About Me

My photo
ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.

Wednesday, January 19, 2011

ಯಶೋಮತಿ ಪ್ರಾಪ್ತಿಗಾಗಿ ಲಲಿತಾ ಸಹಸ್ರನಾಮ

‘ಅಸಲಿಗೇ....ಈ ಭಡ್ತಿಗೆ ಬಾಲ ಇದೆಯೋ ಇಲ್ಲವೋ...’

ಪದ್ಮನಾಭನಗರದ ಪತ್ರಿಕಾ ಕಚೇರಿಯಲ್ಲಿ ಕಳೆದವಾರ ಇಂಥದ್ದೊಂದು ಪ್ರಶ್ನೆ, ಕೀರಲು ಸ್ವರದಲ್ಲಿ ಕೇಳಿಬರುತ್ತಿತ್ತಂತೆ. ಅಂದರೆ ‘ಭಡ್ತಿ‘ಯಲ್ಲಿ ಬರುವ ‘ಭ’ ಅಕ್ಷರ ಮಹಾಪ್ರಾಣವೋ, ಅಲ್ಪ ಪ್ರಾಣವೋ ಎಂಬುದು ತಿಳಿಯದೇ ಒದ್ದಾಡುತ್ತಿತ್ತು ಆ ಪ್ರಾಣಿ. ಅದು ನರಿಯೋ, ನಾಯಿಯೋ ಊಳಿಟ್ಟ ಸದ್ದಿರಬಹುದೆಂದು ಮಂದಿ ತಮ್ಮ ಪಾಡಿಗೆ ತಾವು ತಲೆ ಬಗ್ಗಿಸಿ ಕೆಲಸಕ್ಕೆ ತೊಡಗಿದರೂ ಬಿಡದೇ ಅದು ಊಳಿಡುತ್ತಲೇ ಇತ್ತಂತೆ. ಹೀಗಿರುವಾಗ ಆ ದೈತ್ಯ ಪ್ರತಿಭೆ ಕಿರುಚಿದ್ದು ಕೇಳಿ ಕೇವಲ ಆ ಕಚೇರಿಯಲ್ಲಿದ್ದವರಷ್ಟೇ ಅಲ್ಲ, ಪಂಪ ಮಾರ್ಗದಲ್ಲಿರುವ ಪತ್ರಿಕಾ ಕಚೇರಿಯ ಒಂದಷ್ಟು ಮಂದಿಯೂ ದಡಕ್ಕನೆ ಓಡೋಡಿ ಬಂದು ‘ಏನಪ್ಪಣೆ...’ ಎಂಬಂತೆ ಡೊಗ್ಗು ಸಲಾಮ್ ಹೊಡೆದು ನಿಂತರಂತೆ. ಅವರಲ್ಲೇ ಎರಡು ಗುಂಪುಗಳಾಗಿ ಹೋಯಿತು. ಕೆಲವರು ಬಾಲ ಇದೆ ಅಂದರೆ, ಮತ್ತೆ ಕೆಲವರು ಇಲ್ಲ ಅಂದರಂತೆ.

ಹೀಗೆಯೇ ಚರ್ಚೆ ಮುಂದುವರಿಯುತ್ತಿರುವಾಗಲೇ ಇವರ ಗದ್ದಲದಿಂದ ಎಚ್ಚೆತ್ತ ‘ಸಿಂಹದ ಮರಿ’ ಕೋಪದಿಂದ ಒಮ್ಮೆಲೆ ಘರ್ಜಿಸಿ ತನ್ನ ಪ್ರತಾಪ ತೋರಿತು. ಮಲಗಿದ್ದ ಸಿಂಹವನ್ನು ಕೆಣಕಿದ ತಪ್ಪಿನ ಅರಿವಾಗಿ ಅಲ್ಲಿದ್ದವರೆಲ್ಲರ ಚಡ್ಡಿಯೂ ಒದ್ದೆಯಾಗಿತ್ತಂತೆ. ಆ ಘರ್ಜನೆಗೆ ದೈತ್ಯ ಪ್ರತಿಭೆಯ ರವಿಮೊಗದಲ್ಲಿ ಅದೆಷ್ಟು ಬೆವರಿಳಿದು ಹೋಗಿತ್ತೆಂದರೆ, ಬೆಂಗಳೂರಿನ ದೊಡ್ಡ ಮೋರಿಯಲ್ಲಿ ಅದೇ ಭೋರ್ಗರೆದು ಹರಿಯತೊಡಗಿ, ವೃಷಾಭಾವತಿ ಮೊದಲಿಗಿಂತಲೂ ದುರ್ವಾಸನೆ ಬೀರ ತೊಡಗಿತು. ಇದೆಂಥಾ ವಾಸನೆ ಎಂದು ಅರಿಯದೇ ಯಾರಿಗಾದರೂ ನಿವೇದಿಸಿಕೊಳ್ಳೋಣ ಎಂದು ಉಷಾಕಾಲದಲ್ಲೇ ಎದ್ದು ಹೊರಬಂದು ನೋಡಿದರೆ ಕೋರ್ಟಿನಿಂದ ಬಂದ ವ್ಯಕ್ತಿಯೊಬ್ಬರು ಅದೇನೋ ಇಂಜಂಕ್ಷನ್ ಚುಚ್ಚಲು ಸಿದ್ಧವಾಗಿ ನಿಂತಿದ್ದರಂತೆ. ಅದನ್ನು ಚುಚ್ಚಿಸಿಕೊಳ್ಳಲೋ ಬೇಡವೋ ಎಂಬುದು ತಿಳಿಯದೇ ಒಳಗೋಡಿದರೆ ದೈತ್ಯ ಪ್ರತಿಭೆಯ ಮುಖದಲ್ಲಿ ಅದ್ಯಾವ ಭಾವನೆ ಇದೆಯೆಂಬುದನ್ನೇ ಗುರುತಿಸಲಾಗದ ಸ್ಥಿತಿ. ಚೇತನವನ್ನೇ ಕಳಕೊಂಡ ಸ್ಥಿತಿಯಲ್ಲಿ ಚಿಕ್ಕದ್ದೊಂದು ಮಾಂಸದ ಪರ್ವತದಂತೆ ವ್ವೆ,ವ್ವೆ,ವ್ವೆ...ಅನ್ನುತ್ತಾ ಬಿದ್ದುಕೊಂಡಿತ್ತು ಆ ದೇಹ.

ಎದ್ದೆನೋ ಬಿದ್ದೆನೋ ಎಂಬಂತೆ ಊರ ತುಂಬೆಲ್ಲ ಇದ್ದ ಶುಶ್ರೂಕಿಯರು ಓಡಿ ಬಂದು ಗಾಳಿ ಬೀಸಿ, ನೀರು ಕುಡಿಸಿ ಶೈತ್ಯೋಪಚಾರ ಮಾಡಿದ್ದೇ ಮಾಡಿದ್ದು. ಆದರೆ ಅದರಿಂದ ಯಾವುದೇ ಪ್ರಯೋಜನವೂ ಆಗದಿದ್ದಾಗ ಇನ್ನೇನು ಮಾಡಲೂ ದಿಕ್ಕು ತೋಚದೇ ಆ ಆ ಹಿಮವಂತನಾದ ಈಶ್ವರನನ್ನೇ ಪ್ರಾರ್ಥಿಸುತ್ತಾ ಕುಳಿತು ಬಿಟ್ಟರಂತೆ. ಹಿನ್ನೆಲೆಯಲ್ಲಿ ಜೋಗಿಯರ ಪದವೂ ಕೇಳಿಬರುತ್ತಿತ್ತು. ಅಷ್ಟರಲ್ಲಿ ಪ್ರಕಾಶಮಾನವಾದ ಬೆಳಕೊಂದು ಪ್ರಜ್ವಲಿಸಿ ವಿಠ್ಠಲ ಮಲ್ಯ ರಸ್ತೆಯಲ್ಲಿ ಅನುಗ್ರಹಿತವಾದ ವಿಚಿತ್ರವಾದ ದ್ರವವೊಂದನ್ನು ದೇಹದ ಮುಂದೆ ಹಿಡಿಯಿತು. ಅದೇನು ಅಚ್ಚರಿಯೋ, ಪವಾಡವೋ, ಕೈಗುಣವೋ ಕ್ಷಣದಲ್ಲಿ ಅದು ಚೇತರಿಸಿಕೊಂಡು ‘ಅಣ್ಣಾ...’ ಎಂದು ಕೀರಲು ಸ್ವರದಲ್ಲಿ ಮತ್ತೆ ಉದ್ಘರಿಸಿತು. ಹತ್ತಿರಹೋಗಿ ಕಿವಿಗೊಟ್ಟು ಕೇಳಿದರೆ, ಗಿಂಡಿ. ಗಿಂಡಿ... ಎನ್ನುವ ಪ್ರಲಾಪ ಕೇಳಿಬಂತು. ಓಹೋ...ನೀರು ಕೇಳುತ್ತಿರಬೇಕು ಎಂದುಕೊಂಡು ಗಿಂಡಿಯಲ್ಲಿನ ತೀರ್ಥ ತಂದು ಬಾಯಿಗೆ ಬಗ್ಗಿಸಲು ಹೊರಟರು ಮಂದಿಮಾಗದರು. ಅದನ್ನು ಒಂದೇ ಏಟಿಗೆ ತಳ್ಳಿ ಹಾಕಿದ ಆ ದೈತ್ಯ ದೇಹ, ಎದುರಿಗಿದ್ದ ಇಡೀ ಬ್ಯಾರೆಲ್ ಅನ್ನೇ ಸುರುವಿಕೊಂಡು ಮತ್ತೆ ವ್ವೆ,ವ್ವೆ,ವ್ವೆ...ಅನ್ನತೊಡಗಬೇಕೇ ?

ಕರ್ಣ ಕರ್ಕಶವಾದ ಆ ಧ್ವನಿಯನ್ನು ಕೇಳಿ ಅಲ್ಲಿದ್ದ ಎಲ್ಲರೂ ಮುಖ ಕಿವುಚಿದರೆ ಈ ದೇಹ ಮಾತ್ರ ಏದುಸಿರು ಬಿಡುತ್ತಾ ಮುಂದೇನು ಮಾಡಬೇಕೆಂಬುದನ್ನೇ ಅರಿಯದೇ ‘ವಿಶ್ವರೂಪ ದರ್ಶನವನ್ನು ಮಾಡಿಸಿಯೇ ತೀರುತ್ತೇನೆ. ಈ ಸತ್ಯಸಂದನಿಂದ ಎಲ್ಲವೂ ಇತಿಹಾಸದಲ್ಲಿ ದಾಖಲಾಗಿಯೇ ಆಗುತ್ತದೆ’ ಎನ್ನುತ್ತಾ ಪೆನ್ನನ್ನೆತ್ತಿಕೊಂಡು ಅದಕ್ಕೆ ಶಾಯಿ ತುಂಬಿಸುವ ಬದಲಿಗೆ ಬ್ಯಾರೆಲ್‌ನಲ್ಲಿದ್ದುದನ್ನೇ ಅದ್ದಿ ಅದ್ದಿ ಬರೆಯ ತೊಡಗಿದ್ದು ಮಾತ್ರ ಸತ್ಯ.

ಹಾಗೆ ಗೀಚಿ ಬೀಚಿ ಬಿಟ್ಟಿದ್ದೆಲ್ಲವೂ ಕಪ್ಪು ಸುಂದರಿಯ ಬಾಟಮ್ ಐಟಮ್ಮುಗಳ ಸಾಫ್ಟ್ ಕಾರ್ನರ್‌ಗಳಲ್ಲಿ ಸೇರಿಕೊಳ್ಳಲುತೊಡಗಿದಂತೆ ಆ ದೇಹದ ಮುಖದಲ್ಲಿ ವ್ಯಂಗ್ಯ, ವಿಕೃತವಾದ ನಗೆಯೊಂದು ಮೂಡಲಾರಂಭಿಸಿತು. ಅದನ್ನು ನೋಡಿ ಅಲ್ಲಿದ್ದವರೆಲ್ಲ ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದರೆ ಜೆಪಿ ನಗರದ ಫ್ಲ್ಯಾಟ್ ಒಂದರಲ್ಲಿ ಇನ್ನಾದರೂ ಈ ದೇಹಕ್ಕೆ ಸನ್ಮತಿ, ಯಶೋಮತಿಗಳು ದೊರಕಲೆಂದು ಲಲಿತಾ ಸಹಸ್ರನಾಮಾರ್ಚನೆ, ಪ್ರಾರ್ಥನೆ ಇತ್ಯಾದಿ ನಡೆಯುತ್ತಿತ್ತು.

ಅಷ್ಟರಲ್ಲಿ ಗಿಂಡಿಹಿಡಿದ ಮಾಣಿಯೊಬ್ಬ ಭಡ್ತಿಗೆ ಬಾಲ ಇದೆ, ಆದರೆ ಎಲ್ಲ ಸಂದರ್ಭದಲ್ಲೂ ಆತ ಬಾಲ ಬಿಚ್ಚುವುದಿಲ್ಲ ಎಂದು ಕೂಗಿ ಹೇಳಿದ್ದು ಕಿವಿಗಪ್ಪಳಿಸಿಬಿಡಬೇಕೇ ? ಬಾಲ ಎಂಬ ಪದ ಕೇಳುತ್ತಿದ್ದಂತೆಯೇ ಆ ದೈತ್ಯ ಪ್ರತಿಭೆಗೆ ಇದ್ದಕ್ಕಿಂದಂತೆ ಆಂಜನೇಯನ ದರ್ಶನವಾಗಿ, ಲಂಕೆಯನ್ನು ಸುಟ್ಟ ಘಟನೆ ಮನದಲ್ಲಿ ಮೂಡಿತಂತೆ ...ಅಷ್ಟೆ, ಮತ್ತೆ ಸ್ಮೃತಿ ತಪ್ಪಿದ ಪ್ರಾಣಿ ಅದೇನೋ ಸುಟ್ಟ ಬೆಕ್ಕಿನಂತೆ ವ್ವೆ,ವ್ವೆ,ವ್ವೆ...ಎನ್ನತೊಡಗಿದ್ದನ್ನು ಕೇಳಿ, ಕೇಳಿ ಎಂದರೂ ಯಾರೂ ಕೇಳಿಸಿಕೊಳ್ಳಲೇ ಇಲ್ಲ.

ಗಿಂಡಿ ತೀರ್ಥ: ಈ ಕೇಳಿ ಅನ್ನೋದು ಕೆಲ ಪತ್ರಕರ್ತರಿಗೆ ಅತ್ಯಂತ ಪ್ರಿಯವಾದದ್ದು. ಹೀಗಾಗಿ ದಿನವೂ ಅವರು ಅಂಥ ಕೇಳಿಯಲ್ಲೇ ತೊಡಗಿರುತ್ತಾರೆ. ಅದರ ಹಿಂದೆ ಕಾಮದ ವಾಸನೆ ಹೊಡೆದರೆ ಅದು ಇತಿಹಾಸ, ಪರಂಪರೆಯ ಕೊಡುಗೆ.

25 comments:

 1. So hilarious. Never thought you could be so funny !!! Nicely written. I was eagerly waiting for your next article since the last time you posted. Keep it coming. We are with you brother !!!

  ReplyDelete
 2. Looking at your style of writing, you seem to be writing under the name "Nachiketa" in VK. I am correct ?

  ReplyDelete
 3. Dear Ramraj,

  Thank u.But am not "Nachiketa'.Avanu nanaginta prtibhavanta.

  ReplyDelete
 4. anna,
  sooper.

  yaarige ellige muttabeko allige muttide.
  andahaage nivu gindiyinda bidtaa irodu kota kota kuditaa iro nira?

  ReplyDelete
 5. I believe, this week he may come back heavily on you peoples.

  ReplyDelete
 6. Really suuuuuuuuperr abt RB.. Every one knows his character..Coming to ur arcticle in VK , it is one of the article I never used ignore...Now we miss those as I was regular reader.. Now please let us know , in future if u join print media will u be writing on water related topics??

  ReplyDelete
 7. ಕತ್ತೆ ಒದೆಯುತ್ತೆ ಅಂತ ನೀವೂ ಅದಕ್ಕೆ ಒದ್ದರೆ ಚೆನ್ನಾಗಿರಲ್ಲ ಅಂತ ನಂಗಂನ್ಸುತ್ತೆ...ಹಾಗಂತ ಕತ್ತೆ ಇನ್ಮುಂದೆ ಒದೀದೇ ಇರೋ ಹಾಗೆ ಮಾಡೋದು ಕೂಡಾ ಅಗತ್ಯವೇ....!

  ReplyDelete
 8. ಆ ನಿಯತ್ ಇಲ್ಲದ ನಾಯಿಯ ಬಗ್ಗೆ ಎಷ್ಟು ಬರೆದರೂ ಕಮ್ಮಿನೇ.......

  ReplyDelete
 9. ಭಡ್ತಿ,ನಾವೊಂದಷ್ಟು ಜನ ಹಾಯ್ ನೋಡಿದ್ವಿ....ತೀರಾ ಅಸಹ್ಯ ಅನ್ಸಿತ್ತು.... ಆ ಬರವಣಿಗೆ ನೋಡಿ.... ಅದು ಅವರವರ ಮಟ್ಟ....ಮತ್ತು ಅವರ ಅನಿವಾರ್ಯ... ಆ ಪತ್ರಿಕೆ ಇಂಥವನ್ನೇ ಬರೆದು ಹೊಟ್ಟೆ ತುಂಬಿಸಿಕೊಳ್ಳಬೇಕು... ಪಾಪಾ ಅನ್ಸತ್ತೆ.... ಆದ್ರೆ...ನೀನ್ಯಾಕೆ ಹೀಗೆ ಬರೆದು ಸಮಯ ಹಾಳ್ ಮಾಡ್ಕೊಂತಿ... ಬೇಕಾದ್ರೆ...ಕಾನೂನು ಮೂಲಕ ಹೋರಾಡು... ಅದು ಬಿಟ್ಟು ಇದು ಸರಿಯಲ್ಲ ಅನ್ಸತ್ತೆ... ಯೋಚಿಸು... ಸುಮ್ಮನೆ ಕೆಸರಿಗೆ ಕಲ್ಲು ಎಸಿಬೇಡಾಂತ...... ಹಾಲ್ಸ್...

  ReplyDelete
 10. ಸುಪರ್! ಕೇಳಿಯಲ್ಲಿ ತೊಡಗಿದ ಮಹಾನುಭಾವನ ಕಾಮದಹನವಾದದ್ದ೦ತೂ ಸತ್ಯ..! ಆದ್ರೆ, ತೀರಾ ಅವನ ಮಟ್ಟಕ್ಕೆ ಇಳೀದಿದ್ರೆ ಒಳ್ಳೇದು..

  ReplyDelete
 11. Mr Radhakrishna article is good hope many more good articles follow,personal request is to increase the font size to next size.


  Thanks
  Patil

  ReplyDelete
 12. ರವಿಕೆ ಬೆಳೆಗೆರೆ ಯವರಿಗೆ ಅವರದೇ ದಾಟಿಯಲ್ಲಿ ಚಾಟಿ ಏಟು
  ಪದ್ಮನಾಭ ನಗರದ ಸ್ಯಾಡಿಸ್ಟ್ ಪತ್ರಕರ್ತನಿಗೆ ಎಲ್ಲೆಲ್ಲೋ ನೀರಂತೆ?

  ReplyDelete
 13. ಚೆನ್ನಾಗಿದೆ ಬರೆದದ್ದು.-ಅಜಕ್ಕಳ ಗಿರೀಶ

  ReplyDelete
 14. ಒಂದಿಷ್ಟು ಡಿ. ಡಿ. ಟಿ. ಮತ್ತು ಬ್ಲೀಚಿಂಗ್ ಪುಡಿನ ಚರಂಡಿ ನೀರಲ್ಲಿ ಮಿಕ್ಸ್ ಮಾಡಿ, ಚೆನ್ನಾಗಿ ಕಲಕಿ ಕುಡಿಸಿದರೆ ಸರಿಯಾಗಬಹುದೇನೋ. ಆದ್ರೆ ಡಿ. ಡಿ. ಟಿ. ಹುಡುಕೋದೇ ಕಷ್ಟ.

  ReplyDelete
 15. ನೀವು ಮೇಲೆ ರವಿಗುಗುಳಿದ ವಿಧ ವಿಧ ಪ್ರಸಾದಕ್ಕಿ೦ತಲೂ, ಕೆಳಗಿನಿ೦ದ ಕೊಟ್ಟ ತೀರ್ಥ ತುಂಬಾ ರುಚಿಯಾಗಿರ್ಬೇಕು... !! ಚೆನ್ನಾಗಿದೆ ಶೈಲಿ ಈ ನೀರಾವರಿಯದ್ದು..
  ವಂಧಿಮಾಗಧರು ಎನ್ನುವ ಪ್ರಯೋಗ ಸರಿ ಅಲ್ವೇ?

  ReplyDelete
 16. ನೀರಿಗೆ ಇನ್ನೊಂದು ಹೆಸರು "ಭಡ್ತಿ" ಅಂತ ನಿಮ್ಮ ವಿ. ಕ. ದಲ್ಲಿನ ಲೇಖನಗಳನ್ನು ಓದಿದ ನಂತರ ನನಗೆ ಅನಿಸಿದ್ದು,
  ಆದರೆ ನೀವು ಅವನ ತರಹ ಬರೆಯಲು ಹೋಗಬೇಡಿ, ನೀವು ಅವನ ಲೇಖನಗಳಿಗೆ ಇಲ್ಲಿ ಉತ್ತರಿಸಲು ಪ್ರಾರಂಭಿಸಿದರೆ ಇಲ್ಲಿ ಅದನ್ನು ಓದುವ ಜನ ಕಡಿಮೆ, ಅದಕ್ಕಿಂತಲೂ ನೀವು ನಿಮ್ಮ ನಿಜವಾದ (ನೀರು) ಲೇಖನಗಳನ್ನು ಇಲ್ಲಿ ಪ್ರಕಟಿಸಿದರೆ ಉತ್ತಮ.

  ReplyDelete
 17. ಬೇಡ ಭಡ್ತಿ
  ಬೆಳೆಗೆರೆಗೆ ನಿಮ್ಮ ವಿಷಯ ಹಣ ತರುತ್ತದೆ. ಹಾಗಾಗಿ ಆತ ಎನನ್ನೂ ಬರೆಯುತ್ತಾನೆ. ನೀವು ಹೀಗೆ ನಿಮ್ಮ ಶ್ರಮ ಪುಕ್ಕಟೆ ದಾಖಲಿಸಿದರೆ ಜನ ಓದಿ ನಕ್ಕು ಮರೆಯುತ್ತಾರೆ. ಹಾಗಾಗಿ ಇದು ಬೇಡ ಕೂಗುವವರು ಕೂಗಲಿ ಸತ್ಯ ಇಲ್ಲ ಅಂದಾದಮೇಲೆ ಅವರಾಗಿಯೇ ಒಂದು ದಿನ ಬಂದು ಹೆಗಲಮೇಲೆ ಕೈಯಿಟ್ಟು "ಸಾರಿ ಕಣೋ.." ಅನ್ನುತ್ತಾರೆ. ಹೀಗೆಲ್ಲಾ ಬರೆದರೆ ಹಾಗೆ ಬಂದು ಸಾರಿ ಅಂದಾಗ ಅವರನ್ನು ಕೇವಲವಾಗಿ ನೋಡುವ ಅವಕಾಶ ಇಲ್ಲವಾಗುತ್ತದೆ....!. ಕಕ್ಕದ ಮೇಲೆ ಕಲ್ಲು ಎಸೆಯುತ್ತಾರೋ? ಯಾರಾದರೂ..?

  ReplyDelete
 18. ರವಿ ಬೆಳಗೆರೆ ನಿಮ್ಮ ಬಗ್ಗೆ ಸುಖಾ ಸುಮ್ಮನೆ ಅವಹೇಳನಕಾರಿಯಾಗಿ ಬರೆದದ್ದು, ಎಲ್ಲರಿಗೂ ಗೊತ್ತಿರುವ ವಿಚಾರ. ಸುಮ್ಮನೆ ಬೇರೆಯವರನ್ನು ವ್ಯಂಗವಾಗಿ ಚುಚ್ಚಿ, ಅವರ ಬೆಗ್ಗೆ ಸುಳ್ಳು ಬರೆದು ಟೀಕಿಸುವುದೇ ಅವನ ಬರವಣಿಗೆಯ ಶೈಲಿ ಮತ್ತು ವಸ್ತು. ಅವನಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ನೀವು ಈವರೆಗೆ ರಬೆಗೆ ಪ್ರತಿಕ್ರಿಯಿಸಿದ್ದೇ ಸಾಕು. ಇನ್ನು ಮುಂದೆ ದಯವಿಟ್ಟು ಅವನ ಬಗ್ಗೆ ಬರೆಯುವುದನ್ನು ನಿಲ್ಲಿಸಿ.

  ನಿಮಗೆ ನಿಮ್ಮ ವಿಚಾರಗಳನ್ನು ಹೇಳಲು ದಿನ ಪತ್ರಿಕೆ ಇಲ್ಲದಿದ್ದರೇನಂತೆ, ಅಂತರ್ಜಾಲವೆಂಬ ಪವರ್ಫುಲ್ ಮಾದ್ಯಮವಿದೆ.
  ನಾವು ನಿಮ್ಮಿಂದ ಈ ಬ್ಲಾಗ ನಲ್ಲಿ ಸೀರಿಯಸ್ ಮತ್ತೆ ವೈಚಾರಿಕ ಲೇಖನಗಳನ್ನು ನಿರೀಕ್ಷಿಸುತ್ತೇವೆ.

  ReplyDelete
 19. ಹೌದು ಭಡ್ತಿಯವರೇ....ಇನ್ನು ಸಾಕು...ಹಾಗೆ ಬರೆಯುತ್ತ ಹೋದರೆ ಕೊಳಕು ನಿಮಗೂ ಅಂಟಿಕೊಂಡುಬಿಡುತ್ತದೆ...ಗಿಂಡಿಯಿಂದ ಪರಿಶುದ್ದ ನೀರು ಮಾತ್ರ ಬರಲಿ....!ನಾವು ನೀರ್ ಸಾಧಕನ ನಿರೀಕ್ಷೆಯಲ್ಲಿದ್ದೇವೆ...

  ReplyDelete
 20. ಭಡ್ತಿ ಸರ್,
  ಇಂಥ 420ಗಳಿಗೆ ಕೆಲವರು ಕೊರಳುಪಟ್ಟಿ ಹಿಡಿದು ಕೆರದಲ್ಲಿ ಹೊಡೆಯುತ್ತಾರೆ. ನೀವು ದೂರ ಕುಳಿತೇ ಆ ಕೆಲಸ ಮಾಡಿದ್ದೀರಿ.ಆದರೂ ಎಫೆಕ್ಟ್ ಸೂರ್....!!!! ಯಾವುದೋ ಮುದಿ ನಾಯಿ ಏನೋ ಬೊಗಳಿದರೆ ಊರ ಜನರೆಲ್ಲ ನಂಬಬುವ ಕಾಲ ಿದಲ್ಲ..ಕಳೆದ 15 ವರ್ಷಕ್ಕೂ ಇವತ್ತಿಗೂ ಪರಿಸ್ಥಿತಿ ಬದಲಾಗಿದೆ.ಬೊಗಳುವ ನಾಯಿ ಮಾತ್ರ ಬದಲಾಗಿಲ್ಲ(ಾಗುವುದೂ ಇಲ್ಲ..!)
  ನಿಮ್ಮ ಬೆಂಬಲಕ್ಕೆ ನಾವೆಲ್ಲ ಇದ್ದೇವೆ..keep on writing..

  ReplyDelete
 21. ಪಾಪ ಅವನಿಗೆ ಬೆಳಗ್ಗೆ ವಿಠಲ್ ಮಲ್ಯಾ ರಾತ್ರಿ ವಿಜಯ್ ಮಲ್ಯ ಇಬ್ರನ್ನೂ ಬಿಟ್ಟಿರಲು ಕಷ್ಟ ಎಂದು ಎಲ್ಲರಿಗೂ ಗೊತ್ತಿದೆ...
  ರಾಧಣ್ಣಾ ನಿನ್ನ ಗಿಂಡಿಯಿಂದ ನಮಗೆ ಪಚ್ಚಕರ್ಪೂರದ ತೀರ್ಥ ಇಷ್ಟ....

  ReplyDelete
 22. ಸರ್ ದಯವಿಟ್ಟು ಬೆಳೆಗೆರೆ ಜೊತೆ ನಿಜವಾಗಿ ನಡೆದದ್ದು ಏನು ಈಗಲಾದರೂ ರಿವಿಲ್ ಮಾಡಿ...

  ReplyDelete