About Me

My photo
ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.

Saturday, February 5, 2011

ಈ ಪರಿ ದ್ವೇಷ ಅವನ ತಪ್ಪಲ್ಲ, ಮಾನಸಿಕ ವಿಕೃತಿ


ದು ಮೂಲಭೂತ ಪ್ರಶ್ನೆ. ಕೊಡೆ ಹಿಡಿಯಲು ಕಾರಣವೇನು ?
ಉತ್ತರ ಬಹಳ ಸರಳ. ಒಂದೇ ಮಳೆ ಸುರಿಯುತ್ತಿರಬೇಕು. ಇಲ್ಲವೇ ಬಿಸಿಲು ಭಾರಿಸುತ್ತಿರಬೇಕು. ‘ನೀರು-ನೆರಳು’ಎರಡೇ ಕಾರಣಕ್ಕೆ ಕೊಡೆ ಉಪಯೋಗಿಸುವುದು. ಇದನ್ನು ಹೊರತಾಗಿ ಒಮ್ಮೊಮ್ಮೆ ಅದನ್ನು ಬಳಸುವುದೆಂದರೆ ಕೆಲ ‘ಛತ್ರಿ’ ಮಂದಿ ರಸ್ತೆಯಲ್ಲಿ ಕೆಸರು ಎರಚಿಕೊಂಡು ಹೋಗುತ್ತಿರುತ್ತಾರೆ. ಅದು ನಮ್ಮತ್ತ ರಾಚದಿರಲಿ ಎಂಬ ಕಾರಣಕ್ಕೆ ಕೊಡೆಯನ್ನು ಅಡ್ಡಲಾಗಿ ಹಿಡಿಯುವುದೂ ಉಂಟೆನ್ನಿ.


ಇದ್ದಕ್ಕಿದ್ದಂತೆ ಕೊಡೆಯ ವಿಚಾರವನ್ನು ಇಲ್ಲಿ ಪ್ರಸ್ತಾಪಿಸುವುದಕ್ಕೂ ಕಾರಣವಿದೆ. ಒಪ್ಪಿಕೊಳ್ಳುತ್ತೇನೆ. ಈ ಸಮಾಜದಲ್ಲಿ ನಮ್ಮ ಎಲ್ಲ ನಡೆಗಳಿಗೂ ನಾವು ಉತ್ತರಿಸಲೇಬೇಕಿಲ್ಲ. ಹಾಗೆ ಮಾಡಿದರೆ ಹೀಗೆ, ಹೀಗೆ ಮಾಡಿದರೆ ಹಾಗೆ ಪ್ರಶ್ನಿಸುವ ಜನ ಇದ್ದೇ ಇರುತ್ತಾರೆ. ನಮ್ಮ ಆತ್ಮ ಸಾಕ್ಷಿಗನುಗುಣವಾಗಿ ನಾವು ನಡೆದುಕೊಳ್ಳುವುದೇ ಸೂಕ್ತ. ಇನ್ನು ಕೆಲವೊಂದಕ್ಕೆ ಕಾಲವೇ ಉತ್ತರಿಸುತ್ತದೆ. ಹೀಗಿದ್ದೂ ಛತ್ರಿ ಮಂದಿ ವಿನಾಕಾರಣ ಕೆಸರು ಎರಚಲು ಬಂದಾಗ ಕೊಡೆಯನ್ನು ಅಡ್ಡ ಹಿಡಿಯಲೇಬೇಕಾಗುತ್ತದೆ. ಮಾತ್ರವಲ್ಲ ಅಂಥವರನ್ನು ನಿಲ್ಲಿಸಿ ಚೆನ್ನಾಗಿ ಉಗಿದು ಮುಖದ ನೀರಿಳಿಸವುದೂ ಅಗತ್ಯವಾಗುತ್ತದೆ.


ನಾನು ‘ನೀರ್‌ಸಾಧಕ್’ನನ್ನು ಬಿಟ್ಟು ‘ಗಿಂಡಿಮಾಣಿ’ಯ ಬೆನ್ನು ಹತ್ತಿದಾಗ ಬಹಳಷ್ಟು ಮಂದಿ ಇದರ ಔಚಿತ್ಯವನ್ನು ಪ್ರಶ್ನೆ ಮಾಡಿದರು. ಅದು ಸಹಜವೂ ಸಹ. ಹಾಗೆಂದು ಎಲ್ಲದಕ್ಕೂ ಉತ್ತರಿಸಲೇಬೇಕೆಂದೇನೂ ಇಲ್ಲ. ಏಕೆಂದರೆ ಇಂಥ ಬ್ಲಾಗ್‌ಗಳನ್ನು ಓದುವುದೂ, ಬಿಡುವುದು ಓದುಗರ ಸ್ವಾತಂತ್ರ್ಯಕ್ಕೆ ಬಿಟ್ಟ ವಿಚಾರ. ಪತ್ರಿಕೆಗಳಲ್ಲಿ ಅಂಕಣವಾದರೆ ಹಾಗಲ್ಲ. ಅಲ್ಲಿ ಓದುಗ ದೊರೆಯ ಆಜ್ಞೆಯೇ ಅಂತಿಮ. ಹೀಗಿದ್ದರೂ ನನ್ನ ತೀರಾ ಅಭಿಮಾನಿ ಓದುಗರಲ್ಲಿ ಕೆಲವರು; ಶ್ರೀನಿವಾಸ್, ಗುರು(ಮಯೂರ), ಹರಿಹರಭಟ್ ಮತ್ತಿತರರಂಥವರು ನರಿಕೊಳಗೆರೆ ಮತ್ತು ನಮ್ಮ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಪ್ರಶ್ನಿಸಿದರು. ಅಂಥ ಆತ್ಮೀಯ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವುದು ನನ್ನ ಕರ್ತವ್ಯ ಎಂಬ ಕಾರಣಕ್ಕೆ ಈ ಬರಹ.


ಒಂದು ವಿಚಾರವನ್ನು ಮೊದಲೇ ಸ್ಪಷ್ಟ ಪಡಿಸಿಬಿಡುತ್ತೇನೆ. ಕೊಳಗೆರೆಗೂ ನನಗೂ ಯಾವತ್ತೂ ಸ್ನೇಹವೆಂಬುದು ಇರಲೇ ಇಲ್ಲ. ಆತನ ಪತ್ರಿಕೆಯನ್ನು ನಾನು ಯಾವತ್ತೂ ಗಂಭೀರವಾಗಿ ಪರಿಗಣಿಸಿಯೂ ಇರಲಿಲ್ಲ. ಏಕೆಂದರೆ ಯಾವುದೇ ಅಧ್ಯಯನವಿಲ್ಲದೇ, ಹೆಚ್ಚಿನ ಶ್ರಮವಿಲ್ಲದೇ ಕೇವಲ ಭಾವನಾತ್ಮಕ ಬರಹಗಳಿಂದ, ಪ್ರಚೋದಕ ಸಾಹಿತ್ಯದಿಂದ, ಅತಿರಂಜಿತ ವರದಿಗಳಿಂದ, ರತಿ-ಅಪರಾಯ ವಿಷಯಗಳಿಂದಲೇ ಓದುಗರ ಮನಸ್ಸನ್ನು ಕದಡುವುದು ನನ್ನ ದೃಷಿಯಲ್ಲಿ ಅತ್ಯಾಚಾರವೆಂದೇ ಪರಿಗಣಿತ. ಅದೇನೂ ಮಹಾ ವಿದ್ಯೆಯೂ ಅಲ್ಲ; ಸಾಧನೆಯೂ ಅಲ್ಲ. ಆದರೆ ನೀರಿನಂಥ ಪಕ್ಕಾ ವಿಜ್ಞಾನವನ್ನು ಓದಿಸುವುದು ಎಂಥ ಸಾಹಸವೆಂಬುದು ನಾನು ನನ್ನಂಥವನಿಗೆ ಮಾತ್ರ ಗೊತ್ತು. ನಾಲ್ಕು ಗೋಡೆಗಳ ನಡುವೆ ಕುಳಿತು, ಇಂಟರ್‌ನೆಟ್ ಸಹಾಯದಿಂದಲೋ, ನಾಲ್ಕಾರು ಪುಸ್ತಕಗಳ ಸಾಲನ್ನು ಕದ್ದೋ ಬರೆಯವುದು ಇಂಥ ವಿಚಾರಗಳಲ್ಲಿ ಸಾಧ್ಯವೇ ಇಲ್ಲ. ಇದಕ್ಕೊಂದು ಅಧ್ಯಯನದ ಶಿಸ್ತು ಬೇಕು. ನಾಲ್ಕಾರು ಮಂದಿಯ ಜತೆ ಚರ್ಚಿಸಬೇಕು. ನೂರಕ್ಕೆ ನೂರು ಕ್ಷೇತ್ರ ಕಾರ್ಯವನ್ನು ಬೇಡುವ ಕೆಲಸವದು. ಕಳೆದ ಹತ್ತು ವರ್ಷ ನಾನಿದನ್ನು ಮಾಡಿದ್ದೇನೆ ಎಂಬುದಕ್ಕೆ ನನ್ನ ಓದುಗರೇ ಸಾಕ್ಷಿ.


ಕ್ಷುಲ್ಲಕ ವಿಷಯಗಳನ್ನು ನಾನು ಎಂದೂ ಬರೆದವನಲ್ಲ. ಹೀಗಾಗಿ ನನ್ನ ಅಂಕಣಗಳಲ್ಲಾಗಲೀ, ನಾನು ಕಾರ್ಯ ನಿರ್ವಹಿಸಿದ ಯಾವುದೇ ಪತ್ರಿಕಾ ವಿಭಾಗದಲ್ಲಾಗಲೀ ಈ ಕೊಳಗೆರೆಯ ವಿಚಾರವನ್ನು ಪ್ರಸ್ತಾಪಿಸುವ ಔಚಿತ್ಯ ಕಾಣಲಿಲ್ಲ. ಇಲ್ಲೂ ಬರೆಯುತ್ತಿರಲಿಲ್ಲವೇನೋ. ಆದರೆ ನಾವು ನೀರು ನೆರಳಿನಿಂದ ಹೊರಬಂದು ನಿಶ್ಯಸ್ತ್ರರಾಗಿ ನಿಂತದ್ದನ್ನು ನೋಡಿಯೇ ಈತ ಕಲ್ಲು ಬೀಸಲಾರಂಭಿಸಿದ್ದು. ಅದೂ ತಾನು ಗಾಜಿನ ಮನೆಯಲ್ಲಿ ನಿಂತು. ಹಾಗೆಂದು ನಾವೇನೂ ಆತ ಬೀಸಿದ ಕಲ್ಲಿಗೆಲ್ಲಾ ಗುರಿಯಾಗಬೇಕೆಂದೇನೂ ಇಲ್ಲವಲ್ಲಾ? ಅಥವಾ ನಾವು ಕನಿಷ್ಠ ಪ್ರತಿಭಟನೆಯನ್ನೂ ತೋರದ ದುರ್ಬಲರೂ ಆಗಿರಲಿಲ್ಲ.


ಶ್ರೀ ವಿಶ್ವೇಶ್ವರ ಭಟ್ ಮತ್ತು ಅವರ ನಡುವೆ ಸ್ನೇಹವಿದ್ದುದು ನಿಜ. ಭಟ್ಟರನ್ನು ಬಲ್ಲ ಎಲ್ಲರಿಗೂ ಗೊತ್ತು ಅವರ ಸ್ವಭಾವ ಎಂಥದ್ದು ಎಂಬುದು. ಸ್ನೇಹಶೀಲರಾದ ಅವರು ಯಾವತ್ತಿಗೂ ಯಾರ ಸ್ನೇಹವನ್ನೂ ನಿರಾಕರಿಸಿದ್ದಿಲ್ಲ. ಸುದ್ದಿಮನೆಯ ಒಳಗಿರಲಿ, ಹೊರಗಿರಲಿ ಅದನ್ನು ಸದುಪಯೋಗಪಡಿಸಿಕೊಂಡಿದ್ದಕ್ಕಿಂತ ದುರುಪಯೋಗಪಡಿಸಿಕೊಂಡವರೇ ಹೆಚ್ಚು. ಅದೇ ಸಾಲಿಗೆ ಈ ಕೊಳಗೆರೆಯೂ ಸೇರುತ್ತಾನೆ. ಸುದ್ದಿಮನೆಯ ಹೊರಗೆ ಇವನಾದರೆ ಒಳಗೆ ಆತನ ಒಂದಷ್ಟು ಶಿಷ್ಯರೂ ಇದ್ದಾರೆ. ಹಾಗೆಂದು ಯಾವತ್ತಿಗೂ ಇವ ನನ್ನ ಗೆಳೆಯ ಎಂದು ಭಟ್ಟರು ಸಾರಿಕೊಳ್ಳುತ್ತಾ ಹೋಗಲಿಲ್ಲ. ಇಂದಿಗೂ ಅವರದ್ದು ‘ಜನ್ಮೇಪಿ ಗೆಳೆತನ’ವೇ. ಅದನ್ನು ಉಳಿಸಿಕೊಳ್ಳುವುದು ಬಿಡುವುದು ಅವರವರಿಗೆ ಬಿಟ್ಟದ್ದು.


ಇನ್ನು ಪ್ರತಾಪ ಸಿಂಹ ಪಕ್ಕಾ ಸೈದ್ಧಾಂತಿಕ ಮನುಷ್ಯ. ಪ್ರತಾಪನ ವಿಚಾರಗಳು ನಮಗೆ ಸರಿ ಕಾಣುತ್ತಿಲ್ಲ ಎಂಬ ಮಾತ್ರಕ್ಕೆ ಆತನನ್ನು ವೈಯಕ್ತಿಕವಾಗಿ ಟೀಕಿಸುವುದು, ದ್ವೇಷಿಸುವುದು ಸರಿಯೇ ? ಇಲ್ಲಿ ಸಿದ್ಧಾಂತದ ವಿರೋಧ ಎನ್ನುವುದಕ್ಕಿಂತ ಪ್ರತಾಪನ ಜನಪ್ರಿಯತೆ, ಅಂಕಣಕಾರನಾಗಿ ಆತ ಬೆಳೆಯುತ್ತಿರುವ ವೇಗ ಕೊಳಗೆರೆಯಂಥವನಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂಬುದು ನನ್ನ ಭಾವನೆ. ಇದೂ ಸಹ ಅವರಿಬ್ಬರಿಗೆ ಸೇರಿದ್ದು.


ಹಾಗೆಂದು ನಾವುಗಳು ಪೂಜಿಸುವ ನಮ್ಮ ಸುದ್ದಿಮನೆಗೂ ಕೊಳಗೆರೆಯಂಥವನನ್ನು ಎಳೆದು ತಂದು, ಆತನ ಕಲ್ಯಾಣಗುಣಗಳನ್ನು ನಮ್ಮ ನಮ್ಮ ಅಂಕಣಗಳಲ್ಲಿ ಸಾರಬೇಕಿತ್ತೇ ? ಹಾಗೊಮ್ಮೆ ಮಾಡಿದ್ದರೆ ಕೊಳಗೆರೆಗೂ ನಮಗೂ ಉಳಿಯುವ ವ್ಯತ್ಯಾಸವಾದರೂ ಏನು ? ಅವನಂತೆ ಬೇರೆಯವರ ಬಗ್ಗೆ ಬರೆದೇ, ಯಾರದ್ದೋ ಚಾರಿತ್ರ್ಯ ವಧೆ ಮಾಡಿಯೇ ನಾವು ಅನ್ನ ಕಾಣಬೇಕಿಲ್ಲ; ಓದುಗರನ್ನು ಹೆಚ್ಚಿಸಿಕೊಳ್ಳಬೇಕಿಲ್ಲ. ಅದಕ್ಕಾಗಿ ಈವರೆಗೆ ಆತನ ಬಗ್ಗೆ ಎಲ್ಲ ಗೊತ್ತಿದ್ದೂ ಬರೆಯು ಪ್ರಸಂಗ ಬಂದಿರಲಿಲ್ಲ. ಮತ್ತು ನಮ್ಮ ಪತ್ರಿಕೆ ಅಂಥದ್ದಕ್ಕೆ ಸೂಕ್ತ ವೇದಿಕೆಯೂ ಅಲ್ಲ; ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವುದು ನಮ್ಮ ಜಾಯಮಾನವೂ ಅಲ್ಲ. ನನಗಂತೂ ಮೊನ್ನೆ ಮೊನ್ನೆ ನಾನು ‘ವಿಕ’ವನ್ನು ತೊರೆದು, ಆತ ನನ್ನ ಬಗ್ಗೆ ವೃಥಾ ಕೆಸರೆರಚುವವರೆಗೆ ಆತನೊಂದಿಗೆ ಸ್ನೇಹವೂ ಇರಲಿಲ್ಲ, ದ್ವೇಷವೂ ಇರಲಿಲ್ಲ.


ಹಾಗೆ ನೋಡಿದರೆ ಆ ಮನುಷ್ಯನ ಜತೆಗೆ ನಾನು ಮೊನ್ನೆ ಮೊನ್ನೆ ಫೊನ್‌ನಲ್ಲಿ ಮಾತನಾಡಿದ್ದೇ ಎರಡನೇ ಬಾರಿಯೋ, ಮೂರನೇ ಬಾರಿಯೋ. ಹಿಂದೊಮ್ಮೆ ಆತ ಕರ್ಮವೀರದ ಸಂಪಾದಕರಾಗಿದ್ದಾಗ ನಾನು ಆಗಷ್ಟೇ ಸಂಯುಕ್ತ ಕರ್ನಾಟಕಕ್ಕೆ ಸೇರಿದ್ದೆ. ಅದಾದ ಮೂರು ತಿಂಗಳಲ್ಲೇ ಆತನ ‘ಲೋಕ’ ಕೆ. ಶಾಮರಾವ್ ಅವರ ಮುಂದೆ ತೆರೆದುಕೊಂಡಿತ್ತು. ಅಷ್ಟೆ, ಅಕ್ಷರಶಃ ಅಲ್ಲಿಂದ ಓಡಿಸಿದ್ದರು ರಾಯರು. ಆನಂತರ ಕಪ್ಪು ಸುಂದರಿಯನ್ನು ಆರಂಭಿಸಿದ್ದು, ಪದ್ಮನಾಭ ನಗರದ ಸ್ಕೂಟರ್ ಗ್ಯಾರೇಜ್‌ನಲ್ಲಿ ಬೋರೆಂದು ಅತ್ತಿದ್ದು, ಯಾರ‍್ಯಾರೋ ಅವರ ತುತ್ತಿನ ಚೀಲ ತುಂಬಿದ್ದು, ಕೊನೆಗೂ ಪ್ರತಿಭಾ ನಂದಕುಮಾರ್ ಜತೆಗೆ ಬಂದು ಸಂಸ್ಥೆಗೆ ಕೊಡಬೇಕಿದ್ದ ಬಾಕಿ ಹಣವನ್ನು ಕಟ್ಟಿ ತಮ್ಮ ದ್ವಿಚಕ್ರ ವಾಹನವನ್ನು ಬಿಡಿಸಿಕೊಂಡು ಹೋಗಿದ್ದು, ವರ್ಷದಲ್ಲಿ ವಾರದ ಅಚ್ಚರಿಯೆನ್ನುತ್ತಲೇ ಬೊಗಳೆ ಬಿಟ್ಟು, ಸ್ವ ಕುಚ ಮರ್ಧನ ಮಾಡಿಕೊಳ್ಳುತ್ತಲೇ ಮತ್ತೆ ನಿಗರಿಕೊಂಡದ್ದು ಎಲ್ಲವೂ ಇತಿಹಾಸ...


ಆಗ್ಯಾವತ್ತೂ ಆತನನ್ನು ನೇರಾ ನೇರವಾಗಿ ಮಾತನಾಡಿಸಿದ್ದಿರಲಿಲ್ಲ. ಇದಾಗಿ ಸರಿ ಸುಮಾರು ಹತ್ತು ಹದಿನೈದು ವರ್ಷಗಳೇ ಕಳೆದಿದ್ದಿರಬಹುದು. ಒಂದು ದಿನ, ಅಲ್ಲಲ್ಲ...ರಾತ್ರಿ, ಇಂಥದ್ದೇ ‘ಮದ್ಯ’ರಾತ್ರಿ ಶ್ರೀ ವಿಶ್ವೇಶ್ವರ ಭಟ್ಟರ ಮನೆಯ ಮಹಡಿಯ ಮೇಲೆ, ತೀರಾ ಮರೆತು ಹೋದವನಂತೆ, ಹೊಸದಾಗಿ ಪರಿಚಯ ಮಾಡಿಕೊಂಡು ‘ಓ ಅಪ್ಪಿ...ಆರಾಮಿದ್ಯನೋ...ಮತ್ತೇನೋ ಮಾಣಿ...’ ಎಂದು ಪಕ್ಕಾ ಹವ್ಯಕ ಶೈಲಿಯಲ್ಲೇ ನನ್ನನ್ನು ಮಾತನಾಡಿಸಿದ್ದ. ಇನ್ನಿಲ್ಲದ ಅಚ್ಚೆಯಿಂದ ಬಿಗಿದಪ್ಪಿಕೊಂಡು ಬೆನ್ನು ಸವರಿದ್ದ. ಇಂಥವೆಲ್ಲ ಕಲೆಯಲ್ಲಿ ಆತ ನಿಷ್ಣಾತ ಎಂಬುದು ಗೊತ್ತಿದ್ದದ್ದೇ. ಆದರೂ ಸೌಜನ್ಯ ಮೀರಲಾರದೇ ಒಂದೆರಡು ಮಾತನಾಡಿ ಬಂದಿದ್ದೆ.


ಅದಾದ ಮೇಲೆ ಆತ ಮಾತನಾಡಿದ್ದು ನಾನು ‘ಲವಲವಿಕೆ’ಯ ಮುಖ್ಯಸ್ಥನಾದ ಮೇಲೆಯೇ. ಯಾವುದೋ ಲೇಖನ, ಯಾರ ಬಗ್ಗೆಯೋ ಬರೆದು ಕಳುಹಿಸಿದ್ದ. ಬಹುಶಃ ಅದನ್ನು ಪ್ರಕಟಿಸಲೇಬೇಕೆಂದು ಭಟ್ಟರ ಮೇಲೆ ಒತ್ತಡವನ್ನೂ ತಂದಿದ್ದಿರಬೇಕು. ಅದು ನನ್ನ ಟೇಬಲ್‌ಗೆ ಬರುವವರೆಗೂ ಈ ಮಹಾನುಭಾವನ ಲೇಖನವೆಂಬುದು ನನಗೆ ಅರಿವಿರಲಿಲ್ಲ. ಅಷ್ಟರಲ್ಲಾಗಲೇ ಅವರೇ ಪೋನ್ ಮಾಡಿದ್ದರಿಂದ ವಿಷಯ ಗೊತ್ತಾಯಿತು. ಆ ಹೊತ್ತಿಗಾಗಲೇ ವಿಜಯ ಕರ್ನಾಟಕಕ್ಕೆ ತನ್ನ ಎಂದಿನ ಹಳಸಲು, ಯಾವತ್ತೋ ಬರೆದಿಟ್ಟ (ವಾರದ ಅಚ್ಚರಿಯಲ್ಲಿ ಪ್ರಕಟಗೊಂಡು, ಪುಸ್ತಕವಾಗಿಯೂ ಹೊರ ಬಂದ) ಕಂತೆ ಪುರಾಣವನ್ನು ಹೊಚ್ಚ ಹೊಸ ವಿಚಾರವೆಂಬಂತೆ ಕೊಡುತ್ತಿದ್ದ. ಹತ್ತು ವರ್ಷಗಳಿಂದ ಅದು ಪ್ರಕಟಗೊಳ್ಳುತ್ತಾ ಜಾಗ ತಿನ್ನುತ್ತಲೂ ಇತ್ತು. ಇದೀಗ ಲವಲವಿಕೆಗೂ ಲೇಖನ ಕೊಡುತ್ತಿದ್ದಾನೆಂಬುದು ನನಗೆ (ಬಹುಶಃ ನಮ್ಮ ಸಂಪಾದಕರಿಗೆ ಸಹ ಅಂದುಕೊಳ್ಳುತ್ತೇನೆ) ನುಂಗಲಾರದ ತುತ್ತಾಗಿತ್ತು. ಇದ್ಯಾವ ‘ಕರ್ಮ’ ಗಂಟು ಬಿತ್ತು ಎಂಬ ಮನದಿಂಗಿತ ಅರಿವಿಲ್ಲದೇ ಸ್ವಗತ ರೂಪ ಪಡಕೊಂಡಿತ್ತು. ಅದೇ ನಾನು ಮಾಡಿದ ಮೊದಲನೆಯ ತಪ್ಪೇನೋ. ನಾನು ತೀರಾ ಅಕ್ಕರೆಯಿಂದ ರೂಪಿಸುತ್ತಿರುವ ಲವಲವಿಕೆಯಲ್ಲಿ ಇಂಥ ಲೇಖನಗಳನ್ನು (ರಾಜಕಾರಣಿಯೊಬ್ಬರ ಬಗ್ಗೆ ಬರೆದು ಕಳುಹಿಸಿದ್ದ) ನಾನು ನಿರೀಕ್ಷಿರಲಿಲ್ಲ. ಹೀಗಾಗಿ ಅದನ್ನು ‘ಕರ್ಮ’ ಎನ್ನದೇ ವಿ ಇರಲಿಲ್ಲ. ನಮ್ಮ ಪತ್ರಿಕಾ ಕಚೇರಿಯೊಳಗೇ ಇದ್ದು ಆತ ಬಿಸಾಕುವ ಬಿಸ್ಕೆಟ್‌ಗೆ ಜೊಲ್ಲು ಸುರಿಸುತ್ತಾ ಕದ್ದು ಕಚೇರಿಯ ಆಂತರಿಕ ವಿಚಾರಗಳನ್ನೂ ಆತನಿಗೆ ಪೂರೈಸುತ್ತಿದ್ದ ನಾಯಿಗಳು ಈ ‘ಕರ್ಮ’ಕ್ಕೆ ಉಪ್ಪು ಖಾರ ಸೇರಿಸಿ ತಕ್ಷಣ ವರದಿ ಮಾಡಿದರು. ಅಲ್ಲಿಂದಲೇ ಆತ ಸಮಯಕ್ಕಾಗಿ ಕಾಯುತ್ತಿದ್ದಿರಬೇಕು.


ಅದು ಬಿಟ್ಟರೆ ನಾನು ಶ್ರೀ ಭಟ್ಟರನ್ನು ಪತ್ರಿಕೋದ್ಯಮದಲ್ಲಿ ಮಾದರಿ ವ್ಯಕ್ತಿಯನ್ನಾಗಿ ಸ್ವೀಕರಿಸಿದ್ದೇನೆ ಎಂಬುದೂ ಅವನ ಇಂಥ ಕೃತ್ಯಕ್ಕೆ ಕಾರಣವಾದರೆ ಅದಕ್ಕೆ ನಾನು ಹೊಣೆಯಲ್ಲ. ಭಟ್ಟರಿಗಿಂತ ಯೋಗ್ಯ ವ್ಯಕ್ತಿ ಸದ್ಯಕ್ಕೆ ನನಗೆ ಪತ್ರಿಕೋದ್ಯಮದಲ್ಲಿ ಬೇರಾರೂ ಕಾಣುತ್ತಿಲ್ಲ. ಒಂದೊಮ್ಮೆ ಅಂಥ ಯೋಗ್ಯತೆಯನ್ನು ಆತ ಪ್ರದರ್ಶಿಸುವ ಕನಸನ್ನೂ ನಾವಿಂದು ಕಾಣಲು ಸಾಧ್ಯವಿಲ್ಲ. ಛೆ, ಎಂಥಾ ಅಸಂಬದ್ಧ ಹೋಲಿಕೆ; ಕ್ಷಮಿಸಿ.


ಆತ ನನ್ನನ್ನು ದ್ವೇಷಿಸಲು ಇರುವ ಇನ್ನೊಂದು ಕಾರಣವೆಂದರೆ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ. ಅನುಮಾನವೇ ಇಲ್ಲ, ನೂರಕ್ಕೆ ನೂರು ಶ್ರೀಗಳನ್ನು ನಾನು ಅಪಾರವಾಗಿ ಗೌರವಿಸುತ್ತೇನೆ. ಅದು ವ್ಯಕ್ತಿಗತವಾಗಿಯಷ್ಟೇ ಇರುವ ಪ್ರೀತಿಯಲ್ಲ. ಗೋ ಸಂರಕ್ಷಣೆಯ ನಿಟ್ಟಿನಲ್ಲಿ ಅವರು ಮಾಡಿದ ಕೆಲಸವೇ ಅಂಥದ್ದು. ತಮ್ಮ ಇಡೀ ಜೀವನವನ್ನು ಇಂಥ ಒಂದು ಅಭಿವೃದ್ಧಿಪರ ಕೆಲಸಕ್ಕೆ ಸಮರ್ಪಿಸಿಕೊಂಡದ್ದು ಸಾಮಾನ್ಯದ ಮಾತಲ್ಲ. ಅಂಥ ಶಕ್ತಿಯನ್ನು ಗೌರವಿಸುವ ಹೆಮ್ಮೆ ನನಗಿದೆ. ಒಂದೊಮ್ಮೆ ಅಂಥವರಿಗೆ ‘ಗಿಂಡಿಮಾಣಿ’ಯಾಗಿ ಸೇವೆ ಸಲ್ಲಿಸುವ ಭಾಗ್ಯ ನನ್ನದಾದರೆ ನನ್ನ ಜೀವನಕ್ಕಷ್ಟೇ ಅಲ್ಲ, ನನ್ನ ನೀರಿನ ಕೆಲಸಕ್ಕೊಂದು ಸಾರ್ಥಕ್ಯ. ಏಕೆಂದರೆ ಸಾಮಾಜಿಕ ಕಳಕಳಿಯ ವಿಚಾರದಲ್ಲಿ ಅಷ್ಟೊಂದು ಕಮಿಟೆಡ್ ಮನಸ್ಸು ಶ್ರೀಗಳದ್ದು.


ಇವು ಮೂರೇ ಕಾರಣಕ್ಕೆ ಕೊಳಗೆರೆಗೆ ನನ್ನ ಬಗ್ಗೆ ಈ ಪರಿಯ ದ್ವೇಷವಾದರೆ ನಾನೇನೂ ಮಾಡಲಿಕ್ಕಾಗುವುದಿಲ್ಲ. ದ್ವೇಷಕ್ಕೆ ಪ್ರತಿಯಾಗಿ ನನ್ನದು ಸಣ್ಣದೊಂದು ವಿಷಾದ ಪೂರಿತ, ಅಯ್ಯೋ ಎನ್ನುವ ಅನುಕಂಪಯುಕ್ತ ನಗೆಯೊಂದೇ ಉತ್ತರವಾಗುತ್ತದೆ.


ಆದರೆ, ಅಸಲಿ ಸಂಗತಿ ಅದಲ್ಲ. ಆತನಿಗೆ ದ್ವೇಷ, ವ್ಯಂಗ್ಯ, ಟೀಕೆ, ಕುಹಕ, ಕಾಮ ವಿಕೃತಿಗಳೇ ಬದುಕು. ಒಂದೊಮ್ಮೆ ಆತನಿಗೆ ದ್ವೇಷಿಸಲು ಯಾರೂ ಸಿಗಲಿಲ್ಲ ಎಂತಾದರೆ ತನ್ನನ್ನೇ ತಾನು ದ್ವೇಷಿಸಿಕೊಳ್ಳುತ್ತಾನೆ. ಆತ ತನ್ನ ಹೆಂಡತಿಯರನ್ನೂ, ಮಕ್ಕಳುಗಳನ್ನೂ ದ್ವೇಷಿಸದೇ ಬಿಟ್ಟವನಲ್ಲ. ಅದೊಂದು ಮಾನಸಿಕ ವಿಕೃತಿ; ಮನೋರೋಗ. ಬೇಕಿದ್ದರೆ ಮನೋರೋಗ ತಜ್ಞರನ್ನು ಕೇಳಿ ನೋಡಿ. ಒಬ್ಬೊಂಟಿಯಾಗಿ ಬೆಳೆದವರಲ್ಲಿ, ಅನಾಥ ಪ್ರಜ್ಞೆ ಕಾಡುತ್ತಿರುವವರಲ್ಲಿ, ಈ ಸಮಾಜದ ನಿಕೃಷ್ಟೆಗೆ, ಅವಹೇಳನಕ್ಕೆ ಗುರಿಯಾದವರಲ್ಲಿ ಇಂಥ ವಿಕೃತಿಗಳು ಕಂಡುಬರುತ್ತವೆ.


ಅದು ಅವನ ತಪ್ಪಲ್ಲ. ಹುಟ್ಟುವ ಮೊದಲೇ ಅಪ್ಪನಿಗೆ ಈತ ಬೇಡವಾಗಿದ್ದ. ಕೈ ಮೀರಿ ಹುಟ್ಟಿದ ಈತನನ್ನು ಮಗ ಎಂದುಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ತಂದೆಯೇ ಇಲ್ಲದವನಾದ ಮೇಲೆ ಇನ್ನು ತುಂಬು ಕುಟುಂಬದ ಮಾತಂತೂ ದೂರವಾಯಿತು. ತಾಯಿಯೊಬ್ಬಳೇ ಪ್ರೀತಿಗೆ ದಿಕ್ಕೂ. ಅದನ್ನಾದರೂ ಪೂರ್ಣ ಕಾಣಲು ಈತನೊಳಗಣ ಅಸಹನೆ ಬಿಡಲಿಲ್ಲ. ಸಮಾಜದ ಕುಹಕ, ಟೀಕೆಗಳಿಗೆ ಪ್ರತಿಯಾಗಿ ಬಾಲ್ಯದಿಂದಲೇ ದ್ವೇಷ, ಅಸಹನೆಗಳು ಈತನ ಮೈಗೂಡಿದ್ದರೆ ಅದಕ್ಕೆ ಯಾರು ಹೊಣೆ ? ಹುಟ್ಟಿಸಿದವನ ಬುದ್ಧಿವಂತಿಕೆ ರಕ್ತಗತವಾಗಿ ಬಂದ ಮಾತ್ರಕ್ಕೆ ಬೆಳೆದ ವಾತಾವರಣವೂ ಅದಕ್ಕೆ ಪೂರಕವಾಗಿರಬೇಕೆಂಬುದೇನೂ ಇಲ್ಲವಲ್ಲಾ? ಸಂಸ್ಕಾರ ಇಲ್ಲದ ಮಕ್ಕಳು ಏನಾಗುತ್ತಾರೆ ಎಂಬುದಕ್ಕೆ ಈತ ಸ್ಪಷ್ಟ ಉದಾಹರಣೆ.


ಬದುಕಿನಲ್ಲಿ ನಿರಂತರ ಕಾಡಿದ ಅಭದ್ರತೆ, ಈ ಸಮಾಜದ ಬಗ್ಗೆ ಇದ್ದ ತಿರಸ್ಕಾರ, ಹುಟ್ಟಿನಿಂದಲೇ ಬಂದ ಚಾಂಚಲ್ಯ, ಬೆಳೆಯುತ್ತಾ ದೊರೆತ ಸಹವಾಸ, ಒಳಗೊಳಗೇ ಬುಸುಗುಡುವ ಕಾಮ ವಿಕೃತಿ, ಇವಕ್ಕೆಲ್ಲಾ ನೀರೆರದ ಅನಿರೀಕ್ಷಿತ ಕೀರ್ತಿ ಮತ್ತು ಸಿರಿವಂತಿಕೆ ಕೊಳಗೆರೆಯಂಥವನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ.
ವ್ಯಕ್ತಿಯೊಬ್ಬನ ಮಾನಸಿಕ ಅಸಮತೋಲನ ಆತನಿಗಷ್ಟೇ ಮಾರಕವಲ್ಲ. ಕುಟುಂಬ ಮತ್ತು ಸಮಾಜಕ್ಕೂ ಕಂಟಕ ಎಂಬುದಕ್ಕೆ ಇದು ಜ್ವಲಂತ ನಿದರ್ಶನ. ಅಯ್ಯೋ ಎನ್ನುವ ಒಂದೇ ಒಂದು ಅನುಕಂಪವನ್ನಲ್ಲದೇ ನಾನು, ನನ್ನ ತಲೆಮಾರಿನವರು ಬೇರಿನ್ನೇನು ಕೊಡಲು ಸಾಧ್ಯ? ಏಕೆಂದರೆ ಆಗಲೇ, ಬಾಲ್ಯದಲ್ಲೇ ಈತನನ್ನು ಆದರಿಸಿ, ಪ್ರೀತಿಯಿಂದ ಒಲಿಸಿ ಸರಿದಾರಿಗೆ ತಂದಿದ್ದರೆ ಇವತ್ತಿನ ಸಮಾಜದ ಎಷ್ಟೋ ಹೆಣ್ಣುಮಕ್ಕಳು ಜೀವನವಿಡೀ ಕಣ್ಣಿರಿನಲ್ಲಿ ಕೈತೊಳೆಯುವುದು ತಪ್ಪುತ್ತಿತ್ತು. ಎಷ್ಟೋ ತಂದೆ-ತಾಯಂದಿರ ಬಸಿರು ಸುಡುವುದು ನಿಲ್ಲುತ್ತಿತ್ತು. ಎಷ್ಟೋ ಮುಗ್ಧರು ಹಿಡಿಶಾಪ ಹಾಕುವುದು ನಿಲ್ಲುತ್ತಿತ್ತು. ಆದರೇನು ಮಾಡೋಣ ? ಇವತ್ತೂ ಕೈ ಮೀರಿ ಹೋಗಿದೆ.

18 comments:

  1. "ಬಿಸ್ಕೆಟ್‌ಗೆ ಜೊಲ್ಲು ಸುರಿಸುತ್ತಾ ಕದ್ದು ಕಚೇರಿಯ ಆಂತರಿಕ ವಿಚಾರಗಳನ್ನೂ ಆತನಿಗೆ ಪೂರೈಸುತ್ತಿದ್ದ ನಾಯಿಗಳು "
    ಛೇ.... ನಾಯಿಗಳು ಹೀಗಲ್ಲ, ಅವು ಬೆಳಸಿದವರಿಗೆ ಎಂದೂ ದ್ರೋಹ ಬಗೆಯಲಾರವು, ಅಲ್ಲಿ ಬೇರೆ ಪದ ಬಳಸಿ ಭಡ್ತಿ.

    ReplyDelete
  2. "ಹುಟ್ಟಿಸಿದವನ ಬುದ್ಧಿವಂತಿಕೆ ರಕ್ತಗತವಾಗಿ ಬಂದ ಮಾತ್ರಕ್ಕೆ ಬೆಳೆದ ವಾತಾವರಣವೂ ಅದಕ್ಕೆ ಪೂರಕವಾಗಿರಬೇಕೆಂಬುದೇನೂ ಇಲ್ಲವಲ್ಲಾ?"
    ನಿಮಗೆ ಅವನ ರಹಸ್ಯ ಗೊತ್ತಿದ್ದ ಹಾಗಿದೆ !

    ReplyDelete
  3. Radhakrishna Bhadti avare,

    Dayavittu KoLagere avara tandhe bagge swalpa gotidre bareyiri. Aaatha tanna "Khaas baat" li yavathu tandhe bagge heLkondilla, adnre alleno interesting agirodu ide. Horage jana matado prakara eetha obba famous bellary kade kavi obbara bedavaadha putra antha. Dayavittu idara bagge beLaku chelli.

    ReplyDelete
  4. A well done analysis.. I agree with you that he is a samaja kantaka and its required everyone of us are to tell him that he is so... may be in facebook where he has 1000's of followers, we could do a page to hate him, just to give him a message that not all will fall into same honda everytime.. its time to say its over for him and he better not do personal fights in open media.. asahya aagutte, i use to read him for about 8 years...

    ReplyDelete
  5. ನೂರಕ್ಕೆ ನೂರು ಶ್ರೀಗಳನ್ನು ನಾನು ಅಪಾರವಾಗಿ ಗೌರವಿಸುತ್ತೇನೆ. ಅದು ವ್ಯಕ್ತಿಗತವಾಗಿಯಷ್ಟೇ ಇರುವ ಪ್ರೀತಿಯಲ್ಲ. ಗೋ ಸಂರಕ್ಷಣೆಯ ನಿಟ್ಟಿನಲ್ಲಿ ಅವರು ಮಾಡಿದ ಕೆಲಸವೇ ಅಂಥದ್ದು. >>

    ಭಡ್ತಿಯವರೆ, ನಿನ್ನೆಯಷ್ಟೆ ನಾನು ರಾಮಚಂದ್ರಾಪುರ ಮಠಕ್ಕೆ ಭೇಟಿಯಿತ್ತಿದ್ದೆ, ಅಲ್ಲಿನ ಹಸುಗಳನ್ನು ಮುಂಚಿನಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ಸ್ವತಃ ರೈತ ಕುಟುಂಬದ ಹಿನ್ನೆಲೆಯಿಂದ ಬಂದ ನನಗೆ ಅಲ್ಲಿನ ಹಸುಗಳ ಆರೋಗ್ಯ ಮತ್ತು ಅವುಗಳಿಗೆ ನೀಡಲಾಗುತ್ತಿರುವ ಆಹಾರದಲ್ಲಿ ಕೊರತೆ ಎದ್ದು ಕಂಡಿತು. ಬಹುಶಃ ಇದಕ್ಕೆ ಕಾರಣ ಶ್ರೀಗಳು ಹೆಚ್ಚಿನ ಸಮಯ ಮಠದಿಂದ ಹೊರಗೆ ಇರುವುದು ಕಾರಣವಿರಬಹುದು. ಮಹಾನಂದಿಯ ತೊಡೆಯಂತು ಆಹಾರವಿಲ್ಲದೆ ಸೊರಗಿರುವುದು ಎದ್ದು ಕಾಣುತ್ತಿದೆ. ದಯವಿಟ್ಟು ಈ ಸಮಸ್ಯೆಯನ್ನು ಪರಿಹರಿಸಲು ಏನಾದರು ಕ್ರಮ ಕೈಗೊಳ್ಳಿರೆಂದು ತಮ್ಮಲ್ಲಿ ವಿನಂತಿ

    ReplyDelete
  6. ಮನುಷ್ಯ ಜನ್ಮಕ್ಕೆ ೩ ಜನ ತಾಯಂದಿರು, ಹೆತ್ತ ತಾಯಿ, ಭೂಮಿ ತಾಯಿ ಹಾಗು ಜನ್ಮ ಪೂರ್ತಿ ಹಾಲನಿತ್ತು ಸಲಹುವ ಗೋ ತಾಯಿ . ಶ್ರೀಗಳು ಹೇಳಿದ "ಈ ಜನ್ಮ ಪೂರ್ತಿ ಗೋವು ಸೇವೆ" ಅನ್ನೋ ಮಾತು ಸದಾ ಸ್ಮರಣೀಯ ಹಾಗೂ ಅವಿಸ್ಮರಣೀಯ. ಹೀಗಾಗಿ ಆ ಪ್ರಾಣಿಯನ್ನು ( ಇದು ಅವರ ದೃಷ್ಟಿ ) ತಿನ್ನುವರಿಗೆ ಅದರ ಸಂರಕ್ಷಣೆ ಮಾಡುವ ಮಹಾಪುರುಷರನ್ನು ಕಂಡರೆ ಹೀಗೆಯೇ ಆಗುವುದು. ಎಲ್ಲಾದಕ್ಕೂ ಸಂಸ್ಕಾರ ಬೇಕು ...

    ಇನ್ನು prasca ಅವರ ಸಲಹೆಯಂತೆ ಸನ್ನಿಧಾನಕ್ಕೆ ತಿಳಿಸಿ ಗೋವುಗಳ ಆಹಾರದ ಕೊರತೆ ಹಾಗೂ ಅವರ ಆರೋಗ್ಯದ ಬಗ್ಗೆ...!!!

    ReplyDelete
  7. ಅದೆಷ್ಟು ಚೆನ್ನಾಗಿ ಬರಿತೀರ!!! ಈಗ ನೀವೇನು ಮಾಡುತ್ತಿದ್ದಿರಾ? ಕನ್ನಡ ಪ್ರಭಕ್ಕೆ ಸೇರಿಕೊಳ್ಳಿ. Follow the VB.

    ReplyDelete
  8. ರಾಧಾಕ್ರಸ್ಣ ಭಡ್ಥಿ ಯವರು ಚಾಣಕ್ಯನ ರೀತಿ ಸಮಸ್ಯೆಯ ಬೇರು ಸಹಿತ ಕೀಳುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಅನಿಸುತ್ತದೆ. ಇಂದಿನ ಸಮಾಜದಲ್ಲಿ ಎಲ್ಲಾ ಪ್ರಕಾರಗಳ ಎಲ್ಲ ಸ್ಥರಗಳಲ್ಲಿ ಈ ಕೊಳೆಗೇರಿ ಥರದ ಜನರೇ ಮಿಂಚುತ್ತಿದ್ದಾರೆ. ಎಲ್ಲ ಗೋಸುಂಬೆಗಳು ಹಾಗೂ ನೀಚ ಸ್ವಾರ್ಥದ ಪರಮ ಸಾಧಕರು. ಸಮಾಜದ ರಕ್ಶಕರೇ ಭಕ್ಶಕರಾಗಿರುವಾಗ ಭಡ್ಥಿಯವರು ರಾಡಿ ತೊಳೆಯುವಲ್ಲಿ ಯಶಸ್ವಿಯಾದಾರೇ ಎಂಬ ಗಾಬರಿ. ಅದಕ್ಕಿಂತಲೂ ಹೆಚ್ಚಾಗಿ ಇಂದಿನ ಸಮಾಜದಲ್ಲಿ ಸದ್ವಿಶಯಗಳ ಬಗ್ಗೆ ಸಕಾರಾತ್ಮಕವಾಗಿ ಬರೆಯುವ ವಿರಳ ಮಂದಿಗಳಲ್ಲೊಬ್ಬರಾದ ಭಡ್ಥಿಯವರು ಈ ಕೊಳೆಗೇರಿ ಶೈಲಿಯಲ್ಲಿ ಕಳೆಗುಹೋದಾರೋ ಎಂಬ ಭಯ ಅಸ್ಟೆ.

    ReplyDelete
  9. ವಿ ಕ ನೆಕ್ಕಕೆ ಬಿಟ್ರಾ? ನಿಮ್ಮದು ಏನೋ ಹಲ್ಕಟ್ ಗಿರಿ ಇರಬೇಕಲ್ಲ? ಬಿಡಿ ನೀವು ಮೂರು ಜನ ಕೃತಿ ಚೋರರು. ಆಹಾ ನಿಮ್ ಪಿಟ್ಟು ನೋಡಿದ್ರೆ ಗೊತ್ತಾಗತ್ತೆ, ಅವನು ಗ್ರಾಮ ಸಿಂಹ ಅಂತ

    ReplyDelete
  10. @ Vivaswan, Dogs should not bark on Elephant. It should bark on fellow dogs only. Because elephant never attempting on dogs wife or wives, only fellow dogs will do so.

    ReplyDelete
  11. well said vivaswan but small correction this is not a ordinary dog its ಕಜ್ಜಿ ನಾಯಿ its always barks....pls don't take it serious ..any body give a call to corporation to take this other wise its pollute the environment....

    ReplyDelete
  12. @ Niranjan: Sir, please see this link http://www.youtube.com/watch?v=tvXX-f9S38A . This guy is due for the treatment. Better he boards the bus number 171 from majestic. This is the true manifestation of childish attitude and also he [PS] thinks himself the greatest columnist ever on this earth and also this guy accuses URA that he is a Copy CAT pretending himself that he is not indeed he is the only copy cat that I have ever seen. We have been troubled by yellow journalism from RB and its our fate to tolerate this third degree copying clerks. By publishing only 1 book he feels that he is the supreme, at least he should think that there is something in it when it comes to jnanapeeta awardee. He pretends to be soul saver of the Hindu dharma, bul shit, Hinduism was there and will be there. namma uttara kannadadalli ondu maatide" gojju beesodu" anta. Here I am not supporting anyone, but people shud understand the pros and cons before commenting. I totally disagree with Vivaswan the way he commented. There should be bare minimum sense before doing that. Niranjan this columnist too has to learn how to speak and how to present himself before the audience, rather cracking some poor jokes. I dnt know much about the current media politics back in home since I am in Mexico, but my wishes to Vishveshwar bhat and Radhakrishna for their future endeavours... time will teach him [PS] the proper presentation skills.

    ReplyDelete
  13. ಅರ್ಜುನ್ ರವರು ಹೇಳಿದ್ದು ಸರಿಯಾಗಿದೆ. ನನಗೂ ಈ ವೀಡಿಯೊ ನೋಡಿ ನಗು ಬಂತು. ಒಬ್ಬ ಜವಾಬ್ದಾರಿಯುತ ಪತ್ರಕರ್ತ ಇಷ್ಟು ಪೇಲವವಾಗಿ ಮಾತನಾಡುತ್ತಾರ? ನಮ್ಮ ಹೃದಯಪೂರ್ವಕ ಶುಭಾಶಯಗಳು ರಾಧ ಹಾಗು ಭಟ್ರಿಗೆ ಆದ್ರೆ ಸಿಂಹ ಅವರೇ ನಿಮ್ಮ ಮಾತು ತೀಕ್ಷ್ಣ ಅದು ಇದು ಅಂತ ಕೇಳಿದ್ದೆ ಆದ್ರೆ ಇದನ್ನು ನೋಡಿದ ಮೇಲೆ ನನ್ನ ಅಭಿಪ್ರಾಯ ಸುಳ್ಳು ಅಂತ ಗೊತ್ತಾಯ್ತು. ಒಬ್ಬ ಜ್ಞಾನಪೀಠ ಪುರಸ್ಕೃತರನ್ನು ಕೃತಿ ಚೋರ ಎಂದು ಕರೆದು ನಿಮ್ಮನ್ನು ನೀವು ಕೆಲಗಿಲಿಸಿಕೊಂಡಿದ್ದಿರಿ. ನಮ್ಮಂಥಹ ಮಧ್ಯವಯಸ್ಕರು ನಿಮ್ಮ ಲೇಖನದಿಂದ ಒಂದಷ್ಟು ಮಾಹಿತಿ ಸಿಗುತ್ತೆ ಅಂತ ಕಾಯ್ತಾ ಇರ್ತಿವಿ ಆದ್ರೆ ನೀವು ನೋಡಿದ್ರೆ ಗಾಂಧೀಜಿ, ಥಾಕ್ರೆ ಅದು ಇದು ಅಂತ ಜೊಳ್ಳು ಲೇಖನಗಳನ್ನೂ ಬರೆದಿದ್ದೀರಿ. ಬಿಡಿ ನೀವು ಇದನ್ನೆಲ್ಲಾ ತಿದ್ದಿಕೊಂಡು ಚೆನ್ನಾಗಿ ಬರೆದರೆ ನಮಗೆ ಖುಷಿಯಲ್ಲವೇ? ಅಂದ ಹಾಗೆ ನಮ್ಮ ಮನೆಯಲ್ಲಿ ಕನ್ನಡ ಪ್ರಭ ತರಿಸಲು ಶುರು ಮಾಡಿದ್ದೇವೆ. ನಿಮಗೂ ಒಳ್ಳೆಯದಾಗಲಿ

    ReplyDelete
  14. ಅಯ್ಯಾ ವಿವಸ್ವಾನ್! ಸ್ವಲ್ಪ ಸರಿಯಾಗಿ ಕಾಮೆಂಟ್ ಮಾಡೋದು ಕಲಿತುಕೊಳ್ಳಿ.
    @ಅರ್ಜುನ: ನಾನು ವೀಡಿಯೊ ನೋಡಿದೆ, ತುಂಬಾ ಎಳಸು ಎಳಸಾಗಿ ಮಾತನಾಡಿದ್ದಾರೆ ಸಿಂಹ ಅವರು. ನಾವು ಅನಂತ ಮೂರ್ತಿಗಳ ಅಭಿಮಾನಿಗಳು. ರೇವಣ್ಣನ ಮಾತಿನ ಶೈಲಿಗಿಂತಲೂ ಇದು ನಗೆಪಾಟಲು. ಇದರ ತುಂಬಾ ಕಳ್ಳೆಪುರಿ ಹೋಲಿಕೆಗಳು. ಬರಿ ಸೂರ್ಯ ಟಾರ್ಚು ಲಾಟೀನು ಅಂತ. ಇರಲಿ ಒಳ್ಳೆಯ ಬರವಣಿಗೆಯನ್ನು ನಿರೀಕ್ಷಿಸುತ್ತಿದ್ದೇವೆ ಕನ್ನಡ ಪ್ರಭದಲ್ಲಿ [ಕದ್ದಿದ್ದಾದರೂ ಪರವಾಗಿಲ್ಲ] ಎಲ್ಲವನ್ನು ಎಲ್ಲರು ಬರೆಯಲಾಗುವುದಿಲ್ಲ. ತಾನು ಕಳ್ಳ ಪರರ ನಂಬ ಎಂದಾಗದಿದ್ದರೆ ಓಕೆ.

    ಭಡ್ತಿ ಅಣ್ಣ ನಿಮ್ಮ ಮುಂದಿನ ಲೇಖನದಲ್ಲಿ ಸಾಗರದ ಕಾಡುಗಳ ನಾಶದ ಬಗ್ಗೆ ಸವಿಸ್ತಾರವಾಗಿ ಬರೆಯಬೇಕಾಗಿ ವಿನಂತಿ.

    ReplyDelete