ಈ ಪ್ರಪಂಚದಲ್ಲಿನ ತಪ್ಪುಗಳನ್ನೆಲ್ಲಾ ಮಾಡಲು ಅಕಾರ ಇರುವುದು ನನಗೊಬ್ಬನಿಗೇ. ನಾನು ಏನು ಬೇಕಾದರೂ ಮಾಡಬಹುದು. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಹಾಗೆಂದು ಬೇರೆ ಯಾರೇ ಏನೇ ತಪ್ಪು ಮಾಡಿದರೂ, ಮಾಡದಿದ್ದರೂ ಅವರನ್ನೆಲ್ಲಾ ಟೀಕಿಸುವ ಹಕ್ಕಿರುವುದು ನನಗೇ, ನಾನು ಹೇಳಿದ್ದನ್ನೇ ಸತ್ಯವೆಂದು ತಿಳಿದು ಎಲ್ಲರೂ ಅದನ್ನೇ ಒಪ್ಪಿಕೊಳ್ಳಬೇಕು. ನಾನೋಬ್ಬನೇ ಈ ಸಮಾಜದಲ್ಲಿ ಸುಭಗ, ಸಂಭಾವಿತ. ಉಳಿದವರೆಲ್ಲರೂ ಫಟಿಂಗರು...
ನಗಬೇಕೋ, ಅಳಬೇಕೋ ಅರ್ಥವಾಗುವುದಿಲ್ಲ. ಇಂಥ ಮನೋಭಾವಕ್ಕೆ ಏನೆಂದು ಕರೆಯಬೇಕು ? ಇದು ಅಹಂಕಾರವೇ ? ಅಸಂಬದ್ಧವೇ ? ಅಸಹಜ ಮನಸ್ಥಿತಿಯೇ ?
ಪಕ್ಕಾ ಇದೇ ದಾಟಿಯಲ್ಲಿತ್ತು ವಾರದ ಅಚ್ಚರಿಯೆಂಬ ನೀಲಿ ಪತ್ರಿಕೆಯ ಸಂಪಾದಕರ ಮಾತುಗಳು. ಕೊನೆಗೊಮ್ಮೆ ಕೇಳೇ ಬಿಡೋಣ; ಅಷ್ಟಕ್ಕೂ ನನ್ನ ಬಗ್ಗೆ ಇಲ್ಲಸಲ್ಲದ್ದನ್ನು ಬರೆದದ್ದಾದರೂ ಏಕೆ ? ಅದಕ್ಕೆ ಆಧಾರಗಳಾದರೂ ಏನು ? ನನ್ನ ಕುರಿತು ಅವರಿಗೆ ಗೊತ್ತಿದ್ದದ್ದಾದರೂ ಏನು ? ನಾನ್ಯಾಕೆ ಎಲ್ಲವನ್ನೂ ಪ್ರಶ್ನಿಸದೇ ಸಹಿಸಿಕೊಳ್ಳಬೇಕು? ಗುಳಿಗೆ ಸಿದ್ಧ, ಒಳಗೊಳಗೇ ಮೆದ್ದ ಎನ್ನುವಂತೆ ಆತ ವರ್ತಿಸುತ್ತಾನೆ ಎಂದುಕೊಂಡು ನಾನ್ಯಾಕೆ ಹೇಡಿಯಂತೆ ಕುಳಿತುಕೊಳ್ಳಬೇಕು? ಯಾವ ತಪ್ಪೂ ಮಾಡದೆ, ಆತನ ಸುದ್ದಿಗೂ ಹೋಗದೆ, ನನ್ನ ಪಾಡಿಗೆ ನಾನು ‘ನೀರು-ನೆರಳು’ ಅಂತ ಇದ್ದದ್ದನ್ನೂ ಸುಖಾ ಸುಮ್ಮನೆ ಟೀಕಿಸಿ ಮೇಲೆರಗಿ ಬರುತ್ತಾನಾದರೆ ಸುಮ್ಮನಿದ್ದರೆ ಅದನ್ನೇ ಒಪ್ಪಿಕೊಂಡಂತಾಗುವುದಿಲ್ಲವೇ ?ಯಾವುದಕ್ಕೂ ನೇರವಾಗಿ ಆತನನ್ನೇ ಕೇಳೋಣವೆಂದು ಹಿಂದೆ ಮುಂದೆ ಇಲ್ಲದೇ ಮೊನ್ನೆ ಸರಿಯಾಗಿ ರಾತ್ರಿ ಹನ್ನೆರಡು ಗಂಟೆಗೆ ಫೋನಾಯಿಸಿದೆ. ನನಗೆ ಗೊತ್ತಿತ್ತು ಆತ ಸತ್ಯವನ್ನೇನಾದರೂ ಹೇಳುವುದಿದ್ದರೆ ಅದೇ ಸಮಯದಲ್ಲಿ. ಏಕೆಂದರೆ ಆ ‘ಮದ್ಯ’ರಾತ್ರಿಯಲ್ಲಿ ಮಾತ್ರ ಆತನ ಮೇಲೆ ಸತ್ಯಸಂಧ ಆವಾಹಿತನಾಗಿರುತ್ತಾನೆ. ಉಳಿದೆಲ್ಲ ಸಂದರ್ಭದಲ್ಲಿ ಕೊಳಗೇರಿಯ ಕೊಳೆ ಮೆತ್ತಿಕೊಂಡಿರುತ್ತದೆ ಎಂದು. ಹಾಗಾಗಿಯೇ ಆ ಮುಹೂರ್ತದಲ್ಲಿ ಆತನನ್ನು ಸಂಪರ್ಕಿಸಿದೆ.
ಸದ್ಯ, ಸತ್ಯಸಂಧ ಪತ್ರಕರ್ತರು ಫೋನ್ ಎತ್ತಿಕೊಂಡರು. ನಾನು ‘ಗಿಂಡಿಮಾಣಿ’ಎಂದೇ ಪರಿಚಯಿಸಿಕೊಂಡೆ. ಆಗ ರಾತ್ರಿ ಹನ್ನೆರಡು ಗಂಟೆ ಹದಿಮೂರು ನಿಮಿಷ. ಅತ್ತಲಿದ್ದ ವ್ಯಕ್ತಿಗೆ ಧ್ವನಿ ಉಡುಗಿ ಹೋಗಿದ್ದಿರಬೇಕು ಮೂರ‍್ನಾಲ್ಕು ಸೆಂಕೆಂಡ್ ಯಾವುದೇ ಪ್ರತಿಕ್ರಿಯೆ ಇಲ್ಲ. ಮತ್ತೆ ನನ್ನ ಹೆಸರು ಹೇಳಿಕೊಂಡ್ಡದ್ದರ ಜತೆಗೆ ‘ನಿಮ್ಮ ಗಿಂಡಿ ಮಾಣಿ ಸರ್, ನೀವೇ ಇಟ್ಟ ನಾಮಧೇಯ, ಗೊತ್ತಾಗಲಿಲ್ವೇ ?’ ಅಂದೆ. ತುಸು ಸಾವರಿಸಿಕೊಂಡು ಗೊಗ್ಗರು ಧ್ವನಿಯಲ್ಲಿ ‘ಹೇಳಿ’ ಅಂದಿತು ಆ ವ್ಯಕ್ತಿ.
‘ಏನಿಲ್ಲ...ನನಗೊಂದು ಅತ್ಯದ್ಭುತವಾದ ಕಾವ್ಯನಾಮವನ್ನು ಹುಡುಕಿ ಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ಹೇಳೋಣವೆಂದು ಫೋನಾಯಿಸಿದೆ. ಅಷ್ಟೂ ಮಾಡದಿದ್ದರೆ ನಿಮ್ಮಂತೆ ಕೃತಘ್ನನೆನಿಸಿಕೊಂಡು ಬಿಡುತ್ತೇನೆ. ನೀವು ಯಾವ ಉದ್ದೇಶಕ್ಕೆ ನನ್ನನ್ನು ಹಾಗೆಂದು ಕರೆದಿದ್ದಿರೋ ಏನೋ? ಆದರೆ ಅದು ನನಗೆ ಇನ್ನಿಲ್ಲದ ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಅದೇ ಹೆಸರಿನಲ್ಲಿ ಒಂದು ಬ್ಲಾಗ್ ಸಹ ಬರೆಯುತ್ತಿದ್ದೇನೆ. ನೀವೂ ನೋಡಿದ್ದಿರಬಹುದು (ನೋಡಿಯೇ ಇರುತ್ತಾರೆ ಎಂಬುದು ಖಚಿತವಾಗಿ ಗೊತ್ತಿತ್ತು). ಒಂದೇ ವಾರದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಓದುಗರು ಬಂದಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ನಿರಂತರ ಬ್ಲಾಗ್ ಅನ್ನು ಫಾಲೋ ಮಾಡುತ್ತಿದ್ದಾರೆ. ಐ ಆಮ್ ರಿಯಲಿ ಥ್ಯಾಂಕ್‌ಫುಲ್ ಟು ಯು ಸರ್...’ಎಂದೆ.
ಒಂದು ಕ್ಷಣದ ಗಲಿಬಿಲಿಯ ನಂತರ...‘ಹೌದೌದು, ನನಗೆ ಎರಡು ಮದುವೆಯಾಗಿದೆ...ಹಾಗೆ...ಹೀಗೆ..ಅಂತೆಲ್ಲಾ ನೀವು ಬ್ಲಾಗ್‌ನಲ್ಲಿ ಬರೆದಿದ್ದೀರಿ ಅಂತ ಯಾರೋ ಹೇಳಿದರು. ಅಷ್ಟಕ್ಕೂ ಅದು ನನ್ನ ವೈಯಕ್ತಿಕ ವಿಚಾರ. ಅದನ್ನು ಕಟ್ಟಿಕೊಂಡು ನಿಮಗೇನಾಗಬೇಕು ? ನನಗೆ ಎರಡು ಹೆಂಡತಿಯರಿದ್ದರೆ ಸಮಾಜಕ್ಕೇನು ನಷ್ಟ ? ಅದು ನಮ್ಮ ನಮ್ಮ ತಾಕತ್ತು. ಅದನ್ನೆಲ್ಲ ಬರೆದು ಏನು ಸಾಸುತ್ತೀರಿ ?...’ ಎಂಬ ವಾಗ್ದಾಳಿ ಆರಂಭವಾಯಿತು...(ಮಾತು ಮಾತ್ರ ಇಷ್ಟು ನಿಯತ್ತಿನದ್ದಾಗಿರಲಿಲ್ಲ. ಆದರೆ ಅವರ ಶೈಲಿಯಲ್ಲೇ, ಅವರು ಬಳಸಿದ ಪದಗಳನ್ನೇ ಬಳಸಿದರೆ ನನ್ನ ಬ್ಲಾಗ್ ಸಹ ಚರಂಡಿಯಾಗಿ ಹೋಗುತ್ತದೆ, ಎಂಬ ಕಾರಣಕ್ಕೆ ಸಾಧ್ಯವಾದಷ್ಟು ಚೌಕಟ್ಟು ಹಾಕಿಕೊಂಡೇ ಮುಂದುವರಿಯುತ್ತೇನೆ)
ಮಾತು ಮುಂದುವರಿಯುತ್ತಲೇ ಇತ್ತು...ಅಷ್ಟಕ್ಕೇ ತುಂಡರಿಸಿ ‘ಸರಿ ಸ್ವಾಮಿ, ನೀವೊಬ್ಬ ಜವಾಬ್ದಾರಿಯುತ ಪತ್ರಕರ್ತ, ನೂರಾರು ಓದುಗರಿರುವ ಪತ್ರಿಕೆ ಸಂಪಾದಕ. ಸಮಾಜದಲ್ಲಿ ಗಣ್ಯ ವ್ಯಕ್ತಿ ಎಂದು ನಿಮ್ಮನ್ನು ನೀವೇ ಕರೆದುಕೊಳ್ಳುತ್ತೀರಿ. ನಿಮ್ಮ ಪತ್ರಿಕೆಯಲ್ಲಿ ನೈತಿಕತೆಯ ಬಗ್ಗೆ ಪುಂಖಾನುಪುಂಖವಾಗಿ ಪ್ರತಿವಾರ ಪುಂಗುತ್ತೀರಿ. ಹಾಗಿದ್ದ ಮೇಲೆ, ನಿಮ್ಮ ವೈಯಕ್ತಿಕ ನಡೆ ನುಡಿಗಳೂ ಸರಿಯಾದ ನಿಟ್ಟಿನಲ್ಲೇ ಇರಬೇಕಲ್ಲವೇ ? ಸಮಾಜ ಅದನ್ನು ನೋಡುತ್ತಲೇ ಇರುತ್ತದೆ. ಒಂದೊಮ್ಮೆ ಅದೆಲ್ಲ ಸಂಬಂಧ ಇಲ್ಲ. ನಾನು ಏನು ಬೇಕಾದರೂ ಮಾಡಿಕೊಳ್ಳಬಹುದು ಎಂಬ ಧೋರಣೆ ನಿಮ್ಮದಾದರೆ, ನನಗೂ ಅದೇ ಅನ್ವಯವಾಗಬೇಕಲ್ಲವೇ ? ನಾನು ಯಾರದ್ದೋ ಹೆಗಲು ಸವರಿದರೆ ನಿಮಗೇನು ಅಭ್ಯಂತರ ? ಅಥವಾ ‘ನಿಮ್ಮ ಸಮಾಜಕ್ಕೆ’ ಏನು ಅಡ್ಡಿ? ಅದನ್ನು ಬರೆಯುವ ಗೋಜಿಗೆ ನೀವು ಹೋಗಿದ್ದೇಕೆ ? ಹೋಗಲಿ ಎಂದರೆ ನಾನು ಹೆಗಲು ಮುಟ್ಟಿದ್ದನ್ನು ನೀವು ಕಂಡಿದ್ದೀರಾ? ಅಥವಾ ಹಾಗೆ ಮುಟ್ಟಿಸಿಕೊಂಡವರಲ್ಲಿ ಯಾರಾದರೂ ನಿಮ್ಮ ಬಳಿ ಬಂದು ಹೇಳಿದ್ದರೆ? ಅಂಥ ಒಬ್ಬರಿದ್ದರೆ, ಅಂಥ ಒಂದೇ ಒಂದು ಅಸಭ್ಯ ವರ್ತನೆ ನಾನು ತೋರಿದ್ದಕ್ಕೆ ಸಾಕ್ಷಿಯಿದ್ದರೆ ಹೇಳಿ...’ ಎಂದು ತುಸು ಜೋರಿನ ಧ್ವನಿಯಲ್ಲೇ ಪ್ರಶ್ನಿಸಿದೆ.
‘ನನಗೆ ಮಾತನಾಡಲು ಬಿಡಿ’ ಎಂಬ ವರಸೆ ತೆಗೆದರು ಆಸಾಮಿ.
‘ಸ್ವಾಮಿ, ಫೋನ್ ಮಾಡಿದ್ದು ನಾನು. ಕೊನೆ ಪಕ್ಷ ನನ್ನ ಬಗ್ಗೆ ಬರೆಯಬೇಕಾದ ಸಂದರ್ಭದಲ್ಲಿ ಸಹ ವಿಷಯಗಳನ್ನು ಖಚಿತಪಡಿಸಿಕೊಳ್ಳುವ ಕನಿಷ್ಠ ಜವಾಬ್ದಾರಿಯನ್ನೂ ತೋರದ ನೀವು ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರಿಸಿ. ನನ್ನ ಬಗ್ಗೆ ಹೆಚ್ಚು ಗೊತ್ತಿರುವುದು ನನಗೇ ಹೊರತೂ ಬೇರಾರಿಗಲ್ಲ. ಬೇಕಿದ್ದರೆ ನನ್ನ ಬಗ್ಗೆ ನಾನೇ ಸತ್ಯವಾದ ಮಾಹಿತಿ ಕೊಡುತ್ತಿದ್ದೆ. ನನ್ನನ್ನು ಕೇಳುವ ಗಂಡಸುತನವನ್ನು ನೀವು ತೋರಿಲ್ಲ. ಯಾವುದೋ ಎಂಕ, ನಾಣಿ, ಸೀನ (ಬೇಕಿದ್ದರೆ ಅದನ್ನು ಸಾಧು-ಸಂತ, ದೇವಶ್ರೇಷ್ಠ, ಕಲಾಕಾರ, ಶೋಕರಾಮ, ಪ್ರಕಾಶಮಾನ ಎಂದು ಹೇಗೆ ಬೇಕಾದರೂ ಬದಲಿಸಿಕೊಳ್ಳಿ) ಹೇಳಿದ್ದು ಕೇಳಿಕೊಂಡು ಬರೆಯುವ ನಿಮ್ಮ ಬಗ್ಗೆಯೇ ಓದುಗರಿಗೆ ಇಷ್ಟು ವಿಶ್ವಾಸವಿದೆ ಎಂದಾದರೆ, ಜಗಜ್ಜಾಹೀರಾಗಿರುವ ನಿಮ್ಮ ಕಲ್ಯಾಣ ಗುಣಗಳನ್ನು ನಾನು ಬರೆದರೆ ಅದೇ ಓದುಗರು ನಂಬದಿದ್ದಾರೆಯೇ? ನಿಮ್ಮ ಬಗ್ಗೆ ಒಂದು ಹಂತದ ಗೌರವವನ್ನು ಇಟ್ಟುಕೊಂಡಿದ್ದವನಾದ ನನ್ನ ಬಗ್ಗೆ ಏನೇನೋ ಬರೆಯುವ ಜರೂರತ್ತಾದರೂ ಏನಿತ್ತು ....?-ಮರು ಸವಾಲೆಸೆದಾಗ ಬಡಬಡಿಸಲಾರಂಭಿಸಿದರು.
‘ನಾನೇಕೆ ನಿಮ್ಮ ಬಗ್ಗೆ ಬರೆದೆ ಎನ್ನುವುದನ್ನು ಭಟ್ಟರಿಗೆ ಹೇಳಿದ್ದೇನೆ ಕೇಳಿ’ ಅಂದರು.
‘ನನ್ನ ಗುರಿ ಏನಿದ್ದರೂ ಭಟ್ಟರು. ಅವರನ್ನು ನೀವು ದಂಡನಾಯಕನೆಂದು ಕರೆದುಕೊಂಡಿದ್ದೀರಿ. ಅವರ ಇಟ್ಟ ಗುರಿ ಒಮ್ಮೊಮ್ಮೆ ಅಕ್ಕ ಪಕ್ಕದಲ್ಲಿರುವ ನಿಮ್ಮಂಥ ಪೇದೆಗಳಿಗೂ ಬೀಳಬಹುದು. ಅದಕ್ಕೆ ನಾನೇನೂ ಮಾಡಲಾಗುವುದಿಲ್ಲ...’ಎನ್ನುವ ಮೂಲಕ ಸತ್ಯವನ್ನು ಮೊದಲಬಾರಿಗೆ ಕಕ್ಕಿದ್ದರು.
ಉರಿದು ಹೋಯಿತು ನನಗೆ. ‘ಸ್ವಾಮಿ, ಗಂಡಸಾಗಿ ವ್ಯವಹರಿಸುವುದನ್ನು ಕಲಿಯಿರಿ. ತಾಕತ್ತಿದ್ದರೆ ನೇರವಾಗಿ ಗುರಿಯಿಟ್ಟು ಹೊಡೆಯಿರಿ. ನೀವು ಅಡ್ಡ ಕಸುಬಿ ಎಂಬುದನ್ನು ನಿಮ್ಮ ವರ್ತನೆಗಳಿಂದಲೇ ಸಾಬೀತು ಮಾಡಬೇಡಿ. ಸಂಪಾದಕ ಎನಿಸಿಕೊಂಡ ಮೇಲೆ ಆ ಸ್ಥಾನ ಗೌರವಕ್ಕೆ ತಕ್ಕಂತೆ ವರ್ತಿಸಬೇಕು. ಅದು ಬಿಟ್ಟು ನಾನು ಅವರಿಗೆ ಗಿಂಡಿ ಹಿಡಿದೆ, ಇವರನ್ನು ನಾಯಕನೆಂದು ಹೇಳಿಕೊಂಡೆ, ಅದಕ್ಕಾಗಿ ಹಾಗೆ ಬರೆದೆ ಎಂದೆಲ್ಲ ಹೇಳುವುದು ನಿಮ್ಮಂಥವರ ವ್ಯಕ್ತಿತ್ವಕ್ಕೆ ಶೋಭೆ ತರದು. ನೀವು ಇಂಥ ಹೇಡಿ ಎಂಬುದನ್ನು ಕೇಳಿ ಗೊತ್ತಿತ್ತು. ಇವತ್ತು ಅದನ್ನು ನನ್ನೆದುರು ನೀವೇ ಸಾಬೀತುಪಡಿಸಿದಿರಿ...ನಿಜವಾಗಿ ನಿಮ್ಮಲ್ಲಿ ನೈತಿಕತೆ ಇದ್ದುದೇ ಹೌದಾದರೆ, ನಿಮ್ಮ ಹೆಂಡತಿಯ ಹೆಗಲನ್ನು ಸವರಿದೆನೋ, ಮಗಳದ್ದೋ ಅಥವಾ ಇನ್ನಾರದ್ದೋ ಎಂಬುದನ್ನು ಸಾಬೀತು ಪಡಿಸಿ. ಅಥವಾ ಆದ ಪ್ರಮಾದವನ್ನು ಒಪ್ಪಿಕೊಳ್ಳಿ....’
-ಹೀಗೆ ನೇರವಾಗಿ ದಾಳಿಗಿಳಿದು ಎಲ್ಲಿ ಮುಂದುವರಿದೆನೋ ಅಷ್ಟರಲ್ಲಿ ಫೋನ್ ಬೀಪ್ ಶಬ್ದ ಹೊರಡಿಸಲಾರಂಭಿಸಿತ್ತು. ಅತ್ತಲಿಂದ ನಿರುತ್ತರನಾದದ್ದರ ಪ್ರತೀಕವಾಗಿ ಪೋನ್ ಕಟ್ ಆಗಿತ್ತು.
ಆ ನಂತರ ರಾತ್ರಿ೧೨-೨೦ರವರೆಗೆ ನಿರಂತರವಾಗಿ ಕನಿಷ್ಠ ಹತ್ತುಬಾರಿ ಪ್ರಯತ್ನಿಸಿದರೂ ಅವರು ನನ್ನ ಕರೆಯನ್ನು ಸ್ವೀಕರಿಸಿಲ್ಲ. ಬಹುಶಃ ಇನ್ಯಾವತ್ತು ನನ್ನೊಂದಿಗೆ ಮುಖಾಮುಖಿಯಾಗುವ ಧೈರ್ಯವನ್ನೂ ಮಾಡಲಾರರು. ಆದರೆ ಅನಿವಾರ್ಯತೆ ಎಂಬುದಿದೆಯಲ್ಲಾ ? ಏಕೆಂದರೆ ಈಗಾಗಲೇ ನಾನು ಕಾನೂನು ಸಮರಕ್ಕೆ ಇಳಿದಿದ್ದೇನೆ. ನನ್ನ ಕರೆಯನ್ನು ತಿರಸ್ಕರಿಸಿದಷ್ಟು ಸುಲಭದಲ್ಲಿ ನ್ಯಾಯಾಲಯದ ಕರೆಯನ್ನು ತಿರಸ್ಕರಿಸಲಾಗುವುದಿಲ್ಲ. ಒಂದೆರಡು ಬಾರಿ ತಪ್ಪಿಸಿಕೊಳ್ಳಬಹುದು. ಆದರೆ ಕೊನೆಗೊಮ್ಮೆಯಾದರೂ ಬರಲೇಬೇಕು. ನನ್ನೊಳಗೆ ಇನ್ನೂ ಕೇಳದೇ ಉಳಿದು ಹೋದ ಪ್ರಶ್ನೆಗಳನ್ನು ನ್ಯಾಯ ಪೀಠದೆದುರು ನಾನಲ್ಲದಿದ್ದರೂ ನನ್ನ ವಕೀಲರು ಕೇಳುತ್ತಾರೆ. ಆಗಲೂ ‘ನಾನು ಎಷ್ಟು ಹೆಂಡತಿಯರನ್ನು ಮಾಡಿಕೊಂಡರೂ, ಯಾರೊಂದಿಗೆ ಮಲಗಿದರೂ, ಯಾರ ಬಗ್ಗೆ ಬರೆದರೂ ಈ ಸಮಾಜಕ್ಕೇನು’ ಎಂಬ ಮುಖೇಡಿ ಉತ್ತರವನ್ನೇ ನೀಡಲಾಗುವುದಿಲ್ಲವಲ್ಲಾ ? ಆ ದಿನಕ್ಕಾಗಿ ಕಾಯುತ್ತಿದ್ದೇನೆ. ನನ್ನ ನೈತಿಕತೆಯಲ್ಲಿ, ಹಾಗೂ ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ನನಗೆ ನಂಬಿಕೆ ಇದ್ದೇ ಇದೆ.
ಅಷ್ಟಕ್ಕೂ ಈತನ ಕೊಳೆತನವನ್ನೆಲ್ಲಾ ಸಹಿಸಿಕೊಳ್ಳುವುದು ಈ ಸಮಾಜದ ಕರ್ಮವೇ ?
ಇದೇ ಪ್ರಶ್ನೆಯನ್ನು ಆರು ತಿಂಗಳ ಹಿಂದೆಯೇ ವಿಜಯ ಕರ್ನಾಟಕ ಕಚೇರಿಯಲ್ಲಿ ಕುಳಿತು ಕೇಳಿದ್ದೆ. ಅದೇ ಕಾರಣಕ್ಕೇ ಆತ ನನ್ನ ವಿರುದ್ಧ ಬಾಯಿಗೆ ಬಂದದ್ದನ್ನೆಲ್ಲಾ ಬರೆಯುತ್ತಿದ್ದಾರೆ. ಅದರ ವಿವರಕ್ಕಾಗಿ ಇನ್ನೊಂದು ದಿನ ಕಾಯಿರಿ. ಬರೆಯುತ್ತೇನೆ.
About Me
- ರಾಧಾಕೃಷ್ಣ ಎಸ್.ಭಡ್ತಿ
- ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.
ಒಳ್ಳೆ ಕೆಲಸ ಮಾಡಿದ್ರಿ ಸಾರ್. ಇಂಥ ಬಿಕನಾಸಿಗಳಿಗೆ ಇದೆ ಸರಿಯಾದ ಪಾಠ.
ReplyDeleteಆತನನ್ನು ಕಾನೂನಿನ ಕತ್ತರಿಯಲ್ಲಿ ಬಲವಾಗಿ ಸಿಕ್ಕಿಸಿ. ಯಾವುದೇ ಕಾರಣಕ್ಕೂ ರಾಜಿಯಾಗದಿರಿ.
ReplyDeleteಈ ಕ್ರಿಯೆ ಖಂಡಿತಾ ಮೆಚ್ಚತಕ್ಕದ್ದೆ. ಖುಷಿಯಾಯ್ತು
ReplyDeleteNimma gundige naa mechhide sir.. pull him to court and make him naked in front of his readers only, he hurt many lives but somehow escaped. Please do not leave this time
ReplyDeleteBy the way he has posted in his facebook page that - he is joining Janashree Channel. Hopefully his paper will close soon.
ReplyDeleteಭಡ್ತಿ ಅಣ್ಣಾ.... ತುಂಬಾ ಒಳ್ಳೆ ಲೇಖನ.... ನೀವು ಆ ಫೋನ್ ಕಾಲ್ ರೆಕಾರ್ಡ್ ಮಾಡಿ ಇಟ್ಟುಕೊಳ್ಳಬೇಕಿತ್ತು..... ಅದೇ ದೊಡ್ಡ ಸಾಕ್ಷಿ ಆಗುತ್ತಿತ್ತು......
ReplyDeletei just cant believe he told his targets are brahmins...
ReplyDeletesuch a cheapo...
people like him are the reason why God gifted us with two middle fingers...
Good reply.
ReplyDeleteಭಡ್ತಿ ಅವರೇ,
ReplyDeleteನಿಮ್ಮ ಈ ನಡೆ ನನಗೆ ತುಂಬಾ ಹಿಡಿಸಿತು.
ಫೋನ್ ಕರೆ ಸ್ವೀಕರಿಸದಿದ್ದರೆ ಅವನ ಮನೆಗೇ ಹೋಗೋಣಂತೆ.
ಕರೆಯಿರಿ ನಮ್ಮನ್ನು ನಾವೂ ಬರುತ್ತೇವೆ, ಎಲ್ಲರೂ ಒಟ್ಟಾಗಿ ಪ್ರಶ್ನೆ ಕೇಳೋಣ.
ಕಳೆ ಕೀಳುವ ಕೆಲಸ ಒಟ್ಟಿಗೇ ಮಾಡೋಣ. ಆದರೇ ಕೆಸರೆರಚಾಟ ಬೇಡ.
Sir He is FRAUD.... WE can see his drunked face and tell!!
ReplyDeleteNayi bogilidare.... Devarge ge Yenu..... So Dont Worry Sir.....!!!
ReplyDeleteneeli mukhada guuli patrakarthanige sariyada reply
ReplyDeletedevare bandru RB ge buddi heloke agalla, RB astondu arrogant man
ReplyDeletepsychology-yalli paranoid emba manorogavide. adu RBge antikontide. manassina tiluvalikege bandaroo saripadisalagada rogavadu.
ReplyDeleteUnless and until this menace(RB) has not been tackled this will certainly spoil the entire society These kinds of rouges need to be out caste permanently, as later they will confine to their own gutter and never try to meddle with the decent sociological set up. We need to practice cast ism about this kind of rabies virus. If you are allowing these kinds further they are capable of creating a community who are having the mind set of pledging their own mother and daughters for the sake of their own survival. You nick name him as Kamatipura. This out rightly suits him.
ReplyDeleteಭಡ್ತಿ ಅಣ್ಣಾ...ಪತ್ರಿಕೋದ್ಯಮ ಕ್ಷೇತ್ರದಲ್ಲಿ ಇನ್ನು ಮುಂದೆ ಈ ರೀತಿಯ ಕೊಳಕು ಬರಹಗಾರರು ಹುಟ್ಟಿಕೊಳ್ಳಬಾರದು,ಆ ರೀತಿ ಝಾಡಿಸಿ ಒದೆಯೋಣ...
ReplyDeleteನಿಮ್ಮ ಸಂಭಾಷಣೆಯನ್ನು ರೆಕಾರ್ಡ್ ಮಾಡಿ ಅಪ್‌ಲೋಡ್ ಮಾಡಿದ್ದರೆ ನೀವು ಬರೆದಿರುವುದೆಲ್ಲಾ ಸತ್ಯ ಎಂದು ನಂಬಲು ಒಂದು ಸಾಕ್ಷಿ ಅಂತ ಇರುತ್ತಿತ್ತು... ಈಗ ನಡೆಯುತ್ತಿರುವ ಮೀಡಿಯಾ ವಾರ್ಸ್‌ನಲ್ಲಿ ಯಾರು ಸತ್ಯ ಹೇಳುತ್ತಿದ್ದಾರೆ... ಯಾರು ಸುಳ್ಳು ಹೇಳುತ್ತಿದ್ದಾರೆ ಅಂತ ತಮ್ಮ ವಿರೋಧಿಗಳಿಗೆ ಹಾಗೂ ತಮ್ಮ ಪರವಾಗಿರುವವರಿಗೆ perfect clearance ಸಿಗುತ್ತಿತ್ತು...
ReplyDeleteಆ "ಲೊಟ್ಟೆ ಪುರುಷ" ನ ಮಾತಿಗೆ ಕಿವಿಗೊಡದಿರುವುದೆ ಉತ್ತಮ. ಭಡ್ತಿಯವರೇ ನೀವು ಆ ಮನುಷ್ಯನ ಹೆಸರನ್ನು ನೇರವಾಗಿ ಪ್ರಸ್ತಾಪಿಸಬೇಕಿತ್ತು. ಯಾಕ೦ದ್ರೆ ಇನ್ನೂ ಆ "ಪಾನಿ ಪತ್ರಕರ್ತ"ನ ಬಗ್ಗೆ ಯಾರಾದ್ರು ಗೌರವ ಇಟ್ಟುಕೊ೦ಡಿದ್ದರೆ....!?
ReplyDeleteಮೂರನ್ನು ಬಿಟ್ಟವಳೇ ಸೀತೆ ಪಾತ್ರ ಚೆನ್ನಾಗಿ ಮಾಡೋದು''good keep arguing
ReplyDeleteneevu call record madikondu blog nalli
ReplyDeletepost madabekittu che miss madidiri
Avanige Ravi Kolegere andare chennagi opputte, Badtiyavare.Eetanu Belagre Krishna Shastriyavra kutumbadalli huttiddavano?Ettana mamara ettana kage?
ReplyDeleteHegalu Savaruvudu andre enu ?
ReplyDeleteGreat.... Dont spare him....
ReplyDeletenaanu nim follower ade! naithikathe sathyakke sir yavathu jaya.
ReplyDeleteಸರ್ ಅದನ್ನು ನಾವು ಓದಿದಾಗಗಲೇ ನಿರ್ಧರಿಸಿದ್ದೆವು. ಅದು ಪೊಳ್ಳು ವರದಿಯೆಂದು, ನಿಮ್ಮ ಕಾನೂನು ಹೋರಾಟದಿಂದ ಅವನ ಜಂಗಾಬಲವೇ ಹುದಗಿ ಹೋಗುವುದರಲ್ಲಿ ಸಂಶಯವೇ ಇಲ್ಲ. ನಿಮ್ಮೊಂದಿಗೆ ಸಹಸ್ರಾರು ಜನರ ಹಾರೈಕೆ ಇದೆ. ಗೆಲವು ನಮ್ಮದೆ
ReplyDelete