About Me

My photo
ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.

Saturday, January 22, 2011

ಎಂದೋ ಮರೆತ ಹಾಡು...ಕೊಳೆಗೆರೆ ರಮ್‌ಗಯ್ಯಾ...

‘ಕೊಳೆಗೆರೆ ರಮ್‌ಗಯ್ಯಾ...’

ಹೀಗೊಂದು ಎಂದೂ ಮರೆಯದ ಹಾಡಿನ ಅಪ್ರಭಂಶ ಸ್ವರೂಪವೊಂದು ಕೇಳಿಬರುತ್ತಿತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ.
ಇದೇನಿದು ಹಾಡಿನ ಧಾಟಿ ಅದೇ ಇದೆಯಲ್ಲಾ, ಆದರೆ ಎಲ್ಲೋ ವ್ಯತ್ಯಾಸವಾದಂತೆ ಕಾಣುತ್ತಿದೆ ಅಂದುಕೊಂಡರೆ ಅದರ ಹಿಂದೆಯೇ ಬಿಳಿಹೆಂಡ್ತಿ ಚಿತ್ರದ ‘ರಮ್‌ಗೇನ ಹಳ್ಳಿಯಾಗೆ ರಂಗಾದ ರಮ್‌ಗೆ ಗೌಡ...’ಅಂತ ಮೊದಲನೆ ಹೆಂಡ್ತಿ ಎರಡನೆಯವಳಿಗೆ ಹೇಳಿಕೊಡುತ್ತಾ ನಿಟ್ಟುಸಿರು ಬಿಡುತ್ತಿರುವುದೂ ಅರಿವಿಗೆ ಬಂತು. ಆದರೆ ಇದ್ಯಾವುದರ ಪರಿವೆಯೇ ಇಲ್ಲದ ರಮ್‌ಗಯ್ಯ ಮಾತ್ರ ಬ್ಯಾರಲ್‌ಗಟ್ಟಲೆ ರಮ್ ಅನ್ನು ತನ್ನ ಹಂಡೆ ಹೊಟ್ಟೆಯೊಳಗೆ ಸುರುವಿಕೊಳ್ಳುತ್ತಾ ಹೊಸ ಬಾಟಮ್‌ಐಟಮ್‌ಗಾಗಿ ಆ ಹಿಮಾಚ್ಛಾದಿತ ಬೆಟ್ಟದಲ್ಲೂ ತಡಕಾಡುತ್ತಿದ್ದ. ರಮ್ ಜಾಸ್ತಿ ಆಗಿದ್ದರಿಂದ ಆತನ ಬಾಯಿಂದ ವ್ವೆ...ವ್ವೆ...ವ್ವೆ..ಎಂಬ ಕೀರಲು ಸ್ವರ ನಿರಂತರ ‘ಕೇಳಿ’ ಬರುತ್ತಿತ್ತು.


ಇದೆಲ್ಲಾ ನಮ್ಮಣ್ಣಂದಲ್ಲವಾ ಅಂತ ಗೋರಗೊರ ಊರಿನ ನಾಗನ ಮೂಲಕ ರಮ್‌ಗಯ್ಯ ಕಾಪೀರೈಟ್‌ಗೆ ಅರ್ಜಿ ಗುಜರಾಯಿಸಿಬಿಟ್ಟ. ಅಯ್ಯೋ ಸ್ವಾಮಿ, ಇಲ್ಲಾ ಅಂತ ಹೇಳಿದವರಾರು ? ಅವರ ಹೆಸರಿನಲ್ಲೇ ಆ ಕಾಪಿರೈಟ್ ಇದೆ. ಅದೇನೋ ಮರೆಯದ ಹಾಡಿನ ಗುಂಗಿನಲ್ಲೇ ಇದ್ದುದಕ್ಕೆ ಬೆಳೆಗೆರೆ ಅನ್ನುವಾಗ ಸ್ವಲ್ಪ ಯಡವಟ್ಟಾಗಿ ಕೊಳೆಗೆರೆ ಅಂತಾಗಿ ಹೋಯ್ತು ಅಂತದ್ದಿದ್ದು ಹುಬ್ಬಳ್ಳಿಯ ಕಮರೀಪೇಟೆಯ ಹಂದಿಯೊಂದಕ್ಕೆ ಕೇಳಿಬಿಡಬೇಕೇ? ಅದೂ ಸಹ ಕಾಪೀರೈಟ್ ಪೈಟೋಟಿಗೆ ಇಳಿಯಿತು. ‘ಕೊಳೆಗೆರೆ ಅನ್ನೋದು ನನ್ನ ಹೆಸರಿನ ಭಾಗ. ಅದನ್ನು ನನಗಿಂತ ಉತ್ತಮರಿಗೆ ಇಟ್ಟರೆ ಒಪ್ಪಿಕೊಳ್ಳಬಹುದಿತ್ತು. ಹೋಗೀಹೋಗಿ ನಮ್ಮೂರಿನ ಉಳ್ಳಾಗಡ್ಡಿ ಓಣೀಲಿ ಯಾರ‍್ಯಾರ ಜತೆಗೋ ಬಿದ್ದೆದ್ದು ಗಬ್ಬೆದ್ದು ಹೋಗಿರುವ ವ್ಯಕ್ತಿಗಲ್ಲಾ ಅಂಥ ಹೆಸರನ್ನು ಇಟ್ಟು ನಮ್ಮ ಪಾವಿತ್ರ್ಯವನ್ನು ನಾಶ ಮಾಡಿದ್ದೀರಿ’ ಅಂತ ಹೂಂಕರಿಸಲಾರಭಿಸಿತು.


‘ಓಹೋ, ಸದಾ ಕೊಳಚೆ ಚರಂಡಿಯಲ್ಲೇ ಬಿದ್ದು ಹೊಲಸನ್ನೇ ತಿಂದು ಬದುಕುವ ನಿನಗೂ ಒಂದು ಪಾವಿತ್ರ್ಯ ಅನ್ನುವುದು ಇದೆಯೇ’ ಎಂಬ ಮರು ಪ್ರಶ್ನೆ ಎಸೆದವನು ಶೋಕರಾಮ. ಇದರಿಂದ ಇನ್ನಷ್ಟು ಕೆರಳಿ ಹೋದ ಹಂದಿ ಹೂಂಕರಿಸುತ್ತಾ ‘ಅದು ನಮ್ಮ ಆಹಾರ. ಇಷ್ಟಾದರೂ ನಮ್ಮಲ್ಲಿ ನಿಯತ್ತು ಅಂತ ಇರುತ್ತದೆ. ರಮ್‌ಗಯ್ಯನಂಥವರು ಹೇತದ್ದನ್ನು ನಾವು ತಿನ್ನದೇ ಹೋಗಿದ್ದರೆ ನಾಡು ಇಷ್ಟರಲ್ಲಿ ಇನ್ನಷ್ಟು ಕೊಳೆಗೇರಿಯಾಗುತ್ತಿತ್ತು. ನಾವು ಕಮರೀಪೇಟೆಯಲ್ಲಿ ಇಷ್ಟು ಓಡಾಡಿದರೂ ಎಂದಿಗೂ ಉಳ್ಳಾಗಡ್ಡಿ ಓಣಿಯ ಮನೆ ಬಾಗಿಲುಗಳನ್ನು ತಟ್ಟಲಿಲ್ಲ. ಈ ಮನುಷ್ಯ ಆ ಓಣಿಯಲ್ಲಿ ಗಂಟೆಗೊಬ್ಬ ಹೆಂಗಸರ ಸೆರಗಿನಲ್ಲಿ ಅಡಗಿಕೊಂಡಿರುತ್ತಾನೆ. ಅದು ನಮಗೆ ಗೊತ್ತಾದ ಮೇಲೆ ಕಮರಿಪೇಟೆಗೆ ಬಂದರೂ ಅಪ್ಪಿ ತಪ್ಪಿಯೂ ನಮ್ಮ ತಿಪ್ಪೆಯಲ್ಲಿ ಬೀಳಲು ಅವನಿಗೆ ಅವಕಾಶ ಕೊಡಲಿಲ್ಲ. ಆತ ನಮ್ಮ ವಾಸಸ್ಥಾನವಾದ ತಿಪ್ಪೆಗೆ ಆತ ಬಿದ್ದರೆ ಅದೂ ಅಪವಿತ್ರಗೊಂಡು ಬಿಡುತ್ತದೆ ಗೊತ್ತುಂಟೋ ?’ ಅಂತ ಕೆಂಗಣ್ಣು ಬೀರಿತು.
ಇಷ್ಟಕ್ಕೆ ಸುಮ್ಮನಿದ್ದರೂ ಇರಬಹುದಿತ್ತು. ಆದರೆ ರಮ್ ಮತ್ತಿನಲ್ಲಿದ್ದ ಆತ ಮತ್ತೆ ಪದ್ಮನಾಭನಗರದ ತುಂಬೆಲ್ಲಾ ಕೇಳಿಸುವಂತೆ ಕಿರುಚಾಡಿದ್ದಕ್ಕೆ ನಾಗಮಂಡಲದವರೆಲ್ಲ ಬೆಚ್ಚಿಬಿದ್ದರಂತೆ. ಈ ಬಾರಿ ಅವರಿಂದಲೇ ‘ಕೇಳಿ’ಸಿಬಿಟ್ಟ ರಮ್‌ಗಯ್ಯ. ಇನ್ನಷ್ಟು ಕೋಪ ಉಕ್ಕಿತು ಹಂದಿಗೆ. ಅಂಥಾ ಆವೇಶದಲ್ಲೂ ತಾಳ್ಮೆ ತಂದುಕೊಂಡು ರಮ್‌ಗಯ್ಯನ ಇತಿಹಾಸವನ್ನು ಬಿಚ್ಚಿಟಿತು ಅದು.


ಹೀಗೆ ಒಮ್ಮೆ ಉಳ್ಳಾಗಡ್ಡಿ ಓಣಿಯಲ್ಲಿ ಉರುಳಾಡಿ, ಕಮರೀಪೇಟೆಯಲ್ಲಿ ಕಂಠಮಟ್ಟ ಕುಡಿದ ಆತ ‘ವ್ವೆ...ವ್ವೆ...ವ್ವೆ...ವ್ಯಾಕ್..ವ್ಯಾಕ್’ ಕಾರಿಕೊಳ್ಳುತ್ತಾ ಬರುತ್ತಿದ್ದಾಗ ಆಯ ತಪ್ಪಿ ಕೊಳಚೆ ತುಂಬಿ ಹರಿಯುತ್ತಿದ್ದ ಚರಂಡಿಗೆ ಬಿದ್ದುಬಿಟ್ಟನಂತೆ. ದಡಬಡಿಸಿ ಏಳಬೇಕೆನ್ನುವಾಗಲೇ ಇದೇ ನಮ್ಮ ಕಥಾನಾಯಕ ಹಂದಿ ಇದೆಯಲ್ಲಾ ಅದರ ವಂಶದ ಹೆಣ್ಣುಹಂದಿಯೊಂದಕ್ಕೆ ಈ ವಿಚಾರ ತಿಳಿದುಬಿಟ್ಟಿತಂತೆ. ತಗೋ ಬಿಡಬೇಡ ಅನ್ನುತ್ತಾ ಅದು ರಮ್‌ಗಯ್ಯನನ್ನು ಅಟ್ಟಿಸಿಕೊಂಡು ಹೊರಟಿತು. ಪಕ್ಕಾ ಬಳ್ಳಾರಿಯಿಂದ ಓಡಿ ಬಂದಂತೆಯೇ ಎದ್ದೆನೋಬಿದ್ದೆನೋ ಅನ್ನುತ್ತಾ ಓಟಕಿತ್ತ ಆತ ಮತ್ತೆ ಉಳ್ಳಾಗಡ್ಡಿ ಓಣಿಯ ಕೋಣೆಯೊಂದಕ್ಕೆ ಹೋಗಿ ಬಾಗಿಲು ಹಾಕಿಕೊಂಡುಬಿಟ್ಟನಂತೆ. ಬದುಕಿದೆಯಾ ಬಡಜೀವವೇ ಅನ್ನುತ್ತಾ ನಿಟ್ಟುಸಿರುಬಿಟ್ಟು ಕಣ್ಣು ತೆರೆದರೆ ಅದು ಹೇಗೋ ಹಂದಿಯೂ ಒಳ ನುಗ್ಗಿ ಬಾಗಿಲ ಬಳಿ ನಿಂತುಬಿಟ್ಟಿತ್ತು. ಅಲ್ಲಿಂದ ಮೂರುತಿಂಗಳು ಇಬ್ಬರೂ ಹೊರಬರಲಿಲ್ಲ. ಮೂರನೇ ತಿಂಗಳೂ ಹಂದಿ ನಿಧಾನಕ್ಕೆ ಹೊರಬರುವಾಗ ಅದೂ ಸಹ ಬಸಿರಾಗಿಬಿಟ್ಟಿತ್ತು. ಇದರಿಂದ ಕೋಪಗೊಂಡ ವರಾಹ ವಂಶಸ್ಥರೆಲ್ಲಾ ಆತನನ್ನು ಅಟ್ಟಾಡಿಸಿಕೊಂಡು ಹೊರಟರಂತೆ. ವ್ವೆ..ವ್ವೆ..ವ್ವೆ ಅನ್ನುತ್ತಾ ಕಾಲ್ಕಿತ್ತ ಆತ ಬಂದು ಬಿದ್ದಿದ್ದು ಬೆಂಗಳೂರಿನ ವೃಷಭಾವತಿಗೆ. ಅಲ್ಲಿವರೆಗೂ ಶುದ್ಧವಾಗಿಯೇ ಇದ್ದ ವೃಷಭಾವತಿ ಅವತ್ತೇ ಇಂದಿನ ಸ್ವರೂಪಕ್ಕೆ ತಿರುಗಿಬಿಟ್ಟಿತಂತೆ. ಅಷ್ಟೇ ಅಲ್ಲ ಅವತ್ತು ಅತ್ಯಾಚಾರದ ಭಯದಿಂದ ನಡುಗಿ ಹೋದ ಹಂದಿ ಸಮುದಾಯ ರಾತ್ರೋ ರಾತ್ರಿ ಬೆಂಗಳೂರಿನಿಂದ ಹೊರಟುಬಿಟ್ಟವಂತೆ. ಹೀಗಾಗಿ ಬೆಂಗಳೂರಿನಲ್ಲಿ ಇವತ್ತು ಎಲ್ಲಿ ನೋಡಿದರೂ ಕೊಳಚೆ ಮಿತಿಮೀರಿ ಬೆಳೆಯುತ್ತಿದೆ. ಅವತ್ತಿಂದ ಹಂದಿಗಳು ಮಾತ್ರ ನೋಡಲೂ ಸಿಗುವುದಿಲ್ಲ. ಅವತ್ತೇ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯನ್ನು ಅಸ್ತಿತ್ವಕ್ಕೆ ತರುವುದೂ ಸರಕಾರಕ್ಕೆ ಅನಿವಾರ್ಯವಾಯಿತು ಅಂತ ಕಥೆ ಹೇಳಿ ಮುಗಿಸಿತು ಕೋಪೋದ್ರಿಕ್ತ ಹಂದಿ.


ಅಷ್ಟರಲ್ಲಿ ನಿತ್ಯಾನಂದನಂತೆ ಸಾಧುವೇಷ ತೊಟ್ಟ ಪತ್ರಕರ್ತನೊಬ್ಬ ಪಂಪಮಾರ್ಗದಿಂದ ಓಡಿ ಬಂದು, ‘ಹಾಗಾದರೆ ಕೊಳೆಗೇರೆ ಅನ್ನೋ ಹೆಸರಿನ ಮೇಲೆ ನಮ್ಮಣ್ಣಂಗೆ ಅತ್ಯಂತ ಅಕೃತ ಅಕಾರ ಇದೆ ಅಂತಾಯ್ತು. ಇನ್ನು ಮುಂದೆ ಇದೇ ಹೆಸರಿನಲ್ಲಿ ರಮ್‌ಗಯ್ಯನ ಹೆಸರು ಅಜರಾಮರವಾಗಲಿ’ ಎಂದು ಆಶೀರ್ವದಿಸಿ ಹೊಸಬರಿಗೆ ತಲೆ ಹಿಡಿಯಲು ಸಜ್ಜಾದನಂತೆ. ಇದರಿಂದ ಸಂತೃಪ್ತಗೊಂಡ ಆ ಜೀವ ತನ್ನ ಹೆಸರನ್ನು ‘ನರಿ ಕೊಳೆಗೆರೆ’ ಎಂದು ಬದಲಿಸಿ ಅಫಿಡೆವಿಟ್ ಮಾಡಿಸುವಂತೆ ತನ್ನ ಕಾನೂನು ಸಲಹೆಗಾರ ಸಂಡೆ ಲಾಯರ್‌ನತ್ತ ತಿರುಗಿ ಗುಟುರು ಹಾಕಿತಂತೆ.


ಮತ್ತೆ ಅದೇ ಮರೆಯದ ಹಾಡು ಕೊಳೆಗೆರೆ ರಮ್‌ಗಯ್ಯಾ.... ಎಂಬ ನಿನಾದ ನಿರಾತಂಕವಾಗಿ ಮುಂದುವರಿಯಿತು. ಈ ಬಾರಿ ಹೆಂಡ್ತಿಯರಿಬ್ಬರೂ ಸಹ ಬಿಕ್ಕುತ್ತಾ ಹಾಡು ಮುಂದುವರಿಸಿದ್ದರು.


15 comments:

  1. ಹೀಗೆ ಸುತ್ತಿ ಬಳಸಿ ಹೇಳೋ ಬದ್ಲು ನೇರಾ ನೇರ ಅವರ 'ಇತಿಹಾಸ'ವನ್ನ ಇಲ್ಲಿ ಬಿಚ್ಚಿದಬಹುದಲ್ಲಾ...

    ReplyDelete
  2. Agree, creative writing is definitely fun to read but to send LOUD and CLEAR message to "whomsoever it matters" write facts - take some names / places / timeline etc.

    I know this blog is not breadwinner for you but definitely tabloid for 'him' is bread and LOT of BUTTER winner! He knows what sells and he is catering to market needs - it is upto WISE people to stop reading that tabloid. At least Lankesh had some sense and ideological inclination but this guy is beyond all such limits!!

    When Lankesh started appreciating Sonia during his last leg of long long race - we could empathise with him and on his condition! This guy COMPLETE HYPOCRITE. So do not leave till comes to right raja maarga leaving aside kaama maarga!

    ReplyDelete
  3. sir idyako tumba holasaythu. Avanannu enu bekadroo annona . Aadre avana hendthi makla bagge yake maatu ?

    ReplyDelete
  4. @Raj,

    He can write abt anybdies family is it?

    ReplyDelete
  5. Making us and everybody know what you are doing is one thing and 'how' you go on to do it another.We got your intension alright the first time, but subsequent writings seem a 'bit too much' and looks like you are stooping to his alleged levels.In fact it does take away some good feelings from reading your water related articles, after reading your views here.Just my thoughts----.Murali

    ReplyDelete
  6. @Raj, Had he (RB) taken the monopoly to write any thing ugly to others wife, sisters, mothers. Who has given him these rites. More over on what guaranty do you have that these kind of peoples not pledged their "wives"(he is a multiple wives personality) and children to some one till now for the sake of dirty money.

    ReplyDelete
  7. VK bitta haikalella RB sthuti nindaneyalle busy aagiro haagide. Idella bittu nimma talent annu sadupayoga padisikolrappa. Too much is too bad.

    ReplyDelete
  8. ವಿಕೆಯಲ್ಲಿ ನಿಮ್ಮ ಕಾಲಂ ಬಿಟ್ಟಮೇಲೆ ನಿಮ್ಮ ನೀರ್ ಸಾಧಕ್ ಬ್ಲಾಗ್ ಅಪಡೇಟ್ ಆಗುತ್ತಿದೆಯಾ ಎಂದು ಚೆಕ್ ಮಾಡಿದರೆ ನಿರಾಶೆಯೇ ಇಲ್ಲಿಯವರೆಗೆ ಗತಿಯಾಗಿದೆ.

    ನಿಮ್ಮ ಈ ಬ್ಲಾಗಿನ ಬರಹಗಳನ್ನು ನೋಡಿದರೆ ಏನು ಹೇಳಬೇಕೋ ತಿಳಿಯುವುದಿಲ್ಲ. ಇದರಿಂದ ಪರಿಸ್ಥಿತಿಗಳು ಬದಲಾಗುವುದಿಲ್ಲ, ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂಬುದು ಬಹುಶ: ನನಗಿಂತ ಚೆನ್ನಾಗಿ ನಿಮಗೇ ತಿಳಿದಿದೆ ಎಂದುಕೊಳ್ಳುವೆ. ನಿಮ್ಮ ನೋವು ಅರ್ಥವಾಗುತ್ತದೆ... ಆದರೆ ಈ ಹೊಲಸು ದಾರಿ ನಿಮ್ಮದಲ್ಲ. ನಿಮ್ಮ ನೀರಹಾದಿಯ ಪಯಣವನ್ನು ಆದಷ್ಟು ಶೀಘ್ರದಲ್ಲೇ ನೀವು ಮುಂದುವರಿಸುವಂತಾಗಲೆಂದು ಮನಸಾ ಹಾರೈಸುವೆ...

    ReplyDelete
  9. enoo ista aagilla :( dayavittu munduvaresabedi .. nimma melidda abhimaana kadme aagatte ansatte ..

    ReplyDelete
  10. Nam Bhashe li heLbekandre neevu 3 jana RB against Kithnintkondidira :)

    ReplyDelete
  11. ಯಾಕೆ ಭಡ್ತಿ ಅವರು ಬರೆಯಬಾರದು? ರವಿ ಬೆಳಗೆರೆ ಏನನ್ನು ಬೇಕಾದರೂ ಬರೆಯಬಹುದಾ? ಇಂತವರಿಂದಲೇ ಇಂದಿನ ಪತ್ರಿಕೋಧ್ಯಮ ಹಾಳಾಗಿರೋದು. ಈಗ ಗಲ್ಲಿ ಗಲ್ಲಿಯಲ್ಲಿ ಇಂತಹ ಪತ್ರಿಕೆಗಳು ಹುಟ್ಟಿ ಕಂಡ ಕಂಡವರ ಬ್ಲಾಕ್ ಮೈಲ್ ಮಾಡ್ತಾಯಿರೋದು. ಮಾಧ್ಯಮದಲ್ಲಿ ಲೂಪ್ ಹೋಲ್ ಇರೋದ್ರಿಂದ ಅವರ ಮೇಲೆ ಕ್ರಮ ಕೈಗೊಳ್ಳೋಕೆ ಆಗೊಲ್ಲ. ಆತ ಬರೆಯೋದನ್ನ ಓದೋಕೆ ಅಸಹ್ಯ ಆಗೊತ್ತೆ. ಹೆಣ್ಣು ಕೇವಲ ಭೋಗ್ಯದ ವಸ್ತು ಅಂತ ತಿಳಿದುಕೊಂಡ ಹಾಗಿದೆ. ಆತನ ಪುರಾಣ ಎಲ್ಲಾ ಬಿಚ್ಚಿಡಿ ಭಡ್ತಿಯವರೇ. ಸೋಗಲಾಡಿತನ ಹೋಗಲಿ. ಆತನ ಬಣ್ಣ ಹೊರಬರಲಿ.

    ಇಲ್ಲಿ ಹಾಗೆ ಬರೆಯಬೇಡಿ ಅಂತಲ್ಲಾ ಹೇಳ್ತಾಯಿದ್ದೀರಲ್ಲಾ ನೀವು, ನಾಳೆ ನಿಮ್ಮ ಬಗ್ಗೆ ಯಾವುದೇ ಪುರಾವೆಯಿಲ್ಲದೇ ಕೆಟ್ಟದಾಗಿ ಬರೆದರೆ ಸುಮ್ಮನೆ ಇರ್ತೀರಾ ನೀವು? ಅನುಭವಿಸಿದವನಿಗೆ ಗೊತ್ತು. ಎಷ್ಟು ನೋವಾಗತ್ತೆ ಅಂತ.

    ಭಡ್ತಿಯವರೇ, ನಿಮ್ಮ ಶೈಲಿ ತುಂಬಾ ಇಷ್ಟ ಆಯ್ತು ಕಣ್ರೀ... ಹೀಗೆ ಬರಿತಾಯಿರಿ

    ReplyDelete
  12. Perfect reply...

    @Manu, Gud comments man.
    @ Shree, nim bagge ravi belagere baredidre sumne irta idra???

    ReplyDelete
  13. @ Manu, Krishna

    ನಾನು ತುಂಬಾ ಹೈ ಪ್ರೊಫೈಲ್ ಅಲ್ಲದ ಕಾರಣ ನನ್ನ ಬಗ್ಗೆ ಯಾರೂ ಅಷ್ಟೊಂದು ತಲೆಕೆಡಿಸಿಕೊಳ್ಳಲಾರರೇನೋ!

    ನಾನು 'ಹಾಯ್' ಓದುವುದಿಲ್ಲ. ಭಡ್ತಿಯವರ ಬಗ್ಗೆ ರವಿ ಬೆಳಗೆರೆಯವರು ಏನು ಬರೆದಿದ್ದಾರೆಂದು ನನಗೆ ತಿಳಿದಿಲ್ಲ. ಆದರೆ, ಪೀತಪತ್ರಿಕೆಯಲ್ಲಿ ಅಲ್ಲದಿದ್ದರೂ ನಿಜಜೀವನದಲ್ಲಿ ಮತ್ತು ವೃತ್ತಿಜೀವನದಲ್ಲಿ ಬೇಕಾದಷ್ಟು ಅಪವಾದಗಳು ಹೊತ್ತು, ಬಿರುದುಗಳು ಹೊತ್ತು, back-bitings, comments, rumoursನ ಫಲ ಅನುಭವಿಸಿ ನನಗೆ ಅಭ್ಯಾಸವಿದೆ. ಇಂತಹ ಸಂದರ್ಭಗಳಲ್ಲಿ ನಾನು - whomsoever it matters - not to everyone- ಸತ್ಯದ ಸ್ಪಷ್ಟೀಕರಣ ನೀಡಿದ್ದೇನೆಯೇ ಹೊರತು, ನಾಯಿ ಕಚ್ಚಿತೆಂದು ನಾಯಿಗೆ ತಿರುಗಿ ಕಚ್ಚಿ ನನ್ನ ಬಾಯಿ ಹೊಲಸು ಮಾಡಿಕೊಂಡಿಲ್ಲ, ಕ್ಷಮಿಸಿ. ಇದರಿಂದಾಗಿ ಬಹಳಷ್ಟು ಸಾರಿ ಎಷ್ಟೊಂದು ಜನ ನನ್ನದೇ ತಪ್ಪು, ವದಂತಿಗಳು, commentಗಳು ನಿಜ ಎಂದು ಅಂದುಕೊಂಡಿದ್ದೂ ಇರಬಹುದು, ಆದರೇನು ಮಾಡಲು ಸಾಧ್ಯ, ಅಂಥವರಿಗೆ ಸ್ಪಷ್ಟೀಕರಣ ಕೊಡುತ್ತ ನನ್ನದಲ್ಲದ ರೀತಿಯಲ್ಲಿ ವರ್ತಿಸಲು ನನಗಿಷ್ಟವಿಲ್ಲ. ಇದರಿಂದಾಗಿ ನಷ್ಟಗಳೂ ಆಗಿವೆ ನನಗೆ, ಆದರೆ ನನ್ನ ಬಗ್ಗೆ ನನಗೆ ಎಲ್ಲರಿಗಿಂತ ಚೆನ್ನಾಗಿ ಗೊತ್ತಿರುವ ಕಾರಣ ನನ್ನ ರೀತಿಯಲ್ಲೇ ನಾನು ನಡೆಯುವವಳು.

    ಅವರವರ ನೋವು ಅವರವರಿಗೇ ಅರ್ಥವಾಗುತ್ತದೆ, ಅವರವರ ದಾರಿಗಳು ಅವರವರಿಗೆ. ಆದರೆ, ಭಡ್ತಿಯವರ time, energy, creativity - silly ವಿಷಯಗಳ ಮೇಲೆ waste ಆಗುತ್ತಿದೆಯೇನೋ ಅನಿಸಿತು, ಅವರ ಅಭಿಮಾನಿಯಾಗಿ ನನಗೇನನಿಸುತ್ತಿದೆ ಎಂದು ಅವರಿಗೆ ತಿಳಿಸಬೇಕೆನಿಸಿತು, ಅದನ್ನ ಸ್ವೀಕರಿಸುವುದು - ಬಿಡುವುದು ಅವರಿಗೆ ಬಿಟ್ಟಿದ್ದು.

    ReplyDelete