
ಸುಂದರವಾದ ಒಂದು ವಾಕ್ಯದಲ್ಲಿ ಇದನ್ನು ನಿಮ್ಮಿಂದ ವ್ಯಾಖ್ಯಾನಿಸಲು ಸಾಧ್ಯವೇ?
ಸಾಲು ಕಾವ್ಯಾತ್ಮಕವಾಗಿದ್ದರೆ ಒಳಿತು.
ಇಲ್ಲವೇ ಪಂಚ್ ನೀಡಲಿ.
ಕಲ್ಪನೆಗೆ ಸಾಕಷ್ಟು ಅವಕಾಶವಿದೆ.
ಕೊಡುತ್ತೀರಾ ಪ್ಲೀಸ್ !
ಉದಾ: ಬಂಡೆಯ ಮೇಲೆ ಚೆಲ್ಲಿ ಹೋದ ನೊರೆವಾಲ ತೆರೆ...
ಭೂಮಿಯ ಮಹಾಮಜ್ಜನಕ್ಕೆ ತಿಂಗಳನು ತಂದಿಟ್ಟ ಕೆನೆ ಹಾಲು...
ನಿಶಾ ದೇವಿಯ ಮುಖಾರವಿಂದಕೆ ಲೇಪಿತ ಕಾಂತಿ ವರ್ಧಕ...
ಬೆಳದಿಂಗಳೇ..
ReplyDeleteಅಲ್ಲ ಅದು
"ಮನ ಸೆಳೆವ ತಿಂಗಳ ಬೆಳಕು.."
ನಿಶೆಯ ನಿಶಿತ ಕ್ಷಣಗಳಲ್ಲಿ ಶಶಿಯು ಇಳೆಗಿತ್ತ ಚುಂಬನ !!!
ReplyDeleteಭೂಮಿಕೆಯ ಮಡಿಲಲ್ಲಿ ಚಂದಿರ ಸುರಿದ ಮಲ್ಲಿಗೆಮೊಗ್ಗು...
ReplyDeleteಸಾಗರನ ಉಕ್ಕೇರುವ ಪ್ರೀತಿಗೆ ಸೋತ ಹುಣ್ಣಿಮೆ ಬಿಳಿ ರೇಶಿಮೆಯನುಟ್ಟು ಸಡಗರದಿ ಇಳಿದಂತೆ...
ReplyDeleteಚಂದ್ರ ಕೊರೆದ ರಂಧ್ರ ಮೇಘದ ಮಧ್ಯೆ ಭೂರಮೆಯ ರಮಿಸಲೇ?
ReplyDeleteಕತ್ತಲೆಗೆ ಬೆಳಕಿನ ಸೆರಗು, ಭೂಮಿಗೆಂತ ಮೆರಗು ?
ReplyDeleteಹೊಳೆವ ಕತ್ತಲೆ, ಭೂಮಿ ಬೆತ್ತಲೆ
ReplyDelete1. ವಸು೦ಧರೆಯ ಸುರಾಪಾತ್ರೆಯಲಿ ನಶೆ ಸುರಿದ ಚಂದಿರ
ReplyDelete2. ಚಂದ್ರ ಮೋಡದ ಮರೆಯಿ೦ದ ಇಣುಕಿ ವಸು೦ಧರೆಯೆ೦ಬ ಬೆಳದಿಂಗಳ
ಬಾಲೆಯನ್ನು ನೋಡುತ್ತಿದ್ದಾನೆ.
3. ತಮವ ಕಳೆಯೋ ಚಂದ್ರ ತೋರು ನಿನ್ನ ಲಾಂದ್ರ
ವಸುಮತಿಯ ಪದತಲಕೆ ನೊರೆನೊರೆಯ ಹಾಲ್ನೀರು
ReplyDeleteಸರಿತೆಯ ಸನ್ನಿಧಿಗೆ ಶಶಾಂಕ ಸ್ಪುರಣ ....
ReplyDeleteಇದು ನನ್ನ ಭಾಷೆ
ReplyDeleteA good spotlight picture.
ಬೆಳದಿಂಗಳು
ReplyDeleteಆಗುವುದು ಸೂರ್ಯನ ಕಿರಣದ ಪ್ರತಿಫಲನಕ್ಕೆ
ಆದರೆ ಸಾಕ್ಷಿಯದು ಎಷ್ಟೋ ಮಿಲನಕ್ಕೆ !!
ಮತ್ತರ್ಧದ ರವಿ ಇನ್ನರ್ಧಕ್ಕಿಟ್ಟ "ಚಂದ್ರಲಾಂದ್ರ"..
ReplyDelete