About Me

My photo
ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.

Monday, February 7, 2011

ನಿಜವಾದ ಬ್ರೇಕಿಂಗ್ ನ್ಯೂಸ್

ಬೆಸ್ಟ್ ವಿಷಸ್ ಟು ವಿಷ್ ಭಟ್....

ಅಬ್ಬಾ, ಕೊನೆಗೂ ನಾವು ಕಾಯುತ್ತಿದ್ದ ಕಾಲ ಬಂದೇ ಬಿಟ್ಟಿದೆ. ‘ಒಂದಾಟ ಭಟ್ರುದ್ದು’ ಎಂಬ ವಿನೂತನ ನಾಟಕವನ್ನು ರಂಗದ ಮೇಲೆ ತರಲು ಅತ್ತ ನಾಟಕಕಾರ ಯಶವಂತ ಸರದೇಶಪಾಂಡೆ ರಿಹರ್ಸಲ್ ನಡೆಸುತ್ತಿದ್ದಾಗಲೇ ನಮ್ಮ ಭಟ್ರು ಆಟ ಶುರು ಮಾಡೇಬಿಟ್ಟಿದ್ದಾರೆ ಕಣ್ರಿ.


ನಿಜವಾದ ಬ್ರೇಕಿಂಗ್ ನ್ಯೂಸ್ ಇದು ಸ್ವಾಮಿ, ನಮ್ಮ ನೆಚ್ಚಿನ ಸಂಪಾದಕ ವಿಶ್ವೇಶ್ವರ ಭಟ್ಟರು ‘ಕನ್ನಡ ಪ್ರಭ’ದ ಮುಖ್ಯ ಸಂಪಾದಕರಾಗಿ ಇವತ್ತು (ಸೋಮವಾರ, ೦೭.೦೨.೨೦೧೧) ಮಧ್ಯಾಹ್ನ ಅಭಿಜಿನ್ ಮೂಹೂರ್ತದಲ್ಲಿ ಅಕಾರ ಸ್ವೀಕರಿಸಿದ್ದಾರೆ. ಕನ್ನಡದ ಓದುಗರಿಗೆ ಇದಕ್ಕಿಂತ ಒಳ್ಳೆಯ ಬ್ರೇಕಿಂಗ್ ನ್ಯೂಸ್ ಬೇರಾವುದು ಇದ್ದೀತು ? ಅದೇ ಕ್ಷಣಕ್ಕೆ ಕೆಲವರ ಪಾಲಿಗೆ ಇದು ಹಾರ್ಟ್ ಬ್ರೇಕಿಂಗ್ ನ್ಯೂಸ್ ಆಗಿಯೂ ಕಾಡಿರುತ್ತದೆ ಎಂಬ ಅರಿವು ಇದ್ದೇ ಇದೆ. ಏನು ಮಾಡೋದು ? ತಲೆಗೆ ಹೊಯ್ದ ನೀರು ಕಾಲಿಗೆ ಇಳಿಯಲೇ ಬೇಕಲ್ಲಾ ?

ಈ ಎರಡು ತಿಂಗಳಲ್ಲಿ ಯಾರ‍್ಯಾರೋ ತಲೆಗೆ ಏರಿಸಿಕೊಂಡಿದ್ದರು, ಯಾರ‍್ಯಾರದೋ ತಲೆ ತಿರುಗಿತ್ತು, ಇನ್ಯಾರ‍್ಯಾರೋ ತಲೆ ಕೆಡಿಸಿಕೊಂಡಿದ್ದರು...ಆಗೋದೆಲ್ಲಾ ಒಳ್ಳೇದಕ್ಕೇ ಎಂಬ ಪಾಸಿಟೀವ್ ಥಿಂಕಿಂಗ್ ನಮ್ಮದಾಗಿತ್ತು. ಒಂದು ರೀತಿಯಲ್ಲಿ ನಮ್ಮ ಸಾಮರ್ಥ್ಯದ ನೈಜ ಅರಿವು ಆದದ್ದೇ ಈ ಅವಯಲ್ಲಿ. ಎಲ್ಲಕ್ಕಿಂತ ಹೆಚ್ಚಾಗಿ ಈ ಅವಯಲ್ಲಿ ಬಹಳಷ್ಟು ‘ಮಿತ್ರರ’ ಮುಖವಾಡ ಕಳಚಿಬಿದ್ದಿದೆ. ಎಲ್ಲವನ್ನು ಕೊಡವಿಕೊಂಡು ಹೊಸ ಹುಮ್ಮಸ್ಸಿನೊಂದಿಗೆ ಆಟ ಶುರು ಮಾಡಿದ್ದಾರೆ ಭಟ್ಟರು. ನಾವುಗಳೂ ವೀರ ಯೋಧರಂತೆ ಭಟ್ಟರ ಸಮರ್ಥ ಸೇನಾಪತ್ಯದಲ್ಲಿ ಮುನ್ನುಗ್ಗಲು ಸಜ್ಜಾಗಿದ್ದೇವೆ. ಇನ್ನೇನು ಅಕೋ, ಇಕೋ ಎನ್ನುವಷ್ಟರಲ್ಲಿ ಒಂದೇ ಮನಸ್ಸಿನಲ್ಲಿ ಮತ್ತೆ ಓದುಗ ದೊರೆಯ ದಾಹ ತಣಿಸಲು ಹೊರಡುತ್ತೇವೆ.

ಒಬ್ಬೊಬ್ಬ ಓದುಗನೂ ತಾನೇ ಸಂಪಾದಕ ಹುದ್ದೆಗೇರಿದಷ್ಟು ಸಂಭ್ರಮ ಪಡುತ್ತಿದ್ದಾನೆ. ಒಬ್ಬೊಬ್ಬರ ಉತ್ಸಾಹವನ್ನೂ ನೀವು ನೋಡಬೇಕು. ಬೆಳಗ್ಗಿನಿಂದ ಫೋನ್ ಕಾಲ್‌ಗಳದ್ದೇ ಪಾರುಪತ್ಯ. ಖಂಡಿತಾ ಓದುಗರ ನಿರೀಕ್ಷೆ ನಮ್ಮನ್ನು ದಂಗಾಗಿಸಿದೆ. ಇಂಥದ್ದೊಂದು ಭೀಮ ಬಲದೊಂದಿಗೆ ಪತ್ರಿಕೋದ್ಯಮದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಲು ಹೊರಡುತ್ತೇವೆ. ನಿಮ್ಮೆಲ್ಲರ ಕಣ್ಕಾಪು ಎಚ್ಚರ ತಪ್ಪದಂತೆ ಸರಿದಾರಿಯಲ್ಲಿ ನಮ್ಮನ್ನು ಕೊಂಡೊಯ್ಯುತ್ತದೆ ಎಂಬ ವಿಶ್ವಾಸ ನಮಗಿದೆ. ಗುರಿ ಮುಟ್ಟುವರೆಗೆ ಇನ್ನು ವಿರಮಿಸುವ ಪ್ರಶ್ನೆಯೇ ಇಲ್ಲ. ಮನ ಹುಚ್ಚೆದ್ದು ಕುಣಿಯುತ್ತಿದೆ. ಹೆಚ್ಚು ಬರೆಯಲು ಇವತ್ತು ಸಾಧ್ಯವೇ ಇಲ್ಲ. ಪತ್ರಿಕೆಗಳಲ್ಲಿ ಬರೆಯಲು ಇನ್ನೂ ಸಾಕಷ್ಟಿದೆಯಲ್ಲಾ ? ಇನ್ನು ದಿನವಿಲ್ಲ. ಲೇಖನಿಗೆ ಸಾಣೆ ಹಿಡಿದುಕೊಳ್ಳಬೇಕು. ಬರಲೇ...?

ನಿಮ್ಮ
ಗಿಂಡಿ ಮಾಣಿ

20 comments:

  1. ಹಾರ್ದಿಕ ಶುಭಾಶಯಗಳು.ನಿಮ್ಮ ಲೇಖನಗಳಿಗಾಗಿ ಕಾತುರದಿಂದ ಕಾದಿರುವೆವು.ಮೊಳಗಲಿ ನಿಮ್ಮ ಬರಹದಲ್ಲಿ ರಣಕಹಳೆ.

    ReplyDelete
  2. ಆತ್ಮೀಯ ವಿ ಭಟ್ಟರಿಗೆ ಹಾರ್ದಿಕ ಅಭಿನಂದನೆಗಳು. ಅಂತೂ ನಮ್ಮೆಲ್ಲರ ಕಾತುರದ ಕ್ಷಣ ಕೊನೆಗೊಂಡಿದ್ದು ಸಂತಸದ ವಿಷಯ .
    ಒಂದು ಕಳಕಳಿಯ ಮನವಿ, ದಯವಿಟ್ಟು ಪೊಳ್ಳು ಜಾತ್ಯತೀತವಾದವನ್ನ ಪೋಷಿಸಬೇಡಿ ….!
    ನಮ್ಮ ನಾಡು,ನುಡಿ,ಸಂಸ್ಕೃತಿ, ಧರ್ಮಕ್ಕೆ ಧಕ್ಕೆ ಯಾಗದಂತೆ ಬೆಳಿಸಿ, ಪೋಷಿಸಿ ಎಂದು ಹಾರೈಸುತ್ತೇನೆ

    ರಾ ಕೃ ಭಡ್ತಿಯವರೇ,
    ಬೇಗನೆ ನೀವು ನಿಮ್ಮ ದಂಡನಾಯಕನ ಸೇನೆಗೆ ಸೇರಿರಿ ಎಂದು ಹಾರೈಸುವ

    ReplyDelete
  3. very well said.....we are really delighted ...wish to celebrate .....wish u all , all the best

    ReplyDelete
  4. Congrats and all the very best to your new innings :)

    Waiting for your write ups on Kannada Prabha!!

    ReplyDelete
  5. ಸಿಹಿಸುದ್ದಿ ಕೊಟ್ಟಿದ್ದೀರಿ...ನಿಮ್ಮ ಹೊಸ ಇನ್ನಿಂಗ್ಸ್ ಗೆ ಶುಭವಾಗಲಿ

    ReplyDelete
  6. nimaginta hechchu nimma abhimaanigalaada namage khushiaagide. all the best.

    ReplyDelete
  7. Guru shishyarige abhinandanegalu...shubhavagali...

    ReplyDelete
  8. Dear Sir,

    Hearty Congratulations!! Here's wishing you all a great going :)

    With Best Regards,
    Chethan

    ReplyDelete
  9. shubhayagalu... idakkintha santhosha innenu beku? alwa

    ReplyDelete
  10. Are you going to stop this blog ??? Pls keep writing here too...

    ReplyDelete
  11. ಕನ್ನಡ ಪ್ರಭಕ್ಕೆ ಭಟ್ರು ಓಕೆ, ಆದ್ರೆ ಈ ಗಿಂಡಿ, ಪಿಟ್ಟು ಯಾಕೆ. ಲೋ ನನ್ಮಕ್ಳ ಎಲ್ಲೋ ಚೂರು ಪಾರು ಬರೆದು ಯಾಕ್ರೋ ಇಷ್ಟು ಬೋಂಬಡಾ ಹೋಡಿತಿರ...

    ReplyDelete
  12. @vivaswan
    ಕಮೆಂಟು ಸಭ್ಯತೆ ಮೀರದಿರಲಿ. ನಿಮ್ಮ ಯೋಗ್ಯತೆಯನ್ನು ಹೀಗೆ ಸಾರ್ವಜನಿಕವಾಗಿ ಹರಾಜಿಗಿಟ್ಟುಕೊಂಡರೆ ಚೆನ್ನಾಗಿರಲ್ಲ 'ಮಿ.ವಿವಸ್ವನ್' ಅವರೇ...!

    ReplyDelete
  13. @vivaswan ಅದೇ ಪಿಟ್ಟು ತಿಂದು ಒದರೋದು ಬಿಡು ....ಸಾರ್ವಜನಿಕವಾಗಿ ತಿಂದು ಮಾನಯಾಕೆ ಕಳ್ಕೊತ್ಯ....ಅಲ್ಕಟ್ ಗಿರಿ ಮಾಡೋಕೆ ಕನ್ನಡನ ಯಾಕ್ ಬಳ್ಸ್ಕೋತಿರ ...

    ReplyDelete
  14. hearty wellcome and congrats to vishwa sir , prathap and Radhkrishna sir,,,we are waiting for Ur articles........

    ReplyDelete