About Me

My photo
ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.

Friday, April 1, 2011

`ಬೆಳದಿಂಗಳು'-ನಿಮಗೇನನ್ನಿಸುತ್ತೆ ?

`ಬೆಳದಿಂಗಳು'

ಸುಂದರವಾದ ಒಂದು ವಾಕ್ಯದಲ್ಲಿ ಇದನ್ನು ನಿಮ್ಮಿಂದ ವ್ಯಾಖ್ಯಾನಿಸಲು ಸಾಧ್ಯವೇ?


ಸಾಲು ಕಾವ್ಯಾತ್ಮಕವಾಗಿದ್ದರೆ ಒಳಿತು.


ಇಲ್ಲವೇ ಪಂಚ್ ನೀಡಲಿ.


ಕಲ್ಪನೆಗೆ ಸಾಕಷ್ಟು ಅವಕಾಶವಿದೆ.


ಕೊಡುತ್ತೀರಾ ಪ್ಲೀಸ್ !



ಉದಾ: ಬಂಡೆಯ ಮೇಲೆ ಚೆಲ್ಲಿ ಹೋದ ನೊರೆವಾಲ ತೆರೆ...


ಭೂಮಿಯ ಮಹಾಮಜ್ಜನಕ್ಕೆ ತಿಂಗಳನು ತಂದಿಟ್ಟ ಕೆನೆ ಹಾಲು...


ನಿಶಾ ದೇವಿಯ ಮುಖಾರವಿಂದಕೆ ಲೇಪಿತ ಕಾಂತಿ ವರ್ಧಕ...

13 comments:

  1. ಬೆಳದಿಂಗಳೇ..
    ಅಲ್ಲ ಅದು
    "ಮನ ಸೆಳೆವ ತಿಂಗಳ ಬೆಳಕು.."

    ReplyDelete
  2. ನಿಶೆಯ ನಿಶಿತ ಕ್ಷಣಗಳಲ್ಲಿ ಶಶಿಯು ಇಳೆಗಿತ್ತ ಚುಂಬನ !!!

    ReplyDelete
  3. ಭೂಮಿಕೆಯ ಮಡಿಲಲ್ಲಿ ಚಂದಿರ ಸುರಿದ ಮಲ್ಲಿಗೆಮೊಗ್ಗು...

    ReplyDelete
  4. ಸಾಗರನ ಉಕ್ಕೇರುವ ಪ್ರೀತಿಗೆ ಸೋತ ಹುಣ್ಣಿಮೆ ಬಿಳಿ ರೇಶಿಮೆಯನುಟ್ಟು ಸಡಗರದಿ ಇಳಿದಂತೆ...

    ReplyDelete
  5. ಚಂದ್ರ ಕೊರೆದ ರಂಧ್ರ ಮೇಘದ ಮಧ್ಯೆ ಭೂರಮೆಯ ರಮಿಸಲೇ?

    ReplyDelete
  6. ಕತ್ತಲೆಗೆ ಬೆಳಕಿನ ಸೆರಗು, ಭೂಮಿಗೆಂತ ಮೆರಗು ?

    ReplyDelete
  7. ಹೊಳೆವ ಕತ್ತಲೆ, ಭೂಮಿ ಬೆತ್ತಲೆ

    ReplyDelete
  8. 1. ವಸು೦ಧರೆಯ ಸುರಾಪಾತ್ರೆಯಲಿ ನಶೆ ಸುರಿದ ಚಂದಿರ
    2. ಚಂದ್ರ ಮೋಡದ ಮರೆಯಿ೦ದ ಇಣುಕಿ ವಸು೦ಧರೆಯೆ೦ಬ ಬೆಳದಿಂಗಳ
    ಬಾಲೆಯನ್ನು ನೋಡುತ್ತಿದ್ದಾನೆ.
    3. ತಮವ ಕಳೆಯೋ ಚಂದ್ರ ತೋರು ನಿನ್ನ ಲಾಂದ್ರ

    ReplyDelete
  9. ವಸುಮತಿಯ ಪದತಲಕೆ ನೊರೆನೊರೆಯ ಹಾಲ್ನೀರು

    ReplyDelete
  10. ಸರಿತೆಯ ಸನ್ನಿಧಿಗೆ ಶಶಾಂಕ ಸ್ಪುರಣ ....

    ReplyDelete
  11. ಇದು ನನ್ನ ಭಾಷೆ
    A good spotlight picture.

    ReplyDelete
  12. ಬೆಳದಿಂಗಳು

    ಆಗುವುದು ಸೂರ್ಯನ ಕಿರಣದ ಪ್ರತಿಫಲನಕ್ಕೆ
    ಆದರೆ ಸಾಕ್ಷಿಯದು ಎಷ್ಟೋ ಮಿಲನಕ್ಕೆ !!

    ReplyDelete
  13. ಮತ್ತರ್ಧದ ರವಿ ಇನ್ನರ್ಧಕ್ಕಿಟ್ಟ "ಚಂದ್ರಲಾಂದ್ರ"..

    ReplyDelete