About Me

My photo
ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.

Sunday, January 16, 2011

ಸುದ್ದೀಶರೇ ಸುದ್ದಿಯಾದಾಗ...

ಒಂದು ರೀತಿಯಲ್ಲಿ ಇದು ಮಧ್ಯಂತರ ರಜೆ. ಅಬ್ಬಾ, ಅಂತೂ ಹೆಗಲ ಮೇಲಿದ್ದ ದೊಡ್ಡದ್ದೊಂದು ಭಾರ ಇಳಿಯಿತು ! ಆಹಾ, ಎಂಥಾ ನಿರಾಳ ! ‘ವಿಜಯ ಕರ್ನಾಟಕ’ವೆಂಬ ನಾವೇ ಹುಟ್ಟಿಸಿದ, ಓದುಗರ ಬೆಂಬಲದೊಂದಿಗೆ ಬೆಳೆಸಿದ ಪತ್ರಿಕೆಯೊಂದನ್ನು ಅತ್ಯಂತ ನಿರ್ವಿಕಾರ ಭಾವದಲ್ಲಿ, ಯಾವುದೇ ಬೇಸರ-ವಿಷಾದಗಳಿಲ್ಲದೇ ಬಿಟ್ಟು ಬಂದ ಕ್ಷಣದಲ್ಲಿ ಅನಿಸಿದ್ದು ಇಷ್ಟೇ. ಏಕೆಂದರೆ ಯಾವುದೇ ಭ್ರಮೆಗಳೂ ನಮ್ಮಲ್ಲಿಲ್ಲ. ಪತ್ರಿಕೆ ಇಂದು ರಾಜ್ಯದಲ್ಲಿ ನಂ.೧ ಸ್ಥಾನಕ್ಕೆ ಬೆಳೆದು ನಿಂತಿದೆ. ಅದಕ್ಕೆ ಕಾರಣ ನಾವಷ್ಟೇ ಅಲ್ಲ. ಅಂಥ ಬೆಳವಣಿಗೆಗೆ ನಾವೂ ಸಾಕ್ಷಿಯಾಗಿದ್ದೇವೆ ಎಂಬುದು ನಿಜ. ಅದರೊಂದಿಗೇ ನಾವೂ ಅಷ್ಟೇ ಎತ್ತರಕ್ಕೆ ಬೆಳೆದಿದ್ದೇವೆ ಎಂಬುದೂ ಅಂಥದ್ದೇ ವಾಸ್ತವ.


ಇಪ್ಪತ್ತು ವರ್ಷಗಳಲ್ಲಿ ಬರೆದದ್ದು, ಬರೆಯಲಾಗದ್ದು ಬಹಳಷ್ಟಿದೆ. ಆದರೆ ಒಂದು ಮಾತಂತೂ ಸತ್ಯ, ಒಮ್ಮೊಮ್ಮೆ ನಮಗೇ ರೇಜಿಗೆ ಬರುವಷ್ಟರ ಮಟ್ಟಿಗೆ ನಾವು ಬರವಣಿಗೆಯಲ್ಲಿ ತೂರಿಕೊಂಡು ಹೋಗಿದ್ದಿದೆ. ನನ್ನ ಮಟ್ಟಿಗೆ ಹೇಳುವುದಾದರೆ ಅದು ‘ನೀರು ನೆರಳು’ ಇರಬಹುದು, ‘ಪಾಸಿಟೀವ್ ಥಿಂಕಿಂಗ್’ ಇರಬಹುದು...ಲವಲವಿಕೆಯಲ್ಲಿ ಮತ್ತಿನ್ನೇನೇನೋ...ಯಾವ್ಯಾವುದೋ ಹೆಸರಿನಲ್ಲಿ, ಯಾವ್ಯಾವುದೋ ತಲೆ ಬರಹದಡಿಯಲ್ಲಿ ಸತತ ಬರೆದೇ ಬರೆದಿದ್ದೇನೆ. ಯಾರ‍್ಯಾರದೂ ಬರಹಗಳನ್ನು ದಿನವೆಲ್ಲ ಕುಳಿತು ತಿದ್ದಿ ನಮ್ಮ ಮಗುವಿಗೆ ಇನ್ನೊಬ್ಬರನ್ನು ಅಪ್ಪನನ್ನಾಗಿಸಿದ್ದೂ ಇದೆ. ಒಟ್ಟಾರೆ ಒಂದು ದಿನವೂ ಪೆನ್ನು ಮುಟ್ಟದೇ ಇದ್ದುದೇ ಇಲ್ಲ. ಬರವಣಿಗೆಯೇ ಬದುಕು ಬಿಡಿ. ಹೀಗಾಗಿ ಅದರಲ್ಲಿ ಹೇಳಿಕೊಳ್ಳುವಂಥದ್ದು ಏನೂ ಇಲ್ಲ. ನಮ್ಮ ಕೆಲಸ ಮಾಡಿದ್ದೇವೆ.
ಆ ನಡುವೆಯೂ ಹೀಗೊಂದು ಬ್ರೇಕ್ ಬೇಕಿತ್ತೆನಿಸುತ್ತದೆ. ಇಲ್ಲದಿದ್ದರೆ ಎಲ್ಲೋ ಒಂದು ಕಡೆ ಸ್ಟ್ಯಾಗ್ನೆಂಟ್ ಆಗಿ ಬಿಡುವ ಅಪಾಯಗಳೂ ಇಲ್ಲದಿರಲಿಲ್ಲ. ಒಂದು ಬದಲಾವಣೆ, ಒಂದು ಹೊಸತಕ್ಕೆ ಮನ ತುಡಿಯುತ್ತಿತ್ತು. ಪತ್ರಿಕೋದ್ಯಮ ಎಂದಿಗೂ ನಿಂತ ನೀರಲ್ಲ. ಅದು ಸದಾ ಹರಿಯುತ್ತಲೇ ಇರಬೇಕು. ಸುದ್ದಿ ಮನೆಯಿಂದ ಹೊರಗೆ, ಒಬ್ಬ ಸಾಮಾನ್ಯ ಓದುಗನಾಗಿ ದೂರದಲ್ಲಿ ನಿಂತು ಪತ್ರಿಕೋದ್ಯಮವನ್ನು ನಿರಕಿಸುವುದಿದೆಯಲ್ಲಾ ಅಂಥದ್ದೊಂದು ಅನುಭವ ನಮಗೆ ದಕ್ಕಿರಲೇ ಇಲ್ಲ ಎನ್ನಬಹುದು. ಹಾಗೆ ನಿಂತು ನೋಡಿದಾಗ ನಾವು ಮಾಡದೇ ಉಳಿದದ್ದು ಎಷ್ಟೆಲ್ಲಾ ಇದೆ ಎಂಬ ಅರಿವು ನಮ್ಮೊಳಗೆ ಮೂಡಲು ಸಾಧ್ಯ. ಅದನ್ನು ಮೂಡಿಸಿಕೊಂಡಿದ್ದೇವೆ.


ಹೌದು, ಇನ್ನೂ ಎಷ್ಟೆಲ್ಲಾ ಸಾಧ್ಯತೆಗಳಿವೆ. ಏನೆಲ್ಲಾ ಮಾಡಬಹುದಾದ್ದಿದೆ. ಎಷ್ಟೆಲ್ಲಾ ಬರೆಯುವುದು ಉಳಿದು ಹೋಗಿದೆ. ಎಂಥೆಂಥಾ ಪ್ರಯೋಗಳಿಗೆಲ್ಲಾ ಇನ್ನೂ ಮನ ಮಾಡಿಯೇ ಇಲ್ಲವೇಕೆ....? ಇಂಥ ಹತ್ತಾರು ಹೊಳಹುಗಳು ಮೂಡಿವೆ. ಹಾಗಂಥ ಇವನ್ನೆಲ್ಲಾ ವಿಜಯ ಕರ್ನಾಟಕದಲ್ಲೇ ಮಾಡಲಿಕ್ಕಾಗುತ್ತಿರಲಿಲ್ಲವೇ ಅಂದರೆ...ಮಾಡಬಹುದಾಗಿತ್ತೇನೋ. ಆದರೆ, ಮೊದಲೇ ಹೇಳಿದೆನಲ್ಲಾ ಅಂಥದ್ದೊಂದು ಅರಿವು ಮೂಡಿಸಿಕೊಳ್ಳುವ ವಾತಾವರಣಕ್ಕೆ ನಮ್ಮನ್ನು ನಾವು ತೆರೆದುಕೊಳ್ಳುವುದು ಅನಿವಾರ್ಯವಾಗಿತ್ತು. ಅದಕ್ಕಾಗಿ ಒಮ್ಮೆ ಸುದ್ದಿ ಜಗತ್ತಿನಿಂದ ಹೊರಬಂದು ನೋಡಲೇ ಬೇಕಿತ್ತು.


ಖಂಡಿತಾ ಯಾರದ್ದೋ ಒತ್ತಾಯಕ್ಕೆ, ಇನ್ಯಾವುದೋ ಒತ್ತಡಕ್ಕೆ ಕಟ್ಟುಬಿದ್ದು ಪತ್ರಿಕೆಯಿಂದ ಹೊರಬಂದದ್ದಲ್ಲ. ಹಾಗೆ ನೋಡಿದರೆ ಇದು ನೂರಕ್ಕೆ ನೂರು ನಮ್ಮದೇ ನಿರ್ಧಾರ. ಬರೆದುಕೊಳ್ಳುವವರು ಏನೇನೋ ಬರಕೊಂಡು ತಮ್ಮ ಟ್ಯಾಬ್ಲಾಯ್ಡ್ ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆಡಿಕೊಳ್ಳುವವರು ತಮ್ಮ ನಾಲಿಗೆ ಚಪಲವನ್ನು ತೀರಿಸಿಕೊಂಡಿದ್ದಾರೆ. ಆ ಮೂಲಕ ತಮ್ಮ ಚಿಂತನಾ ಶಕ್ತಿ(?)ಯನ್ನು ಪ್ರದರ್ಶಿಸಿದ್ದಾರೆ. ಬಿಡಿ, ನಮ್ಮಂಥವರ ಬಗ್ಗೆ ಬರೆದೇ ಅವರು ಬದುಕಬೇಕು. ಒಂದು ‘ಬೆತ್ತಲೆ ಜಗತ್ತ’ನ್ನು ಬರೆಯುವ ತಾಕತ್ತು ಅವರಿಗೆಲ್ಲಿದೆ ? ಒಂದು ‘ನೂರೆಂಟು ಮಾತು’ ಬರೆಯುವ ಬೌದ್ಧಿಕ ಸಾಮರ್ಥ್ಯ ಅವರಿಗೆಲ್ಲಿಂದ ಬರಬೇಕು ? ಒಂದು ‘ಒಳಸುಳಿ’ಯನ್ನೋ, ಒಂದು ‘ಸುದ್ದಿ ಮನೆ ಕಥೆ’ಯನ್ನೋ ಹೇಳುವ ತಾಳ್ಮೆ, ಚಾಕಚಕ್ಯತೆ, ಅರಿವು, ಜ್ಞಾನಗಳಿಂದ ಅವರು ದೂರ. ಹೋಗಲಿ ಎಂದರೆ ‘ನೀರು ನೆರಳು’ ಅನ್ನೋ, ‘ಪಾಸಿಟೀವ್ ಥಿಂಕಿಂಗ್’ ಅನ್ನೋ ಬರೆದು ಓದಿಸುವಷ್ಟು ತಾಕತ್ತು ಇಂಥ ಟ್ಯಾಬ್ಲಾಯ್ಡ್‌ಗಳಿಗೆ ಇವೆಯೇ ? ಅದೇ ಟೀಕೆ, ವ್ಯಂಗ್ಯ, ಚಾರಿತ್ರ್ಯ ಹರಣ, ಭೂಗತ ಜಗತ್ತು, ರಾಸಲೀಲೆಗಳ ಹಸಿಹಸಿ ಕಮಟು...ಇಂಥವನ್ನು ಬರೆದರಷ್ಟೇ ಅವರ ಪತ್ರಿಕೆಗಳು ಬಿಕರಿಯಾಗಬಹುದು. ಇಂಥದ್ದರಲ್ಲೇ ‘ಇತಿಹಾಸ’ ನಿರ್ಮಿಸುವ ಮಾಜಿ ಮಾಸ್ತರನ ಬಗ್ಗೆ, ಅವರ ಓದುಗ ವರ್ಗದ ಬಗ್ಗೆ ನನ್ನ ಮಾತಿಲ್ಲ. ಅಷ್ಟಕ್ಕೂ ‘ಏ-ಸರ್ಟಿಫೈಡ್ ಜರ್ನಲಿಸಂ’ ಬಗ್ಗೆ ಮಾತಾನಾಡುವಷ್ಟು ವ್ಯವಧಾನ ನನಗಿಲ್ಲ. ಹಾಗೆ ನೋಡಿದರೆ ಇದೂ ಯಲ್ಲೋ ಜರ್ನಲಿಸಂ (ಪೀತ ಪತ್ರಿಕೋದ್ಯಮ) ಸಹ ಅಲ್ಲ. ಬೇಕಿದ್ದರೆ ಬ್ಲೂ ಜರ್ನಲಿಸಂ (ಬ್ಲೂ ಫಿಲ್ಮ್ ಇದ್ದ ಹಾಗೆ)ಅನ್ನಬಹುದೇನೋ.


ದಿವಂಗತ ಮುಖ್ಯಮಂತ್ರಿ ಜೆ. ಎಚ್. ಪಟೇಲ್ ಅವರ ಜೋಕೊಂದು ಈ ಸಂದರ್ಭದಲ್ಲಿ ನೆನಪಾಗುತ್ತಿದೆ. ಅದಾಗ ಅವರ ಸರಕಾರ ಡೋಲಾಯಮಾನ ಸ್ಥಿತಿಯಲ್ಲಿತ್ತು. ಪ್ರತಿ ಪಕ್ಷಗಳು ಅದಾಗಲೇ ಕ್ಷಣಗಣನೆ ಆರಂಭಿಸಿದ್ದವು. ಇದನ್ನರಿತ ಪಟೇಲರು ಅಸೆಂಬ್ಲಿಯಲ್ಲಿ ಹೋತ, ನರಿಯ ಕಥೆಯೊಂದನ್ನು ಹೇಳಿದ್ದರು. ‘ಒಮ್ಮೆ ಹೋತವೊಂದು ಮೇಯುತ್ತಾ ಹೊಳೆಯಗುಂಟ ಹೊರಟಿತ್ತಂತೆ. ಅದರ ಹಿಂಗಾಲ ನಡುವೆ ನೇತಾಡುತ್ತಿದ್ದ ‘ಬೀಜ’ಗಳನ್ನು ನೋಡಿ ಜೊಲ್ಲು ಸುರಿಸಿದ ನರಿಯೊಂದು ಇನ್ನೇನು ಅವು ನೆಲಕ್ಕೆ ಬೀಳುತ್ತವೆ. ತಕ್ಷಣ ತಿಂದು ಬಿಡಬೇಕೆಂದುಕೊಂಡು ಹೋತವನ್ನು ಹಿಂಬಾಲಿಸಿಕೊಂಡೇ ಹೊರಟಿತ್ತಂತೆ. ಹೋತದ ಬೀಜ ಬೀಳುವುದಿಲ್ಲ. ನರಿಯ ಆಸೆ ಪೂರೈಸುವುದಿಲ್ಲ’ ಎಂದು ಸರಕಾರದ ಪತನವನ್ನು ನಿರೀಕ್ಷಿಸುತ್ತಿದ್ದ ಪ್ರತಿಪಕ್ಷವನ್ನು ತಿವಿದಿದ್ದರು. ಇಂದಿನ ಪತ್ರಿಕೋದ್ಯಮದಲ್ಲೂ ಯಾರು ಬೀಳಬೇಕೆಂದು ಯಾರು ಕಾದಿದ್ದರೋ, ಅವರ ಕಥೆ ಏನಾಗುತ್ತದೋ ಎಂಬುದಕ್ಕೆ ಉತ್ತರ ಸಿಗಲು ಇನ್ನು ಬಹಳಷ್ಟು ದಿನವಿಲ್ಲ ಬಿಡಿ.


ಇರಲಿ ಬಿಡಿ, ಯಾರು ಏನೇ ಅಂದರೂ ಬಹುಶಃ ಈ ವರೆಗೆ ಕನ್ನಡ ಪತ್ರಿಕೋದ್ಯಮದಲ್ಲಿ ಯಾರೂ ಆಗದಷ್ಟು ನಾವು ಸುದ್ದಿಯಾಗಿದ್ದೇವೆ. ಇದನ್ನು ಎಲ್ಲರೂ ಒಪ್ಪುತ್ತಾರೆ. ಮಾಡುತ್ತಿದ್ದ ಕೆಲಸಕ್ಕೆ ಕೇವಲ ರಾಜೀನಾಮೆ ಕೊಟ್ಟ ಕಾರಣಕ್ಕೆ ಇಡೀ ರಾಜ್ಯ ಒಂದಾಗಿ ಮಾತಾಡಿಕೊಂಡದ್ದು ಯಾವ ಪತ್ರಕರ್ತನ ಬಗೆಗೂ ಇಲ್ಲ. ವಿಶ್ವೇಶ್ವರ ಭಟ್ ಇವತ್ತು ಅಷ್ಟು ಮಾತಾಗಿದ್ದಾರೆ, ಅವರೊಂದಿಗೆ ನಾವು ಮೂವರು ಸಹ.


ಹಾಗೇ ನೋಡಿದರೆ ನಾವು ಒಬ್ಬೊಬ್ಬರೂ ನಮ್ಮದೇ ಆದ ಓದುಗ ವರ್ಗವನ್ನು ಹೊಂದಿದ್ದೇವೆ. ಒಂದಷ್ಟು ಮಂದಿಯನ್ನು ಚಿಂತನೆಗೆ ಹಚ್ಚಿದ್ದೇವೆ. ಎಲ್ಲೋ ಒಂದು ಕಡೆ ಚರ್ಚೆಗೆ ಇಳಿದ್ದಿದ್ದೇವೆ. ನಮ್ಮನಮ್ಮ ವಿಚಾರಗಳನ್ನು ಮಥಿಸಿದ್ದೇವೆ. ಅಭಿಪ್ರಾಯ ಭೇದಗಳು-ಸೈದ್ಧಾಂತಿಕ ಭಿನ್ನತೆಗಳು ಎದುರಾಗಿಲ್ಲ ಎಂದೇನೂ ಅಲ್ಲ. ಆದರೂ, ಓದುಗರು ನಮ್ಮ ಬರವಣಿಗೆಯನ್ನು ಒಪ್ಪಿದ್ದರು. ನಮ್ಮ ಅಂಕಣಗಳಿಗಾಗಿ ಕಾದು ಕುಳಿತಿರುತ್ತಿದ್ದರು ಒಂದು ವಾರ ಬರೆಯದಿದ್ದರೆ ಕಾದಾಟಕ್ಕೇ ಇಳಿಯುತ್ತಿದ್ದರು. ಹಾಗೆ ಮಾಡುವುದು ತಮ್ಮ ಹಕ್ಕೆಂದು ವಾದಿಸಿದ್ದರು. ತಪ್ಪಿದಾಗ ಗದರಿದ್ದರು, ಒಪ್ಪಿದಾಗ ಪ್ರೀತಿಯಿಂದು ಬೆನ್ನು ತಟ್ಟಿದ್ದರು. ಒಟ್ಟಾರೆ ಇವತ್ತು ನಾವು ಇದ್ದೇವಲ್ಲಾ ಆ ಸ್ಥಾನಕ್ಕೆ ನಮ್ಮನ್ನು ಏರಿಸಿದ್ದು ಅದೇ ಓದುಗರು. ಹೀಗಿದ್ದೂ ಇವತ್ತೂ ಅಂಥ ಓದುಗರಿಂದ ದೂರ ನಿಂತಿದ್ದೇವೆ. ಅವರನ್ನೂ ಕೇಳದೆಯೇ, ಅವರಿಗೆ ಹೇಳದೆಯೇ ಬರವಣಿಗೆಯಿಂದ ನುಣುಚಿಕೊಂಡಿದ್ದೇವೆ. ಓದುಗರಿಗೆ ಬೇಕಾದ್ದನ್ನು ಬರೆಯುವ ಬದಲು ನಾವು ಅಕ್ಕರೆಯಿಂದ ಬರೆಯುತ್ತಿದ್ದ ‘ವಿಕ’ಕ್ಕೆ ಒಂದೊಂದು ಸಾಲಿನ ರಾಜೀನಾಮೆಯನ್ನು ಬರೆದು ಕೊಟ್ಟು ಹೊರಬಂದು ಕುಳಿತುಬಿಟ್ಟಿದ್ದೇವೆ. ಇದು ಹೀಗೇಕೆ ? ಎಲ್ಲಿಯವರೆಗೆ ?


ಕೊನೆಯ ಪ್ರಶ್ನೆಗೆ ಮೊದಲು ಉತ್ತರ- ಇದು ಕೇವಲ ತಾತ್ಕಾಲಿಕ. ಇನ್ನು ಕೆಲವೇ ದಿನಗಳಲ್ಲಿ ಭರ್ಚಿಯನ್ನು ಮಸೆದುಕೊಂಡು ಹೊರಡುವ ಬೇಡನಂತೆ ನಮ್ಮನಮ್ಮ ಲೇಖನಿಗಳನ್ನು ಸಜ್ಜುಗೊಳಿಸಿಕೊಂಡು ಮತ್ತೆ ಆಖಾಡಕ್ಕೆ ಇಳಿದೇ ಇಳಿಯುತ್ತೇವೆ. ಅದಕ್ಕೂ ಮೊದಲು ಇದು ಹೀಗೇಕೆ ಎನ್ನುವ ಪ್ರಶ್ನೆಗೆ ಉತ್ತರಿಸಲು ಕುಳಿತರೆ...

9 comments:

 1. Hi, nice to see you in blog world. The name of your blog must be a lesson to RB:)
  Well-said in both the articles. Pls try to correct some spelling mistakes. Your profile still says that u r with VK.. correct it.

  Wish you all the very best.

  ReplyDelete
 2. Nice to see you. Proud of you guys as journalists.

  ReplyDelete
 3. Nimma Nireeksheyalli.... plz bandu bidi

  ReplyDelete
 4. hi is it true you and VB and PS have logged a case on RB...?

  ReplyDelete
 5. Let Cauvery flow from Gandi mani's Gindi.

  RK

  ReplyDelete
 6. Thanks Mr. GM. Very elegantly written, Its an feast to read to a true gentleman. Befitted reply to that BM (Be' Mani)

  ReplyDelete
 7. Balan Nataraj

  Mr.GM, you are going overboard. You have become one more RB. Stop writing this and continue your columns on water. If it continues many might stop reading your blog.

  ReplyDelete
 8. Dear Radhu,

  we are all waiting for article on Water.

  G S Bhat

  ReplyDelete