೊಂಡದ್ದು ಸಾಮಾನ್ಯದ ಮಾತಲ್ಲ. ಅಂಥ ಶಕ್ತಿಯನ್ನು ಗೌರವಿಸುವ ಹೆಮ್ಮೆ ನನಗಿದೆ. ಒಂದೊಮ್ಮೆ ಅಂಥವರಿಗೆ ‘ಗಿಂಡಿಮಾಣಿ’ಯಾಗಿ ಸೇವೆ ಸಲ್ಲಿಸುವ ಭಾಗ್ಯ ನನ್ನದಾದರೆ ನನ್ನ ಜೀವನಕ್ಕಷ್ಟೇ ಅಲ್ಲ, ನನ್ನ ನೀರಿನ ಕೆಲಸಕ್ಕೊಂದು ಸಾರ್ಥಕ್ಯ. ಏಕೆಂದರೆ ಸಾಮಾಜಿಕ ಕಳಕಳಿಯ ವಿಚಾರದಲ್ಲಿ ಅಷ್ಟೊಂದು ಕಮಿಟೆಡ್ ಮನಸ್ಸು ಶ್ರೀಗಳದ್ದು.


ಇವು ಮೂರೇ ಕಾರಣಕ್ಕೆ ಕೊಳಗೆರೆಗೆ ನನ್ನ ಬಗ್ಗೆ ಈ ಪರಿಯ ದ್ವೇಷವಾದರೆ ನಾನೇನೂ ಮಾಡಲಿಕ್ಕಾಗುವುದಿಲ್ಲ. ದ್ವೇಷಕ್ಕೆ ಪ್ರತಿಯಾಗಿ ನನ್ನದು ಸಣ್ಣದೊಂದು ವಿಷಾದ ಪೂರಿತ, ಅಯ್ಯೋ ಎನ್ನುವ ಅನುಕಂಪಯುಕ್ತ ನಗೆಯೊಂದೇ ಉತ್ತರವಾಗುತ್ತದೆ.


ಆದರೆ, ಅಸಲಿ ಸಂಗತಿ ಅದಲ್ಲ. ಆತನಿಗೆ ದ್ವೇಷ, ವ್ಯಂಗ್ಯ, ಟೀಕೆ, ಕುಹಕ, ಕಾಮ ವಿಕೃತಿಗಳೇ ಬದುಕು. ಒಂದೊಮ್ಮೆ ಆತನಿಗೆ ದ್ವೇಷಿಸಲು ಯಾರೂ ಸಿಗಲಿಲ್ಲ ಎಂತಾದರೆ ತನ್ನನ್ನೇ ತಾನು ದ್ವೇಷಿಸಿಕೊಳ್ಳುತ್ತಾನೆ. ಆತ ತನ್ನ ಹೆಂಡತಿಯರನ್ನೂ, ಮಕ್ಕಳುಗಳನ್ನೂ ದ್ವೇಷಿಸದೇ ಬಿಟ್ಟವನಲ್ಲ. ಅದೊಂದು ಮಾನಸಿಕ ವಿಕೃತಿ; ಮನೋರೋಗ. ಬೇಕಿದ್ದರೆ ಮನೋರೋಗ ತಜ್ಞರನ್ನು ಕೇಳಿ ನೋಡಿ. ಒಬ್ಬೊಂಟಿಯಾಗಿ ಬೆಳೆದವರಲ್ಲಿ, ಅನಾಥ ಪ್ರಜ್ಞೆ ಕಾಡುತ್ತಿರುವವರಲ್ಲಿ, ಈ ಸಮಾಜದ ನಿಕೃಷ್ಟೆಗೆ, ಅವಹೇಳನಕ್ಕೆ ಗುರಿಯಾದವರಲ್ಲಿ ಇಂಥ ವಿಕೃತಿಗಳು ಕಂಡುಬರುತ್ತವೆ.


ಅದು ಅವನ ತಪ್ಪಲ್ಲ. ಹುಟ್ಟುವ ಮೊದಲೇ ಅಪ್ಪನಿಗೆ ಈತ ಬೇಡವಾಗಿದ್ದ. ಕೈ ಮೀರಿ ಹುಟ್ಟಿದ ಈತನನ್ನು ಮಗ ಎಂದುಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ತಂದೆಯೇ ಇಲ್ಲದವನಾದ ಮೇಲೆ ಇನ್ನು ತುಂಬು ಕುಟುಂಬದ ಮಾತಂತೂ ದೂರವಾಯಿತು. ತಾಯಿಯೊಬ್ಬಳೇ ಪ್ರೀತಿಗೆ ದಿಕ್ಕೂ. ಅದನ್ನಾದರೂ ಪೂರ್ಣ ಕಾಣಲು ಈತನೊಳಗಣ ಅಸಹನೆ ಬಿಡಲಿಲ್ಲ. ಸಮಾಜದ ಕುಹಕ, ಟೀಕೆಗಳಿಗೆ ಪ್ರತಿಯಾಗಿ ಬಾಲ್ಯದಿಂದಲೇ ದ್ವೇಷ, ಅಸಹನೆಗಳು ಈತನ ಮೈಗೂಡಿದ್ದರೆ ಅದಕ್ಕೆ ಯಾರು ಹೊಣೆ ? ಹುಟ್ಟಿಸಿದವನ ಬುದ್ಧಿವಂತಿಕೆ ರಕ್ತಗತವಾಗಿ ಬಂದ ಮಾತ್ರಕ್ಕೆ ಬೆಳೆದ ವಾತಾವರಣವೂ ಅದಕ್ಕೆ ಪೂರಕವಾಗಿರಬೇಕೆಂಬುದೇನೂ ಇಲ್ಲವಲ್ಲಾ? ಸಂಸ್ಕಾರ ಇಲ್ಲದ ಮಕ್ಕಳು ಏನಾಗುತ್ತಾರೆ ಎಂಬುದಕ್ಕೆ ಈತ ಸ್ಪಷ್ಟ ಉದಾಹರಣೆ.


ಬದುಕಿನಲ್ಲಿ ನಿರಂತರ ಕಾಡಿದ ಅಭದ್ರತೆ, ಈ ಸಮಾಜದ ಬಗ್ಗೆ ಇದ್ದ ತಿರಸ್ಕಾರ, ಹುಟ್ಟಿನಿಂದಲೇ ಬಂದ ಚಾಂಚಲ್ಯ, ಬೆಳೆಯುತ್ತಾ ದೊರೆತ ಸಹವಾಸ, ಒಳಗೊಳಗೇ ಬುಸುಗುಡುವ ಕಾಮ ವಿಕೃತಿ, ಇವಕ್ಕೆಲ್ಲಾ ನೀರೆರದ ಅನಿರೀಕ್ಷಿತ ಕೀರ್ತಿ ಮತ್ತು ಸಿರಿವಂತಿಕೆ ಕೊಳಗೆರೆಯಂಥವನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ.
ವ್ಯಕ್ತಿಯೊಬ್ಬನ ಮಾನಸಿಕ ಅಸಮತೋಲನ ಆತನಿಗಷ್ಟೇ ಮಾರಕವಲ್ಲ. ಕುಟುಂಬ ಮತ್ತು ಸಮಾಜಕ್ಕೂ ಕಂಟಕ ಎಂಬುದಕ್ಕೆ ಇದು ಜ್ವಲಂತ ನಿದರ್ಶನ. ಅಯ್ಯೋ ಎನ್ನುವ ಒಂದೇ ಒಂದು ಅನುಕಂಪವನ್ನಲ್ಲದೇ ನಾನು, ನನ್ನ ತಲೆಮಾರಿನವರು ಬೇರಿನ್ನೇನು ಕೊಡಲು ಸಾಧ್ಯ? ಏಕೆಂದರೆ ಆಗಲೇ, ಬಾಲ್ಯದಲ್ಲೇ ಈತನನ್ನು ಆದರಿಸಿ, ಪ್ರೀತಿಯಿಂದ ಒಲಿಸಿ ಸರಿದಾರಿಗೆ ತಂದಿದ್ದರೆ ಇವತ್ತಿನ ಸಮಾಜದ ಎಷ್ಟೋ ಹೆಣ್ಣುಮಕ್ಕಳು ಜೀವನವಿಡೀ ಕಣ್ಣಿರಿನಲ್ಲಿ ಕೈತೊಳೆಯುವುದು ತಪ್ಪುತ್ತಿತ್ತು. ಎಷ್ಟೋ ತಂದೆ-ತಾಯಂದಿರ ಬಸಿರು ಸುಡುವುದು ನಿಲ್ಲುತ್ತಿತ್ತು. ಎಷ್ಟೋ ಮುಗ್ಧರು ಹಿಡಿಶಾಪ ಹಾಕುವುದು ನಿಲ್ಲುತ್ತಿತ್ತು. ಆದರೇನು ಮಾಡೋಣ ? ಇವತ್ತೂ ಕೈ ಮೀರಿ ಹೋಗಿದೆ.

Thursday, February 3, 2011

ಈತನ ಕೊಳೆತನ ಸಹಿಸುವುದು ನಮಗ್ಯಾವ ಕರ್ಮ?

ಪ್ರಪಂಚದಲ್ಲಿನ ತಪ್ಪುಗಳನ್ನೆಲ್ಲಾ ಮಾಡಲು ಅಕಾರ ಇರುವುದು ನನಗೊಬ್ಬನಿಗೇ. ನಾನು ಏನು ಬೇಕಾದರೂ ಮಾಡಬಹುದು. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಹಾಗೆಂದು ಬೇರೆ ಯಾರೇ ಏನೇ ತಪ್ಪು ಮಾಡಿದರೂ, ಮಾಡದಿದ್ದರೂ ಅವರನ್ನೆಲ್ಲಾ ಟೀಕಿಸುವ ಹಕ್ಕಿರುವುದು ನನಗೇ, ನಾನು ಹೇಳಿದ್ದನ್ನೇ ಸತ್ಯವೆಂದು ತಿಳಿದು ಎಲ್ಲರೂ ಅದನ್ನೇ ಒಪ್ಪಿಕೊಳ್ಳಬೇಕು. ನಾನೋಬ್ಬನೇ ಈ ಸಮಾಜದಲ್ಲಿ ಸುಭಗ, ಸಂಭಾವಿತ. ಉಳಿದವರೆಲ್ಲರೂ ಫಟಿಂಗರು...

ನಗಬೇಕೋ, ಅಳಬೇಕೋ ಅರ್ಥವಾಗುವುದಿಲ್ಲ. ಇಂಥ ಮನೋಭಾವಕ್ಕೆ ಏನೆಂದು ಕರೆಯಬೇಕು ? ಇದು ಅಹಂಕಾರವೇ ? ಅಸಂಬದ್ಧವೇ ? ಅಸಹಜ ಮನಸ್ಥಿತಿಯೇ ?

ಪಕ್ಕಾ ಇದೇ ದಾಟಿಯಲ್ಲಿತ್ತು ವಾರದ ಅಚ್ಚರಿಯೆಂಬ ನೀಲಿ ಪತ್ರಿಕೆಯ ಸಂಪಾದಕರ ಮಾತುಗಳು. ಕೊನೆಗೊಮ್ಮೆ ಕೇಳೇ ಬಿಡೋಣ; ಅಷ್ಟಕ್ಕೂ ನನ್ನ ಬಗ್ಗೆ ಇಲ್ಲಸಲ್ಲದ್ದನ್ನು ಬರೆದದ್ದಾದರೂ ಏಕೆ ? ಅದಕ್ಕೆ ಆಧಾರಗಳಾದರೂ ಏನು ? ನನ್ನ ಕುರಿತು ಅವರಿಗೆ ಗೊತ್ತಿದ್ದದ್ದಾದರೂ ಏನು ? ನಾನ್ಯಾಕೆ ಎಲ್ಲವನ್ನೂ ಪ್ರಶ್ನಿಸದೇ ಸಹಿಸಿಕೊಳ್ಳಬೇಕು? ಗುಳಿಗೆ ಸಿದ್ಧ, ಒಳಗೊಳಗೇ ಮೆದ್ದ ಎನ್ನುವಂತೆ ಆತ ವರ್ತಿಸುತ್ತಾನೆ ಎಂದುಕೊಂಡು ನಾನ್ಯಾಕೆ ಹೇಡಿಯಂತೆ ಕುಳಿತುಕೊಳ್ಳಬೇಕು? ಯಾವ ತಪ್ಪೂ ಮಾಡದೆ, ಆತನ ಸುದ್ದಿಗೂ ಹೋಗದೆ, ನನ್ನ ಪಾಡಿಗೆ ನಾನು ‘ನೀರು-ನೆರಳು’ ಅಂತ ಇದ್ದದ್ದನ್ನೂ ಸುಖಾ ಸುಮ್ಮನೆ ಟೀಕಿಸಿ ಮೇಲೆರಗಿ ಬರುತ್ತಾನಾದರೆ ಸುಮ್ಮನಿದ್ದರೆ ಅದನ್ನೇ ಒಪ್ಪಿಕೊಂಡಂತಾಗುವುದಿಲ್ಲವೇ ?ಯಾವುದಕ್ಕೂ ನೇರವಾಗಿ ಆತನನ್ನೇ ಕೇಳೋಣವೆಂದು ಹಿಂದೆ ಮುಂದೆ ಇಲ್ಲದೇ ಮೊನ್ನೆ ಸರಿಯಾಗಿ ರಾತ್ರಿ ಹನ್ನೆರಡು ಗಂಟೆಗೆ ಫೋನಾಯಿಸಿದೆ. ನನಗೆ ಗೊತ್ತಿತ್ತು ಆತ ಸತ್ಯವನ್ನೇನಾದರೂ ಹೇಳುವುದಿದ್ದರೆ ಅದೇ ಸಮಯದಲ್ಲಿ. ಏಕೆಂದರೆ ಆ ‘ಮದ್ಯ’ರಾತ್ರಿಯಲ್ಲಿ ಮಾತ್ರ ಆತನ ಮೇಲೆ ಸತ್ಯಸಂಧ ಆವಾಹಿತನಾಗಿರುತ್ತಾನೆ. ಉಳಿದೆಲ್ಲ ಸಂದರ್ಭದಲ್ಲಿ ಕೊಳಗೇರಿಯ ಕೊಳೆ ಮೆತ್ತಿಕೊಂಡಿರುತ್ತದೆ ಎಂದು. ಹಾಗಾಗಿಯೇ ಆ ಮುಹೂರ್ತದಲ್ಲಿ ಆತನನ್ನು ಸಂಪರ್ಕಿಸಿದೆ.

ಸದ್ಯ, ಸತ್ಯಸಂಧ ಪತ್ರಕರ್ತರು ಫೋನ್ ಎತ್ತಿಕೊಂಡರು. ನಾನು ‘ಗಿಂಡಿಮಾಣಿ’ಎಂದೇ ಪರಿಚಯಿಸಿಕೊಂಡೆ. ಆಗ ರಾತ್ರಿ ಹನ್ನೆರಡು ಗಂಟೆ ಹದಿಮೂರು ನಿಮಿಷ. ಅತ್ತಲಿದ್ದ ವ್ಯಕ್ತಿಗೆ ಧ್ವನಿ ಉಡುಗಿ ಹೋಗಿದ್ದಿರಬೇಕು ಮೂರ‍್ನಾಲ್ಕು ಸೆಂಕೆಂಡ್ ಯಾವುದೇ ಪ್ರತಿಕ್ರಿಯೆ ಇಲ್ಲ. ಮತ್ತೆ ನನ್ನ ಹೆಸರು ಹೇಳಿಕೊಂಡ್ಡದ್ದರ ಜತೆಗೆ ‘ನಿಮ್ಮ ಗಿಂಡಿ ಮಾಣಿ ಸರ್, ನೀವೇ ಇಟ್ಟ ನಾಮಧೇಯ, ಗೊತ್ತಾಗಲಿಲ್ವೇ ?’ ಅಂದೆ. ತುಸು ಸಾವರಿಸಿಕೊಂಡು ಗೊಗ್ಗರು ಧ್ವನಿಯಲ್ಲಿ ‘ಹೇಳಿ’ ಅಂದಿತು ಆ ವ್ಯಕ್ತಿ.

‘ಏನಿಲ್ಲ...ನನಗೊಂದು ಅತ್ಯದ್ಭುತವಾದ ಕಾವ್ಯನಾಮವನ್ನು ಹುಡುಕಿ ಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ಹೇಳೋಣವೆಂದು ಫೋನಾಯಿಸಿದೆ. ಅಷ್ಟೂ ಮಾಡದಿದ್ದರೆ ನಿಮ್ಮಂತೆ ಕೃತಘ್ನನೆನಿಸಿಕೊಂಡು ಬಿಡುತ್ತೇನೆ. ನೀವು ಯಾವ ಉದ್ದೇಶಕ್ಕೆ ನನ್ನನ್ನು ಹಾಗೆಂದು ಕರೆದಿದ್ದಿರೋ ಏನೋ? ಆದರೆ ಅದು ನನಗೆ ಇನ್ನಿಲ್ಲದ ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಅದೇ ಹೆಸರಿನಲ್ಲಿ ಒಂದು ಬ್ಲಾಗ್ ಸಹ ಬರೆಯುತ್ತಿದ್ದೇನೆ. ನೀವೂ ನೋಡಿದ್ದಿರಬಹುದು (ನೋಡಿಯೇ ಇರುತ್ತಾರೆ ಎಂಬುದು ಖಚಿತವಾಗಿ ಗೊತ್ತಿತ್ತು). ಒಂದೇ ವಾರದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಓದುಗರು ಬಂದಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ನಿರಂತರ ಬ್ಲಾಗ್ ಅನ್ನು ಫಾಲೋ ಮಾಡುತ್ತಿದ್ದಾರೆ. ಐ ಆಮ್ ರಿಯಲಿ ಥ್ಯಾಂಕ್‌ಫುಲ್ ಟು ಯು ಸರ್...’ಎಂದೆ.

ಒಂದು ಕ್ಷಣದ ಗಲಿಬಿಲಿಯ ನಂತರ...‘ಹೌದೌದು, ನನಗೆ ಎರಡು ಮದುವೆಯಾಗಿದೆ...ಹಾಗೆ...ಹೀಗೆ..ಅಂತೆಲ್ಲಾ ನೀವು ಬ್ಲಾಗ್‌ನಲ್ಲಿ ಬರೆದಿದ್ದೀರಿ ಅಂತ ಯಾರೋ ಹೇಳಿದರು. ಅಷ್ಟಕ್ಕೂ ಅದು ನನ್ನ ವೈಯಕ್ತಿಕ ವಿಚಾರ. ಅದನ್ನು ಕಟ್ಟಿಕೊಂಡು ನಿಮಗೇನಾಗಬೇಕು ? ನನಗೆ ಎರಡು ಹೆಂಡತಿಯರಿದ್ದರೆ ಸಮಾಜಕ್ಕೇನು ನಷ್ಟ ? ಅದು ನಮ್ಮ ನಮ್ಮ ತಾಕತ್ತು. ಅದನ್ನೆಲ್ಲ ಬರೆದು ಏನು ಸಾಸುತ್ತೀರಿ ?...’ ಎಂಬ ವಾಗ್ದಾಳಿ ಆರಂಭವಾಯಿತು...(ಮಾತು ಮಾತ್ರ ಇಷ್ಟು ನಿಯತ್ತಿನದ್ದಾಗಿರಲಿಲ್ಲ. ಆದರೆ ಅವರ ಶೈಲಿಯಲ್ಲೇ, ಅವರು ಬಳಸಿದ ಪದಗಳನ್ನೇ ಬಳಸಿದರೆ ನನ್ನ ಬ್ಲಾಗ್ ಸಹ ಚರಂಡಿಯಾಗಿ ಹೋಗುತ್ತದೆ, ಎಂಬ ಕಾರಣಕ್ಕೆ ಸಾಧ್ಯವಾದಷ್ಟು ಚೌಕಟ್ಟು ಹಾಕಿಕೊಂಡೇ ಮುಂದುವರಿಯುತ್ತೇನೆ)

ಮಾತು ಮುಂದುವರಿಯುತ್ತಲೇ ಇತ್ತು...ಅಷ್ಟಕ್ಕೇ ತುಂಡರಿಸಿ ‘ಸರಿ ಸ್ವಾಮಿ, ನೀವೊಬ್ಬ ಜವಾಬ್ದಾರಿಯುತ ಪತ್ರಕರ್ತ, ನೂರಾರು ಓದುಗರಿರುವ ಪತ್ರಿಕೆ ಸಂಪಾದಕ. ಸಮಾಜದಲ್ಲಿ ಗಣ್ಯ ವ್ಯಕ್ತಿ ಎಂದು ನಿಮ್ಮನ್ನು ನೀವೇ ಕರೆದುಕೊಳ್ಳುತ್ತೀರಿ. ನಿಮ್ಮ ಪತ್ರಿಕೆಯಲ್ಲಿ ನೈತಿಕತೆಯ ಬಗ್ಗೆ ಪುಂಖಾನುಪುಂಖವಾಗಿ ಪ್ರತಿವಾರ ಪುಂಗುತ್ತೀರಿ. ಹಾಗಿದ್ದ ಮೇಲೆ, ನಿಮ್ಮ ವೈಯಕ್ತಿಕ ನಡೆ ನುಡಿಗಳೂ ಸರಿಯಾದ ನಿಟ್ಟಿನಲ್ಲೇ ಇರಬೇಕಲ್ಲವೇ ? ಸಮಾಜ ಅದನ್ನು ನೋಡುತ್ತಲೇ ಇರುತ್ತದೆ. ಒಂದೊಮ್ಮೆ ಅದೆಲ್ಲ ಸಂಬಂಧ ಇಲ್ಲ. ನಾನು ಏನು ಬೇಕಾದರೂ ಮಾಡಿಕೊಳ್ಳಬಹುದು ಎಂಬ ಧೋರಣೆ ನಿಮ್ಮದಾದರೆ, ನನಗೂ ಅದೇ ಅನ್ವಯವಾಗಬೇಕಲ್ಲವೇ ? ನಾನು ಯಾರದ್ದೋ ಹೆಗಲು ಸವರಿದರೆ ನಿಮಗೇನು ಅಭ್ಯಂತರ ? ಅಥವಾ ‘ನಿಮ್ಮ ಸಮಾಜಕ್ಕೆ’ ಏನು ಅಡ್ಡಿ? ಅದನ್ನು ಬರೆಯುವ ಗೋಜಿಗೆ ನೀವು ಹೋಗಿದ್ದೇಕೆ ? ಹೋಗಲಿ ಎಂದರೆ ನಾನು ಹೆಗಲು ಮುಟ್ಟಿದ್ದನ್ನು ನೀವು ಕಂಡಿದ್ದೀರಾ? ಅಥವಾ ಹಾಗೆ ಮುಟ್ಟಿಸಿಕೊಂಡವರಲ್ಲಿ ಯಾರಾದರೂ ನಿಮ್ಮ ಬಳಿ ಬಂದು ಹೇಳಿದ್ದರೆ? ಅಂಥ ಒಬ್ಬರಿದ್ದರೆ, ಅಂಥ ಒಂದೇ ಒಂದು ಅಸಭ್ಯ ವರ್ತನೆ ನಾನು ತೋರಿದ್ದಕ್ಕೆ ಸಾಕ್ಷಿಯಿದ್ದರೆ ಹೇಳಿ...’ ಎಂದು ತುಸು ಜೋರಿನ ಧ್ವನಿಯಲ್ಲೇ ಪ್ರಶ್ನಿಸಿದೆ.

‘ನನಗೆ ಮಾತನಾಡಲು ಬಿಡಿ’ ಎಂಬ ವರಸೆ ತೆಗೆದರು ಆಸಾಮಿ.

‘ಸ್ವಾಮಿ, ಫೋನ್ ಮಾಡಿದ್ದು ನಾನು. ಕೊನೆ ಪಕ್ಷ ನನ್ನ ಬಗ್ಗೆ ಬರೆಯಬೇಕಾದ ಸಂದರ್ಭದಲ್ಲಿ ಸಹ ವಿಷಯಗಳನ್ನು ಖಚಿತಪಡಿಸಿಕೊಳ್ಳುವ ಕನಿಷ್ಠ ಜವಾಬ್ದಾರಿಯನ್ನೂ ತೋರದ ನೀವು ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರಿಸಿ. ನನ್ನ ಬಗ್ಗೆ ಹೆಚ್ಚು ಗೊತ್ತಿರುವುದು ನನಗೇ ಹೊರತೂ ಬೇರಾರಿಗಲ್ಲ. ಬೇಕಿದ್ದರೆ ನನ್ನ ಬಗ್ಗೆ ನಾನೇ ಸತ್ಯವಾದ ಮಾಹಿತಿ ಕೊಡುತ್ತಿದ್ದೆ. ನನ್ನನ್ನು ಕೇಳುವ ಗಂಡಸುತನವನ್ನು ನೀವು ತೋರಿಲ್ಲ. ಯಾವುದೋ ಎಂಕ, ನಾಣಿ, ಸೀನ (ಬೇಕಿದ್ದರೆ ಅದನ್ನು ಸಾಧು-ಸಂತ, ದೇವಶ್ರೇಷ್ಠ, ಕಲಾಕಾರ, ಶೋಕರಾಮ, ಪ್ರಕಾಶಮಾನ ಎಂದು ಹೇಗೆ ಬೇಕಾದರೂ ಬದಲಿಸಿಕೊಳ್ಳಿ) ಹೇಳಿದ್ದು ಕೇಳಿಕೊಂಡು ಬರೆಯುವ ನಿಮ್ಮ ಬಗ್ಗೆಯೇ ಓದುಗರಿಗೆ ಇಷ್ಟು ವಿಶ್ವಾಸವಿದೆ ಎಂದಾದರೆ, ಜಗಜ್ಜಾಹೀರಾಗಿರುವ ನಿಮ್ಮ ಕಲ್ಯಾಣ ಗುಣಗಳನ್ನು ನಾನು ಬರೆದರೆ ಅದೇ ಓದುಗರು ನಂಬದಿದ್ದಾರೆಯೇ? ನಿಮ್ಮ ಬಗ್ಗೆ ಒಂದು ಹಂತದ ಗೌರವವನ್ನು ಇಟ್ಟುಕೊಂಡಿದ್ದವನಾದ ನನ್ನ ಬಗ್ಗೆ ಏನೇನೋ ಬರೆಯುವ ಜರೂರತ್ತಾದರೂ ಏನಿತ್ತು ....?-ಮರು ಸವಾಲೆಸೆದಾಗ ಬಡಬಡಿಸಲಾರಂಭಿಸಿದರು.

‘ನಾನೇಕೆ ನಿಮ್ಮ ಬಗ್ಗೆ ಬರೆದೆ ಎನ್ನುವುದನ್ನು ಭಟ್ಟರಿಗೆ ಹೇಳಿದ್ದೇನೆ ಕೇಳಿ’ ಅಂದರು.

‘ನನ್ನ ಗುರಿ ಏನಿದ್ದರೂ ಭಟ್ಟರು. ಅವರನ್ನು ನೀವು ದಂಡನಾಯಕನೆಂದು ಕರೆದುಕೊಂಡಿದ್ದೀರಿ. ಅವರ ಇಟ್ಟ ಗುರಿ ಒಮ್ಮೊಮ್ಮೆ ಅಕ್ಕ ಪಕ್ಕದಲ್ಲಿರುವ ನಿಮ್ಮಂಥ ಪೇದೆಗಳಿಗೂ ಬೀಳಬಹುದು. ಅದಕ್ಕೆ ನಾನೇನೂ ಮಾಡಲಾಗುವುದಿಲ್ಲ...’ಎನ್ನುವ ಮೂಲಕ ಸತ್ಯವನ್ನು ಮೊದಲಬಾರಿಗೆ ಕಕ್ಕಿದ್ದರು.

ಉರಿದು ಹೋಯಿತು ನನಗೆ. ‘ಸ್ವಾಮಿ, ಗಂಡಸಾಗಿ ವ್ಯವಹರಿಸುವುದನ್ನು ಕಲಿಯಿರಿ. ತಾಕತ್ತಿದ್ದರೆ ನೇರವಾಗಿ ಗುರಿಯಿಟ್ಟು ಹೊಡೆಯಿರಿ. ನೀವು ಅಡ್ಡ ಕಸುಬಿ ಎಂಬುದನ್ನು ನಿಮ್ಮ ವರ್ತನೆಗಳಿಂದಲೇ ಸಾಬೀತು ಮಾಡಬೇಡಿ. ಸಂಪಾದಕ ಎನಿಸಿಕೊಂಡ ಮೇಲೆ ಆ ಸ್ಥಾನ ಗೌರವಕ್ಕೆ ತಕ್ಕಂತೆ ವರ್ತಿಸಬೇಕು. ಅದು ಬಿಟ್ಟು ನಾನು ಅವರಿಗೆ ಗಿಂಡಿ ಹಿಡಿದೆ, ಇವರನ್ನು ನಾಯಕನೆಂದು ಹೇಳಿಕೊಂಡೆ, ಅದಕ್ಕಾಗಿ ಹಾಗೆ ಬರೆದೆ ಎಂದೆಲ್ಲ ಹೇಳುವುದು ನಿಮ್ಮಂಥವರ ವ್ಯಕ್ತಿತ್ವಕ್ಕೆ ಶೋಭೆ ತರದು. ನೀವು ಇಂಥ ಹೇಡಿ ಎಂಬುದನ್ನು ಕೇಳಿ ಗೊತ್ತಿತ್ತು. ಇವತ್ತು ಅದನ್ನು ನನ್ನೆದುರು ನೀವೇ ಸಾಬೀತುಪಡಿಸಿದಿರಿ...ನಿಜವಾಗಿ ನಿಮ್ಮಲ್ಲಿ ನೈತಿಕತೆ ಇದ್ದುದೇ ಹೌದಾದರೆ, ನಿಮ್ಮ ಹೆಂಡತಿಯ ಹೆಗಲನ್ನು ಸವರಿದೆನೋ, ಮಗಳದ್ದೋ ಅಥವಾ ಇನ್ನಾರದ್ದೋ ಎಂಬುದನ್ನು ಸಾಬೀತು ಪಡಿಸಿ. ಅಥವಾ ಆದ ಪ್ರಮಾದವನ್ನು ಒಪ್ಪಿಕೊಳ್ಳಿ....’

-ಹೀಗೆ ನೇರವಾಗಿ ದಾಳಿಗಿಳಿದು ಎಲ್ಲಿ ಮುಂದುವರಿದೆನೋ ಅಷ್ಟರಲ್ಲಿ ಫೋನ್ ಬೀಪ್ ಶಬ್ದ ಹೊರಡಿಸಲಾರಂಭಿಸಿತ್ತು. ಅತ್ತಲಿಂದ ನಿರುತ್ತರನಾದದ್ದರ ಪ್ರತೀಕವಾಗಿ ಪೋನ್ ಕಟ್ ಆಗಿತ್ತು.

ಆ ನಂತರ ರಾತ್ರಿ೧೨-೨೦ರವರೆಗೆ ನಿರಂತರವಾಗಿ ಕನಿಷ್ಠ ಹತ್ತುಬಾರಿ ಪ್ರಯತ್ನಿಸಿದರೂ ಅವರು ನನ್ನ ಕರೆಯನ್ನು ಸ್ವೀಕರಿಸಿಲ್ಲ. ಬಹುಶಃ ಇನ್ಯಾವತ್ತು ನನ್ನೊಂದಿಗೆ ಮುಖಾಮುಖಿಯಾಗುವ ಧೈರ್ಯವನ್ನೂ ಮಾಡಲಾರರು. ಆದರೆ ಅನಿವಾರ್ಯತೆ ಎಂಬುದಿದೆಯಲ್ಲಾ ? ಏಕೆಂದರೆ ಈಗಾಗಲೇ ನಾನು ಕಾನೂನು ಸಮರಕ್ಕೆ ಇಳಿದಿದ್ದೇನೆ. ನನ್ನ ಕರೆಯನ್ನು ತಿರಸ್ಕರಿಸಿದಷ್ಟು ಸುಲಭದಲ್ಲಿ ನ್ಯಾಯಾಲಯದ ಕರೆಯನ್ನು ತಿರಸ್ಕರಿಸಲಾಗುವುದಿಲ್ಲ. ಒಂದೆರಡು ಬಾರಿ ತಪ್ಪಿಸಿಕೊಳ್ಳಬಹುದು. ಆದರೆ ಕೊನೆಗೊಮ್ಮೆಯಾದರೂ ಬರಲೇಬೇಕು. ನನ್ನೊಳಗೆ ಇನ್ನೂ ಕೇಳದೇ ಉಳಿದು ಹೋದ ಪ್ರಶ್ನೆಗಳನ್ನು ನ್ಯಾಯ ಪೀಠದೆದುರು ನಾನಲ್ಲದಿದ್ದರೂ ನನ್ನ ವಕೀಲರು ಕೇಳುತ್ತಾರೆ. ಆಗಲೂ ‘ನಾನು ಎಷ್ಟು ಹೆಂಡತಿಯರನ್ನು ಮಾಡಿಕೊಂಡರೂ, ಯಾರೊಂದಿಗೆ ಮಲಗಿದರೂ, ಯಾರ ಬಗ್ಗೆ ಬರೆದರೂ ಈ ಸಮಾಜಕ್ಕೇನು’ ಎಂಬ ಮುಖೇಡಿ ಉತ್ತರವನ್ನೇ ನೀಡಲಾಗುವುದಿಲ್ಲವಲ್ಲಾ ? ಆ ದಿನಕ್ಕಾಗಿ ಕಾಯುತ್ತಿದ್ದೇನೆ. ನನ್ನ ನೈತಿಕತೆಯಲ್ಲಿ, ಹಾಗೂ ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ನನಗೆ ನಂಬಿಕೆ ಇದ್ದೇ ಇದೆ.

ಅಷ್ಟಕ್ಕೂ ಈತನ ಕೊಳೆತನವನ್ನೆಲ್ಲಾ ಸಹಿಸಿಕೊಳ್ಳುವುದು ಈ ಸಮಾಜದ ಕರ್ಮವೇ ?

ಇದೇ ಪ್ರಶ್ನೆಯನ್ನು ಆರು ತಿಂಗಳ ಹಿಂದೆಯೇ ವಿಜಯ ಕರ್ನಾಟಕ ಕಚೇರಿಯಲ್ಲಿ ಕುಳಿತು ಕೇಳಿದ್ದೆ. ಅದೇ ಕಾರಣಕ್ಕೇ ಆತ ನನ್ನ ವಿರುದ್ಧ ಬಾಯಿಗೆ ಬಂದದ್ದನ್ನೆಲ್ಲಾ ಬರೆಯುತ್ತಿದ್ದಾರೆ. ಅದರ ವಿವರಕ್ಕಾಗಿ ಇನ್ನೊಂದು ದಿನ ಕಾಯಿರಿ. ಬರೆಯುತ್ತೇನೆ.

Tuesday, February 1, 2011

ಅರಿವಿನ ಹೆಜ್ಜೆಯಲ್ಲಿ...


ಪ್ರೀತಿಯ ಓದುಗರೇ,
ನನ್ನ ‘ಜಲರಾಶಿಯಲ್ಲೊಂದು ಬಿಂದು’ ಲೇಖನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಂಡಿತಾ ಅದನ್ನು ಬರೆಯಲು ಕೂರುವ ಮುನ್ನ, ಯಾರದ್ದೋ ಮಾತಿಗೆ ಉತ್ತರ ಕೊಡಬೇಕೆಂಬ ಉದ್ದೇಶ ಇತು. ಆದರೆ ಬರೆಯುತ್ತಾ ಹೋದಂತೆಲ್ಲ ಸಂಬಂಧಗಳ ಕುರಿತಾದ ವೈಯಕ್ತಿಕ ಚಿಂತನೆಗಳು ಅಲ್ಲಿ ಹರವಲಾರಂಬಿಸಿದವು. ಬರವಣಿಗೆಗೊಂದು ಗಾಂಭಿರ‍್ಯ ಸಿಕ್ಕಿತು. ನಿಜಕ್ಕೂ ನಿಮ್ಮ ಅಭಿಮಾನಕ್ಕೆ ನಾನು ಆಭಾರಿ.

ಒಂದೆರಡು ಮಂದಿ ದೂರವಾಣಿಯಲ್ಲಿ ಜಗಳಕ್ಕೇ(ಪ್ರೀತಿಯಿಂದ) ಬಿದ್ದಂತೆಯೇ ನನ್ನ ವಾದಕ್ಕೆ ಪ್ರತಿವಾದವನ್ನು ಮಂಡಿಸಿದರು. ಖುಷಿಯಾಯಿತು. ಬಹಳಷ್ಟು ಮಂದಿ ನನ್ನ ವಾದವನ್ನು ಪುಷ್ಟೀಕರಿಸಿದರು. ಇನ್ನು ಕೆಲವರು ಇಂಥ ಗಂಭೀರ ಶೈಲಿಯ ಬರವಣಿಗೆಗಳು ವ್ಯರ್ಥ. ಅದರಿಂದ ಏನೂ ಸಾಧನೆಯಾಗುವುದಿಲ್ಲ ಎಂದೂ ಹೇಳಿದ್ದಾರೆ. ಎಲ್ಲರ ಮಾತಿನ ಹಿಂದೆಯೂ ಇದ್ದದ್ದು ಒಂದು ಅಸೀಮ ಪ್ರೀತಿ. ಬರೀ ಒಂದು ಥ್ಯಾಂಕ್ಸ್‌ನಿಂದ ಈ ಋಣ ತೀರಿಸಲಾಗದು.

ಶ್ರೀ ಪ್ರಮೋದ್ , ಶ್ರೀ ಜಗದೀಶ್, ಶ್ರೀ ಮನೋಮೂರ್ತಿ ಸೇರಿದಂತೆ ಕೆಲವರು ಇಲ್ಲಿ ಒಂದು ದೃಷ್ಟಿಯಲ್ಲಿ ನಕಾರಾತ್ಮಕ ಭಾವನೆ ವ್ಯಕ್ತವಾಗಿದೆ ಎಂಬ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಯಾತ್ರಿಕ ಪ್ರಗತಿಯನ್ನು ಅಥವಾ ಯಾವುದೇ ಅಬೀವೃದ್ಧಿಯನ್ನು ನಿರಾಕರಿಸುವ ಉದ್ದೇಶ ಖಂಡಿತಾ ನನ್ನದಲ್ಲ. ಇದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ.

ಜಾಗತೀಕರಣದ ಈ ಸನ್ನಿವೇಶದಲ್ಲಿ ಸಂಬಂಧಗಳು ವೃಥಾಲಾಪಗಳಾಗಿವೆ. ವಸಾಹತುಶಾಹಿ ಚಿಂತನಾ ಕ್ರಮಗಳಲ್ಲಿನ ಜಡತೆ ಇಂದಿಗೂ ಭಾರತೀಯನನ್ನು ಆವರಿಸಿಕೊಂಡಿದೆ. ವಸಾಹತೋತ್ತರ ಭಾರತದ ಮೇಲೆ ಅಚ್ಚಳಿಯದೇ ಉಳಿದುಹೋದ ಪಾಶ್ಚಾತ್ಯ ಪರಂಪರೆಯ ಕಲೆಗಳು ನಮ್ಮ ಮನಸ್ಸುಗಳನ್ನು ದಿನದಿಂದ ದಿನಕ್ಕೆ ಕಂಗೆಡಿಸುತ್ತಿವೆ. ಈ ನೆಲದ ಭಾವನಾತ್ಮಕ ಆಕೃತಿಗಳು ಮನ್ನಣೆ ಕಳೆದುಕೊಂಡಿವೆ ಎನ್ನುವುದನ್ನು ಹೇಳಲು ಪ್ರಯತ್ನಿಸಿದ್ದೇನೆ.

ನಮ್ಮ ಜೀವನವೆಂಬುದು ಇಂದು ಅರಿವಿನಿಂದ ರೂಪಿತವಾಗುತ್ತಿಲ್ಲ. ಆನುಷಂಗಿಕವಾದ ಅಮುಖ್ಯ ಸಂಗತಿಗಳಿಗೆ ಒತ್ತು ನೀಡುತ್ತಿರುವ ಪರಿಣಾಮ ವೈಯಕ್ತಿಕ ಆಸಕ್ತಿಗಳು ಕರಗಿಹೋಗಿವೆ. ಆಸಕ್ತಿ ಹಾಗೂ ಅನಿವಾರ್ಯ ಇವೆರಡರ ನಡುವಿನ ಸಂಘರ್ಷದಿಂದಾಗಿ ಗೊಂದಲಮಯ ಜೀವನ ನಮ್ಮ ಪಾಲಿನದಾಗಿದೆ. ಪ್ರೀತಿಯಿಂದ ಪ್ರೇರಿತವಾದ ಸಂಬಂಧಗಳ ಮಾತು ಬೇರೆ. ಅದು ಮಹತ್ವಾಕಾಂಕ್ಷಿ ಬದುಕಿನ ಮಾದರಿ. ಜೀವನದ ಸಮಗ್ರ ತಿಳಿವಳಿಕೆಗೆ ಕಾರಣವಾಗುವ ಪ್ರೀತಿಯ ಅನುಪಸ್ಥಿತಿಯಲ್ಲಿ ಮನಸ್ಸು ನಿರ್ದಯವಾಗಿದೆ. ಇದು ಹಿಂಸೆಗೆ ಪ್ರೇರಣೆಯೊದಗಿಸಿದೆ.

ಕೈಗಾರಿಕೀಕರಣ ಹಾಗೂ ಯುದ್ಧಗಳಲ್ಲಿ ಯಶಸ್ಸು ಪಡೆಯುವುದೇ ರಾಷ್ಟ್ರ ವ್ಯವಸ್ಥೆಯ ಪರಮೋದ್ದೇಶವಾಗಿದೆ. ನಿರ್ದಯ ಸ್ಪರ್ಧೆ ಹಾಗೂ ಪರಸ್ಪರ ನಾಶಗಳ ವಿಷ ಚಕ್ರದಲ್ಲಿ ಮಾನವ ಬದುಕು ಅರಳುವ ಅವಕಾಶವನ್ನೇ ಕಳೆದುಕೊಂಡಿರುವುದು ದುರದೃಷ್ಟಕರ.


ಸ್ವತಂತ್ರ ನೆಲೆಯ ಆಲೋಚನೆಯನ್ನು ನಾವಿಂದು ಕಳೆದುಕೊಂಡು ಬಿಟ್ಟಿದ್ದೇವೆ. ನಿರ್ದಿಷ್ಟ ವಿನ್ಯಾಸಗಳಿಗಷ್ಟೇ ಸೀಮಿತವಾಗಿರುವ ನಮ್ಮ ಮನಸ್ಸುಗಳಿಂದ ಸಂಬಂಧದ ಸೃಜನಶೀಲತೆ ರೂಪುಗೊಳ್ಳಲು ಸಾಧ್ಯವೇ ಇಲ್ಲ. ವೈಯಕ್ತಿಕ ಬದುಕಿನಂತೆ ಸಾಮಾಜಿಕ ವ್ಯವಸ್ಥೆಯಲ್ಲೂ ಮೌಲ್ಯಗಳು ಕಳೆದುಹೋಗಿವೆ. ವ್ಯಕ್ತಿಯ ಆಂತರ್ಯದಲ್ಲಿ ಮನೆ ಮಾಡಿರಬಹುದಾದ ಅಸ್ಥಿರತೆ ಒಟ್ಟಾರೆ ಜನಜೀವನದ ವಿಶಾಲ ತಳಹದಿಯನ್ನೇ ಕಿರುದಾಗಿಸಿದೆ.

ವ್ಯವಸ್ಥೆಯೆಂಬುದೇ ಛಿದ್ರಗೊಂಡಿರುವಾಗ ಕುಟುಂಬ ಜೀವನದ ಸವಿ ಉಣ್ಣುವ ಹಂಬಲ ಯಾರಲ್ಲೂ ಉಳಿದಿಲ್ಲ. ಸ್ವಸ್ಥ ಕುಟುಂಬದ ಸನ್ನಿವೇಶವೇ ಇಂದು ಕಳೆದುಹೋಗಿರುವುದೂ ಇದೇ ಕಾರಣಕ್ಕೆ. ಅಸಂಬದ್ಧ ಕುಟುಂಬ ವ್ಯವಸ್ಥೆಯೇ ಸುತ್ತಲಿನ ಸಮಸ್ಯೆಗಳಿಗೆ ಕಾರಣವೆಂಬ ಅರಿವು ಜಡಮನಸ್ಸಿಗೆ ಆಗುತ್ತಿಲ್ಲ. ಮೇಲು ನೋಟಕ್ಕೆ ಸ್ವತಂತ್ರ ಹಕ್ಕಿಯಂತೆ ಕಾಣುವ ವ್ಯಕ್ತಿ ಇಂದು ತನ್ನ ಬದುಕಿನ ಬಿಕ್ಕಟ್ಟುಗಳನ್ನು ಅಪರಿಹಾರ್ಯವಾಗಿಸಿಕೊಳ್ಳುತ್ತಿರುವುದು ದುರಂತ.

ಮೂಲಭೂತ ಸಂಘಟಿತ ಜೀವನ ಕ್ರಮದಲ್ಲಿನ ಶಕ್ತಿ ಈ ಸನ್ನಿವೇಶದಲ್ಲಿ ಕುಂದಿರುವುದು ಜಾಗತೀಕರಣದ ನಿಶ್ಶಬ್ದ ಪರಿಣಾಮಗಳಲ್ಲಿ ಪ್ರಮುಖ. ಏಕರೂಪಿ ಜೀವನ ಕ್ರಮಗಳಿಂದಾಗಿ ಆರ್ಥಿಕತೆಯೇ ಸಮಗ್ರ ಅಭಿವೃದ್ಧಿಯ ಮಾನದಂಡವೆಂಬ ಭ್ರಮೆಗೆ ನಾವಿಂದು ತಲುಪಿದ್ದೇವೆ. ಹೀಗಾಗಿ ಆಧುನಿಕ ಸಮಾಜದಲ್ಲಿ ಸಂಬಂಧಗಳ ಗ್ರಹಿಕೆಯೆಂಬುದು ಲಾಭದೃಷ್ಟಿಯಿಂದಲೇ ಅಳೆಯಲ್ಪಡುವಂಥದ್ದು. ತಾತ್ವಿಕ ವ್ಯವಸ್ಥೆಗಳ ಕುರಿತು ಇಲ್ಲಿ ಚರ್ಚೆ ನಡೆಯುವುದೇ ಇಲ್ಲ. ಪರಿಣಾಮ ವ್ಯಾವಹಾರಿಕ ಪರಿಕಲ್ಪನೆಯಡಿಯಲ್ಲೇ ಸಂಬಂಧಗಳು ವ್ಯಾಖ್ಯಾನಕ್ಕೊಳಗಾಗುತ್ತಿವೆ. ವಸಾಹತುಶಾಹಿ ಕಾಲಘಟ್ಟದಲ್ಲಿ ಜನಿಸಿದ ಚಳವಳಿಗಳಾಗಲೀ, ಅಂಥ ಮನೋಭಾವಗಳಾಗಲೀ ಇಲ್ಲಿ ಮುಖ್ಯವಾಗುವುದಿಲ್ಲ. ಕೊನೆಪಕ್ಷ ಹೊಸದೊಂದು ಸಾಹಿತ್ತಿಕ ಚಳವಳಿಯೊಂದನ್ನು ಹುಟ್ಟುಹಾಕುವ ಸಾಮರ್ಥ್ಯವನ್ನೂ ನಾವು ಕಳೆದುಕೊಂಡು ಬಿಟ್ಟಿದ್ದೇವೆಯೇ ಎಂಬ ಸಂಶಯ ಕಾಡುತ್ತಿದೆ. ಪರಕೀಯ ಆಳ್ವಿಕೆಯ ಸ್ವರೂಪವನ್ನು ಸಮಗ್ರವಾಗಿ ಗ್ರಹಿಸಿದ ಮಂದಿಯ ಅನುಭವ ಮುಂದಿನ ತಲೆಮಾರಿಗೆ ಸಮರ್ಥವಾಗಿ ದಾಟದೇ (ಇದ್ದದ್ದನ್ನೂ ಓದುವ ವ್ಯವಧಾನ ನಮಗಿಲ್ಲ ಬಿಡಿ) ಇರುವುದೇ ಇಂದಿನ ಇಂಥ ಸಾಂಸ್ಕೃತಿಕ ಅಪಸವ್ಯಕ್ಕೆ ಕಾರಣವಾಗುತ್ತಿರಬಹುದೇನೋ?

ಬಹುಮುಖಿ ಸಂಸ್ಕೃತಿಯ ಹೆಸರಿನಡಿ ಭಾರತೀಯ ಜೀವನ ಕ್ರಮ ಪಾಲನೆಗೆ ನಾವಿಂದು ಹಿಂಜರಿಯುತ್ತಿದ್ದೇವೆ. ಅಮೂರ್ತ ಹಿಂಸೆಯ ನಡುವೆ ನಮ್ಮ ಸಾಂಸ್ಕೃತಿಕ ಒಳತೋಟಿಯೇ ನಾಶವಾಗುತ್ತಿದೆ. ಭಾರತೀಯರ ಸಾಂಸ್ಕೃತಿಕ ಧಾರ್ಮಿಕ. ಸಾಮಾಜಿಕ ನೆಲೆಗಳು ಸಂಪೂರ್ಣ ಛಿದ್ರಗೊಂಡಿವೆ. ಜೀವನ ಕ್ರಮವೆನ್ನುವುದು ಸೀಮಿತ ವಲಯದಲ್ಲಿ ಸುತ್ತಲಾರಂಭಿಸಿ ವ್ಯಕ್ತಿ, ತನ್ನ ಹೊರಗಿನ ಸೃಜನಶೀಲತೆಗೆ ಪ್ರತಿಸ್ಪಂದಿಸುವುದನ್ನೇ ಮರೆತುಬಿಡುತ್ತಿದ್ದಾನೆ.

ಸಾಮಾಜಿಕ ಅನುಭವದಿಂದ ದೂರ ಸರಿದಿರುವ ಪರಿಣಾಮ ಅಂಥದೊಂದು ಪ್ರೇರಣೆಯ ಬಗ್ಗೆ ಸಣ್ಣ ಚರ್ಚೆಗೂ ಅವಕಾಶವಾಗುತ್ತಿಲ್ಲ. ಅವಕಾಶಹೀನ ಮಾರ್ಗದಲ್ಲಿ ಎಲ್ಲೋ ಕೆಲವೆಡೆ ಹುಟ್ಟುವ ಸಣ್ಣ ದನಿಗಳೂ ಜಾಗತೀಕರಣದ ಆರ್ಭಟದಲ್ಲಿ ಕೇಳದಾಗಿದೆ. ಪ್ರತೀ ವ್ಯಕ್ತಿಗಳಲ್ಲಿಯೂ ಆಂತರಿಕವಾಗಿ ಜನಿಸುವ ಸ್ವಪ್ರeಯೊಂದೇ ಇದಕ್ಕಿರುವ ಪರಿಹಾರ.

ನೆಲೆಗೊಂಡ ಮನೋಭಾವದ ವಿರುದ್ಧ ಮೂಡಿಸಬಹುದಾದ ಆಂತರಿಕ ಜಾಗೃತಿ ಸುಲಭದ ಮಾತಲ್ಲ. ಒಂದೋ ಸಂಪೂರ್ಣ ನಾಶದ ತುದಿಯಲ್ಲಿ ಎಚ್ಚರ ಬರಬೇಕು. ಇಲ್ಲವೇ ಮುಂದಾಗಬಹುದಾದ ಅನಾಹುತದ ಕುರಿತು ಬಲವಾದ ಚಳವಳಿಯೇ ರೂಪುಗೊಳ್ಳಬೇಕು. ಅತ್ಯಂತ ಸಂಕೀರ್ಣ ಇಂದಿನ ಸ್ಥಿತಿಯಲ್ಲಿ ಇವೆರಡೂ ಕಷ್ಟ ಸಾಧ್ಯ. ಸಂಸ್ಕೃತಿಯ ಅಂತಃಶ್ಚೇತನವನ್ನು ಪುನಃ ಜಾಗೃತಿಗೊಳಿಸುವುದು ಯಾವುದೇ ರಕ್ತಪಾತದಂಥ ಕ್ರಿಯೆಗಳಿಂದ ಆಗುವ ಮಾತಲ್ಲ. ಮೂಲತಃ ಭಾರತೀಯ ಸಂಸ್ಕೃತಿ ಅತ್ಯಂತ ಸಬಲವಾದದ್ದು. ಸಣ್ಣ ಪುಟ್ಟ ಹೊಡೆತಗಳಿಂದ ಅದು ಬಗ್ಗುವಂತಹುದಲ್ಲ. ಆದರೂ ನಿರಂತರ ದಾಳಿ ಕೆಲಮಟ್ಟಿಗೆ ಅದನ್ನು ಘಾಸಿಗೊಳಿಸಿಬಿಡಬಹುದಾದ್ದರಿಂದ ಈ ನಿಟ್ಟಿನಲ್ಲಿ ಹೋರಾಟವೊಂದರ ಅಗತ್ಯ ಎದ್ದು ಕಾಣುತ್ತಿದೆ. ಮೂರನೇ ಜಗತ್ತಿನ ಮೇಲೆ ಪಾಶ್ಚಾತ್ಯರ ನಿರಂತರ ಆಕ್ರಮಣದ ಜತೆಗೆ ದೇಸೀತನದ ಬಗೆಗಿನ ಕೀಳರಿಮೆ ಈ ಆತಂಕಕ್ಕೆ ಕಾರಣ.

ಇಂಥ ಅಡೆತಡೆಗಳ ವಿರುದ್ಧ ಸಾಮಾಜಿಕ ಚಳವಳಿಯ ಜತೆಗೆ ರಾಜಕೀಯ ಶಕ್ತಿಯೂ ಕೈ ಜೋಡಿಸಬೇಕು. ದುರಂತವೆಂದರೆ ಇಂದಿನ ರಾಜಕೀಯ ಸನ್ನಿವೇಶ ಬಹುತೇಕ ಸಂಬಂಧ ವಿಘಟನೆಯ ಹಾದಿಯಲ್ಲೇ ಸಾಗಿರುವುದು. ರಾಷ್ಟ್ರೀಯ ಸಂಸ್ಕೃತಿ ತನ್ನ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತಿರುವಾಗಲೂ ರಾಜಕೀಯ ಜಾಗೃತಿ ನಮ್ಮಲ್ಲಿ ಮೂಡುತ್ತಿಲ್ಲ. ಆಶಾವಾದದ ಸಂವೇದನೆಯನ್ನೇ ನಮ್ಮ ಬಹುತೇಕ ನಾಯಕರು ಕಳೆದುಕೊಂಡುಬಿಟ್ಟಿದ್ದಾರೆ. ಗಾಢ ಸತ್ವವುಳ್ಳ ಭಾರತೀಯ ಬದುಕು ನಮ್ಮ ನಾಯಕರಿಗೆ ಸಹ್ಯವಾಗುತ್ತಿಲ್ಲ. ಅಮೆರಿಕನ್ ಆಡಳಿತ ಕ್ರಮವೇ ಇಂದು ಸಾಂಸ್ಕೃತಿಕ, ರಾಜಕೀಯ ಪ್ರೇರಣೆಯಾಗಿದೆ. ಮೊದಮೊದಲು ಅಸ್ಪಷ್ಟವಾಗಿದ್ದ ಇದು ಜಾಗತೀಕರಣದ ದಟ್ಟ ಪ್ರಭಾವಕ್ಕೊಳಗಾಗಿ ಬಲವಾಗಿ ಬೇರೂರಿ ಬಿಟ್ಟಿದೆ. ಪ್ರeವಂತ ವರ್ಗವೂ ಇದರಿಂದ ಹೊರತಾಗಿಲ್ಲ. ಪರದೇಶೀ ಸಂಸ್ಕೃತಿಯ ಸಂಪರ್ಕಕ್ಕೆ ಹಾತೊರೆಯುತ್ತಿರುವ ಮೇಲ್ವರ್ಗದ ಮಂದಿ ದಮನಕಾರಿ ನೀತಿಯೇ ಆಡಳಿತದ, ಪ್ರತಿಷ್ಠೆಯ ಸಂಕೇತವನ್ನಾಗಿಸಿಕೊಂಡಿದ್ದಾರೆ.

ಇಂಥ ಸಂಸ್ಕೃತಿಯನ್ನು ಅರಗಿಸಿಕೊಳ್ಳಲು ಭಾರತೀಯರಿಂದ ಸಾಧ್ಯವಿಲ್ಲವೆಂಬುದು ಗೊತ್ತಿದ್ದೂ, ಬ್ರಿಟಿಷ್ ಅಪತ್ಯದ ಸನ್ನಿವೇಶದಲ್ಲಿನ ಅವಾಂತರಗಳ ಅರಿವಿದ್ದೂ, ಸಾಮಾಜಿಕ ಸ್ಥಿತ್ಯಂತರದ ವಿಷಯದಲ್ಲಿ ನಾವು ಎಡವುತ್ತಿರುವುದು ಶೋಚನೀಯ. ಸಂಬಂಧಗಳ ಸ್ಥಿರತೆಯೊಂದೇ ಇದಕ್ಕೆ ಪರಿಹಾರ. ಅತ್ಯಂತ ಬಲಶಾಲಿ ಭಾರತೀಯ ಮನಸ್ಸು ಬೆಳೆದು ಬಂದದ್ದೇ ಕೌಟುಂಬಿಕ ಸಂಬಂಧಗಳ ನೆಲೆಯಲ್ಲಿ. ಈ ಕಾರಣಕ್ಕೇ ನಮ್ಮ ಸ್ವಾಭಿಮಾನವೂ ಅನ್ಯದೇಶೀಯರಿಗೆ ಆದರ್ಶವಾಗಿ ಕಂಡಿತ್ತು. ಹಾಗೆಂದು ಹೊರಗಿನ ಎಲ್ಲ ಬೆಳವಣಿಗೆಗಳನ್ನು ನಾವು ತಿರಸ್ಕರಿಸಬೇಕೆಂದೂ ಅಲ್ಲ. ಆ ಹಠವೂ ನಮಗೆ ಬೇಡ. ಆದರೆ ಸಾಮರಸ್ಯದ ಜತೆಜತೆಗೇ ಈ ನೆಲದ ಸ್ವಂತಿಕೆಯನ್ನು. ಅದರ ಅಸ್ತಿತ್ವವನ್ನು ಉಳಿಸಿಕೊಂಡು ಹೋಗಬೇಕಾದ್ದು ಇಂದಿನ ತುರ್ತು.

ಭಾರತೀಯತೆಯ ಹಿಂದಿನ ಮುಖ್ಯ ಬೇರುಗಳಿರುವುದು ಸಂಬಂಧಗಳ ನೆಲೆಯಲ್ಲಿಯೇ. ವಸಾಹತುಗಳ ಆಗಮನ ಇದರ ಮೂಲವನ್ನೇ ಕತ್ತರಿಸಲು ಪ್ರಯತ್ನಿಸಿತು. ಆ ಸಂದರ್ಭದಲ್ಲಿಯೂ ತನ್ನ ಸಿಕ್ಕು ಬಿಟ್ಟುಕೊಳ್ಳುವ ನಮ್ಮತನ ಇದೀಗ ಜಾಗತೀಕರಣದ ದಾಳಿಗೆ ಸಿಲುಕಿ ಜಾಳುಜಾಳಾಗುತ್ತಿದೆ. ಸಂಬಂಧಗಳ ಗಾಢತೆಯ ನಡುವೆ ಶೀತಲಗಾಳಿ ಸುಳಿದಾಡತೊಡಗಿದೆ. ಗ್ರಾಮೀಣ ಸಂಸ್ಕೃತಿಯ ಮೇಲೆ ನಗರೀಕರಣ ಪ್ರಕ್ರಿಯೆ ಪ್ರಬಲವಾದ ಪ್ರಹಾರ ಮಾಡುತ್ತಿದೆ. ಮನುಷ್ಯ ಮತ್ತು ಸಮಾಜ ಬೇರೆ ಬೇರೆಯಾಗಿ ಕಾಣತೊಡಗಿದೆ. ಪ್ರಗತಿಯತ್ತ ಮುಖ ಮಾಡುವ ಭರದಲ್ಲಿ ನಾಗರೀಕತೆಯ ಸಾಮರಸ್ಯ ನಶಿಸಿಹೋಗುತ್ತಿದೆ. ಅನ್ಯ ದೇಶೀಯ ಸಂಸ್ಕೃತಿಯ ಆಗಮನಕ್ಕೆ ಸಹಜವಾಗಿಯೇ ನಾವು ಉತ್ಕಟವಾಗಿ ಪ್ರತಿಸ್ಪಂದಿಸುತ್ತಿದ್ದೇವೆ. ಇದು ಆಧುನಿಕ ಶಿಕ್ಷಣ ಕ್ರಮದಲ್ಲೂ ಧ್ವನಿಸಿದ ಪರಿಣಾಮ ಸಮಾಜ ತನ್ನ ಚಾರಿತ್ರಿಕ ಸ್ವರೂಪವನ್ನೇ ಕಳೆದುಕೊಳ್ಳುತ್ತಿದೆ.

ಅಂತರಂಗ ತನ್ನ ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದರೆ ಪ್ರತಿಫಲವಾಗಿ ಆರೋಗ್ಯಕರ ಪ್ರೇಮವೆನ್ನುವುದು ಕಥೆಯಾಗಿ ತೋರುತ್ತಿದೆ. ಸುತ್ತಣ ಸಮಾಜದಲ್ಲಿ ಸಮುದಾಯದಲ್ಲಿ ಮನುಷ್ಯ ಸಂಬಂಧಗಳು ನಾಶವಾಗಿ, ಬದುಕಿನಲ್ಲಿ ಅಸ್ಥಿರತೆ ಇಣುಕುತ್ತಿದೆ. ಇದು ಸಮಾಜ ಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ವ್ಯಕ್ತಿಯ ವೈಯಕ್ತಿಕ ಬದುಕಿನ ಆರ್ಥಿಕತೆಯ ಮೇಲೂ ಪ್ರಭಾವ ಬೀರಿದುದರಿಂದ ಗುಲಾಮಗಿರಿಯನ್ನು ಆತ ಅರಿವಿಲ್ಲದೇ ಒಪ್ಪಿಕೊಂಡು ಬಿಡುತ್ತಿದ್ದಾನೆ. ದುರದೃಷ್ಟವಶಾತ್ ಇಂದಿನ ಎಲ್ಲ ವ್ಯವಸ್ಥೆಯೂ ನಮ್ಮನ್ನು ಅತಿ ವಿಧೇಯರಾಗಿ, ಯಂತ್ರಜಡರಾಗಿ, ಮತಿಶೂನ್ಯರಾಗಿ ಪರಿವರ್ತಿಸುತ್ತಿದೆ. ಆಂತರಂಗಿಕವಾಗಿ ನಾವು ವಿಕಲಾಂಗರಾಗುತ್ತಿದ್ದೇವೆ. ಇದರಿಂದ ವೈಯಕ್ತಿಕ ಹಾಗೂ ಸಾಮುದಾಯಿಕ ಸಮಸ್ಯೆಗಳು ಹೆಚ್ಚುತ್ತಿವೆ. ಸಹಜವಾಗಿ ಅಸ್ಥಿರತೆಯೂ ಕಾಡಲಾರಂಭಿಸಿ ಭಯಮುಕ್ತ ವಾತಾವರಣವೆಂಬುದು ಶಾಶ್ವತವಾಗಿ ಮರೆಯಾಗುತ್ತಿದೆ.

ಮಾನವ ಸಂಬಂಧಗಳನ್ನು ಅರ್ಥ ಮಾಡಿಕೊಂಡಾಗ ಭಯಕ್ಕೆ ಸ್ಥಾನವೇ ಇರುವುದಿಲ್ಲ. ಮನುಷ್ಯ ಸಹಜ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಸಹ್ಯವಾಗಿಸಿಕೊಳ್ಳಲು ಅದರ ಸೂಕ್ಷ್ಮತೆಗಳು, ನೋವು ನಲಿವುಗಳನ್ನು ಕರಗಿಸಿಕೊಳ್ಳಲು ಆತನಿಗೆ ಅಪಾರ ಕ್ರಿಯಾಶೀಲತೆ ಅಗತ್ಯ. ಜಡ ಸಮಾಜದ ಕಟ್ಟುಪಾಡುಗಳಿಗೆ ವಿಧೇಯವಾದ, ನಿಷ್ಕ್ರಿಯ ಸಾಮರಸ್ಯವನ್ನು ಹೊಂದಿರುವ ವ್ಯಕ್ತಿಯಿಂದ ಇದು ಅಸಾಧ್ಯ. ಪೂರ್ವಗ್ರಹ ಪೀಡಿತವಲ್ಲದ ಅನ್ವೇಷಣೆ ಹಾಗೂ ಸ್ವಪ್ರಯತ್ನದಿಂದ ಸ್ಥಾಪಿತವಾಗುವ ಮೌಲ್ಯಗಳನ್ನು ರೂಢಿಸಿಕೊಂಡಾಗ ಮಾತ್ರ ಇಂಥ ಕ್ರಿಯಾಶೀಲತೆಯನ್ನು ಧಕ್ಕಿಸಿಕೊಳ್ಳಲು ಸಾಧ್ಯ.

ಇಂದಿನ ಬಹುತೇಕ ಸಂಘರ್ಷಗಳು, ಭಯೋತ್ಪಾದನೆಯಂಥ ವಿದ್ರೋಹಗಳು, ಸಮಾಜ ಘಾತಕ ಚಟುವಟಿಕೆಗಳು ನಾವು ವ್ಯಕ್ತಿಗಳು, ವಿಚಾರಗಳು, ವಸ್ತುಗಳೊಂದಿಗೆ ಹೊಂದಿರುವ ತಪ್ಪು ಸಂಬಂಧಗಳ ಅಥವಾ ಸಂಬಂಧರಾಹಿತ್ಯದ ಫಲ. ತಾಂತ್ರಿಕತೆಯ ಅತಿಯಾದ ಅವಧಾರಣೆಯಿಂದಾಗಿ ನಾವು ವ್ಯವಸ್ಥೆಯಲ್ಲಿ ವಿಫಲರಾಗುತ್ತಿದ್ದೇವೆ. ಜೀವನವೆಂದರೆ ಕೇವಲ ತಂತ್ರeನದಲ್ಲಿನ ಆವಿಷ್ಕಾರಗಳಲ್ಲ. ಅದು ನೋವು, ನಲಿವು, ಸೌಂದರ್ಯ, ಕುರೂಪ, ಪ್ರೀತಿ-ಪ್ರೇಮಗಳ ಸಂಗಮ. ಇದನ್ನು ಸಮಗ್ರವಾಗಿ ಅರ್ಥೈಸಿಕೊಂಡಾಗ ಅಂಥ ತಿಳಿವಳಿಕೆಗಳು ಹೊಸದಾದ ತಾಂತ್ರಿಕತೆಯೊಂದನ್ನು ರೂಪಿಸಬಲ್ಲುದು. ಇದು ಮನಸ್ಸು ಮತ್ತು ಅಪೇಕ್ಷೆಗಳಿಗೆ ಪೂರಕವಾಗಿರುತ್ತದೆ. ಭಾವನಾ ಜನ್ಯ ತಾಂತ್ರಿಕತೆಯ ಉದ್ದೇಶ ವಿನಾಶವಾಗಿರಲು ಸಾಧ್ಯವೇ ಇಲ್ಲ. ಅದು ಜೀವನದ ಸಮಗ್ರ ಪ್ರಕ್ರಿಯೆಗಳ ಅರಿವಿನ ಮಾರ್ಗ.

ತೀರಾ ಅಗತ್ಯ, ಅನಿವಾರ್ಯವೆಂದೆನಿಸಿರುವ ತಂತ್ರeನ ಇಂದಿನ ನಮ್ಮ ಅಂತರಂಗದ ಒತ್ತಡ-ಸಂಘರ್ಷಗಳನ್ನು ಪರಿಹರಿಸುತ್ತಿಲ್ಲ. ಗಲ್ಲಿಗಲ್ಲಿಗಳಿಗೊಂದು ಯೋಗ ಕಲಿಕಾ ಕೇಂದ್ರಗಳು, ಬೀದಿ ಬೀದಿಗಳಿಗೊಂದು ನಗೆಕ್ಲಬ್‌ಗಳು ಹುಟ್ಟಿಕೊಂಡಿರುವುದೇ ಇದಕ್ಕೆ ಸಾಕ್ಷಿ. ಮಾನಸಿಕ ತುಮುಲಗಳನ್ನು ತಹಬಂದಿಗೆ ತರಲು ಮಠ-ಮಂದಿರಗಳ ಮೊರೆಹೋಗುತ್ತಿರುವವರಿಗೂ ಕೊರತೆಯಿಲ್ಲ. ಮನಶ್ಶಾಂತಿಗಾಗಿ ಬೋಧನೆ, ಪ್ರವಚನಗಳಲ್ಲಿ ಇನ್ನಿಲ್ಲದ ಕೋರಂ ಕಾಣುತ್ತಿರುವುದೂ ಇದೇ ಕಾರಣಕ್ಕೆ. ಜೀವನ ಸ್ವರೂಪವನ್ನು ಗ್ರಹಿಸಿಕೊಳ್ಳದೇ ಆತ್ಮಪ್ರೀತಿಯನ್ನು ತೂರಿ, ಒಲವಿನ ಒರತೆಯಿಲ್ಲದ ಹೃದಯ ಹೊತ್ತು ವೈeನಿಕ ಸಾಧನೆಯೊಂದೇ ಪ್ರತಿಷ್ಠೆಯ ಸಂಕೇತವೆಂದೂ, ಶಸ್ತ್ರ ಸಂಗ್ರಹವೇ ಸಾಮರ್ಥ್ಯದ ಮಾನದಂಡವೆಂದೂ ಮುನ್ನಡೆಯುತ್ತಿರುವುದೇ ಇದಕ್ಕೆ ಕಾರಣ.

ವೃತ್ತಿ ಕೌಶಲವೇ ಶಿಕ್ಷಣದ ಅಂತಿಮ ಗುರಿಯೆಂಬುದು ಇಂದಿನ ವಾದ. ಆದರೆ ಉದ್ಯೋಗ ನಿರತನ ಹತಾಶೆಯ ಸ್ಥಿತಿಗೆ ಪರಿಹಾರವನ್ನು ನಮ್ಮ ಶಿಕ್ಷಣ ರೂಪಿಸಿಕೊಡುತ್ತಿಲ್ಲ. ನಮ್ಮತನದ ಅರಿವಿಲ್ಲದ ತಾಂತ್ರಿಕತೆ ಏಕತಾನತೆಗೆ ಕಾರಣವಾಗಿದೆ. ಅಂಥ ಏಕತಾನತೆಯೇ ಬದುಕಿನ ಅಭದ್ರತೆಗೆ ದಾರಿ ಮಾಡಿಕೊಟ್ಟಿದೆ. ಬದುಕೆಂಬುದು ಬರಿದು ಬರಿದಾದ ಪರಿಣಾಮ ಹೊಸತನದ ಕ್ಷಣಗಳಿಂದ ಅದನ್ನು ತುಂಬಿಕೊಡಲು ನಮ್ಮಲ್ಲಿ ಸಂಬಂಧಗಳ ಸೆಲೆಯೇ ಒತ್ತಿಹೋಗಿದೆ. ಭೀಕರ ಬರಗಾಲ ಒಟ್ಟಾರೆ ಮಾನವ ಜೀವನವನ್ನು ಆವರಿಸಿಕೊಂಡುಬಿಟ್ಟಿದೆ. ಈ ಬಾಳಿನ ಸುವಿಶಾಲ ಹರಹು ನಮಗೆ ನಿಲುಕುತ್ತಿಲ್ಲ. ಅನುಭವ, ಅನುಭವಗಳು ಧಕ್ಕದೇ ಹೋಗಿವೆ. ಸಮಗ್ರ ಜೀವನ ಹಾಗೂ ಕ್ರಿಯಾಶೀಲತೆಗಳಿಂದ ನಾವಿಂದು ಬಹುದೂರ ಬಂದುಬಿಟ್ಟಿದ್ದೇವೆ. ಈಗೇನಿದ್ದರೂ ನಮ್ಮ ಜೀವಂತಿಕೆಗಿರುವ ಏಕೈಕ ಸಾಕ್ಷಿಯೆಂದರೆ ಆಕ್ರಮಣಶೀಲತೆ. ಅದನ್ನೇ ನಾವು ಜೀವನದ ಎಲ್ಲ ಸ್ತರಗಳಲ್ಲೂ ಪ್ರಯೋಗಿಸುತ್ತಿದ್ದೇವೆ. ಮನಸ್ಸಿನೊಳಗೂ ಅeತ ಅಂಜಿಕೆಯ ಫಲವಿದು. ಅದನ್ನು ಇನ್ನಷ್ಟು ಕಾಲ ಅeತವಾಗಿಡುವ ಹುನ್ನಾರವಾಗಿ ನಾವು ನಮ್ಮ ಸುತ್ತಲೂ ಇಂಥ ಹುಸಿ ಆಕ್ರಮಣಗಳಿಂದ ಭದ್ರತಾ ವಲಯಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ. ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಕ್ಕೂ ಹೋಗದೆ ಅವರಿಗಿಂತ ನಾವು ಬಲಿಷ್ಠರೆಂದು ತೋರಿಸಿಕೊಳ್ಳಲು ಹವಣಿಸುತ್ತೇವೆ. ಇಂಥ ಹವಣಿಕೆಗಳಲ್ಲಿ ಪ್ರೀತಿಗೆಲ್ಲಿ ಜಾಗ?

ಪ್ರೀತಿ ಎಂದರೆ ಅದು ಸಂವಹನ ಸ್ವರೂಪಿ. ಅದು ನಿಂತಲ್ಲಿ ನಿಲ್ಲಲಾರದು. ನಿರಂತರ ಹರಿಯುವಿಕೆ ಅದರ ಜನ್ಮಗುಣ. ಇಂಥ ಚಲನಶೀಲತೆಯೇ ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವ ರಹದಾರಿಯಾಗುತ್ತದೆ. ಪರಸ್ಪರ ಸ್ಪಂದನದ ಫಲವಾಗಿ ಸಂಬಂಧಗಳು ದೃಢಗೊಳ್ಳುತ್ತದೆ. ಆದರಿಂದು ನಾವು ಪ್ರೀತಿಯೆಂಬುದನ್ನು ಕಳೆದುಕೊಂಡು ಬರಿದಾಗಿ ಬಿಟ್ಟಿದ್ದೇವೆ.

ಸಾಂಸ್ಥಿಕ ವ್ಯವಸ್ಥೆಯೊಂದನ್ನೇ ಮೂಗಿನ ನೇರಕ್ಕಿಟ್ಟುಕೊಂಡು ಉಳಿದೆಲ್ಲ ಭಾವನೆಗಳಿಗೆ ಕಣ್ಕಾಪುಕಟ್ಟಿಕೊಂಡು ನಾಗಾಲೋಟದಿಂದ ಮುನ್ನುಗ್ಗುತ್ತಿದ್ದೇವೆ. ನಮ್ಮ ಮೂಗುದಾಣ ಜಗ್ಗಿ ನಿಯಂತ್ರಿಸುತ್ತಿರುವ ವ್ಯವಸ್ಥೆಯ ಕೂಸಾಗಿ ಸ್ವಂತಿಕೆ ಕಳೆದುಕೊಳ್ಳುತ್ತಿದ್ದೇವೆ. ಇದು ತೀರಾ ಅಪಾಯಕರ. ನಿರ್ದಿಷ್ಟ ಉದ್ದೇಶ ಸಾಧನೆಯಾದ ಕೂಡಲೇ ನಮ್ಮ ಪಾಡಿಗೆ ನಮ್ಮ ಬಿಟ್ಟು ವ್ಯವಸ್ಥೆಯೇ ಫಲಾಯನ ಮಾಡಿಬಿಡಬಹುದು. ಅಂಥ ಸನ್ನಿವೇಶದಲ್ಲಿ ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಮನೋಧರ್ಮವೂ ನಮ್ಮಳಿದಿರುವುದಿಲ್ಲ. ನಮ್ಮ ಪರಿಸರಕ್ಕೆ ಮರಳುವ ಹಾದಿಯೂ ತಿಳಿದಿರುವುದಿಲ್ಲ. ಮೂಗುದಾಣ ಹಿಡಿದು ಮುನ್ನಡೆಸುವವರೂ ಇರುವುದಿಲ್ಲ. ಅಂಥ ಹೀನಾಯ ಸ್ಥಿತಿಯಲ್ಲಿ ಕೊರಗುವುದೊಂದೇ ದುರ್ಗತಿ ನಮ್ಮ ಪಾಲಿಗುಳಿದುಬಿಡಬಹುದು. ಹಿಡಿಯಷ್ಟು ಪ್ರೀತಿ ಆಂತರ್ಯದಲ್ಲಿ ಉಳಿದದ್ದೇ ಆದಲ್ಲಿ ಅದೆಂಥದೇ ಮರಳುಗಾಡಿಲಿ. ಸಂಬಂಧಗಳ ಓಯಸಿಸ್‌ಗಳನ್ನು ಹುಡುಕಿಕೊಂಡು ಸಾಗಬಹುದು.

ಪ್ರೀತಿ ಅರಳುವುದು ವೈಯಕ್ತಿಕ ಸ್ವಾತಂತ್ರ್ಯದ ಹೊಂಗಿರಣಗಳ ನಡುವೆ ಮಾತ್ರ. ಬಲವಂತದ ಯಾವುದೇ ಶಿಸ್ತಿನಿಂದಲೂ ಅದರ ವಿಕಸನ ಅಸಾಧ್ಯ. ಬಹಿರಂಗದಲ್ಲಿ ಅತ್ಯಂತ ಶಿಸ್ತಿನ ಮನುಷ್ಯನಾಗಿ ತೋರುವ ಯಾವುದೇ ವ್ಯಕ್ತಿಯಲ್ಲಿ ಆಂತರಂಗಿಕ ತೊಳಲಾಟಗಳಿರಬಹುದು. ಮಾನಸಿಕ ಅಸ್ತವ್ಯಸ್ಥತೆ ಕಾಡುತ್ತಿರಬಹುದು. ಅದು ಬೇರೆಲ್ಲೋ ಧುತ್ತನೆ ಪ್ರತ್ಯಕ್ಷವಾಗಿ ಬಿಡಬಹುದಾದ ಅಪಾಯಗಳಿವೆ. ಸಮಕಾಲೀನ ಸಮಾಜದ ಬದುಕಿಗೆ ಬೇಕಾಗಿ ರೂಢಿಸಿಕೊಂಡಿರುವ ಶಿಸ್ತು ಮಾನಸಿಕ ವಿಪ್ಲವಗಳಿಗೆ ಪರಿಹಾರ ದೊರಕಿಸಿಕೊಡದು. ಅಂಥ ವಿಪ್ಲವಗಳು ಅಂತರಂಗದಲ್ಲಿ ಹುಡುಕಿಕೊಂಡು ಹಠಮಾರಿಯಾಗುತ್ತ ಸಾಗುತ್ತದೆ. ವ್ಯಕ್ತಿಗತ ಭಯ, ದ್ವೇಷಗಳಿಗೆ ಇದೇ ಕಾರಣವಾಗುತ್ತದೆ. ಪ್ರತ್ಯೇಕವಾದಗಳಂಥವು ಇಲ್ಲಿಂದಲೇ ಹುಟ್ಟು ಪಡೆಯುತ್ತವೆ. ಇದನ್ನೇ ಮಹತ್ವಾಕಾಂಕ್ಷೆಯೆಂದು ನಾವು ಪರಿಭಾವಿಸುತ್ತೇವೆ. ಇದರ ಹಿಂದಿನ ಸಮಸ್ಯೆಯನ್ನು ಗ್ರಹಿಸುವ ಪ್ರಯತ್ನಕ್ಕೂ ನಾವು ಮುಂದಾಗುವುದಿಲ್ಲ. ಸಮಗ್ರ ವ್ಯಕ್ತಿತ್ವದ ಎಲ್ಲ ಸಂಕೀರ್ಣತೆಗಳನ್ನು ಅರ್ಥ ಮಾಡಿಕೊಳ್ಳುವುದರಿಂದ, ಅದರ ಆಯಾಮಗಳ ಅಭಿವ್ಯಕ್ತಿಗೆ ನೆಲೆಯೊದಗಿಸುವುದರಿಂದ ಸಂಘರ್ಷಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅದು ಅಂತಿಮವಾಗಿ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ನಾಂದಿಯಾಗುತ್ತದೆ.

ಪರಿವರ್ತನೆಯೆಂಬುದು ವ್ಯವಸ್ಥೆಯಲ್ಲಿ ಬರಬೇಕಾದುದಲ್ಲ. ಇಡೀ ವ್ಯವಸ್ಥೆಯನ್ನೇ ಬದಲಿಸಿಬಿಡುತ್ತೇನೆಂಬುದು ಮೂರ್ಖತನವಾದೀತು. ಬದಲಾವಣೆ ಅಂತರಂಗದಲ್ಲಿ ಕಾಣಿಸಿಕೊಳ್ಳಬೇಕಾದ್ದು. ಪ್ರತೀ ವ್ಯಕ್ತಿಯೂ ಪ್ರೀತಿಪೂರಿತ ಪರಿವರ್ತನೆಯೆಡೆಗೆ ಮುಖ ಮಾಡಿದಾಗ ತಂತಾನೆ ವ್ಯವಸ್ಥೆಯೂ ಬದಲಾಗುತ್ತದೆ.

ಸಮಸ್ತ ಸಂಬಂಧಗಳಲ್ಲಿ ನಾವು ಪ್ರತಿಫಲನಗೊಳ್ಳಬೇಕು. ಆಗ ಸಹಜವಾಗಿ ನಮ್ಮ ಇತಿಮಿತಿಗಳ ದರ್ಶನವಾಗುತ್ತದೆ. ಅಂತಶ್ಚೇತನವನ್ನು ಅದರ ಆಂತರಿಕ ರಚನೆಗಳನ್ನು ಪುನರ್‌ನಿರ್ಮಿಸಿಕೊಳ್ಳಲು ಇದು ಸಹಕಾರಿ. ಭಾವತರಂಗಗಳಲ್ಲಿ ಅಭಿವ್ಯಕ್ತಿಗೊಳ್ಳುವ ಆಕಾರರಹಿತ ಸಂವೇದನೆಗಳು ವ್ಯಕ್ತಿಯನ್ನು ಪರಿಶುದ್ಧಗೊಳಿಸುತ್ತವೆ. ವ್ಯಕ್ತಿತ್ವದ ಸಮಗ್ರ ಪರಿಯೊಳಗೆ ಭಾವನೆಗಳಿಗೆ ಸೂಕ್ತ ಸ್ಥಾನಮಾನಗಳು ಸಿಗದಿದ್ದಾಗ ಹೊಯ್ದಾಟ ಸಹಜ. ಜೀವನದ ಮೂಲಭೂತ ಆಯ್ಕೆ ಇಂಥ ಭಾವನೆಗಳಿಂದಲೇ ನಡೆಯುವಂಥದ್ದು. ಆತ್ಮಬಲದೊಂದಿಗೆ ಮುನ್ನಡಿ ಇಡುವ ಯಾವುದೇ ವ್ಯಕ್ತಿ ಭಾವನೆಗಳನ್ನು, ಅದರೊಂದಿಗೆ ಗಟ್ಟಿಗೊಳ್ಳುವ ಸಂಬಂಧಗಳನ್ನು ನಿರಾಕರಿಸಲಾರ. ಸೃಜನಶೀಲ ವಿರೋ ಆಕ್ರಮಣಶೀಲತೆಗೆ ಎಡೆಮಾಡಿಕೊಡಲಾರ. ಅಂತಃಕರಣದ ವಿಕಾಸ ಕೂಡಾ ಸಾಧ್ಯವಾಗುವುದು ಇಂಥ ಆತ್ಮಾನುಭವಗಳಿಂದಲೇ.

ನಮ್ಮನ್ನು ನಾವು ನಿರ್ದಿಷ್ಟ ಮಿತಿಯೊಳಗೆ ಕಟ್ಟಿಕೊಳ್ಳುವ ಬದಲು ಹೊಸ ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳೋಣ. ಪ್ರತಿದಿನದ ಅರುಣೋದಯಕ್ಕೆ ಮೈಯೊಡ್ಡಿ ಹೊಂಗಿರಣಗಳನ್ನು ತೂರಿಸಿಕೊಳ್ಳೋಣ. ಸಂಬಂಧಗಳ ಮೂಸೆಯೊಳಗೆ ಬೇಯುವ ಹೃದಯ ಇನ್ನಷ್ಟು ಪಕ್ವವಾದೀತು. ಸಂಕೀರ್ಣ ಸಮಾಜದೊಳಗೆ ಭಾವನೆಗಳ ಜಿಪುಣತನ ತೋರದೆ ಉದಾರವಾದಿಯಾದರೆ ಮಾತ್ರ ಬದುಕಿನ ಮಹಲು ತಲೆ ಎತ್ತಲು ಸಾಧ್ಯ.

ಪ್ರೀತಿಯೆಂಬುದು ಬರಿದಾಗುವ ಸಂಪನ್ಮೂಲ. ಬಗೆಬಗೆದು ಹಂಚಿದಷ್ಟೂ ಜಲಕಂಡಿ ದೊಡ್ಡದಾಗುತ್ತ ಹೋಗುತ್ತದೆ. ಹೊಸ ನೀರು ಬುಗ್ಗೆಯಾಗಿ ಚಿಮ್ಮುತ್ತದೆ. ಸುತ್ತಲ ಪರಿಸರವೇ ಹಸಿರಾಗುತ್ತ ಸಾಗುತ್ತದೆ. ಬೊಗಸೆಯಲ್ಲಿ ತುಂಬಿಕೊಡುವ ಗುಟುಕುಪ್ರೀತಿ ಹತ್ತಾರು ಬರಡು ಜೀವಗಳಿಗೆ ಪುನರ್ಜನ್ಮ ನೀಡೀತು.

ಸಣ್ಣತನಗಳ ಕದರು ಮೂಡಿ ಆಂತರ‍್ಯದ ಬೆಳಕು ಮಂಕಾಗಲು ಬಿಡದಿರುವ ಜಾಗೃತಿ ನಮ್ಮ ಈಗಿನ ಅಗತ್ಯ. ನಿರಂತರ ಹರಿವೇ ಜೀವನದ ಯಶಸ್ಸಿನ ಗುಟ್ಟು. ಅದೆಂಥದೇ ಆಕ್ರಮಣಗಳಾಗಲೀ ಅವುಗಳನ್ನೆದುರಿಸಿ ನಾವು ನಾವಾಗಿಯೇ ಮುನ್ನಡಿ ಇಡೋಣ. ಪ್ರತಿ ಬೆಳಗು ಹೊಸತಾಗಿರಲಿ. ಹೊಸ ಹೊಸ ಬದುಕ ತರಲಿ. ಹೊಸ ಸಂಬಂಧಗಳ ಕಟ್ಟಿಕೊಡಲಿ ಎಂಬ ಸಕಾರಾತ್ಮಕ ಆಶಯದೊಂದಿಗೇ ಈ ಬರಹಕ್ಕೆ ಫುಲ್‌ಸ್ಟಾಪ್ ಇಡುತ್ತೇನೆ.

Friday, January 28, 2011

ಸ್ವಾಮೀ, ಬರಹಗಳಿಗಾವ ಪಂಥ ?

ಇದೊಂದು ರೀತಿಯ ವಿಚಿತ್ರ ಮನಃಸ್ಥಿತಿ. ಯಾವಾಗ ತನಗೊಬ್ಬ ಕಾಂಪೀಟೇಟರ್ ಹುಟ್ಟಿಕೊಂಡಿದ್ದಾನೆಂದು ಅನಿಸುತ್ತದೆಯೋ, ಆತ ತನಗಿಂತ ಬುದ್ಧಿವಂತ, ಜನಪ್ರಿಯ, ಬಲಶಾಲಿ ಎಂಬುದು ಮನವರಿಕೆಯಾಗುತ್ತದೆಯೋ ಆಗ ಇದ್ದಕ್ಕಿದ್ದಂತೆ ಅನಿಶ್ಚಿತತೆ ಕಾಡುತ್ತದೆ. ಏನಾದರೂ ಮಾಡಿ ಎದುರಾಳಿಯನ್ನು ಬಗ್ಗುಬಡಿಯಬೇಕು ಎನ್ನುವ ಭಾವನೆ ಮೂಡುತ್ತದೆ. ಅಂಥ ದುರ್ಬಲ ಮನಸ್ಸು ನಮ್ಮಿಂದ ಎಂಥಾ ಹೇಸಿಗೆಯನ್ನು ಮಾಡಿಸಲೂ ಹಿಂದೆ ಮುಂದೆ ನೋಡುವುದಿಲ್ಲ. ಇಷ್ಟು ದಿನ ತಾನು ಮಾಡಿದ್ದೇ ಸರಿ ಎಂದು ಮೆರೆಯುತ್ತಿದ್ದ ನರಿ ಕೊಳೆಗೆರೆಯಂಥವರದ್ದೂ ಸಹ ಇಂದು ಬಹುಶಃ ಇದೇ ಮನಸ್ಥಿತಿಯಿರಬೇಕು.

ಈವರೆಗೆ ಆತನನ್ನು ಈ ಪರಿ ಕೈತೊಳೆದುಕೊಂಡು ಬೆನ್ನು ಹತ್ತಿದವರೇ ಇಲ್ಲ. ಇಂದು ಎಲ್ಲ ರೀತಿಯಿಂದಲೂ ಆತನ ಅವಸಾನ ಆರಂಭವಾಗಿದೆ. ಅದು ಅರಿವಾಗುತ್ತಿದ್ದಂತೆಯೇ ವಿಚಿತ್ರವಾಗಿ ವರ್ತಿಸಲಾರಂಭಿಸಿದ್ದಾನೆ ಆತ. ನನ್ನ ಬ್ಲಾಗ್ ನೋಡಿ ವ್ಯಕ್ತಿಯೊಬ್ಬ (ಬಹುಶಃ ಆತನ ಶಿಷ್ಯನೇ ಇರಬಹುದು)ಕರೆ ಮಾಡಿದ್ದ. ತಾಕತ್ತಿದ್ದರೆ ಅವರಂತೆ ಬರೆದು ತೋರಿಸಿ, ವೃಥಾ ಕೆಸರೆರೆಚಾಟದಿಂದ ಪ್ರಯೋಜನವಿಲ್ಲ...ಎಂದೆಲ್ಲಾ ಸವಾಲೆಸೆದ. ಖಂಡಿತಾ ಆತ ಇಳಿದ ಕೀಳು ಮಟ್ಟಕ್ಕೆ ನಮ್ಮಿಂದ ಇಳಿಯಲಾಗದು. ಸ್ವಕುಚ ಮರ್ಧನದಲ್ಲಿ ಆತನಿಗಿದ್ದಷ್ಟು ಪರಿಣತಿ ನಮ್ಮದಲ್ಲ. ಆದರೆ ಬೌದ್ಧಿಕತೆ ಯಾರಿಗೂ ಮಾರಾಟವಾಗಿಲ್ಲ. ಇದನ್ನು ಮತ್ತೆ ಮತ್ತೆ ಹೇಳಿದ್ದೇನೆ. ಅಕ್ಷರ ಯಾರಪ್ಪನ ಸ್ವತ್ತೂ ಅಲ್ಲ. ಈಗಾಗಲೇ ಇದನ್ನು ನಾನು ಸಾಬೀತು ಪಡಿಸಿದ್ದೇನೆ.

‘ಕೇವಲ ನೀರಿನ ಬಗ್ಗೆ ನಾಲ್ಕಕ್ಷರ ಬರೆದ ಮಾತ್ರಕ್ಕೆ ಜಲಪತ್ರಕರ್ತನಾಗುವುದಿಲ್ಲ. ಅದನ್ನು ಬಿಟ್ಟು ಬೇರೇನಾದರೂ ಬರೆದಿದ್ದೀರಾ ? ವೈಚಾರಿಕ ಬರಹಗಳಲ್ಲಿ ನೀವು ಬಲಪಂಥೀಯರಿಗೆ ಯಾವುದೇ ಹಿಡಿತವಿಲ್ಲ. ಅಂಥ ಒಂದು ಬರಹವನ್ನು ಬರೆದು ತೋರಿಸಿ. ಆಮೇಲೆ ಬುದ್ಧಿಜೀವಿಗಳನ್ನು ಟೀಕಿಸಬಹುದು...’ಎಂಬಿತ್ಯಾದಿ ಹಳಹಳಿಸಿದ ನನಗೆ ಕರೆ ಮಾಡಿದ ವ್ಯಕ್ತಿ.

ಸ್ವಾಮಿ, ನಾನು ಬಲಪಂಥೀಯನೂ ಅಲ್ಲ, ಎಡಪಂಥೀಯನೂ ಅಲ್ಲ. ಬರಹಗಳಿಗೆ ಯಾವ ಪಂಥವಿರುತ್ತದೆ? ನನ್ನನ್ನು ನಾನು ಬುದ್ಧಿಜೀವಿಯೆಂದು ಕರೆದುಕೊಳ್ಳುವವನೂ ಅಲ್ಲ. ಅಕ್ಷರ ನನ್ನ ಜೀವನ, ಅದೇ ಬದುಕು. ನೀರು ನನ್ನ ಉಸಿರು. ಬೇರೆಯದ್ದನ್ನು ಬರೆಯಲೂ ನನಗೆ ಗೊತ್ತು. ಬುದ್ಧಿಪೂರ್ವಕ ನನ್ನ ಅಂಕಣವನ್ನು ನೀರಿಗೆ ಮೀಸಲಿಟ್ಟವನು ನಾನು. ಅದಕ್ಕಾಗಿ ಕಳೆದ ಹತ್ತು ವರ್ಷ ದುಡಿದಿದ್ದೇನೆ. ಇದು ನನ್ನ ಓದುಗರೆಲ್ಲರಿಗೂ ಗೊತ್ತು. ಇದರಿಂದ ಹೊರತಾಗಿ ನನ್ನ ಸಾಮರ್ಥ್ಯ ಏನೆಂಬುದನ್ನು ಒಂದು ‘ಲವಲವಿಕೆ’ಯಿಂದ ಸಾಬೀತುಪಡಿಸಿದ್ದೇನೆ. ಎಲ್ಲ ರೀತಿಯ ಬರಹಗಳೂ ನನ್ನಿಂದ ಸಾಧ್ಯವಿದೆ. ವ್ವೆವ್ವೆವ್ವೆ..ಶೈಲಿಯನ್ನು ಈಗಾಗಲೇ ಈ ಬ್ಲಾಗ್‌ನಲ್ಲೇ ನೋಡಿದ್ದೀರಿ. ಇನ್ನು ಬುದ್ಧಿಜೀವಿಗಳ ಶೈಲಿ (ಹಾಗೊಂದು ಶೈಲಿ ಕನ್ನಡ ಸಾರಸ್ವತದಲ್ಲಿದೆಯೇ?)ಯಲ್ಲೂ ಕಡಿಮೆ ಏನಿಲ್ಲ. ಕೇವಲ ಶಬ್ದಾಡಂಬರವೇ ಸಾಹಿತ್ಯವೆಂದಾದರೇ ಅದೇನೂ ಬ್ರಹ್ಮವಿದ್ಯೆಯಲ್ಲ. ಅದರಿಂದ ಬರಗಾರ ತನ್ನ ದೊಡ್ಡಸ್ತಿಕೆ ಮೆರೆಯಬಹದು. ಆದರೆ ಓದುಗನ ಮನಸ್ಸು ಬಳುತ್ತದೆ. ವಿಷಯವನ್ನು ನೇರವಾಗಿ, ಸರಳವಾಗಿ ಹೇಳುವವನೇ ನನ್ನ ದೃಷ್ಟಿಯಲ್ಲಿ ಉತ್ತಮ ಬರಹಗಾರ. ಆದರೂ ನರಿ ಕೊಳೆಗೆರೆಯಂಥವನಿಗೆ ಗೊತ್ತಿಲ್ಲದ, ಆತ ಈವರೆಗೆ ಅದರ ಅರ್ಥವನ್ನೇ ಅರಿಯದ ‘ಮಾನವೀಯ ಸಂಬಂಧ‘ಗಳ ಕುರಿತಾದ ಬರಹವನ್ನು ಇಂದು ಪೋಸ್ಟ್ ಮಾಡುತ್ತಿದ್ದೇನೆ. ನನ್ನ ಓದುಗರಲ್ಲಿಯೂ ಕೆಲವರು ಗಂಭೀರ ವೈಚಾರಿಕ ಲೇಖನ ಬರೆಯಿರಿ. ವೃಥಾ ಸಮಯ ವ್ಯರ್ಥ ಮಾಡಬೇಡಿ ಎಂದಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ಈ ಲೇಖನ ನೀಡುತ್ತಿದ್ದೇನೆ.

ಸ್ವಾಮಿ ಬುದ್ಧಿಜೀವಿಗಳೇ(?) ಸಾಮರ್ಥ್ಯವಿದ್ದರೆ ಅದನ್ನು ಓದಿ ಅರಗಿಸಿಕೊಳ್ಳಿ. ಹಾಗೆ ನಡೆದುಕೊಳ್ಳಿ...

ಜಲರಾಶಿಯಲ್ಲೊಂದು ಬಿಂದು...

ಸಂಬಂಧಗಳ ಅವಲೋಕನ ಇಂದಿನ ಕಾಲಘಟ್ಟದಲ್ಲಿ ತೀರಾ ಅನಿವಾರ್ಯವೆಂದುಕೊಳ್ಳುತ್ತೇನೆ. ಸಾಮಾಜಿಕ ಸಂಬಂಧಗಳ ಚರ್ಚೆ ಆತ್ಮಾವಲೋಕನದ ಭಾಗವಾಗಿ ಮಾರ್ಪಟ್ಟಿದೆ. ಈ ಎರಡೂ ಒಂದಕ್ಕೊಂದು ತಳಕು ಹಾಕಿಕೊಂಡಿದೆ. ಆದಿಲ್ಲದಿದ್ದರೆ ಅದು ಅಪೂರ್ಣವಾದೀತು. ವ್ಯಕ್ತಿಯ ವೈಯಕ್ತಿಕ ಚಟುವಟಿಕೆಗಳ ಹಿಂದೆ ಇರಬಹುದಾದ ವಿಘಟನಾಶೀಲ ಮನೋಭಾವವನ್ನು ಅರಿಯುವ ಹಂತದಲ್ಲಿ ಹುಟ್ಟಿದ ಪ್ರeಯಿದು. ಛಿದ್ರೀಕೃತವಾಗಿರುವ ಸಮಾಜ ಜೀವನವೇ ಈ ನಾಗರೀಕತೆಯ ಪ್ರಮುಖ ಲಕ್ಷಣವಾಗಿರುವಾಗ ಅಖಂಡತೆ, ಏಕತೆ ಸಾಧನೆಯೇ ಬಹುದೊಡ್ಡ ಸಾಹಸ.

ಸಮಕಾಲೀನ ಸಮಾಜ ಹತ್ತು ಹಲವು ಸಮಸ್ಯೆಗಳ ಕೂಪದಲ್ಲಿ ತೊಳಲುತ್ತಿರುವಾಗ ಇಂಥದೊಂದು ಅರಿವಿನ ಪ್ರಯತ್ನ ಅಸಂಬದ್ಧವಾಗಲಾರದು ಎಂದುಕೊಳ್ಳುತ್ತೇನೆ. ಸುತ್ತಲೆಲ್ಲ ಹರಿವಿರುವುದು ಜಡತೆಯ ವಿಸ್ತಾರ, ಸೋಲು, ಅಶಾಂತಿಯ ಭಂಡಾರ. ಈ ಸನ್ನಿವೇಶದಲ್ಲಿ ಸಂಬಂಧಗಳ ಮೂಲಭೂತ ಆಶಯವನ್ನು ಎತ್ತಿ ಹಿಡಿಯುವ ಕಾಯಕ ಬರಹಗಾರರ ಆದ್ಯತೆಯೆಂದು ಭಾವಿಸುತ್ತೇನೆ. ಎಂಥ ಕ್ರಾಂತಿಕಾರಿ ಬರಹಗಾರನು ತನ್ನ ಕೈಂಕರ್ಯದ ಅರ್ಥ ಶೋಧನೆಯ ಹಂತದಲ್ಲಿ ಇಂಥದೊಂದು ವಿಘಟನಾ ಸ್ಥಿತಿಯ ಸಮಸ್ಯೆಯನ್ನು ಎದುರಿಸಿಯೇ ಇರುತ್ತಾನೆ. ತನ್ನ ಮಾಂತ್ರಿಕ ಬರಹಗಳ ಮೂಲಕ ತನ್ನ ಕಾಯಕಕ್ಕೆ ನ್ಯಾಯಬದ್ಧತೆ ಕಂಡುಕೊಳ್ಳುವ ಮಾರ್ಗವಾಗಿ ಸಮಾಜ ಸಂಬಂಧಗಳ ಬಗ್ಗೆ ಲೇಖಕ ವಿಮರ್ಶೆಗಿಳಿಯಲೇಬೇಕು. ಸುತ್ತಲಿನ ಕ್ರೌರ್ಯ, ಹಿಂಸೆಗಳ ಮಲಿನವನ್ನು ಸೌಹಾರ್ದಮಯ ಬರಹಗಳ ಮೂಲಕ ತೊಳೆಯಲು ಯತ್ನಿಸದಿದ್ದರೆ ಆತ ಸಾರ್ಥಕ್ಯ ಕಾಣಲಾರ. ಅಸಹನೀಯ ಸ್ಥಿತಿಯೊಳಗೆ ಮುಳುಗಿಯೇ ಅದರ ವಿರುದ್ಧ ಈಜಿ ಸಾಹಸ ತೋರಲಾಗದಿದ್ದರೂ, ತಾನು ಮುಳುಗಿರುವುದು ಎಂಥ ಕಲ್ಮಶ ಸಾಗರದಲ್ಲೆಂಬುದನ್ನು ಆತ ಅಭಿವ್ಯಕ್ತಿಸಬಲ್ಲ.

ಈಗಿನ ಜಾಗತಿಕ ಜೀವನ ವಲಯದಲ್ಲಿ ಸಂಬಂಧಗಳ ವಿಮರ್ಶೆ ತುರ್ತು ಅಗತ್ಯವೆಂದು ಭಾವಿಸುತ್ತೇನೆ. ಪ್ರಾಯಶಃ ಇದು ಒಟ್ಟಾರೆ ಜೀವ ವಲಯಕ್ಕೇ ಸಂಬಂಸಿದ ಪ್ರಶ್ನೆ. ಜೀವನ ವ್ಯವಸ್ಥೆಯನ್ನು ಅರ್ಥೈಸುವಲ್ಲಿ ಅಥವಾ ವಿಮರ್ಶಿಸುವಲ್ಲಿ ಈ ಸಂಬಂಧಗಳ ಸ್ವರೂಪಕ್ಕೆ ಬಹುಮುಖ್ಯ ಸ್ಥಾನವಿದೆ. ಇದು ಅರ್ಥವಾಗಬೇಕಾದಲ್ಲಿ ನಮ್ಮ ನಾಗರೀಕತೆ ಬೆಳೆದು ಬಂದ ಬಗೆಗಿನ ಸಮಗ್ರ ಕಲ್ಪನೆಯೊಂದು ಅಗತ್ಯ. ನಾಗರಿಕತೆಯ ಹಿನ್ನೋಟದಲ್ಲಿ ನಮಗೆ ಸಾಮರಸ್ಯವೊಂದೇ ಅಲ್ಲ, ಹಿಂಸೆ, ಯುದ್ಧ, ಸಂಘರ್ಷಗಳ ಪುಟಗಳೂ ಕಂಡುಬರುತ್ತವೆ. ಹೀಗಾಗಿ ಸಮುದಾಯದ ಜತೆ ಜತೆಗೆ ಮಾನವನ ಸ್ವಾರ್ಥ, ಆ ಸ್ವಾರ್ಥಕ್ಕಾಗಿ ಹೋರಾಟ, ವಿಘಟನೆಗಳು ಬೆಳೆದುಬಂದಿವೆ. ಇಂದಿನ ವೈಚಾರಿಕ ಯುಗವೂ ಇದರಿಂದ ಹೊರತಲ್ಲ. ಆದರೆ ತೀರಾ ವಿಚಾರಪರತೆಯ ತುತ್ತ ತುದಿಗೆ ನಾವು ಏರಿ ನಿಂತಿದ್ದೇವೆಂದುಕೊಂಡಾಗಲೇ ಮನುಷ್ಯ ಸಹಜ ಭಾವನೆಗಳನ್ನು ನಿರ್ಲಕ್ಷಿಸಿದ್ದೇವೆಂಬುದು ದುರಂತ.


ಬಂಡವಾಳಶಾಹಿ ನಾಗರೀಕತೆಯ ಪರಿಕಲ್ಪನೆಯಡಿಯಲ್ಲಿ ಸಮಕಾಲೀನ ಜೀವನ ಕ್ರಮದಲ್ಲಿ ವೈಯಕ್ತಿಕ ಬದುಕಿಗಷ್ಟೇ ಪ್ರಾಧಾನ್ಯ ನೀಡುವುದರೊಂದಿಗೆ ಅದೇ ಬದುಕು ಎಂದುಕೊಂಡು ಬಿಟ್ಟಿದ್ದೇವೆ. ಇಂಥ ನಿರ್ಣಯದ ಮಾನದಂಡ ಸರ್ವಸಮಸ್ತ ಸಮಾಜಕ್ಕೂ ಹಬ್ಬಿಬಿಟ್ಟಿದೆ. ಸಮಾಜದ ಇಂಥ ‘ವಿಚಾರಪರ’ ನಿಲುವು ತಂತ್ರeನದ ಬೆಳವಣಿಗೆಯೊಂದಿಗೆ ಬೆಳೆದು ಬಂದುಬಿಟ್ಟಿದೆ. ಪಾರಂಪರಿಕ eನ ವಲಯಗಳು, ಭಾವನಾ ಲಹರಿಗಳ ಮೇಲೆ ಸೊಲ್ಲೆತ್ತಲಾಗದಂಥ ಆಕ್ರಮಣವನ್ನದು ನಡೆಸಿಬಿಟ್ಟಿದೆ. ಇದರ ಫಲವಾಗಿ ಅಸಹನೆ, ಕ್ರೌರ್ಯಗಳು ತಮ್ಮ ದಾರ್ಷ್ಟ್ರ ತೋರುತ್ತಿವೆ. ಆದ್ದರಿಂದಲೇ ಏಕರೂಪಿ ಜೀವನ ಕ್ರಮದಲ್ಲಿ ವಿಶಿಷ್ಟತೆಯೆಂಬುದು ಮರೆಯಾಗಿ ಬಿಟ್ಟಿದೆ.
ಇಂಥ ಸಂಕೀರ್ಣತೆಯಲ್ಲಿ ಸಂಬಂಧಗಳ ಪುನರ್ಸ್ಥಾಪನೆಯೆಂಬುದು ಮತ್ತಷ್ಟು ಜಟಿಲವೂ, ಅರ್ಥಹೀನವೂ ಅನಿಸಿಕೊಳ್ಳುತ್ತಿದೆ. ಇದರ ಅರಿವಾಗಬೇಕಾದಲ್ಲಿ ತಾತ್ವಿಕವಾಗಿ ಮಾನವೀಯ ಇತಿಹಾಸದ ಕುರಿತು ಚಿಂತನೆ ನಡೆಸಬೇಕಿದೆ. ಹಿಂಸೆ, ಅಸಹನೆ, ಸ್ವಾರ್ಥವೆಂಬುದು ಸಾಂಸ್ಥಿಕ ಸ್ವರೂಪ ಪಡೆದಿರುವಾಗ ಭಾವನೆ ಎಂಬುದು ಕನಸು, ಪ್ಯಾಂಟಸಿಗಳ ಲೋಕವಾಗಿ ತೋರುವುದರಲ್ಲಿ ತಪ್ಪೇನಿಲ್ಲ. ಇಂಥ ಸ್ಥಿತಿಯ ಪರಿವರ್ತನೆ ಸಣ್ಣ ಮಾತಲ್ಲ. ಹೊಸ ಸಮಾಜವೊಂದರ ನಿರ್ಮಾಣಕ್ಕೆ ಅಂಥದೇ ಕಸುವು ತುಂಬಿದ ಕ್ರಾಂತಿ, ಚಳವಳಿಯೊಂದರ ಅಗತ್ಯವಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಮಾನವ ಸಹಜ ಪ್ರವೃತ್ತಿಯಲ್ಲಿಯೇ ಈ ಕ್ರಾಂತಿ ಘಟಿಸಬೇಕಿದೆ.


ಪ್ರಕೃತಿಯನ್ನು ಮೀರಿದ eನವಂತ ತಾನೆಂಬ ಮಾನವನ ದುರಹಂಕಾರ ಇದಕ್ಕೆ ಕಾರಣ. ಖಗೋಳ ವಲಯದ ಸಮಸ್ತವನ್ನು ತಡಕಾಡಿ ಇದರ ಹಿಂದಿನ ರಹಸ್ಯ ಭೇದಿಸಬಲ್ಲೆ ಎಂಬ ಮಾನವ ವಲಯದ ಹಮ್ಮು ಹಾಗೂ ಪ್ರಕೃತಿಯಲ್ಲಿನ ಎಲ್ಲವೂ ತನಗಾಗಿಯೇ ಸ್ಪಷ್ಟಿಸಲ್ಪಟ್ಟದ್ದೆಂಬ ಭ್ರಮೆಯಿಂದ ಇಂಥದೊಂದು ‘ವೈಚಾರಿಕ ಮೌಢ್ಯಕ್ಕೆ ನಾವಿಂದು ಒಳಗಾಗುತ್ತಿದ್ದೇವೆ. ಪ್ರಗತಿ ತತ್ವದ ಮೂಲ ಆಶಯವನ್ನೇ ನಾವಿಂದು ಮರೆತುಹೋಗಿದ್ದೇವೆ. ಮಾನವ ಕೇಂದ್ರಿತ ಈ ಜಗದಲ್ಲಿ ಉಳಿದೆಲ್ಲವೂ ಗೌಣವಾಗಿದೆ. ನಾಗರೀಕತೆಯ ಆಂತರಿಕ ಸಾಂಗತ್ಯಕ್ಕೆ ಇಲ್ಲಿ ಅರ್ಥವೇ ಉಳಿದಿಲ್ಲ. ಮಾನವೀಯ ಭಾವತೀವ್ರತೆಯೇ ಮನುಷ್ಯನ ಅನ್ವರ್ಥವೆಂಬುದು ಈ ವ್ಯವಸ್ಥೆಯ ತರ್ಕಕ್ಕೆ ಸಿಲುಕಿ ನಾಶವಾಗಿದೆ. ಯಂತ್ರ ಯುಗದಲ್ಲಿ ಮನುಷ್ಯ ಆತ್ಮಹೀನವಾಗಿ ಬಿಟ್ಟಿದ್ದಾನೆ. ಈ ಬಗ್ಗೆ ಅಲ್ಲಲ್ಲಿ ಕೆಲ ಆತಂಕಗಳು ಧ್ವನಿಸಿದೆಯಾದರೂ ಜಾತ್ರೆಯ ಗದ್ದಲದೆಡೆಗೆ ದಾಟುವ ಪ್ರಯತ್ನ ಇಣುಕಿದ್ದರೂ ಅದು ಭೀಮನೆಗೆತವಾಗಿಲ್ಲ.

ಹೀಗಾಗಿ ಸಂಬಂಧಗಳೆನ್ನುವುದು ಆಧುನಿಕ ಯಾಂತ್ರಿಕ ಲೋಕ ನಡು ಮನೆಯ ಮಾತಾಗಿ ಮಾತ್ರ ಉಳಿದುಕೊಂಡಿದೆ. ಅದೊಂದು ಕನಸು. ‘ಸೌಹಾರ್ದ, ಸೋದರತೆ ಪ್ರೀತಿ, ವಿಶ್ವಾಸಗಳು ಈ ಸಮಾಜ ಬೆಳಗಿನೊಂದಿಗೆ ಮರೆತುಬಿಡುತ್ತಿರುವ ಸ್ವಲ್ಪ ಎಚ್ಚರದಲ್ಲಿ ನಾವಿದನ್ನು ಕೊನೆಪಕ್ಷ ನೆನಪು ಮಾಡಿಕೊಳ್ಳುತ್ತಲೂ ಇಲ್ಲ. ನಾಗರೀಕತೆಯ ಯಂತ್ರಯುಗ ಹತ್ತಿಕ್ಕ ಬಯಸುವುದರಲ್ಲಿ ಮಾನವೀಯ ಸಂಬಂಧಗಳೂ ಒಂದು. ಹಲವು ಸಂವೇದನೆಗಳ ಮೇಲೆ ಬೆಳೆದು ಬಂದ ಸಮಾಜಕ್ಕದು ಈಗ ಬೇಕಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳುವ ಕೆಲವು ಮೆಲುಕುಗಳನ್ನು ಹಂಚಿಕೊಳ್ಳಹೊರಟಿದ್ದೇನೆ. ಸಂಬಂಧಗಳ ಅಪಾರತೆಯ ಎದುರು ಇಂಥ ಪ್ರಯತ್ನಗಳು ಅನುಭವದ ಕೊರತೆಯನ್ನು ಎದುರಿಸುತ್ತವೆ. ವಸ್ತುನಿಷ್ಟ ಚರ್ಚೆಗಿಳಿದಾಗ ಅದರ ಸಂಕೀರ್ಣ, ಸಮಗ್ರತೆಯ ಬಗ್ಗೆ ಭಯ ಸಹಜ. ಪರಂಪರೆಯ ಹಿನ್ನೆಲೆಯಲ್ಲಿ ಸಂಬಂಧಗಳ ಸೌಂದರ್ಯಾನುಭವದಲ್ಲಿ ನನ್ನ ಮಿತಿಯೊಳಗೆ ಹಾಗೆಯೇ ಇಡಲು ಯತ್ನಿಸಿದ್ದೇವೆ. ಬೇರಾವುದೇ ಸಾಹಸ ಯಶಸ್ವಿ ಎನಿಸಲಾರದು. ಸಂಬಂಧಗಳೆಂಬುದೇ ಹಾಗೆ. ಅದು ಅನುಭವ ವಿಚಾರದ ಚೌಕಟ್ಟಿಗೆ ಒಳಗಾದದ್ದು. ಅದರ ವಿಶ್ಲೇಷಣೆ ತೀರಾ ಜಟಿಲ.

ವ್ಯಕ್ತಿಯ ವಿಮರ್ಶೆ ಸುತ್ತಲಿನ ಸಮಾಜದ ವಿಮರ್ಶೆಯೂ ಆಗುತ್ತದಾದ್ದರಿಂದ ಸಾಕಷ್ಟು ಎಚ್ಚರ ಅಗತ್ಯ. ಇಂಥ ಎಚ್ಚರದ ಸಂದರ್ಭದಲ್ಲಿ ಒಟ್ಟಾರೆ ವಿಷಯದ ಸಮಗ್ರತೆ ದೊರಕದಿದ್ದರೆ ಅದು ವೈಯಕ್ತಿಕ ಮಿತಿಯೇ ಹೊರತೂ ವಸ್ತುವಿನದ್ದಲ್ಲ. ಅದು ಗೊತ್ತಿದ್ದೂ ಈ ಪ್ರಯತ್ನಕ್ಕೆ ಕಾರಣ ಒಂದಷ್ಟು ಉಪಯುಕ್ತ ವಾದಿ ಚಿಂತನೆಯ ಅಭಿವ್ಯಕ್ತಿಗೆ ಹಾತೊರೆಯುತ್ತಿರುವುದು.


ತೀರಾ ಸಾವಯವದಾದಂಥ ಇಂಥ ವಸ್ತುಗಳ ಸಾಮಾಜಿಕ ಗ್ರಹಿಕೆ ಹಾಗೂ ಸಮಸ್ಯೆಗಳೆರಡೂ ಪ್ರಖರವಾದದ್ದು. ಯಾವುದೇ ನೆಲೆಯಿಂದ ನೋಡಿದರೂ ಅದು ಮುಗಿಯದ ಜಲರಾಶಿಯೇ. ಆದರೆ ಪ್ರಾತಿನಿಕ ಪ್ರಸ್ತಾಪಗಳು ಪ್ರಮುಖ ಸಂಬಂಧಗಳ ಜಾಡನ್ನು ಗುರುತಿಸಿಯಾವು ಎಂಬುದು ನನ್ನ ವಿಶ್ವಾಸ.

Thursday, January 27, 2011

ಮರುಗಿದರೆ ನಿಮ್ಮ ಮಾನಸಿಕ ಸ್ಥಿತಿ ಕದಡಿಬಿಟ್ಟಾನು, ಎಚ್ಚರ !

ಪ್ಪಿಕೊಳ್ಳುತ್ತೇನೆ. ನಮ್ಮ ಗುರಿ ಯಾವತ್ತೂ ವೈರಿಗಳ ವಿರುದ್ಧವೇ ಇರಬೇಕು. ನಾವು ಮಾಡುವ ದಾಳಿ ನೇರವಾಗಿ ಅವರನ್ನಷ್ಟೇ ಹಳಿಯಬೇಕೇ ವಿನಾ ಅವರ ಹೆಂಡತಿ ಮಕ್ಕಳು, ಸಂಬಂಗಳು, ಸ್ನೇಹಿತರು ಅವಲಂಬಿತರು ಇತ್ಯಾದಿ ಮುಗ್ಧರು ನಮ್ಮ ಅಸ್ತ್ರ ಪ್ರಯೋಗದಿಂದ ಘಾಸಿಗೊಳ್ಳಬಾರದು. ಯಾರ‍್ಯಾರೋ ಕೀಳು ಮಟ್ಟಕ್ಕೆ ಇಳಿಯುತ್ತಾರೆಂದ ಮಾತ್ರಕ್ಕೆ ನಾನು-ನನ್ನಂಥವರು ಆ ಮಟ್ಟದ ಬರವಣಿಗೆಗೆ ಇಳಿಯಬಾರದು. ಅದರಿಂದ ನಮ್ಮ ಆತ್ಮ ಗೌರವಕ್ಕೆ ಕುಂದುಂಟಾಗುತ್ತದೆ. ನನ್ನಂಥವರ ವ್ಯಕ್ತಿತ್ವದ ಮೌಲ್ಯ ಕಳೆದು ಹೋಗುತ್ತದೆ. ಅಂಥದ್ದೊಂದು ಪ್ರಜ್ಞೆ ನನ್ನಲ್ಲೂ ಇದೆ.


ಇದೇ ಸಂದರ್ಭದಲ್ಲಿ ಇಂಗ್ಲಿಷ್‌ನ ಹಳೆಯ ಗಾದೆಯೊಂದನ್ನು ನೆನಪಿಸಿಕೊಳ್ಳುತ್ತೇನೆ. ಯುದ್ಧ ಮತ್ತು ಪ್ರೀತಿಯಲ್ಲಿ ಯಾವುದೂ ತಪ್ಪಲ್ಲ ಎಂದಿದೆ ಆ ಮಾತು. ಪತ್ರಿಕೋದ್ಯಮದ ಹಿನ್ನೆಲೆಯಲ್ಲಿ ಇದೂ ಒಂದು ರೀತಿಯಲ್ಲಿ ಯುದ್ಧವೆಂದೇ ನಾನು ಪರಿಭಾವಿಸಿದ್ದೇನೆ. ಸಮಾಜದ ಕೆಳವರ್ಗದ, ಶೋಷಿತರ ಪರವೆಂಬ ಮುಖವಾಡ ಹೊತ್ತವರು ಪತ್ರಿಕೋದ್ಯಮದ ಹೆಸರಿನಲ್ಲಿ ನಡೆಸುತ್ತಿರುವ ದೌರ್ಜನ್ಯ, ಅನ್ಯಾಯ, ಅತ್ಯಾಚಾರ, ಅಕ್ರಮಗಳಿಗೆ ಲೆಕ್ಕ ಉಂಟೇ ? ಗೆರಿಲ್ಲಾ ಮಾದರಿಯ ಯುದ್ಧದಲ್ಲಿ ತೊಡಗಿರುವ ‘ನೀಲಿ ಪತ್ರಕರ್ತರು’ ಕಳೆದರೆಡು ದಶಕಗಳಲ್ಲಿ ಮಾಡಿದ ತೇಜೋವಧೆಗಳು, ವ್ಯಕ್ತಿತ್ವ ಹರಣಕ್ಕೆ ಮಿತಿ ಎಂಬುದು ಇದೆಯೇ. ಕನ್ನಡ ಓದುಗ ದೊರೆಗೆ ಇದರ ಅರಿವಿಲ್ಲದೇ ಇದೆಯೇ ? ಹೀಗಿದ್ದೂ, ಇಂಥ ಹೊಲಸನ್ನು ತುಂಬಿಯೇ ದಿನದಿಂದ ದಿನಕ್ಕೆ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಂಡು, ಇದೇ ನೈಜ ಪತ್ರಿಕೋದ್ಯಮ ಎಂಬಂತೆ ಬಿಂಬಿಸಿಕೊಂಡು ಮೆರೆದಾಡಿದ್ದು-ಮೆರೆದಾಡುತ್ತಿರುವುದು ಇಂದಿಗೂ ಪ್ರಶ್ನಾರ್ಹವಲ್ಲವೇ ?
ಸಮಾಜದ ಎಲ್ಲರ ನೈತಿಕತೆಯನ್ನು ಪ್ರಶ್ನಿಸುವ, ಮಠ-ಮಂದಿರಗಳೆನ್ನದೇ ಎಲ್ಲರನ್ನೂ ದೂಷಿಸುವ, ತನ್ನನ್ನು ಉಳಿದು ಬೇರೆಲ್ಲರೂ ಭ್ರಷ್ಟರೆಂದು ಹೇಳಿಕೊಳ್ಳುವ ಸೋಗಲಾಡಿತನಕ್ಕೆ ಏನೆಂದು ಹೆಸರು ಕೊಡುತ್ತೀರಿ ? ನೈತಿಕ ಅಧಃಪನವನ್ನೂ ಸುಂದರ, ಅತಿ ರಂಜಿತ ವಾಕ್ಯಗಳ ಮೂಲಕ ಸಮರ್ಥಿಸಿಕೊಂಡು ಬಿಟ್ಟರೆ ಕನ್ನಡಿಗ ಅದನ್ನು ಒಪ್ಪಿಕೊಂಡು ಬಿಡುತ್ತಾನೆಯೇ ? ಟ್ಯಾಬ್ಲಾಯ್ಡ್ ಗಾತ್ರದ ಪತ್ರಿಕೆಯೊಂದನ್ನು ಕೈಯಲ್ಲಿಟ್ಟುಕೊಂಡು ಬಿಟ್ಟರೆ ಏನನ್ನು ಬೇಕಾದರೂ ಮಾಡಿ ಜಯಿಸಿಕೊಂಡುಬಿಡಬಹುದು ಎಂಬ ಧೋರಣೆಯ ಬುಡಕ್ಕೇ ಒಮ್ಮೆ ಕೊಡಲಿ ಏಟು ಹಾಕಬೇಕಾದ ಅಗತ್ಯ ಇಲ್ಲವೇ ?


ಸ್ವಾಮೀ, ಧರ್ಮ ಬೋಧೆಯಷ್ಟು ಸುಲಭದ ಕೆಲಸ ಬೇರಾವುದೂ ಇಲ್ಲ. ಅದು ಯಾರಿಗೂ ಮಾರಾಟವಾಗಿಯೂ ಹೋಗಿಲ್ಲ. ಎಲ್ಲರಿಗಿಂತ ಮನೋಜ್ಞವಾಗಿ ಧರ್ಮಬೋಧೆ ಮಾಡಲು ನಮ್ಮಿಂದಲೂ ಸಾಧ್ಯ. ಆದರೆ ಪತ್ರಿಕಾ ಧರ್ಮಕ್ಕೆ ಬಂದರೆ ಪತ್ರಕರ್ತನೊಬ್ಬ ಮಾಡುವ ಅನ್ಯಾಯ, ಅಕ್ರಮಗಳನ್ನೂ ನೋಡಿಯೂ ಸಹಿಸಿಕೊಂಡರೆ, ಸುಮ್ಮನಿದ್ದರೆ, ಪ್ರತಿಭಟಿಸದೇ ಹೋದರೆ ಅದರಲ್ಲಿ ನಮ್ಮದೂ ಪಾಲಿದ್ದಂತೆ ಅಲ್ಲವೇ ? ಅವರಿಳಿಯುವ ಮಟ್ಟಕ್ಕೆ ನಾವಿಳಿಯಬೇಕೆಂದೇನೂ ಇಲ್ಲ; ಒಪ್ಪಿಕೊಳೋಣ. ಆದರೆ ಬೆಂಕಿ ಸುಡುತ್ತದೆ ಎಂಬುದರ ಅನುಭಾವಕ್ಕೆ ಸ್ವತಃ ಕೈ ಸುಟ್ಟುಕೊಂಡೇ ನೋಡಬೇಕೇ ಹೊರತೂ ಹಾಗೆಯೇ ಥಿಯರಿಯಿಂದ ಪ್ರಯೋಜನವಿಲ್ಲ. ಇನ್ನೊಬ್ಬರ ಹೆಂಡತಿ ಮಕ್ಕಳನ್ನು ವಿನಾ ಕಾರಣ ಹೀಗಳೆದಾಗ, ಆ ಮೂಲಕ ಯಾರದ್ದೋ ಚಾರಿತ್ರ್ಯವಧೆಗೆ ಮುಂದಾದಾಗ ಯಾವ ಪರಿಣಾಮವಾಗುತ್ತದೆ ಎಂಬುದು ‘ನರಿ ಕೊಳೆಗೆರೆ’ಯಂಥವರಿಗೆ ಗೊತ್ತಾಗುವುದಾದರೂ ಹೇಗೆ ? ಇಂಥ ತೇಜೋವಧೆಯ ಅಕಾರವನ್ನು ಅವರಿಗೆ ಮಾತ್ರ ಕನ್ನಡಿಗರು ಕೊಟ್ಟಿದ್ದಾರೆಯೇ ? ಅದಿಲ್ಲದಿದ್ದರೆ ಪ್ರತಾಪ್ ಸಿಂಹರ ಬಗ್ಗೆ ಬರೆಯುವ ಗೀಳು ಅಂಟಿಸಿಕೊಂಡಿರುವ ಕೊಳೆಗೆರೆಯಂಥವರು ತನ್ನ ಕೈ ಕೆರೆತ ನೀಗಿಸಿಕೊಳ್ಳಲು ಬರಕೊಳ್ಳಲಿ. ಆದರೆ ಪ್ರತಾಪ್ ವಿವಾಹವಾಗಿ ಇನ್ನೂ ವಾರ ಕಳೆಯುವ ಮೊದಲೇ ಆತನ ಹೆಂಡತಿಯ ಬಗ್ಗೆ(ತಾಯಿ, ತಂದೆ, ಸೋದರ, ಸೋದರಿಯರ ಬಗ್ಗೆಯೂ )ವಿನಾಕಾರಣ ತನ್ನ ನೀಲಿ ಪತ್ರಿಕೆಯಲ್ಲಿ ಫೋಟೋ ಸಹಿತ ಬರೆದದ್ದಾದರೂ ಹೇಗೆ ? ಅದೂ ಪ್ರತಾಪ್ ಸೇರಿದಂತೆ ನಾವೆಲ್ಲರೂ ಪತ್ರಿಕೆಗೆ ರಾಜೀನಾಮೆ ನೀಡಿ ನಿಶ್ಯಸ್ತ್ರರಾಗಿದ್ದ ಸಂದರ್ಭ ನೋಡಿ ದಾಳಿಗಿಳಿದದ್ದೂ ಗಂಡಸುತನವೇ ? ಇಷ್ಟು ಸಾಲದೆಂಬಂತೆ ನಮ್ಮೆಲ್ಲರ ಬಾಯಿಗೆ ಬಂದಂತೆ ಕಾರಿಕೊಂಡು ತನ್ನ ವಿಕೃತಿಯನ್ನು ಪ್ರದರ್ಶಿಸಿದ್ದು ಸರಿಯೇ ? ಇದನ್ನು ಕನ್ನಡಿಗರು ಸಹಿಸಿದರಾದರೂ ಹೇಗೆ?

ಇದು ಉದಾಹರಣೆ ಮಾತ್ರ. ಕಳೆದ ಇಪತ್ತು ವರ್ಷಗಳಲ್ಲಿ ಈತನ ವಾರದ ಅಚ್ಚರಿಯೆಂಬ ಹುಚ್ಚುತನದಲ್ಲಿ ಇಂಥ ಸಾವಿರಾರು ಹೆಂಗಸರ, ಮಕ್ಕಳ ತೇಜೋ ವಧೆಯಾಗಿದೆ. ಅದನ್ನು ಲೆಕ್ಕವಿಟ್ಟವರು ಇದ್ದಾರೆಯೇ ? ತಾನು ಬಹು ಸಂಭಾವಿತನೆಂದು ಹೇಳಿಕೊಳ್ಳುವ ಈ ನರಿ ಕೊಳೆಗೆರೆ ಈವರೆಗೆ ಎಷ್ಟು ಮುಗ್ಧ ಹೆಣ್ಣುಮಕ್ಕಳ ಶೀಲಹರಣ ಮಾಡಿದ್ದಾನೆಂಬುದರ ಅರಿವಿದೆಯೇ ? ಅಂದಿನಿಂದ ಇಂದಿನವರೆಗೆ ಅಣ್ಣ, ಅಪ್ಪ, ಗೆಳೆಯ, ಗುರು, ದಿಗ್ದರ್ಶಕ ಹೀಗೆ ಏನೇನೋ ಹೆಸರು ಹೇಳಿಕೊಂಡು ಅದೆಷ್ಟು ಹೆಣ್ಣು ಮಕ್ಕಳನ್ನು ತನ್ನ ಹಾಸಿಗೆಗೆ ಎಳೆದಿದ್ದಾನೆ ಎಂಬುದನ್ನು ಹೇಳಹೊರಟರೆ ಇದಕ್ಕಿಂತಲೂ ಅಸಹ್ಯವಾಗುತ್ತದೆ.


ತನ್ನ ಐವತ್ತನೆಯ ವಯಸ್ಸಿನ ನಂತರ, ಅದೂ ಎರಡು ಮದುವೆಯಾದ ಬಳಿಕ ಈ ಕೊಳೆಗೆರೆ ಮಹಾಶಯ ತನ್ನ ಮಗಳಿಗಿಂತಲೂ ಚಿಕ್ಕ ವಯಸ್ಸಿನ ಹೆಣ್ಣು ಮಗುವೊಬ್ಬಳಿಗೆ ‘ಲವ್ ಲೆಟರ್‘ ಬರೆದಿದ್ದಾನೆ ಎಂಬುದನ್ನು ನಂಬುತ್ತೀರಾ ? ಇವತ್ತಿಗೂ ಆನ್ ಲೈನ್ ಚಾಟಿಂಗ್‌ಗೆ ಇಳಿದು ಅಶ್ಲೀಲವಾಗಿ ಸೆಕ್ಸ್ ವಿಷಯವನ್ನು ಮುಗ್ಧ ಹೆಣ್ಣುಮಕ್ಕಳಿಗೆ ಬೋಸುತ್ತಾನೆ ಎಂಬುದರ ಅರಿವಿದೆಯೇ ? ತೀರಾ ಇತ್ತೀಚಿನ ಘಟನೆ-ಎಂಜಿನಿಯರಿಂಗ್ ಓದುತ್ತಿರುವ ಮಗನಿರುವ ಮಹಿಳೆಯೊಬ್ಬಳ ಮೇಲೆ ವಿನಾಕಾರಣ ಹರಿಹಾಯ್ದು, ಆಕೆ ಮತ್ತು ಆಕೆಯ ತಾಯಿಯನ್ನೂ ಹಾಸಿಗೆಗೆ ಕರೆದು ತನ್ನ ಹೇಸಿಗೆ ಬುದ್ಧಿ ಪ್ರದರ್ಶಿಸಿದ್ದಾನೆ ಎಂಬುದು ಗೊತ್ತೇ ? ಇವೆಲ್ಲಕ್ಕೂ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಸಂದರ್ಭ ಬಂದಾಗ ಅದು ಸೋಟಗೊಳ್ಳುತ್ತದೆ. ಮಾತ್ರವಲ್ಲ ಇವನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಹತ್ತಕ್ಕೂ ಹೆಚ್ಚು ಮಂದಿ ಪತ್ರಿಕೆಯೆದುರು ಸ್ಟೇಟ್‌ಮೆಂಟ್ ಕೊಡಲು ಸಜ್ಜಾಗಿ ನಿಂತಿದ್ದಾರೆ.


ಇಂಥವನ್ನೆಲ್ಲ ಸಹಿಸಿಕೊಂಡು ಸುಮ್ಮನಿರಬೇಕೇ ? ಇಂಥವನ ಬಗ್ಗೆ ಹೇಗೇ ಬರೆದರೂ ನನ್ನ ವ್ಯಕ್ತಿತ್ವಕ್ಕೆ ಖಂಡಿತಾ ಕುಂದುಂಟಾಗುವುದಿಲ್ಲ. ಇದರಿಂದ ನನ್ನ ನೈಜ ಅಭಿಮಾನಿಗಳು ಖಂಡಿತಾ ಮುನಿಸಿಕೊಳ್ಳುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಆತನ ಬಗ್ಗೆ ಬರೆಯವುದಿದ್ದರೆ ಅತ್ಯಂತ ಸೌಜನ್ಯಯುತ ಬರವಣಿಗೆ ಸಾಧ್ಯವೇ ಇಲ್ಲ. ಏಕೆಂದರೆ ಆತ ಈವರೆಗೆ ಮಾಡಿರುವುದೇ ಮೃಗಗಳೂ ಅಸಹ್ಯಪಡುವಂಥಾ ಕೆಲಸಗಳನ್ನು. ಹಾಗಿದ್ದ ಮೇಲೆ ಹೊಲಸನ್ನು ಸುಂದರ ಪದಗಳಲ್ಲಿ ಕಟ್ಟಿಕೊಡುವುದಾದರೂ ಹೇಗೆ; ಹೇಳಿ ಗೆಳೆಯರೇ ?


ಇಂಥ ಮಹಾನುಭಾವ ನನ್ನ ಬಗ್ಗೆ ಬರೆಯುತ್ತಾ ಶ್ರೀ ರಾಮಚಂದ್ರಾಪುರಮಠದ ಗುರುಕುಲದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯವನ್ನು ಮುಚ್ಚಿ ಹಾಕಲು ಯತ್ನಿಸಿದ್ದೇನೆ ಎನ್ನುವ ಅರೋಪ ಮಾಡಿದ್ದಾನೆ. ಯಾವ ಗುರುಕುಲದಲ್ಲಿ ಸ್ವಾಮಿ ಇದು ನಡೆದದ್ದು ? ನೀವು ಅದಕ್ಕೆ ಸಾಕ್ಷಿಯೇ ? ಆ ಗುರುಕುಲದ ಕುಲಪತಿಯಾಗಿದ್ದ ಶ್ರೀ ಜಗದೀಶ್ ಶರ್ಮರನ್ನು ತೀರಾ ಹತ್ತಿರದಿದಂದ ಬಲ್ಲ ವ್ಯಕ್ತಿ ನಾನು. ಭಾರತೀಯ ಗುರುಕುಲ ಪದ್ಧತಿಯನ್ನು ಸಂರಕ್ಷಿಸಲೋಸುಗವೇ ತನ್ನ ಜೀವನವನ್ನು ಮುಡುಪಿಟ್ಟ ಸಜ್ಜನನಾತ. ಅವರು ಮನಸ್ಸು ಮಾಡಿದ್ದರೆ, ಅವರಿಗಿರುವ ಸಂಸ್ಕೃತ ವಿದ್ವತ್‌ಗೆ ಇಂದು ಲಕ್ಷಾಂತರ ರೂ. ಸಂಬಳ ಪಡೆದು ಬಂಗಲೆ, ಕಾರು ಎಂದು ಆರಾಮವಾಗಿರಬಹುದಿತ್ತು. ಅದೆಲ್ಲವನ್ನು ಬಿಟ್ಟು ಹೊಸನಗರದ ಮೂಲೆಯೊಂದರಲ್ಲಿ ಹೋಗಿ ಕುಳಿತು, ಕಳೆದ ಹತ್ತು ವರ್ಷಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಜಗತ್ತೊಂದರ ಸೃಷ್ಟಿ ಮಾಡಿದ್ದಾರೆ. ಅದನ್ನು ಈ ಕೊಳೆಗೆರೆ ಒಮ್ಮೆಯಾದರೂ ಹೋಗಿ ನೋಡಿ ಬಂದಿದ್ದಾನಾ ? ಬುದ್ಧಿಜೀವಿಗಳೆಂದು ಫೋಸು ಕೊಡುತ್ತಾ ಈತ ಬಿಸಾಕುವ ಬಿಸ್ಕೆಟ್‌ಗೆ ಜೊಲ್ಲು ಸುರಿಸುವ ಕೆಲ ಪತ್ರಕರ್ತರು ಬರೆಯುತ್ತಾರೆಂದು ಅದನ್ನೇ ಪ್ರಕಟಿಸುವ ಈತನಿಗೂ ಪತ್ರಿಕಾ ಧರ್ಮವೆಂಬುದು ಉಂಟೇ? ಕೊನೆ ಪಕ್ಷ ಜಗದೀಶ ಶರ್ಮರನ್ನು ಒಮ್ಮೆಯಾದರೂ ಈತ ನೋಡಿದ್ದಾನಾ? ಮಾತನಾಡಿಸಿದ್ದಾನಾ ? ಈ ಬಗ್ಗೆ ಅವರ ಅಭಿಪ್ರಾಯ ಕೇಳಿದ್ದಾನಾ?
ಹೋಗಲಿ, ಶ್ರೀ ಜಗದೀಶ ಶರ್ಮರಿಂದ ಅನ್ಯಾಯವಾಗಿದೆ ಎಂದು ಹೇಳುವ ಹೆಣ್ಣುಮಗಳನ್ನಾಗಲೀ, ಆಕೆಯ ಹೆತ್ತವರನ್ನಾಗಲೀ ಮಾತನಾಡಿಸಿದ್ದಿದೆಯೇ? ಒಂದೊಮ್ಮೆ ಮಾತನಾಡಿಸಿದ್ದರೂ ಆಕೆಯ ಬಗ್ಗೆ ಕೊಳೆಗೆರೆಗೆ ಗೊತ್ತಿರುವದಕ್ಕಿಂತ ಹೆಚ್ಚಿನ ವಿಷಯ ನನಗೆ ಗೊತ್ತಿದೆ. ಹಾಗೆಂದು ಎದೆ ತಟ್ಟಿ ಹೇಳಿಕೊಳ್ಳಬಲ್ಲೆ. ಏಕೆಂದರೆ ಆಕೆ ಸ್ವತಃ ನನಗೆ ಸೋದರ ಸಂಬಂ ಎಂಬುದು ತಿಳಿದಿರಲಿ. ಆ ಬಾಲಕಿಯ ಬಗ್ಗೆ, ಆಕೆಯ ತಂದೆ-ತಾಯಿಯ ಬಗ್ಗೆ ಕೊಳೆಗೆರೆಗಿರುವುದಕ್ಕಿಂತ ಹೆಚ್ಚಿನ ಕಾಳಜಿ, ಪ್ರೀತಿ, ಗೌರವಗಳು ನನಗಿವೆ. ಪರಿಸ್ಥಿತಿಯ ಅನಿವಾರ್ಯತೆಗೆ ಸಿಲುಕಿಯೋ, ಕೆಲವರ ಪಿತೂರಿ, ಷಡ್ಯಂತರಕ್ಕೆ ಒಳಗಾಗಿಯೋ ಅಜ್ಞಾನದಿಂದಲೋ ಇಂಥ ಸುಳಿಯಲ್ಲಿ ಅವರು ಬಿದ್ದಿದ್ದಾರೆ. ಅದಿಲ್ಲದೇ ಅವರಿಗೆ ನಿಜಕ್ಕೂ ಅನ್ಯಾಯವಾಗಿದ್ದರೆ ಅದರ ವಿರುದ್ಧ ಮೊದಲು ಸಿಡಿದೇಳುವ ವ್ಯಕ್ತಿ ನಾನಾಗಿರುತ್ತಿದ್ದೆ. ಈಗಲೂ ಅದೇ ಸತ್ಯವೆಂದು ಶ್ರೀಮಾನ್ ಕೊಳೆಗೆರೆ ಸಾಬೀತು ಪಡಿಸಿದರೆ ಜೀವನದ ಕೊನೆಯವರೆಗೆ ಆತನ ಅಡಿಯಾಳಾಗಿರಲು ಸಿದ್ಧ.


ಅಷ್ಟಕ್ಕೂ, ಅಂಥ ನೈತಿಕತೆ ಆತನಿಗೆ ಅದೆಲ್ಲಿಂದ ಬರಬೇಕು ? ಗುರು, ಗುರುಕುಲ ಇವುಗಳ ಸ್ಥಾನ ಮಹಿಮೆ ಕೊಳೆಗೆರೆಯಂಥವನಿಗೆ ಹೇಗೆ ಅರಿವಿದ್ದೀತು? ತನ್ನಂತೆ ಎಲ್ಲ ಶಿಕ್ಷಕರೂ ಎಂಬ ಸಮಾನ ಭಾವ ಆತನದ್ದಿರಬೇಕು. ಏಕೆಂದರೆ ಆತ ಬೋಧನಾ ವೃತ್ತಿಬಿಟ್ಟಿದ್ದೇ ತನ್ನ ಶಿಷ್ಯಯೊಬ್ಬಳ ಮಾನಭಂಗಕ್ಕೆ ಯತ್ನಿಸಿದ ಬಳಿಕವೇ ಅಲ್ಲವೇ? ಬಳ್ಳಾರಿಯ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕನಾಗಿದ್ದಾಗ ಈತ ಪ್ರವಾಸದ ನೆಪ ಒಡ್ಡಿ ವಿದ್ಯಾರ್ಥಿನಿಯೊಬ್ಬಳ ಮಾನಭಂಗಕ್ಕೆ ಯತ್ನಿಸಿದಾಗ ಇಡೀ ಬಳ್ಳಾರಿ ತಿರುಗಿ ಬಿತ್ತು. ಇದೇ ಅನಂತ್‌ಕುಮಾರ್(ಆಗ ಎಬಿವಿಪಿ ಕಾರ್ಯದರ್ಶಿ) ನೇತೃತ್ವದಲ್ಲಿ ಬಳ್ಳಾರಿ ಬಂದ್ ಸಹ ಆಗಿತ್ತು. ಇನ್ನೂ ತನ್ನ ಪ್ರಾಣ ಉಳಿಯಲಿಕ್ಕಿಲ್ಲ ಎಂದುಕೊಂಡು ಎದ್ದೆನೋ ಬಿದ್ದೆನೋ ಎಂದು ಹುಬ್ಬಳ್ಳಿಗೆ ಓಡಿ ಬಂದದ್ದನ್ನು ಈ ಕೊಳೆಗೆರೆ ತನ್ನ ಖಾಸ್ ಬಾತ್‌ನಲ್ಲಿ ಎಂದಾದರೂ ಬರೆದುಕೊಂಡಿದ್ದಾನೆಯೇ ? ಈತ ಕಾಡಿಸಿ, ಪೀಡಿಸಿ ಮದುವೆಯಾದ್ದದು(ಮೊದಲನೇ) ತನಗಿಂತ ಹನ್ನೊಂದು ವರ್ಷ ಹಿರಿಯವರಾದ ತನ್ನ ಟ್ಯೂಷನ್ ಟೀಚರ್ ಅನ್ನು. ಹಾಗಿದ್ದ ಮೇಲೆ ‘ಗುರು’ ಪದದ ಬಗ್ಗೆ ಈತನಿಗೆ ಗೌರವವಾದರೂ ಹೇಗಿದ್ದೀತು?


ಇಂಥ ಮಹಾನುಭಾವ ಮತ್ತೂ ಈತನ ವರದಿಗಾರರು ಶ್ರೀ ರಾಮಚಂದ್ರಾಪುರಮಠದ ಗುರುಕುಲದ ಬಗ್ಗೆ ಮಾತನಾಡುತ್ತಾರೆ. ಅದರಲ್ಲಿ ಆದ ಅನ್ಯಾಯದ ಬಗ್ಗೆ ವರದಿಗಳು ಪತ್ರಿಕೆಗಳಲ್ಲಿ ಬಾರದಂತೆ ನಾನು ತಡೆದೆ ಎಂಬ ಆರೋಪ ಮಾಡುತ್ತಾನೆ. ಅದು ಸತ್ಯವೆಂದೇ ಅಂದುಕೊಳ್ಳೋಣ. ಅವತ್ತು ನಾನು ವಿಜಯ ಕರ್ನಾಟಕದಲ್ಲಿ ಉದ್ಯೋಗಿಯಾಗಿದ್ದೆ. ಸಂಪಾದಕರ ಸಾಮೀಪ್ಯ ಇತ್ತು ಎಂಬ ಕಾರಣಕ್ಕೆ ಆ ಒಂದು ಪತ್ರಿಕೆಯಲ್ಲಿ ವರದಿಯಾಗದಂತೆ ತಡೆಯಬಹುದಿತ್ತು. ಆದರೆ ಪ್ರಜಾವಾಣಿ, ಕನ್ನಡಪ್ರಭ ಸೇರದಂತೆ ಎಲ್ಲ ಪತ್ರಿಕೆಗಳ ಸಂಪಾದಕರು, ಸುದ್ದಿವಾಹಿನಿಗಳ ಮುಖ್ಯಸ್ಥರು ಕೇವಲ ನನ್ನ ಮಾತಿಗಾಗಿ ಸುದ್ದಿ ಪ್ರಕಟಿಸದೇ ಇರಲು ಕಾರಣ ಉಂಟೇ ? ಹಾಗೊಮ್ಮೆ ಪ್ರಕಟಿಸದೇ ಇದ್ದಾರೆಂದರೆ ಒಂದೋ ಸತ್ಯದ ಪರವಾಗಿರುವ ನನ್ನ ವ್ಯಕ್ತಿತ್ವದ ಅರಿವು ಅವರಿಗಿರಬೇಕು, ಇಲ್ಲವೇ ಆ ಎಲ್ಲ ಪತ್ರಿಕೆಗಳು ಸತ್ಯವನ್ನಷ್ಟೇ ಬರೆಯುವ ವಸ್ತುನಿಷ್ಠ, ವಿಶ್ವಾಸಾರ್ಹ ಮಾಧ್ಯಮಗಳಾಗಿರಬೇಕು. ಇಲ್ಲಿ ಎರಡೂ ಸತ್ಯ. ಮಾತೆತ್ತಿದರೆ ಸತ್ಯಸಂಧನೆಂದುಕೊಳ್ಳುವ ಈ ಕೊಳೆಗೆರೆಗೆ ನಿಜಕ್ಕೂ ಸಾಮರ್ಥ್ಯವಿದ್ದರೆ ಒಂದು ಸುದ್ದಿಯನ್ನು ಕನ್ನಡದ ಎಲ್ಲಾ ಮಾಧ್ಯಮಗಳಲ್ಲೂ ಪ್ರಕಟವಾಗದಂತೆ ತಡೆ ಹಿಡಿಯಲಿ.


ಸಾಧ್ಯವೇ ಇಲ್ಲ, ಏಕೆಂದರೆ ಕನ್ನಡದ ಸಂಪಾದಕರೆಲ್ಲರೂ ವಿವೇಚನಾಶೀಲರೆಂಬುದು ಈಗಾಗಲೇ ಸಾಬೀತಾಗಿದೆ. ಈತನ ಪತ್ರಿಕೆಯನ್ನು ಬಹಿಷ್ಕರಿಸುವ ಮೂಲಕ ಕನ್ನಡಿಗ ಓದುಗರೆಲ್ಲರೂ ವಿವೇಚನಾವಂತರೆಂಬುದಷ್ಟೇ ಸಾಬೀತಾಗಬೇಕಿದೆ. ಅದೂ ಇಷ್ಟರಲ್ಲೇ ಅಗಲಿದೆ.


ಗಿಂಡಿತೀರ್ಥ: ಕೊಳೆಗೇರಿಯಂಥವ ಇಂಥ ವಿಕೃತಿಯೂ ಒಂದು ಮಾನಸಿಕ ಅಸಮತೋಲನದ ಸ್ಥಿತಿ. ಆ ಬಗ್ಗೆ ಮರುಕ ಹುಟ್ಟುತ್ತದೆ. ಹಾಗೆಂದು ಅದಕ್ಕೆ ತಕ್ಷಣವೇ ಚಿಕಿತ್ಸೆ ಕೊಡಿಸದಿದ್ದರೆ ಇಂಥವರು ಇಡೀ ಸಮಾಜದ ಮಾನಸಿಕ ಸ್ಥಿತಿಯನ್ನು ಕದಡಿಬಿಡುತ್ತಾರೆ. ಎಚ್ಚರ !

Saturday, January 22, 2011

ಎಂದೋ ಮರೆತ ಹಾಡು...ಕೊಳೆಗೆರೆ ರಮ್‌ಗಯ್ಯಾ...

‘ಕೊಳೆಗೆರೆ ರಮ್‌ಗಯ್ಯಾ...’

ಹೀಗೊಂದು ಎಂದೂ ಮರೆಯದ ಹಾಡಿನ ಅಪ್ರಭಂಶ ಸ್ವರೂಪವೊಂದು ಕೇಳಿಬರುತ್ತಿತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ.
ಇದೇನಿದು ಹಾಡಿನ ಧಾಟಿ ಅದೇ ಇದೆಯಲ್ಲಾ, ಆದರೆ ಎಲ್ಲೋ ವ್ಯತ್ಯಾಸವಾದಂತೆ ಕಾಣುತ್ತಿದೆ ಅಂದುಕೊಂಡರೆ ಅದರ ಹಿಂದೆಯೇ ಬಿಳಿಹೆಂಡ್ತಿ ಚಿತ್ರದ ‘ರಮ್‌ಗೇನ ಹಳ್ಳಿಯಾಗೆ ರಂಗಾದ ರಮ್‌ಗೆ ಗೌಡ...’ಅಂತ ಮೊದಲನೆ ಹೆಂಡ್ತಿ ಎರಡನೆಯವಳಿಗೆ ಹೇಳಿಕೊಡುತ್ತಾ ನಿಟ್ಟುಸಿರು ಬಿಡುತ್ತಿರುವುದೂ ಅರಿವಿಗೆ ಬಂತು. ಆದರೆ ಇದ್ಯಾವುದರ ಪರಿವೆಯೇ ಇಲ್ಲದ ರಮ್‌ಗಯ್ಯ ಮಾತ್ರ ಬ್ಯಾರಲ್‌ಗಟ್ಟಲೆ ರಮ್ ಅನ್ನು ತನ್ನ ಹಂಡೆ ಹೊಟ್ಟೆಯೊಳಗೆ ಸುರುವಿಕೊಳ್ಳುತ್ತಾ ಹೊಸ ಬಾಟಮ್‌ಐಟಮ್‌ಗಾಗಿ ಆ ಹಿಮಾಚ್ಛಾದಿತ ಬೆಟ್ಟದಲ್ಲೂ ತಡಕಾಡುತ್ತಿದ್ದ. ರಮ್ ಜಾಸ್ತಿ ಆಗಿದ್ದರಿಂದ ಆತನ ಬಾಯಿಂದ ವ್ವೆ...ವ್ವೆ...ವ್ವೆ..ಎಂಬ ಕೀರಲು ಸ್ವರ ನಿರಂತರ ‘ಕೇಳಿ’ ಬರುತ್ತಿತ್ತು.


ಇದೆಲ್ಲಾ ನಮ್ಮಣ್ಣಂದಲ್ಲವಾ ಅಂತ ಗೋರಗೊರ ಊರಿನ ನಾಗನ ಮೂಲಕ ರಮ್‌ಗಯ್ಯ ಕಾಪೀರೈಟ್‌ಗೆ ಅರ್ಜಿ ಗುಜರಾಯಿಸಿಬಿಟ್ಟ. ಅಯ್ಯೋ ಸ್ವಾಮಿ, ಇಲ್ಲಾ ಅಂತ ಹೇಳಿದವರಾರು ? ಅವರ ಹೆಸರಿನಲ್ಲೇ ಆ ಕಾಪಿರೈಟ್ ಇದೆ. ಅದೇನೋ ಮರೆಯದ ಹಾಡಿನ ಗುಂಗಿನಲ್ಲೇ ಇದ್ದುದಕ್ಕೆ ಬೆಳೆಗೆರೆ ಅನ್ನುವಾಗ ಸ್ವಲ್ಪ ಯಡವಟ್ಟಾಗಿ ಕೊಳೆಗೆರೆ ಅಂತಾಗಿ ಹೋಯ್ತು ಅಂತದ್ದಿದ್ದು ಹುಬ್ಬಳ್ಳಿಯ ಕಮರೀಪೇಟೆಯ ಹಂದಿಯೊಂದಕ್ಕೆ ಕೇಳಿಬಿಡಬೇಕೇ? ಅದೂ ಸಹ ಕಾಪೀರೈಟ್ ಪೈಟೋಟಿಗೆ ಇಳಿಯಿತು. ‘ಕೊಳೆಗೆರೆ ಅನ್ನೋದು ನನ್ನ ಹೆಸರಿನ ಭಾಗ. ಅದನ್ನು ನನಗಿಂತ ಉತ್ತಮರಿಗೆ ಇಟ್ಟರೆ ಒಪ್ಪಿಕೊಳ್ಳಬಹುದಿತ್ತು. ಹೋಗೀಹೋಗಿ ನಮ್ಮೂರಿನ ಉಳ್ಳಾಗಡ್ಡಿ ಓಣೀಲಿ ಯಾರ‍್ಯಾರ ಜತೆಗೋ ಬಿದ್ದೆದ್ದು ಗಬ್ಬೆದ್ದು ಹೋಗಿರುವ ವ್ಯಕ್ತಿಗಲ್ಲಾ ಅಂಥ ಹೆಸರನ್ನು ಇಟ್ಟು ನಮ್ಮ ಪಾವಿತ್ರ್ಯವನ್ನು ನಾಶ ಮಾಡಿದ್ದೀರಿ’ ಅಂತ ಹೂಂಕರಿಸಲಾರಭಿಸಿತು.


‘ಓಹೋ, ಸದಾ ಕೊಳಚೆ ಚರಂಡಿಯಲ್ಲೇ ಬಿದ್ದು ಹೊಲಸನ್ನೇ ತಿಂದು ಬದುಕುವ ನಿನಗೂ ಒಂದು ಪಾವಿತ್ರ್ಯ ಅನ್ನುವುದು ಇದೆಯೇ’ ಎಂಬ ಮರು ಪ್ರಶ್ನೆ ಎಸೆದವನು ಶೋಕರಾಮ. ಇದರಿಂದ ಇನ್ನಷ್ಟು ಕೆರಳಿ ಹೋದ ಹಂದಿ ಹೂಂಕರಿಸುತ್ತಾ ‘ಅದು ನಮ್ಮ ಆಹಾರ. ಇಷ್ಟಾದರೂ ನಮ್ಮಲ್ಲಿ ನಿಯತ್ತು ಅಂತ ಇರುತ್ತದೆ. ರಮ್‌ಗಯ್ಯನಂಥವರು ಹೇತದ್ದನ್ನು ನಾವು ತಿನ್ನದೇ ಹೋಗಿದ್ದರೆ ನಾಡು ಇಷ್ಟರಲ್ಲಿ ಇನ್ನಷ್ಟು ಕೊಳೆಗೇರಿಯಾಗುತ್ತಿತ್ತು. ನಾವು ಕಮರೀಪೇಟೆಯಲ್ಲಿ ಇಷ್ಟು ಓಡಾಡಿದರೂ ಎಂದಿಗೂ ಉಳ್ಳಾಗಡ್ಡಿ ಓಣಿಯ ಮನೆ ಬಾಗಿಲುಗಳನ್ನು ತಟ್ಟಲಿಲ್ಲ. ಈ ಮನುಷ್ಯ ಆ ಓಣಿಯಲ್ಲಿ ಗಂಟೆಗೊಬ್ಬ ಹೆಂಗಸರ ಸೆರಗಿನಲ್ಲಿ ಅಡಗಿಕೊಂಡಿರುತ್ತಾನೆ. ಅದು ನಮಗೆ ಗೊತ್ತಾದ ಮೇಲೆ ಕಮರಿಪೇಟೆಗೆ ಬಂದರೂ ಅಪ್ಪಿ ತಪ್ಪಿಯೂ ನಮ್ಮ ತಿಪ್ಪೆಯಲ್ಲಿ ಬೀಳಲು ಅವನಿಗೆ ಅವಕಾಶ ಕೊಡಲಿಲ್ಲ. ಆತ ನಮ್ಮ ವಾಸಸ್ಥಾನವಾದ ತಿಪ್ಪೆಗೆ ಆತ ಬಿದ್ದರೆ ಅದೂ ಅಪವಿತ್ರಗೊಂಡು ಬಿಡುತ್ತದೆ ಗೊತ್ತುಂಟೋ ?’ ಅಂತ ಕೆಂಗಣ್ಣು ಬೀರಿತು.
ಇಷ್ಟಕ್ಕೆ ಸುಮ್ಮನಿದ್ದರೂ ಇರಬಹುದಿತ್ತು. ಆದರೆ ರಮ್ ಮತ್ತಿನಲ್ಲಿದ್ದ ಆತ ಮತ್ತೆ ಪದ್ಮನಾಭನಗರದ ತುಂಬೆಲ್ಲಾ ಕೇಳಿಸುವಂತೆ ಕಿರುಚಾಡಿದ್ದಕ್ಕೆ ನಾಗಮಂಡಲದವರೆಲ್ಲ ಬೆಚ್ಚಿಬಿದ್ದರಂತೆ. ಈ ಬಾರಿ ಅವರಿಂದಲೇ ‘ಕೇಳಿ’ಸಿಬಿಟ್ಟ ರಮ್‌ಗಯ್ಯ. ಇನ್ನಷ್ಟು ಕೋಪ ಉಕ್ಕಿತು ಹಂದಿಗೆ. ಅಂಥಾ ಆವೇಶದಲ್ಲೂ ತಾಳ್ಮೆ ತಂದುಕೊಂಡು ರಮ್‌ಗಯ್ಯನ ಇತಿಹಾಸವನ್ನು ಬಿಚ್ಚಿಟಿತು ಅದು.


ಹೀಗೆ ಒಮ್ಮೆ ಉಳ್ಳಾಗಡ್ಡಿ ಓಣಿಯಲ್ಲಿ ಉರುಳಾಡಿ, ಕಮರೀಪೇಟೆಯಲ್ಲಿ ಕಂಠಮಟ್ಟ ಕುಡಿದ ಆತ ‘ವ್ವೆ...ವ್ವೆ...ವ್ವೆ...ವ್ಯಾಕ್..ವ್ಯಾಕ್’ ಕಾರಿಕೊಳ್ಳುತ್ತಾ ಬರುತ್ತಿದ್ದಾಗ ಆಯ ತಪ್ಪಿ ಕೊಳಚೆ ತುಂಬಿ ಹರಿಯುತ್ತಿದ್ದ ಚರಂಡಿಗೆ ಬಿದ್ದುಬಿಟ್ಟನಂತೆ. ದಡಬಡಿಸಿ ಏಳಬೇಕೆನ್ನುವಾಗಲೇ ಇದೇ ನಮ್ಮ ಕಥಾನಾಯಕ ಹಂದಿ ಇದೆಯಲ್ಲಾ ಅದರ ವಂಶದ ಹೆಣ್ಣುಹಂದಿಯೊಂದಕ್ಕೆ ಈ ವಿಚಾರ ತಿಳಿದುಬಿಟ್ಟಿತಂತೆ. ತಗೋ ಬಿಡಬೇಡ ಅನ್ನುತ್ತಾ ಅದು ರಮ್‌ಗಯ್ಯನನ್ನು ಅಟ್ಟಿಸಿಕೊಂಡು ಹೊರಟಿತು. ಪಕ್ಕಾ ಬಳ್ಳಾರಿಯಿಂದ ಓಡಿ ಬಂದಂತೆಯೇ ಎದ್ದೆನೋಬಿದ್ದೆನೋ ಅನ್ನುತ್ತಾ ಓಟಕಿತ್ತ ಆತ ಮತ್ತೆ ಉಳ್ಳಾಗಡ್ಡಿ ಓಣಿಯ ಕೋಣೆಯೊಂದಕ್ಕೆ ಹೋಗಿ ಬಾಗಿಲು ಹಾಕಿಕೊಂಡುಬಿಟ್ಟನಂತೆ. ಬದುಕಿದೆಯಾ ಬಡಜೀವವೇ ಅನ್ನುತ್ತಾ ನಿಟ್ಟುಸಿರುಬಿಟ್ಟು ಕಣ್ಣು ತೆರೆದರೆ ಅದು ಹೇಗೋ ಹಂದಿಯೂ ಒಳ ನುಗ್ಗಿ ಬಾಗಿಲ ಬಳಿ ನಿಂತುಬಿಟ್ಟಿತ್ತು. ಅಲ್ಲಿಂದ ಮೂರುತಿಂಗಳು ಇಬ್ಬರೂ ಹೊರಬರಲಿಲ್ಲ. ಮೂರನೇ ತಿಂಗಳೂ ಹಂದಿ ನಿಧಾನಕ್ಕೆ ಹೊರಬರುವಾಗ ಅದೂ ಸಹ ಬಸಿರಾಗಿಬಿಟ್ಟಿತ್ತು. ಇದರಿಂದ ಕೋಪಗೊಂಡ ವರಾಹ ವಂಶಸ್ಥರೆಲ್ಲಾ ಆತನನ್ನು ಅಟ್ಟಾಡಿಸಿಕೊಂಡು ಹೊರಟರಂತೆ. ವ್ವೆ..ವ್ವೆ..ವ್ವೆ ಅನ್ನುತ್ತಾ ಕಾಲ್ಕಿತ್ತ ಆತ ಬಂದು ಬಿದ್ದಿದ್ದು ಬೆಂಗಳೂರಿನ ವೃಷಭಾವತಿಗೆ. ಅಲ್ಲಿವರೆಗೂ ಶುದ್ಧವಾಗಿಯೇ ಇದ್ದ ವೃಷಭಾವತಿ ಅವತ್ತೇ ಇಂದಿನ ಸ್ವರೂಪಕ್ಕೆ ತಿರುಗಿಬಿಟ್ಟಿತಂತೆ. ಅಷ್ಟೇ ಅಲ್ಲ ಅವತ್ತು ಅತ್ಯಾಚಾರದ ಭಯದಿಂದ ನಡುಗಿ ಹೋದ ಹಂದಿ ಸಮುದಾಯ ರಾತ್ರೋ ರಾತ್ರಿ ಬೆಂಗಳೂರಿನಿಂದ ಹೊರಟುಬಿಟ್ಟವಂತೆ. ಹೀಗಾಗಿ ಬೆಂಗಳೂರಿನಲ್ಲಿ ಇವತ್ತು ಎಲ್ಲಿ ನೋಡಿದರೂ ಕೊಳಚೆ ಮಿತಿಮೀರಿ ಬೆಳೆಯುತ್ತಿದೆ. ಅವತ್ತಿಂದ ಹಂದಿಗಳು ಮಾತ್ರ ನೋಡಲೂ ಸಿಗುವುದಿಲ್ಲ. ಅವತ್ತೇ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯನ್ನು ಅಸ್ತಿತ್ವಕ್ಕೆ ತರುವುದೂ ಸರಕಾರಕ್ಕೆ ಅನಿವಾರ್ಯವಾಯಿತು ಅಂತ ಕಥೆ ಹೇಳಿ ಮುಗಿಸಿತು ಕೋಪೋದ್ರಿಕ್ತ ಹಂದಿ.


ಅಷ್ಟರಲ್ಲಿ ನಿತ್ಯಾನಂದನಂತೆ ಸಾಧುವೇಷ ತೊಟ್ಟ ಪತ್ರಕರ್ತನೊಬ್ಬ ಪಂಪಮಾರ್ಗದಿಂದ ಓಡಿ ಬಂದು, ‘ಹಾಗಾದರೆ ಕೊಳೆಗೇರೆ ಅನ್ನೋ ಹೆಸರಿನ ಮೇಲೆ ನಮ್ಮಣ್ಣಂಗೆ ಅತ್ಯಂತ ಅಕೃತ ಅಕಾರ ಇದೆ ಅಂತಾಯ್ತು. ಇನ್ನು ಮುಂದೆ ಇದೇ ಹೆಸರಿನಲ್ಲಿ ರಮ್‌ಗಯ್ಯನ ಹೆಸರು ಅಜರಾಮರವಾಗಲಿ’ ಎಂದು ಆಶೀರ್ವದಿಸಿ ಹೊಸಬರಿಗೆ ತಲೆ ಹಿಡಿಯಲು ಸಜ್ಜಾದನಂತೆ. ಇದರಿಂದ ಸಂತೃಪ್ತಗೊಂಡ ಆ ಜೀವ ತನ್ನ ಹೆಸರನ್ನು ‘ನರಿ ಕೊಳೆಗೆರೆ’ ಎಂದು ಬದಲಿಸಿ ಅಫಿಡೆವಿಟ್ ಮಾಡಿಸುವಂತೆ ತನ್ನ ಕಾನೂನು ಸಲಹೆಗಾರ ಸಂಡೆ ಲಾಯರ್‌ನತ್ತ ತಿರುಗಿ ಗುಟುರು ಹಾಕಿತಂತೆ.


ಮತ್ತೆ ಅದೇ ಮರೆಯದ ಹಾಡು ಕೊಳೆಗೆರೆ ರಮ್‌ಗಯ್ಯಾ.... ಎಂಬ ನಿನಾದ ನಿರಾತಂಕವಾಗಿ ಮುಂದುವರಿಯಿತು. ಈ ಬಾರಿ ಹೆಂಡ್ತಿಯರಿಬ್ಬರೂ ಸಹ ಬಿಕ್ಕುತ್ತಾ ಹಾಡು ಮುಂದುವರಿಸಿದ್ದರು.


Friday, January 21, 2011

ಕೊಳಚೆ ನಿರ್ಮಲನೆ ಮಾಡೋಣ ಬನ್ನಿ

ಒಪ್ಪಿಕೊಳ್ಳುತ್ತೇನೆ. ಯಾರ‍್ಯಾರೋ ಏನೇನೋ ಮಾಡುತ್ತಾರೆಂದು ನಾವು ಅಂಥದಕ್ಕೆ ಕೈ ಹಾಕಬಾರದು. ಇಂಥ ಧರ್ಮೋಪದೇಶ ಬಹಳಷ್ಟು ಬಾರಿ ಕೇಳಿದ್ದೇನೆ. ಅದು ಸತ್ಯವೂ ಹೌದು. ನಮ್ಮ ಸ್ಥಾನ ಮಾನವನ್ನು ಮರೆತು ನಾವು ವರ್ತಿಸಿದರೆ ಸರಿ ಇರಲಿಕ್ಕಿಲ್ಲ. ಆದರೆ ‘ನೀಲಿ ಪತ್ರಿಕೆ’ ಗಳಲ್ಲಿ ಒಮ್ಮೆ ಬರೆಸಿಕೊಂಡಾಗ, ಅದೂ ವಿನಾ ಕಾರಣ...ಆಗ ಹತ್ತುವ ಉರಿಯಿದೆಯಲ್ಲಾ ಅದನ್ನು ಅನುಭವಿಸಿದವರೇ ಹೇಳಬೇಕು.


ಬಹಳಷ್ಟು ಮಂದಿ ನನ್ನ ಬ್ಲಾಗಿಗೆ ಇದೇ ದಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಫೋನಾಯಿಸಿ ಬೋಸಿದವರು ಇನ್ನೆಷ್ಟೋ ಮಂದಿ. ಹಾಗೆಂದು ಅವರು ನನ್ನ ಮೇಲಿಟ್ಟಿರುವ ಅಭಿಮಾನ, ಕಾಳಜಿಯ ಬಗ್ಗೆ ಅನುಮಾನವೇ ಇಲ್ಲ. ‘ಕೊಚ್ಚೆಗೇಕೆ ಕಲ್ಲು ಹೊಡೆಯುತ್ತೀರಿ. ಹಾಗೆ ಮಾಡಿದಲ್ಲಿ ಅದನ್ನು ಮತ್ತೆ ನಮ್ಮತ್ತಲೇ ಎರಚಿಕೊಂಡಂತಾಗುತ್ತದೆ’ ಎಂಬ ಉದಾಹರಣೆಯೇ ಎಲ್ಲರ ಬಾಯಲ್ಲಿ.
ಹೌದು ಸ್ವಾಮಿ, ಅದು ಕೊಚ್ಚೆಯೇ. ನನಗೂ ಗೊತ್ತು. ಕೇವಲ ಮನೆಯ ಹಿತ್ತಿಲಿನಲ್ಲಷ್ಟೇ ಹರಿಯುತ್ತಿದ್ದ ಕೊಳಚೆಯನ್ನು ಹೀಗೆ ಹಬ್ಬಲು ಬಿಟ್ಟವರಾರು ? ಅಂದೇ ಅದನ್ನು ಇಂಗಿಸಿಬಿಟ್ಟಿದ್ದರೆ ಹೀಗೆ ಬೆಂಗಳೂರಿನ ದೊಡ್ಡ ಮೋರಿಗಳಲ್ಲೆಲ್ಲಾ ಹಬ್ಬಿ ಪ್ರವಾಹ ಉಕ್ಕಿಸುತ್ತಿತ್ತೇ ? ಇಡೀ ಬೆಂಗಳೂರು ಗಬ್ಬು ನಾರುತ್ತಿದೆ ಸ್ವಾಮಿ ! ಅಷ್ಟೇ ಅಲ್ಲ, ಊರೂರಿನಲ್ಲಿ ಇಂದು ಕೊಳಚೆ ಪ್ರದೇಶಗಳು, ಕೊಳಗೇರಿಗಳು ಮಿತಿ ಮೀರುತ್ತಿವೆ. ಕಳೆದು ಹತ್ತು ಹದಿನೈದು ವರ್ಷಗಳಲ್ಲಿ ಪದ್ಮನಾಭನಗರದಿಂದ ಹರಿಯಲು ಆರಂಭವಾದ ಇಂಥ ಕೊಳಚೆ ಇಂದು ನಾಡಿನಾದ್ಯಂತ ವ್ಯಾಪಿಸಿಬಿಟ್ಟಿದೆ.


ನಮ್ಮದೆಲ್ಲವೂ ಇಂಥದ್ದೇ ಧೋರಣೆ. ಉಪದೇಶ ಮಾಡುವುದರಲ್ಲಿ ನಮ್ಮದು ಎತ್ತಿದ ಕೈ. ರಾಷ್ಟ್ರ ಭಕ್ತಿಯಿಂದ ಹಿಡಿದು ಸಮಾಜೋದ್ಧಾರದವರೆಗೆ ಎಲ್ಲರದ್ದೂ ಉತ್ತರಕುಮಾರನ ಪೌರಷವೇ ! ವ್ಯವಸ್ಥೆ ಬಗ್ಗೆ ನಾವು ಭಾಷಣ ಬಿಗಿದಷ್ಟು ಬೇರಾರೂ ಮಾತನಾಡುವುದಿಲ್ಲ. ಇಷ್ಟೆಲ್ಲ ಮಾತನಾಡುವ ಭಾರೀ ಮಾನವ ಸಂಪನ್ಮೂಲ ನಮ್ಮಲ್ಲಿದ್ದರೂ ದೇಶವೇಕೆ ಉದ್ಧಾರವಾಗುತ್ತಿಲ್ಲ ಎಂಬುದಕ್ಕೆ ನಾವೇ ಉತ್ತರಿಸಿಕೊಳ್ಳಬೇಕು. ಕಾರಣ ಬಹಳ ಸರಳ. ನಾವು ಮಾತನಾಡುವವರಷ್ಟೆ. ಅಂದರೆ ಕೆಲಸವನ್ನು ನಾವು ಹೇಳುತ್ತೇವೆ; ಉಪದೇಶ ಕೊಡುತ್ತೇವೆ. ಅದರ ಅನುಷ್ಠಾನದ ಹೊಣೆ ಬೇರೆಯವರದ್ದೂ ಎಂಬ ಧೋರಣೆ ಪ್ರತಿಯೊಬ್ಬರದ್ದೂ. ಹೀಗಾಗಿಯೇ ಪದ್ಮನಾಭನಗರದಲ್ಲಿ ಕುಳಿತವರು ನಿಶ್ಚಿಂತೆಯಾಗಿ ಹಾದರ ಮಾಡುತ್ತಲೇ ಇದ್ದಾರೆ. ಅವರಿಗೂ ಗೊತ್ತು ತಮ್ಮಂಥ ಕೊಳಚೆಯನ್ನು ನಿರ್ಮೂಲನೆ ಮಾಡುವ ಇಚ್ಛಾ ಶಕ್ತಿ ಯಾರಲ್ಲೂ ಇಲ್ಲ ಎಂಬುದು. ಹೀಗಾಗಿ ಅವರಿಂದ ಉದ್ಭವಿಸಿದ ಕೊಳಚೆ ಬೆಳೆಯುತ್ತಲೇ ಇದೆ. ಇವತ್ತು ಒಬ್ಬ ಪ್ರತಾಪನಂಥವನು ಮಾಡಿದ ಗಂಡಸಿನ ಕೆಲಸವನ್ನು ಅವತ್ತೇ ಮಾಡಿದ್ದರೆ ನಾಡಿನಾದ್ಯಂತ ಕೊಳೆಗೇರಿಗಳು ಹಬ್ಬುವುದಾದರೂ ತಪ್ಪುತ್ತಿತ್ತು.


ಗೆಳೆಯರೇ ಇನ್ನಾದರೂ ಒಣ ಉಪದೇಶ ಮಾಡುವ ಸೋಗಲಾಡಿತನ ನಮಗೇಗೆ ? ನಮ್ಮ ಸುತ್ತಮುತ್ತಲನ್ನು ನಾವೇ ಸ್ವಚ್ಛಗೊಳಿಸಿಕೊಳ್ಳಬೇಕು. ಗೆಳೆಯರಾರೋ ಹೇಳಿದ್ದಾರೆ-ಇದರ ಬದಲು ನೀರಿನ ಕೆಲಸವನ್ನೇ ಮುಂದುವರಿಸಿ ಅಂತ. ಖಂಡಿತಾ ನೀರು ನನ್ನ ಪ್ಯಾಷನ್, ಅದೇ ನನ್ನ ಉಸಿರು. ಅದಕ್ಕಾಗಿ ನನ್ನ ಜೀವಿತವನ್ನು ಕೊಟ್ಟಿದ್ದೇನೆ. ನಡುನಡುವೆ ಇಂಥ ಜಲ ಮಾಲಿನ್ಯ ತಪ್ಪಿಸುವ, ತಡೆಯುವ ಕೆಲಸವನ್ನೂ ನಾನೇ ಮಾಡಬೇಕಲ್ಲದೇ ಅದನ್ನಿನ್ನಾರು ಮಾಡಿಯಾರು?


ಸಾಧ್ಯವಾದರೆ ಕೊಚ್ಚೆ ನೀರನ್ನು ಪರಿಷ್ಕರಣೆಗೊಳಿಸಿ ಶುದ್ಧಗೊಳಿಸೋಣ. ಅದಿಲ್ಲದಿದ್ದರೆ ಕೊಳೆಗೇರಿ ನಿರ್ಮೂಲನೆಯನ್ನು ಮಾಡೋಣ. ನಿಜವಾಗಿ ಕಳಕಳಿಯಿದ್ದರೆ ನಮ್ಮ ಜೊತೆ ಕೈ ಜೋಡಿಸಿ. ಇಂಥ ಕೊಳೆಯ ವಿರುದ್ಧ ರಾಜ್ಯಾದ್ಯಂತ ಆಂದೋಲನ ಮಾಡೋಣ. ಎಲ್ಲರೂ ಒಂದಾದರೆ ಜನ ಜಾಗೃತಿ ಕಷ್ಟವೇನಲ್ಲ.


ಮುದ್ರಣ ಮಾಧ್ಯಮಕ್ಕೆ ಹೋಲಿಸಿದರೆ ಅಂತರ್ಜಾಲದಲ್ಲಿ ಓದುಗರು ಕಡಿಮೆ ಎನ್ನುವುದನ್ನು ಒಪ್ಪುತ್ತೇನೆ. ಆದರೆ ಇವತ್ತಿನ ಬೆಳವಣಿಗೆಗಳನ್ನು ಗಮನಿಸಿದಾಗ ಅಂಥ ಸಮೂಹವೂ ಕಡಿಮೆ ಏನಿಲ್ಲ. ಕೇವಲ ಐದು ದಿನದಲ್ಲಿ ‘ಗಿಂಡಿಮಾಣಿಯ’ ಅಭಿಮಾನಿಗಳ ಸಂಖ್ಯೆ ಎರಡು ಸಾವಿರವನ್ನೂ ದಾಟಿದೆ ಎಂದರೆ ನಂಬುತ್ತೀರಾ ? ಆ ನೀಲಿಪತ್ರಿಕೆಯ ಓದುಗರು ಎಷ್ಟಿದ್ದಾರು ? ಆರಂಭವಾದ ಐದನೇ ದಿನಕ್ಕೆ ಆ ಪತ್ರಿಕೆ ಖಂಡಿತಾ ಈ ಸಂಖ್ಯೆಯ ಓದುಗರನ್ನು ಹೊಂದಿದ್ದಿರಲಿಲ್ಲ.


ಎಲ್ಲಕ್ಕಿಂತ ಹೆಚ್ಚಾಗಿ ಒಂದನ್ನು ತಿಳಿದುಕೊಳ್ಳೋಣ ಅಂಥ ಕೊಚ್ಚೆಯನ್ನು ಬೆಳೆಸಿದವರೇ ನಾವು. ಇಂದು ಆತ ಹೀಗೆಲ್ಲಾ ತನ್ನ ‘ಹುಚ್ಚು ಮನಸ್ಸಿನ ಹತ್ತು ಮುಖ’ಗಳನ್ನು ಪ್ರದರ್ಶಿಸುತ್ತಿದ್ದಾನೆಂದರೆ ಅದಕ್ಕೆ ಕಾರಣ ನಾವೇ. ಅಂಥವನ್ನು ನಾವು ಓದಿ ಸುಮ್ಮನಿದ್ದುದರಿಂದಲೇ ಈ ಮಟ್ಟಿಗೆ ಪತ್ರಿಕೆ ಬೆಳೆಯಿತು. ಇವತ್ತೇ ಇಂಥ ಪತ್ರಿಕೆಗಳ ಓದಿಗೆ ಬಹಿಷ್ಕಾರ ಹಾಕೋಣ.


ಇನ್ನು ಕಾನೂನಿನ ಹೋರಾಟದ ಪ್ರಶ್ನೆ. ಆ ವಿಚಾರದಲ್ಲೂ ನಾವು ಸುಮ್ಮನೆ ಕುಳಿತಿಲ್ಲ. ‘ವಿ.ಭಟ್ ಎಂಡ್ ಟೀಮ್’ನಿಂದ ಕಾನೂನು ಸಮರದ ಬ್ರೇಕಿಂಗ್ ನ್ಯೂಸ್ ಹೊರಬೀಳಲಿದೆ. ಅದನ್ನು ಕೇಳಿ ಮತ್ತೆ ವ್ವೆ..ವ್ವೆ..ವ್ವೆ...ಅಂತ ಹೇಳದಿದ್ದರೆ ಆ ದೇವರಾಣೆ. ಇಂಥ ಕಾನೂನು ಹೋರಾಟಕ್ಕೂ ನಿಮ್ಮೆಲ್ಲರ ಬೆಂಬಲ ಬೇಕು. ನಾಡಿನ ಮೂಲೆ ಮೂಲೆಗಳಲ್ಲಿ ಮೊಕದ್ದಮೆಗಳು ದಾಖಲಾಗಬೇಕು. ಅಂಥ ಆಸಕ್ತರು ‘ಬೆಬಾಸಂ’(ಬೆಳೆಗೆರೆ ಬಾತರ ಸಂಘ)ವನ್ನು ಸಂಪರ್ಕಿಸಬಹುದು. ಅಷ್ಟಾದರೆ ಇನ್ನಾದರೂ ನಾಡಿನ ಅದೆಷ್ಟೋ ಮುಗುದೆಯರ ಶೀಲಹರಣ ತಪ್ಪೀತು. ಅಪ್ಪಾ, ಅಣ್ಣನೆಂಬ ಭಾವನೆಯಿಂದ ಬರುವ ಹೆಣ್ಣುಮಕ್ಕಳನ್ನು ಅಮ್ಮನನ್ನಾಗಿಸಿ ಕಳುಹಿಸುವ ರಾಕ್ಷಸೀ ಪ್ರವೃತ್ತಿಗೆ ಕಡಿವಾಣ ಬಿದ್ದೀತು ಎಂಬ ಆಶಯ ನಮ್ಮದು.


ಎಲ್ಲಕ್ಕಿಂತ ಹೆಚ್ಚಾಗಿ ನಮಗೂ ಇಂಥದ್ದೊಂದು ಮಟ್ಟಕ್ಕೆ ಇಳಿಯಲು ಬರುತ್ತದೆ ಎಂಬುದನ್ನು ತೋರಿಸಬೇಕಿತ್ತು. ಬೌದ್ಧಿಕತೆ ಯಾರಿಗೂ ಮಾರಾಟವಾಗಿಲ್ಲ ಎಂಬುದನ್ನು ತೋರಿಸಲೋಸುಗ ‘ವ್ವೆ..ವ್ವೆ..ವ್ವೆ...’ ಮಾದರಿಯ ಬರಹದಲ್ಲೇ ಅವರಿಗೆ ಪೇಮೆಂಟ್ ಬಾಕಿ ತೀರಿಸಲಾಗಿದೆ. ಚೀಟಿ ಹಣ ನುಂಗಿ ಬೆಂಗಳೂರಿಗೆ ಓಡಿ ಬಂದವನೆಂದು ನನ್ನ ಬಗ್ಗೆ ಅಲ್ಲಿ ಬರೆಯಲಾಗಿತ್ತು. ಆದರೆ ನಾನ್ಯಾವತ್ತೂ ಯಾವುದೇ ಬಾಕಿ ಇಟ್ಟುಕೊಳ್ಳುವ ಜಾಯಮಾನದವನಲ್ಲ ಎಂಬುದನ್ನು ತೋರಿಸಲಾದರೂ ಒಂದಷ್ಟು ಅವಕಾಶ ಕೊಡಿ ಪ್ಲೀಸ್...

ಗಿಂಡಿ ತೀರ್ಥ: ‘ಉಚಿತ ಸಲಹೆ’ ಕೊಡಲಷ್ಟೇ ಖುಷಿ. ಅದನ್ನು ತೆಗೆದುಕೊಳ್ಳಲು ಬೇಸರವಾಗುತ್ತದೆ. ಇದು ಇನ್‌ಸ್ಟಂಟ್ ಯುಗ ಸ್ವಾಮಿ, ಇವತ್ತು ಮಾಡಿದ ಪಾಪವನ್ನು ಮುಂದಿನ ಜನ್ಮದಲ್ಲಿ ಅನುಭವಿಸುವ ಪ್ರಶ್ನೆಯೇ ಇಲ್ಲ. ಏನಿದ್ದರೂ ಇವತ್ತಿನ ‘ಕರ್ಮ’ಕ್ಕೆ ಇವತ್ತೇ ಫಲ ಎನ್ನುತ್ತಿದ್ದಾರಂತೆ ಪಂಪ ಮಾರ್ಗದ ‘ಸಾಧು’ ಸಂತರೊಬ್ಬರು. ಬೇಕಿದ್ದರೆ ‘ಕೇಳಿ’ನೋಡಿ.

Wednesday, January 19, 2011

ಯಶೋಮತಿ ಪ್ರಾಪ್ತಿಗಾಗಿ ಲಲಿತಾ ಸಹಸ್ರನಾಮ

‘ಅಸಲಿಗೇ....ಈ ಭಡ್ತಿಗೆ ಬಾಲ ಇದೆಯೋ ಇಲ್ಲವೋ...’

ಪದ್ಮನಾಭನಗರದ ಪತ್ರಿಕಾ ಕಚೇರಿಯಲ್ಲಿ ಕಳೆದವಾರ ಇಂಥದ್ದೊಂದು ಪ್ರಶ್ನೆ, ಕೀರಲು ಸ್ವರದಲ್ಲಿ ಕೇಳಿಬರುತ್ತಿತ್ತಂತೆ. ಅಂದರೆ ‘ಭಡ್ತಿ‘ಯಲ್ಲಿ ಬರುವ ‘ಭ’ ಅಕ್ಷರ ಮಹಾಪ್ರಾಣವೋ, ಅಲ್ಪ ಪ್ರಾಣವೋ ಎಂಬುದು ತಿಳಿಯದೇ ಒದ್ದಾಡುತ್ತಿತ್ತು ಆ ಪ್ರಾಣಿ. ಅದು ನರಿಯೋ, ನಾಯಿಯೋ ಊಳಿಟ್ಟ ಸದ್ದಿರಬಹುದೆಂದು ಮಂದಿ ತಮ್ಮ ಪಾಡಿಗೆ ತಾವು ತಲೆ ಬಗ್ಗಿಸಿ ಕೆಲಸಕ್ಕೆ ತೊಡಗಿದರೂ ಬಿಡದೇ ಅದು ಊಳಿಡುತ್ತಲೇ ಇತ್ತಂತೆ. ಹೀಗಿರುವಾಗ ಆ ದೈತ್ಯ ಪ್ರತಿಭೆ ಕಿರುಚಿದ್ದು ಕೇಳಿ ಕೇವಲ ಆ ಕಚೇರಿಯಲ್ಲಿದ್ದವರಷ್ಟೇ ಅಲ್ಲ, ಪಂಪ ಮಾರ್ಗದಲ್ಲಿರುವ ಪತ್ರಿಕಾ ಕಚೇರಿಯ ಒಂದಷ್ಟು ಮಂದಿಯೂ ದಡಕ್ಕನೆ ಓಡೋಡಿ ಬಂದು ‘ಏನಪ್ಪಣೆ...’ ಎಂಬಂತೆ ಡೊಗ್ಗು ಸಲಾಮ್ ಹೊಡೆದು ನಿಂತರಂತೆ. ಅವರಲ್ಲೇ ಎರಡು ಗುಂಪುಗಳಾಗಿ ಹೋಯಿತು. ಕೆಲವರು ಬಾಲ ಇದೆ ಅಂದರೆ, ಮತ್ತೆ ಕೆಲವರು ಇಲ್ಲ ಅಂದರಂತೆ.

ಹೀಗೆಯೇ ಚರ್ಚೆ ಮುಂದುವರಿಯುತ್ತಿರುವಾಗಲೇ ಇವರ ಗದ್ದಲದಿಂದ ಎಚ್ಚೆತ್ತ ‘ಸಿಂಹದ ಮರಿ’ ಕೋಪದಿಂದ ಒಮ್ಮೆಲೆ ಘರ್ಜಿಸಿ ತನ್ನ ಪ್ರತಾಪ ತೋರಿತು. ಮಲಗಿದ್ದ ಸಿಂಹವನ್ನು ಕೆಣಕಿದ ತಪ್ಪಿನ ಅರಿವಾಗಿ ಅಲ್ಲಿದ್ದವರೆಲ್ಲರ ಚಡ್ಡಿಯೂ ಒದ್ದೆಯಾಗಿತ್ತಂತೆ. ಆ ಘರ್ಜನೆಗೆ ದೈತ್ಯ ಪ್ರತಿಭೆಯ ರವಿಮೊಗದಲ್ಲಿ ಅದೆಷ್ಟು ಬೆವರಿಳಿದು ಹೋಗಿತ್ತೆಂದರೆ, ಬೆಂಗಳೂರಿನ ದೊಡ್ಡ ಮೋರಿಯಲ್ಲಿ ಅದೇ ಭೋರ್ಗರೆದು ಹರಿಯತೊಡಗಿ, ವೃಷಾಭಾವತಿ ಮೊದಲಿಗಿಂತಲೂ ದುರ್ವಾಸನೆ ಬೀರ ತೊಡಗಿತು. ಇದೆಂಥಾ ವಾಸನೆ ಎಂದು ಅರಿಯದೇ ಯಾರಿಗಾದರೂ ನಿವೇದಿಸಿಕೊಳ್ಳೋಣ ಎಂದು ಉಷಾಕಾಲದಲ್ಲೇ ಎದ್ದು ಹೊರಬಂದು ನೋಡಿದರೆ ಕೋರ್ಟಿನಿಂದ ಬಂದ ವ್ಯಕ್ತಿಯೊಬ್ಬರು ಅದೇನೋ ಇಂಜಂಕ್ಷನ್ ಚುಚ್ಚಲು ಸಿದ್ಧವಾಗಿ ನಿಂತಿದ್ದರಂತೆ. ಅದನ್ನು ಚುಚ್ಚಿಸಿಕೊಳ್ಳಲೋ ಬೇಡವೋ ಎಂಬುದು ತಿಳಿಯದೇ ಒಳಗೋಡಿದರೆ ದೈತ್ಯ ಪ್ರತಿಭೆಯ ಮುಖದಲ್ಲಿ ಅದ್ಯಾವ ಭಾವನೆ ಇದೆಯೆಂಬುದನ್ನೇ ಗುರುತಿಸಲಾಗದ ಸ್ಥಿತಿ. ಚೇತನವನ್ನೇ ಕಳಕೊಂಡ ಸ್ಥಿತಿಯಲ್ಲಿ ಚಿಕ್ಕದ್ದೊಂದು ಮಾಂಸದ ಪರ್ವತದಂತೆ ವ್ವೆ,ವ್ವೆ,ವ್ವೆ...ಅನ್ನುತ್ತಾ ಬಿದ್ದುಕೊಂಡಿತ್ತು ಆ ದೇಹ.

ಎದ್ದೆನೋ ಬಿದ್ದೆನೋ ಎಂಬಂತೆ ಊರ ತುಂಬೆಲ್ಲ ಇದ್ದ ಶುಶ್ರೂಕಿಯರು ಓಡಿ ಬಂದು ಗಾಳಿ ಬೀಸಿ, ನೀರು ಕುಡಿಸಿ ಶೈತ್ಯೋಪಚಾರ ಮಾಡಿದ್ದೇ ಮಾಡಿದ್ದು. ಆದರೆ ಅದರಿಂದ ಯಾವುದೇ ಪ್ರಯೋಜನವೂ ಆಗದಿದ್ದಾಗ ಇನ್ನೇನು ಮಾಡಲೂ ದಿಕ್ಕು ತೋಚದೇ ಆ ಆ ಹಿಮವಂತನಾದ ಈಶ್ವರನನ್ನೇ ಪ್ರಾರ್ಥಿಸುತ್ತಾ ಕುಳಿತು ಬಿಟ್ಟರಂತೆ. ಹಿನ್ನೆಲೆಯಲ್ಲಿ ಜೋಗಿಯರ ಪದವೂ ಕೇಳಿಬರುತ್ತಿತ್ತು. ಅಷ್ಟರಲ್ಲಿ ಪ್ರಕಾಶಮಾನವಾದ ಬೆಳಕೊಂದು ಪ್ರಜ್ವಲಿಸಿ ವಿಠ್ಠಲ ಮಲ್ಯ ರಸ್ತೆಯಲ್ಲಿ ಅನುಗ್ರಹಿತವಾದ ವಿಚಿತ್ರವಾದ ದ್ರವವೊಂದನ್ನು ದೇಹದ ಮುಂದೆ ಹಿಡಿಯಿತು. ಅದೇನು ಅಚ್ಚರಿಯೋ, ಪವಾಡವೋ, ಕೈಗುಣವೋ ಕ್ಷಣದಲ್ಲಿ ಅದು ಚೇತರಿಸಿಕೊಂಡು ‘ಅಣ್ಣಾ...’ ಎಂದು ಕೀರಲು ಸ್ವರದಲ್ಲಿ ಮತ್ತೆ ಉದ್ಘರಿಸಿತು. ಹತ್ತಿರಹೋಗಿ ಕಿವಿಗೊಟ್ಟು ಕೇಳಿದರೆ, ಗಿಂಡಿ. ಗಿಂಡಿ... ಎನ್ನುವ ಪ್ರಲಾಪ ಕೇಳಿಬಂತು. ಓಹೋ...ನೀರು ಕೇಳುತ್ತಿರಬೇಕು ಎಂದುಕೊಂಡು ಗಿಂಡಿಯಲ್ಲಿನ ತೀರ್ಥ ತಂದು ಬಾಯಿಗೆ ಬಗ್ಗಿಸಲು ಹೊರಟರು ಮಂದಿಮಾಗದರು. ಅದನ್ನು ಒಂದೇ ಏಟಿಗೆ ತಳ್ಳಿ ಹಾಕಿದ ಆ ದೈತ್ಯ ದೇಹ, ಎದುರಿಗಿದ್ದ ಇಡೀ ಬ್ಯಾರೆಲ್ ಅನ್ನೇ ಸುರುವಿಕೊಂಡು ಮತ್ತೆ ವ್ವೆ,ವ್ವೆ,ವ್ವೆ...ಅನ್ನತೊಡಗಬೇಕೇ ?

ಕರ್ಣ ಕರ್ಕಶವಾದ ಆ ಧ್ವನಿಯನ್ನು ಕೇಳಿ ಅಲ್ಲಿದ್ದ ಎಲ್ಲರೂ ಮುಖ ಕಿವುಚಿದರೆ ಈ ದೇಹ ಮಾತ್ರ ಏದುಸಿರು ಬಿಡುತ್ತಾ ಮುಂದೇನು ಮಾಡಬೇಕೆಂಬುದನ್ನೇ ಅರಿಯದೇ ‘ವಿಶ್ವರೂಪ ದರ್ಶನವನ್ನು ಮಾಡಿಸಿಯೇ ತೀರುತ್ತೇನೆ. ಈ ಸತ್ಯಸಂದನಿಂದ ಎಲ್ಲವೂ ಇತಿಹಾಸದಲ್ಲಿ ದಾಖಲಾಗಿಯೇ ಆಗುತ್ತದೆ’ ಎನ್ನುತ್ತಾ ಪೆನ್ನನ್ನೆತ್ತಿಕೊಂಡು ಅದಕ್ಕೆ ಶಾಯಿ ತುಂಬಿಸುವ ಬದಲಿಗೆ ಬ್ಯಾರೆಲ್‌ನಲ್ಲಿದ್ದುದನ್ನೇ ಅದ್ದಿ ಅದ್ದಿ ಬರೆಯ ತೊಡಗಿದ್ದು ಮಾತ್ರ ಸತ್ಯ.

ಹಾಗೆ ಗೀಚಿ ಬೀಚಿ ಬಿಟ್ಟಿದ್ದೆಲ್ಲವೂ ಕಪ್ಪು ಸುಂದರಿಯ ಬಾಟಮ್ ಐಟಮ್ಮುಗಳ ಸಾಫ್ಟ್ ಕಾರ್ನರ್‌ಗಳಲ್ಲಿ ಸೇರಿಕೊಳ್ಳಲುತೊಡಗಿದಂತೆ ಆ ದೇಹದ ಮುಖದಲ್ಲಿ ವ್ಯಂಗ್ಯ, ವಿಕೃತವಾದ ನಗೆಯೊಂದು ಮೂಡಲಾರಂಭಿಸಿತು. ಅದನ್ನು ನೋಡಿ ಅಲ್ಲಿದ್ದವರೆಲ್ಲ ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದರೆ ಜೆಪಿ ನಗರದ ಫ್ಲ್ಯಾಟ್ ಒಂದರಲ್ಲಿ ಇನ್ನಾದರೂ ಈ ದೇಹಕ್ಕೆ ಸನ್ಮತಿ, ಯಶೋಮತಿಗಳು ದೊರಕಲೆಂದು ಲಲಿತಾ ಸಹಸ್ರನಾಮಾರ್ಚನೆ, ಪ್ರಾರ್ಥನೆ ಇತ್ಯಾದಿ ನಡೆಯುತ್ತಿತ್ತು.

ಅಷ್ಟರಲ್ಲಿ ಗಿಂಡಿಹಿಡಿದ ಮಾಣಿಯೊಬ್ಬ ಭಡ್ತಿಗೆ ಬಾಲ ಇದೆ, ಆದರೆ ಎಲ್ಲ ಸಂದರ್ಭದಲ್ಲೂ ಆತ ಬಾಲ ಬಿಚ್ಚುವುದಿಲ್ಲ ಎಂದು ಕೂಗಿ ಹೇಳಿದ್ದು ಕಿವಿಗಪ್ಪಳಿಸಿಬಿಡಬೇಕೇ ? ಬಾಲ ಎಂಬ ಪದ ಕೇಳುತ್ತಿದ್ದಂತೆಯೇ ಆ ದೈತ್ಯ ಪ್ರತಿಭೆಗೆ ಇದ್ದಕ್ಕಿಂದಂತೆ ಆಂಜನೇಯನ ದರ್ಶನವಾಗಿ, ಲಂಕೆಯನ್ನು ಸುಟ್ಟ ಘಟನೆ ಮನದಲ್ಲಿ ಮೂಡಿತಂತೆ ...ಅಷ್ಟೆ, ಮತ್ತೆ ಸ್ಮೃತಿ ತಪ್ಪಿದ ಪ್ರಾಣಿ ಅದೇನೋ ಸುಟ್ಟ ಬೆಕ್ಕಿನಂತೆ ವ್ವೆ,ವ್ವೆ,ವ್ವೆ...ಎನ್ನತೊಡಗಿದ್ದನ್ನು ಕೇಳಿ, ಕೇಳಿ ಎಂದರೂ ಯಾರೂ ಕೇಳಿಸಿಕೊಳ್ಳಲೇ ಇಲ್ಲ.

ಗಿಂಡಿ ತೀರ್ಥ: ಈ ಕೇಳಿ ಅನ್ನೋದು ಕೆಲ ಪತ್ರಕರ್ತರಿಗೆ ಅತ್ಯಂತ ಪ್ರಿಯವಾದದ್ದು. ಹೀಗಾಗಿ ದಿನವೂ ಅವರು ಅಂಥ ಕೇಳಿಯಲ್ಲೇ ತೊಡಗಿರುತ್ತಾರೆ. ಅದರ ಹಿಂದೆ ಕಾಮದ ವಾಸನೆ ಹೊಡೆದರೆ ಅದು ಇತಿಹಾಸ, ಪರಂಪರೆಯ ಕೊಡುಗೆ.

Monday, January 17, 2011

ನಾವೇ ಇತಿಹಾಸ ನಿರ್ಮಿಸುತ್ತೇವೆ

ವೈರಿಗಳು ಎಸೆದ ಕಲ್ಲನ್ನೇ ಸಂಗ್ರಹಿಸಿ ಮನೆ ನಿರ್ಮಿಸಿಕೊಳ್ಳುವುದಿದೆಯಲ್ಲಾ ಅದು ನಿಜವಾದ ಜಾಣತನ. ಅದು ನೈಜ ತಾಕತ್ತು. ಅಂಥದ್ದೊಂದು ಸಿದ್ಧಾಂತದಲ್ಲಿ ನಂಬಿಕೆ ಇಟ್ಟವ ನಾನು. ಹಾಗೆ ಬೀಸಿದ ಕಲ್ಲುಗಳಿಂದ ಕಟ್ಟಿದ ಮನೆಯೇ ಈ ‘ಗಿಂಡಿಮಾಣಿ ಬ್ಲಾಗ್’. ಥ್ಯಾಂಕ್ಸ್ ಟು ರವಿ ಬೆಳಗೆರೆ. ನನ್ನನ್ನು ಈ ಹೆಸರಿನಲ್ಲಿ ವ್ಯಂಗ್ಯ ಮಾಡಿ ಅವತ್ತು ಬರೆಯದಿದ್ದರೆ ನನಗೆ ಇಂಥ ಅಪರೂಪದ ಕಾವ್ಯನಾಮ ಸಿಗುತ್ತಲೇ ಇರಲಿಲ್ಲ. ಈಗಲೇ ಘೋಷಿಸುತ್ತೇನೆ. ಈ ಗಿಂಡಿಮಾಣಿ ಇನ್ನು ಬರೆಯುತ್ತಲೇ ಇರುತ್ತಾನೆ.

‘ವಿಜಯ ಕರ್ನಾಟಕ’ವನ್ನು ಬಿಟ್ಟ ಮರುದಿನದಿಂದಲೇ ನನ್ನ ವಿರುದ್ಧ ಸನ್ಮಾನ್ಯ ಶ್ರೀ ಶ್ರೀ ರವಿ ಬೆಳಗೆರೆಯವರು ತಮ್ಮ ‘ವಾರದ ಅಚ್ಚರಿ’ಯಲ್ಲಿ ಇದ್ದಕ್ಕಿದ್ದಂತೆ ಕಲ್ಲು ಬೀಸಲಾರಂಭಿಸಿದರು. ನನಗೆ ಗೊತ್ತಿದ್ದಂತೆ ಅವರು ಹೀಗೆ ಕಲ್ಲು ಎಸೆಯಲು ಕಾರಣವೇ ಇಲ್ಲ. ಅಷ್ಟಕ್ಕೂ ನಾನೆಂದೂ ಅವರ ಅಂತಃಪುರದವರ ಯಾರ ‘ಹೆಗಲು ಸವರಲೂ’ ಹೋಗಿಲ್ಲ.

ಕೆಲವರಿಗೆ ಹಾಗೆಯೇ, ಸುಖಾಸುಮ್ಮನೆ ಕಲ್ಲು ಎಸೆಯುತ್ತಿರುವ ಚಟ. ಅದು ಹಿರಿಯರು, ಕಿರಿಯರು, ಸಮಾನ ಮನಸ್ಕರು/ ವಯಸ್ಕರು, ಸ್ನೇಹಿತರು, ವೈರಿಗಳು ಇತ್ಯಾದಿ ಯಾವ ಭೇದವೂ ಇರುವುದಿಲ್ಲ. ಒಟ್ಟಾರೆ ಕಲ್ಲು ಬೀಸುತ್ತಲೇ ಇರಬೇಕು. ಬಹುಶಃ ತಾವು ಹೀಗೆ ಕಲ್ಲು ಬೀಸುವುದನ್ನು ನಿಲ್ಲಿಸಿದಾಕ್ಷಣ ನಾಡಿನ ಮಂದಿಯೆಲ್ಲಾ ಸೇರಿ ತಮ್ಮತ್ತಲೇ ಕಲ್ಲೆಸೆಯಲಾರಂಭಿಸುತ್ತಾರೆ ಎಂಬ ಭೀತಿ (ನಂಬಿಕೆ)ಯೂ ಅವರ ಇಂಥ ವರ್ತನೆಗಳಿಗೆ ಕಾರಣವಿರಬಹುದು. ಹೀಗಾಗಿಯೇ ಅವರು ತಮ್ಮ ನಿಕಟ ಗೆಳೆಯ( ಹಾಗಂತ ರವಿಯವರೇ ಸಾಕಷ್ಟು ಬಾರಿ ಹೇಳಿಕೊಂಡದ್ದು) ವಿಶ್ವೇಶ್ವರ ಭಟ್ಟರ ಮೇಲೂ ಕಲ್ಲೆಸೆದದ್ದಿರಬೇಕು.

ಆದರೆ, ರವಿ ಬೆಳಗೆರೆಯವರಿಗೆ ನನ್ನ ವಿಚಾರದಲ್ಲಿ ಅದೆಂಥಾ ಭಯ, ದ್ವೇಷ ಕಾಡುತ್ತಿದೆಯೋ ನನಗಂತೂ ಗೊತ್ತಿಲ್ಲ. ಏಕೆಂದರೆ ಆ ವ್ಯಕ್ತಿಯ ಮೇಲೆ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ‘ದಾಖಲಿಸುತ್ತಿರುವ ಇತಿಹಾಸದ’ ಬಗ್ಗೆ ಒಂದು ಮಟ್ಟಿಗಿನ ಗೌರವವನ್ನು ಇಟ್ಟುಕೊಂಡಿದ್ದವನು ನಾನು. ಮಾತೆತ್ತಿದರೆ ‘ಒಬ್ಬ ಜವಾಬ್ದಾರಿಯುತ ಪತ್ರಕರ್ತನಾಗಿ ನಾವಿದನ್ನು ಇತಿಹಾಸದಲ್ಲಿ ದಾಖಲಿಸಲೇಬೇಕು...’ ಎಂಬಿತ್ಯಾದಿ ಪುಂಖಾನುಪುಂಖವಾಗಿ ಹೊಮ್ಮುವ ಅವರ ಭಾಷಣದ ಬಗ್ಗೆ ಒಮ್ಮೊಮ್ಮೆ ಅಚ್ಚರಿಯೂ ಆಗುತ್ತಿತ್ತು. ಪತ್ರಕರ್ತನ ಹೊಣೆಗಾರಿಕೆ ಕೇವಲ ಇತಿಹಾಸ ದಾಖಲಿಸುವುದಕ್ಕೆ ಮಾತ್ರವೇ ಸೀಮಿತವೇ ? ಹಾಗಾದರೆ ಇತಿಹಾಸದ ಭಾಗವಾಗಿ ಪತ್ರಕರ್ತ ನಿಲ್ಲುವುದಿಲ್ಲವೇ ? ಆತ ಈ ಸಮಾಜದ ಅಂಗವಲ್ಲವೇ ? ಈ ಎಲ್ಲ ಪ್ರಶ್ನೆಗಳೂ ಮನದಲ್ಲೇಳುತ್ತಿತ್ತು. ಕೊನೆಗೆ-ಎಷ್ಟಾದರೂ ಮಾಜಿ ಇತಿಹಾಸದ ಮಾಸ್ತರರಲ್ಲವೇ. ಅಭ್ಯಾಸ ಬಲದಿಂದ ಎಲ್ಲವನ್ನೂ ಇತಿಹಾಸದ ಚೌಕಟ್ಟಿನಲ್ಲೇ ನೋಡುತ್ತಿರಬಹುದು ಎಂದುಕೊಂಡು ಸುಮ್ಮನಾಗುತ್ತಿದ್ದೆ. ವಿ.ಭಟ್ ತಂಡದ ರಾಜೀನಾಮೆಯ ಬಗ್ಗೆಯೂ ಅದೇ ಇತಿಹಾಸ ದಾಖಲಿಸುವ ಹಂಬಲದಿಂದಲೇ ಬರೆದಿದ್ದರೆ ಸುಮ್ಮನಾಗಿಬಿಡಬಹುದಿತ್ತು. ಆದರೆ ಈ ಸೋ ಕಾಲ್ಡ್ ಇತಿಹಾಸಕಾರರೆಲ್ಲರ ಕತೆಯೂ ಇದೇ ಇರಬಹುದೇ ? ಇತಿಹಾಸವನ್ನು ತಿರುಚದೇ ಅವರೆಂದೂ ಬರೆದವರೇ ಅಲ್ಲ. ನಮ್ಮ ರಾಷ್ಟ್ರೀಯತೆಯಿಂದ ಹಿಡಿದು, ನಮ್ಮ ಆರಾಧನಾ ಸ್ಥಳಗಳು, ನಮ್ಮ ಪರಂಪರೆ, ಸಾಹಿತ್ಯ ಹೀಗೆ ಎಲ್ಲದರ ಬಗ್ಗೆಯೂ ಅವರದ್ದು ಪೂರ್ವಗ್ರಹಪೀಡಿತ ದೃಷ್ಟಿಯೇ. ಹೀಗಾಗಿಯೇ ಕೆಲವೊಮ್ಮೆ ನಮ್ಮ ಪಠ್ಯ ಪುಸ್ತಕಗಳಲ್ಲೂ ಇಂಥವರ ಅಪಸವ್ಯಗಳು ಇತಿಹಾಸದ ಪಾಠವಾಗಿ ಇಣುಕಿಬಿಡುತ್ತವೆ. ತಮ್ಮ ಮೂಗಿನ ನೇರಕ್ಕೆ ಹೇಳಿಕೊಳ್ಳುವುದೇ ನೈಜ ಇತಿಹಾಸ ಎನ್ನುವ ಭಾವನೆ ಅವರದ್ದು. ತಮ್ಮ ಶಿಷ್ಯ ಪರಂಪರೆಗೂ ಅವರು ಅದನ್ನೇ ಬೋಸುವುದು. ಅವರು ಉಗುಳಿದ್ದನ್ನೇ ಸತ್ಯವೆಂದು ನಂಬುವ ಮುಗ್ಧ ಮನಗಳಿಗೂ ಕೊರತೆಯಿಲ್ಲ. ಈ ಎಲ್ಲರ ಬಗೆಗೆ ಸಣ್ಣದ್ದೊಂದು ಕನಿಕರವನ್ನಷ್ಟೇ ತೋರಬಹುದೇ ವಿನಾ ಅದಕ್ಕಿಂತ ಹೆಚ್ಚೇನೂ ಉಳಿಯುವುದಿಲ್ಲ.

ಹಾಗೆಂದು ವೇದಾಂತ ಹೇಳಿಕೊಂಡೇ ಕಳೆಯುವಷ್ಟು ವಾನಪ್ರಸ್ತಕ್ಕೂ ನಾವು ಬಂದು ನಿಂತಿಲ್ಲ. ಕೆಲವೊಮ್ಮೆ ಅವರೆಸೆದ ಕಲ್ಲನ್ನೇ ತಿರುಗಿಸಿ ಬೀಸಲೂ ನಮಗೆ ಗೊತ್ತೆಂಬುದನ್ನು ಮನವರಿಕೆ ಮಾಡಿಕೊಡಬೇಕಾಗುತ್ತದೆ. ಹಾಗೆ ತಿರುಗಿಸಿ ಎಸೆದರೆ ಮತ್ತೆಂದು ಅದು ಗುರಿ ತಪ್ಪುವ ಪ್ರಶ್ನೆಯೇ ಇಲ್ಲ.

ಅದಕ್ಕಾಗಿಯೇ ಗಿಂಡಿಮಾಣಿ ಮೈಕೊಡವಿ ನಿಂತದ್ದು. ಕೇವಲ ಈ ದಾಟಿಯಲ್ಲೇ ಉತ್ತರಿಸಿದರೆ ಮುಟ್ಟುವಷ್ಟು ಸೂಕ್ಷ್ಮ ಮನಸ್ಸಿನವರಾಗಿದ್ದರೆ ಈ ಪ್ರಮೇಯವೇ ಬರುತ್ತಿರಲಿಲ್ಲ. ಅದಕ್ಕಾಗಿ ಕಾನೂನು ಹೋರಾಟಕ್ಕೂ ನಿಂತಿದ್ದೇವೆ. ಇಷ್ಟು ವರ್ಷದ ಮೇಲೆ ಕನ್ನಡದ ಹಿರಿಯ ಪತ್ರಕರ್ತರೊಬ್ಬರಿಗೆ ಪತ್ರಿಕೋದ್ಯಮವೆಂದರೆ ಏನು ಎಂಬುದನ್ನು ಗೆಳೆಯ ಪ್ರತಾಪ್‌ರಂಥ ಕಿರಿಯ ಬೋಸಬೇಕಾಗಿ ಬಂದಿರುವುದು ದುರಂತ. ಆ ಮೂಲಕ ಇತಿಹಾಸವನ್ನು ನಿರ್ಮಿಸ ಹೊರಟಿದ್ದೇವೆ.

ಹೌದು, ಈ ಬಗ್ಗೆ ಅತ್ಯಂತ ಆತ್ಮ ವಿಶ್ವಾಸದಿಂದ ಹೇಳಿಕೊಳ್ಳಬಲ್ಲೆವು. ಕೇವಲ ಇತಿಹಾಸ ದಾಖಲಿಸುವ ಪತ್ರಕರ್ತರು ನಾವಲ್ಲ, ಸ್ವತಃ ಇತಿಹಾಸ ನಿರ್ಮಿಸುತ್ತೇವೆ. ಇಷ್ಟರವರೆಗೆ ‘ವಿಜಯ ಕರ್ನಾಟಕ’ದಲ್ಲಿ ನಮ್ಮ ಬರವಣಿಗೆಗಳನ್ನು ಕಂಡವರು, ತಪ್ಪದೇ ಓದಿದವರಿಗೆ ಈ ಬಗ್ಗೆ ಅನುಮಾನಗಳು ಉಳಿದಿಲ್ಲ. ಒಂದೊಂದು ಅಂಕಣಗಳ ಮೂಲಕ, ಅದಕ್ಕಿಂತ ಹೆಚ್ಚಾಗಿ ಸುದ್ದಿಮನೆಯ ಬೇರೇಬೇರೇ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಇದನ್ನು ಸಾಬೀತುಪಡಿಸಿದ್ದೇವೆ. ಇಂಥ ಇನ್ನೂ ಹತ್ತು ಪತ್ರಿಕೆಗಳನ್ನು ಕಟ್ಟುವ ಕಸುವು, ಬುದ್ಧಿ ಮತ್ತೂ ವಯಸ್ಸೂ ಸಹ ದೇವರ ದಯೆಯಿಂದ ನಮ್ಮಲ್ಲಿದೆ. ತಾಕತ್ತಿದ್ದರೆ ಮನಬಂದಂತೆ ಕಾರಿಕೊಳ್ಳುವವರು ಕಾರಕೂನಿಕೆ ಬಿಟ್ಟು ಹೊಸ ಇತಿಹಾಸ ನಿರ್ಮಿಸಿ ತೋರಿಸಲಿ.

ಕೇವಲ, ಕಂಡವರ ಚಾರಿತ್ರ್ಯವಧೆಯನ್ನು ಮಾಡಿಕೊಂಡೇ, ತಮ್ಮ ತೆವಲುಗಳನ್ನು ಯಾವ್ಯವುದೋ ಅಂಕಣಗಳ ಹೆಸರಲ್ಲಿ ಸಮರ್ಥಿಸಿಕೊಂಡೇ, ಅದನ್ನೇ ಪತ್ರಿಕೋದ್ಯಮವೆಂದು ನಾವೆಂದೂ ಸಾರಿಲ್ಲ. ನಮ್ಮ ದೃಷ್ಟಿ, ಆಸಕ್ತಿಗಳು ಯಾವತ್ತೂ ‘ಬಾಟಮ್ ಐಟಮ್’ಗಳತ್ತ ದ್ವಂದ್ವಾರ್ಥದಲ್ಲಿ ಹರಿದಿಲ್ಲ. ನಮ್ಮದೇನಿದ್ದರೂ ನೇರ, ಮಂತ ನೋಟ. ಅದರಲ್ಲಿ ಯಾವ ‘ಸಾಪ್ಟ್ ಕಾರ್ನರ್’ ಸಹ ಇರಲಿಲ್ಲ. ನಮ್ಮ ಖಾಸಗೀ ಸಂಗತಿಗಳ, ಚಟಗಳ ವೈಭವೀಕರಣಕ್ಕೆ ಪತ್ರಿಕೆಯನ್ನು, ಓದುಗರ ಮನವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ನಾವೆಷ್ಟು ಹಾಸಿಗೆಗಳಲ್ಲಿ ಹೊರಳಾಡಿದ್ದೇವೆ, ಆಗೆಲ್ಲಾ ಎಷ್ಟು ಮುಗುದೆಯರ ಕಣ್ಣೀರು ತಲೆದಿಂಬನ್ನು ಒದ್ದೆ ಮಾಡಿತ್ತೂ ಎಂಬುದರ ಲೆಕ್ಕಕೊಡುತ್ತಾ ಅದನ್ನೇ ಪೌರುಷವೆಂದು ನಮ್ಮ ಅಂಕಣಗಳಲ್ಲಿ ಸಾರಿಕೊಳ್ಳಲಿಲ್ಲ. ರತಿವೈಭವೀಕರಣವೇ ಪತ್ರಿಕೋದ್ಯಮವೆಂಬ ಕೀಳು ಅಭಿರುಚಿಯನ್ನು ಎಂದಿಗೂ ವ್ಯಕ್ತಪಡಿಸಿಲ್ಲ. ಸುಟ್ಟ ಸಿಗರೇಟ್‌ನ ಬೂದಿ ರಾಶಿಯೊಳಗಿಂದಲೇ ಮೇಲೆದ್ದು ವಿಕಟಾಟ್ಟಹಾಸ ಮೆರೆದಿಲ್ಲ. ಗಡಂಗುಗಳನ್ನೇ ಖಾಲಿ ಮಾಡಿ ಬ್ಯಾರೆಲ್ ಹೊಟ್ಟೆಯೊಳಗೆ ವಿಷ ತುಂಬಿಕೊಂಡಿಲ್ಲ. ನಾನು ಈವರೆಗೆ ಬರೆದದ್ದು ಇದ್ದರೆ ಅದು ಅಭಿವೃದ್ಧಿಪರವಾದದ್ದನ್ನೇ. ಒಮ್ಮೆ ಮಾತ್ರ, ಅದ್ಯಾರೋ ಜಿ.ಕೆ.ಗೋವಿಂದರಾವ್ ಎಂಬ ಬುದ್ಧಿಜೀವಿಗಳಂತೆ, ನಾನು ಅಲ್ಲಿಯವರೆಗೆ ಅವರ ಹೆಸರನ್ನೂ ಕೇಳಿರಲಿಲ್ಲ, (ಬಹುಶಃ ಎಲ್ಲರೂ ಕೇಳಿರಬಹುದಾದ ಹೆಸರು ಅವರದ್ದಲ್ಲವೇನೋ) ನನ್ನ ಅಂಕಣದಲ್ಲಿ ಪ್ರಕಟಗೊಂಡಿದ್ದ ಗುಜರಾತ್‌ನಲ್ಲಿನ ಕೃಷಿ ಅಭಿವೃದ್ಧಿಯ ಬಗೆಗಿನ ಲೇಖನಕ್ಕೆ ಪ್ರತಿಕ್ರಿಯಿಸಿದ್ದರು. ಅದಕ್ಕೆ ‘ಸೂಕ್ತ ರೀತಿಯಲ್ಲಿ’ ಉತ್ತರಿಸಲು ಅಂಕಣ ಬಳಸಿಕೊಂಡದ್ದನ್ನು ಬಿಟ್ಟರೆ ಯಾವತ್ತಿಗೂ ಹೆಸರಿನಿಂದಲೇ ಸಾಧುಗಳಾಗಿರುವವರು ಉಸುರಿದ್ದನ್ನು ಕೇಳಿಕೊಂಡೋ, ಕೃತಘ್ನ ಕಲಾಕಾರರು ಇಟ್ಟ ಫಿಟ್ಟಿಂಗ್ ಅನ್ನು ನಂಬಿಯೋ, ಭ್ರಷ್ಟ-ದುರಹಂಕಾರಿ ದೇವಶ್ರೇಷ್ಠರು ಕಾರಿಕೊಂಡ ಹತಾಶೆಗೆ ಮರುಗಿಯೋ ಬರೆದವನಲ್ಲ.

ದಿಟ್ಟ, ತೀಕ್ಷ್ಣ ಸತ್ಯಗಳು ಕೆಲವರಿಗೆ ರುಚಿಸದಿದ್ದರೆ ಅದಕ್ಕೆ ನಾವು ಹೊಣೆಗಾರರಲ್ಲ. ಕಳೆದ ಹತ್ತು ವರ್ಷಗಳಿಂದ ಜಲ ಸಂರಕ್ಷಣಾ ಕ್ಷೇತ್ರದಲ್ಲಿ ನಡೆಸಿದ ಅಧ್ಯಯನ, ಆ ಸಂದರ್ಭದಲ್ಲಿ ಅರಿವಿಗೆ ದಕ್ಕಿಸಿಕೊಂಡದ್ದು ಆರು ವರ್ಷಗಳಲ್ಲಿ ಮುನ್ನೂರಕ್ಕೂ ಹೆಚ್ಚು ಬರಹಗಳ ರೂಪದಲ್ಲಿ ಸತತವಾಗಿ ದಾಖಲಿಸಿದ್ದನ್ನು ಅರಿತವರು ‘ಜಲಪತ್ರಕರ್ತ’ರೆಂದು ಕರೆದರೇ ವಿನಃ ಯಾವತ್ತೂ ನಮ್ಮನ್ನು ನಾವೇ ‘ಸತ್ಯ ಸಂದ’ ಪತ್ರಕರ್ತರೆಂದು ಘೋಷಿಸಿಕೊಂಡಿಲ್ಲ. ಅಂಥವನ್ನೆಲ್ಲಾ ಓದುವ ತಾಳ್ಮೆಯಾದರೂ ಇವರಿಗೆ ಹೇಗೆ ಬರಬೇಕು ?
ದುರಂತವೆಂದರೆ ಇದೇ. ನನಗೆ ಗೊತ್ತು. ಇಂಥ ಬರಹಗಳಿಂದ ಇವರೇನೂ ಬದಲಾಗುವುದಿಲ್ಲ. ಅಂಥ ಭ್ರಮೆಗಳೂ ನನ್ನಲ್ಲಿಲ್ಲ. ವೃಥಾ ಸಮಯ ವ್ಯರ್ಥ ಮಾಡುತ್ತಿದ್ದೇನೇನೋ ಅಂತಲೂ ಅನಿಸುತ್ತದೆ. ಆದರೆ ಸುಮ್ಮನೆ ಕುಳಿತುಬಿಟ್ಟರೆ ನಾವೇ ಸಾಕಿದ ನಾಯಿ ನಮ್ಮನ್ನೇ ಕಚ್ಚಲೂ ಹಿಂದೆ ಮುಂದೆ ನೋಡದ ಪರಿಸ್ಥಿತಿ ಬಂದೀತು. ಅಷ್ಟಕ್ಕೂ ಸುಮ್ಮನಿರಬೇಕೇಕೆ ? ಅಭಿವ್ಯಕ್ತಿ ಸ್ವಾತಂತ್ರವೆಂಬುದು ಯಾರದೇ ಜಹಗೀರು ಅಲ್ಲವಲ್ಲಾ ?

ಇತಿಹಾಸ ದಾಖಲಿಸುವ ಇಂಥವರ ಘನ ಇತಿಹಾಸವಾದರೂ ಏನು...
ನಾಳೆ ಬರೆಯುವೆ...