About Me

My photo
ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.

Friday, January 28, 2011

ಸ್ವಾಮೀ, ಬರಹಗಳಿಗಾವ ಪಂಥ ?

ಇದೊಂದು ರೀತಿಯ ವಿಚಿತ್ರ ಮನಃಸ್ಥಿತಿ. ಯಾವಾಗ ತನಗೊಬ್ಬ ಕಾಂಪೀಟೇಟರ್ ಹುಟ್ಟಿಕೊಂಡಿದ್ದಾನೆಂದು ಅನಿಸುತ್ತದೆಯೋ, ಆತ ತನಗಿಂತ ಬುದ್ಧಿವಂತ, ಜನಪ್ರಿಯ, ಬಲಶಾಲಿ ಎಂಬುದು ಮನವರಿಕೆಯಾಗುತ್ತದೆಯೋ ಆಗ ಇದ್ದಕ್ಕಿದ್ದಂತೆ ಅನಿಶ್ಚಿತತೆ ಕಾಡುತ್ತದೆ. ಏನಾದರೂ ಮಾಡಿ ಎದುರಾಳಿಯನ್ನು ಬಗ್ಗುಬಡಿಯಬೇಕು ಎನ್ನುವ ಭಾವನೆ ಮೂಡುತ್ತದೆ. ಅಂಥ ದುರ್ಬಲ ಮನಸ್ಸು ನಮ್ಮಿಂದ ಎಂಥಾ ಹೇಸಿಗೆಯನ್ನು ಮಾಡಿಸಲೂ ಹಿಂದೆ ಮುಂದೆ ನೋಡುವುದಿಲ್ಲ. ಇಷ್ಟು ದಿನ ತಾನು ಮಾಡಿದ್ದೇ ಸರಿ ಎಂದು ಮೆರೆಯುತ್ತಿದ್ದ ನರಿ ಕೊಳೆಗೆರೆಯಂಥವರದ್ದೂ ಸಹ ಇಂದು ಬಹುಶಃ ಇದೇ ಮನಸ್ಥಿತಿಯಿರಬೇಕು.

ಈವರೆಗೆ ಆತನನ್ನು ಈ ಪರಿ ಕೈತೊಳೆದುಕೊಂಡು ಬೆನ್ನು ಹತ್ತಿದವರೇ ಇಲ್ಲ. ಇಂದು ಎಲ್ಲ ರೀತಿಯಿಂದಲೂ ಆತನ ಅವಸಾನ ಆರಂಭವಾಗಿದೆ. ಅದು ಅರಿವಾಗುತ್ತಿದ್ದಂತೆಯೇ ವಿಚಿತ್ರವಾಗಿ ವರ್ತಿಸಲಾರಂಭಿಸಿದ್ದಾನೆ ಆತ. ನನ್ನ ಬ್ಲಾಗ್ ನೋಡಿ ವ್ಯಕ್ತಿಯೊಬ್ಬ (ಬಹುಶಃ ಆತನ ಶಿಷ್ಯನೇ ಇರಬಹುದು)ಕರೆ ಮಾಡಿದ್ದ. ತಾಕತ್ತಿದ್ದರೆ ಅವರಂತೆ ಬರೆದು ತೋರಿಸಿ, ವೃಥಾ ಕೆಸರೆರೆಚಾಟದಿಂದ ಪ್ರಯೋಜನವಿಲ್ಲ...ಎಂದೆಲ್ಲಾ ಸವಾಲೆಸೆದ. ಖಂಡಿತಾ ಆತ ಇಳಿದ ಕೀಳು ಮಟ್ಟಕ್ಕೆ ನಮ್ಮಿಂದ ಇಳಿಯಲಾಗದು. ಸ್ವಕುಚ ಮರ್ಧನದಲ್ಲಿ ಆತನಿಗಿದ್ದಷ್ಟು ಪರಿಣತಿ ನಮ್ಮದಲ್ಲ. ಆದರೆ ಬೌದ್ಧಿಕತೆ ಯಾರಿಗೂ ಮಾರಾಟವಾಗಿಲ್ಲ. ಇದನ್ನು ಮತ್ತೆ ಮತ್ತೆ ಹೇಳಿದ್ದೇನೆ. ಅಕ್ಷರ ಯಾರಪ್ಪನ ಸ್ವತ್ತೂ ಅಲ್ಲ. ಈಗಾಗಲೇ ಇದನ್ನು ನಾನು ಸಾಬೀತು ಪಡಿಸಿದ್ದೇನೆ.

‘ಕೇವಲ ನೀರಿನ ಬಗ್ಗೆ ನಾಲ್ಕಕ್ಷರ ಬರೆದ ಮಾತ್ರಕ್ಕೆ ಜಲಪತ್ರಕರ್ತನಾಗುವುದಿಲ್ಲ. ಅದನ್ನು ಬಿಟ್ಟು ಬೇರೇನಾದರೂ ಬರೆದಿದ್ದೀರಾ ? ವೈಚಾರಿಕ ಬರಹಗಳಲ್ಲಿ ನೀವು ಬಲಪಂಥೀಯರಿಗೆ ಯಾವುದೇ ಹಿಡಿತವಿಲ್ಲ. ಅಂಥ ಒಂದು ಬರಹವನ್ನು ಬರೆದು ತೋರಿಸಿ. ಆಮೇಲೆ ಬುದ್ಧಿಜೀವಿಗಳನ್ನು ಟೀಕಿಸಬಹುದು...’ಎಂಬಿತ್ಯಾದಿ ಹಳಹಳಿಸಿದ ನನಗೆ ಕರೆ ಮಾಡಿದ ವ್ಯಕ್ತಿ.

ಸ್ವಾಮಿ, ನಾನು ಬಲಪಂಥೀಯನೂ ಅಲ್ಲ, ಎಡಪಂಥೀಯನೂ ಅಲ್ಲ. ಬರಹಗಳಿಗೆ ಯಾವ ಪಂಥವಿರುತ್ತದೆ? ನನ್ನನ್ನು ನಾನು ಬುದ್ಧಿಜೀವಿಯೆಂದು ಕರೆದುಕೊಳ್ಳುವವನೂ ಅಲ್ಲ. ಅಕ್ಷರ ನನ್ನ ಜೀವನ, ಅದೇ ಬದುಕು. ನೀರು ನನ್ನ ಉಸಿರು. ಬೇರೆಯದ್ದನ್ನು ಬರೆಯಲೂ ನನಗೆ ಗೊತ್ತು. ಬುದ್ಧಿಪೂರ್ವಕ ನನ್ನ ಅಂಕಣವನ್ನು ನೀರಿಗೆ ಮೀಸಲಿಟ್ಟವನು ನಾನು. ಅದಕ್ಕಾಗಿ ಕಳೆದ ಹತ್ತು ವರ್ಷ ದುಡಿದಿದ್ದೇನೆ. ಇದು ನನ್ನ ಓದುಗರೆಲ್ಲರಿಗೂ ಗೊತ್ತು. ಇದರಿಂದ ಹೊರತಾಗಿ ನನ್ನ ಸಾಮರ್ಥ್ಯ ಏನೆಂಬುದನ್ನು ಒಂದು ‘ಲವಲವಿಕೆ’ಯಿಂದ ಸಾಬೀತುಪಡಿಸಿದ್ದೇನೆ. ಎಲ್ಲ ರೀತಿಯ ಬರಹಗಳೂ ನನ್ನಿಂದ ಸಾಧ್ಯವಿದೆ. ವ್ವೆವ್ವೆವ್ವೆ..ಶೈಲಿಯನ್ನು ಈಗಾಗಲೇ ಈ ಬ್ಲಾಗ್‌ನಲ್ಲೇ ನೋಡಿದ್ದೀರಿ. ಇನ್ನು ಬುದ್ಧಿಜೀವಿಗಳ ಶೈಲಿ (ಹಾಗೊಂದು ಶೈಲಿ ಕನ್ನಡ ಸಾರಸ್ವತದಲ್ಲಿದೆಯೇ?)ಯಲ್ಲೂ ಕಡಿಮೆ ಏನಿಲ್ಲ. ಕೇವಲ ಶಬ್ದಾಡಂಬರವೇ ಸಾಹಿತ್ಯವೆಂದಾದರೇ ಅದೇನೂ ಬ್ರಹ್ಮವಿದ್ಯೆಯಲ್ಲ. ಅದರಿಂದ ಬರಗಾರ ತನ್ನ ದೊಡ್ಡಸ್ತಿಕೆ ಮೆರೆಯಬಹದು. ಆದರೆ ಓದುಗನ ಮನಸ್ಸು ಬಳುತ್ತದೆ. ವಿಷಯವನ್ನು ನೇರವಾಗಿ, ಸರಳವಾಗಿ ಹೇಳುವವನೇ ನನ್ನ ದೃಷ್ಟಿಯಲ್ಲಿ ಉತ್ತಮ ಬರಹಗಾರ. ಆದರೂ ನರಿ ಕೊಳೆಗೆರೆಯಂಥವನಿಗೆ ಗೊತ್ತಿಲ್ಲದ, ಆತ ಈವರೆಗೆ ಅದರ ಅರ್ಥವನ್ನೇ ಅರಿಯದ ‘ಮಾನವೀಯ ಸಂಬಂಧ‘ಗಳ ಕುರಿತಾದ ಬರಹವನ್ನು ಇಂದು ಪೋಸ್ಟ್ ಮಾಡುತ್ತಿದ್ದೇನೆ. ನನ್ನ ಓದುಗರಲ್ಲಿಯೂ ಕೆಲವರು ಗಂಭೀರ ವೈಚಾರಿಕ ಲೇಖನ ಬರೆಯಿರಿ. ವೃಥಾ ಸಮಯ ವ್ಯರ್ಥ ಮಾಡಬೇಡಿ ಎಂದಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ಈ ಲೇಖನ ನೀಡುತ್ತಿದ್ದೇನೆ.

ಸ್ವಾಮಿ ಬುದ್ಧಿಜೀವಿಗಳೇ(?) ಸಾಮರ್ಥ್ಯವಿದ್ದರೆ ಅದನ್ನು ಓದಿ ಅರಗಿಸಿಕೊಳ್ಳಿ. ಹಾಗೆ ನಡೆದುಕೊಳ್ಳಿ...

ಜಲರಾಶಿಯಲ್ಲೊಂದು ಬಿಂದು...

ಸಂಬಂಧಗಳ ಅವಲೋಕನ ಇಂದಿನ ಕಾಲಘಟ್ಟದಲ್ಲಿ ತೀರಾ ಅನಿವಾರ್ಯವೆಂದುಕೊಳ್ಳುತ್ತೇನೆ. ಸಾಮಾಜಿಕ ಸಂಬಂಧಗಳ ಚರ್ಚೆ ಆತ್ಮಾವಲೋಕನದ ಭಾಗವಾಗಿ ಮಾರ್ಪಟ್ಟಿದೆ. ಈ ಎರಡೂ ಒಂದಕ್ಕೊಂದು ತಳಕು ಹಾಕಿಕೊಂಡಿದೆ. ಆದಿಲ್ಲದಿದ್ದರೆ ಅದು ಅಪೂರ್ಣವಾದೀತು. ವ್ಯಕ್ತಿಯ ವೈಯಕ್ತಿಕ ಚಟುವಟಿಕೆಗಳ ಹಿಂದೆ ಇರಬಹುದಾದ ವಿಘಟನಾಶೀಲ ಮನೋಭಾವವನ್ನು ಅರಿಯುವ ಹಂತದಲ್ಲಿ ಹುಟ್ಟಿದ ಪ್ರeಯಿದು. ಛಿದ್ರೀಕೃತವಾಗಿರುವ ಸಮಾಜ ಜೀವನವೇ ಈ ನಾಗರೀಕತೆಯ ಪ್ರಮುಖ ಲಕ್ಷಣವಾಗಿರುವಾಗ ಅಖಂಡತೆ, ಏಕತೆ ಸಾಧನೆಯೇ ಬಹುದೊಡ್ಡ ಸಾಹಸ.

ಸಮಕಾಲೀನ ಸಮಾಜ ಹತ್ತು ಹಲವು ಸಮಸ್ಯೆಗಳ ಕೂಪದಲ್ಲಿ ತೊಳಲುತ್ತಿರುವಾಗ ಇಂಥದೊಂದು ಅರಿವಿನ ಪ್ರಯತ್ನ ಅಸಂಬದ್ಧವಾಗಲಾರದು ಎಂದುಕೊಳ್ಳುತ್ತೇನೆ. ಸುತ್ತಲೆಲ್ಲ ಹರಿವಿರುವುದು ಜಡತೆಯ ವಿಸ್ತಾರ, ಸೋಲು, ಅಶಾಂತಿಯ ಭಂಡಾರ. ಈ ಸನ್ನಿವೇಶದಲ್ಲಿ ಸಂಬಂಧಗಳ ಮೂಲಭೂತ ಆಶಯವನ್ನು ಎತ್ತಿ ಹಿಡಿಯುವ ಕಾಯಕ ಬರಹಗಾರರ ಆದ್ಯತೆಯೆಂದು ಭಾವಿಸುತ್ತೇನೆ. ಎಂಥ ಕ್ರಾಂತಿಕಾರಿ ಬರಹಗಾರನು ತನ್ನ ಕೈಂಕರ್ಯದ ಅರ್ಥ ಶೋಧನೆಯ ಹಂತದಲ್ಲಿ ಇಂಥದೊಂದು ವಿಘಟನಾ ಸ್ಥಿತಿಯ ಸಮಸ್ಯೆಯನ್ನು ಎದುರಿಸಿಯೇ ಇರುತ್ತಾನೆ. ತನ್ನ ಮಾಂತ್ರಿಕ ಬರಹಗಳ ಮೂಲಕ ತನ್ನ ಕಾಯಕಕ್ಕೆ ನ್ಯಾಯಬದ್ಧತೆ ಕಂಡುಕೊಳ್ಳುವ ಮಾರ್ಗವಾಗಿ ಸಮಾಜ ಸಂಬಂಧಗಳ ಬಗ್ಗೆ ಲೇಖಕ ವಿಮರ್ಶೆಗಿಳಿಯಲೇಬೇಕು. ಸುತ್ತಲಿನ ಕ್ರೌರ್ಯ, ಹಿಂಸೆಗಳ ಮಲಿನವನ್ನು ಸೌಹಾರ್ದಮಯ ಬರಹಗಳ ಮೂಲಕ ತೊಳೆಯಲು ಯತ್ನಿಸದಿದ್ದರೆ ಆತ ಸಾರ್ಥಕ್ಯ ಕಾಣಲಾರ. ಅಸಹನೀಯ ಸ್ಥಿತಿಯೊಳಗೆ ಮುಳುಗಿಯೇ ಅದರ ವಿರುದ್ಧ ಈಜಿ ಸಾಹಸ ತೋರಲಾಗದಿದ್ದರೂ, ತಾನು ಮುಳುಗಿರುವುದು ಎಂಥ ಕಲ್ಮಶ ಸಾಗರದಲ್ಲೆಂಬುದನ್ನು ಆತ ಅಭಿವ್ಯಕ್ತಿಸಬಲ್ಲ.

ಈಗಿನ ಜಾಗತಿಕ ಜೀವನ ವಲಯದಲ್ಲಿ ಸಂಬಂಧಗಳ ವಿಮರ್ಶೆ ತುರ್ತು ಅಗತ್ಯವೆಂದು ಭಾವಿಸುತ್ತೇನೆ. ಪ್ರಾಯಶಃ ಇದು ಒಟ್ಟಾರೆ ಜೀವ ವಲಯಕ್ಕೇ ಸಂಬಂಸಿದ ಪ್ರಶ್ನೆ. ಜೀವನ ವ್ಯವಸ್ಥೆಯನ್ನು ಅರ್ಥೈಸುವಲ್ಲಿ ಅಥವಾ ವಿಮರ್ಶಿಸುವಲ್ಲಿ ಈ ಸಂಬಂಧಗಳ ಸ್ವರೂಪಕ್ಕೆ ಬಹುಮುಖ್ಯ ಸ್ಥಾನವಿದೆ. ಇದು ಅರ್ಥವಾಗಬೇಕಾದಲ್ಲಿ ನಮ್ಮ ನಾಗರೀಕತೆ ಬೆಳೆದು ಬಂದ ಬಗೆಗಿನ ಸಮಗ್ರ ಕಲ್ಪನೆಯೊಂದು ಅಗತ್ಯ. ನಾಗರಿಕತೆಯ ಹಿನ್ನೋಟದಲ್ಲಿ ನಮಗೆ ಸಾಮರಸ್ಯವೊಂದೇ ಅಲ್ಲ, ಹಿಂಸೆ, ಯುದ್ಧ, ಸಂಘರ್ಷಗಳ ಪುಟಗಳೂ ಕಂಡುಬರುತ್ತವೆ. ಹೀಗಾಗಿ ಸಮುದಾಯದ ಜತೆ ಜತೆಗೆ ಮಾನವನ ಸ್ವಾರ್ಥ, ಆ ಸ್ವಾರ್ಥಕ್ಕಾಗಿ ಹೋರಾಟ, ವಿಘಟನೆಗಳು ಬೆಳೆದುಬಂದಿವೆ. ಇಂದಿನ ವೈಚಾರಿಕ ಯುಗವೂ ಇದರಿಂದ ಹೊರತಲ್ಲ. ಆದರೆ ತೀರಾ ವಿಚಾರಪರತೆಯ ತುತ್ತ ತುದಿಗೆ ನಾವು ಏರಿ ನಿಂತಿದ್ದೇವೆಂದುಕೊಂಡಾಗಲೇ ಮನುಷ್ಯ ಸಹಜ ಭಾವನೆಗಳನ್ನು ನಿರ್ಲಕ್ಷಿಸಿದ್ದೇವೆಂಬುದು ದುರಂತ.


ಬಂಡವಾಳಶಾಹಿ ನಾಗರೀಕತೆಯ ಪರಿಕಲ್ಪನೆಯಡಿಯಲ್ಲಿ ಸಮಕಾಲೀನ ಜೀವನ ಕ್ರಮದಲ್ಲಿ ವೈಯಕ್ತಿಕ ಬದುಕಿಗಷ್ಟೇ ಪ್ರಾಧಾನ್ಯ ನೀಡುವುದರೊಂದಿಗೆ ಅದೇ ಬದುಕು ಎಂದುಕೊಂಡು ಬಿಟ್ಟಿದ್ದೇವೆ. ಇಂಥ ನಿರ್ಣಯದ ಮಾನದಂಡ ಸರ್ವಸಮಸ್ತ ಸಮಾಜಕ್ಕೂ ಹಬ್ಬಿಬಿಟ್ಟಿದೆ. ಸಮಾಜದ ಇಂಥ ‘ವಿಚಾರಪರ’ ನಿಲುವು ತಂತ್ರeನದ ಬೆಳವಣಿಗೆಯೊಂದಿಗೆ ಬೆಳೆದು ಬಂದುಬಿಟ್ಟಿದೆ. ಪಾರಂಪರಿಕ eನ ವಲಯಗಳು, ಭಾವನಾ ಲಹರಿಗಳ ಮೇಲೆ ಸೊಲ್ಲೆತ್ತಲಾಗದಂಥ ಆಕ್ರಮಣವನ್ನದು ನಡೆಸಿಬಿಟ್ಟಿದೆ. ಇದರ ಫಲವಾಗಿ ಅಸಹನೆ, ಕ್ರೌರ್ಯಗಳು ತಮ್ಮ ದಾರ್ಷ್ಟ್ರ ತೋರುತ್ತಿವೆ. ಆದ್ದರಿಂದಲೇ ಏಕರೂಪಿ ಜೀವನ ಕ್ರಮದಲ್ಲಿ ವಿಶಿಷ್ಟತೆಯೆಂಬುದು ಮರೆಯಾಗಿ ಬಿಟ್ಟಿದೆ.
ಇಂಥ ಸಂಕೀರ್ಣತೆಯಲ್ಲಿ ಸಂಬಂಧಗಳ ಪುನರ್ಸ್ಥಾಪನೆಯೆಂಬುದು ಮತ್ತಷ್ಟು ಜಟಿಲವೂ, ಅರ್ಥಹೀನವೂ ಅನಿಸಿಕೊಳ್ಳುತ್ತಿದೆ. ಇದರ ಅರಿವಾಗಬೇಕಾದಲ್ಲಿ ತಾತ್ವಿಕವಾಗಿ ಮಾನವೀಯ ಇತಿಹಾಸದ ಕುರಿತು ಚಿಂತನೆ ನಡೆಸಬೇಕಿದೆ. ಹಿಂಸೆ, ಅಸಹನೆ, ಸ್ವಾರ್ಥವೆಂಬುದು ಸಾಂಸ್ಥಿಕ ಸ್ವರೂಪ ಪಡೆದಿರುವಾಗ ಭಾವನೆ ಎಂಬುದು ಕನಸು, ಪ್ಯಾಂಟಸಿಗಳ ಲೋಕವಾಗಿ ತೋರುವುದರಲ್ಲಿ ತಪ್ಪೇನಿಲ್ಲ. ಇಂಥ ಸ್ಥಿತಿಯ ಪರಿವರ್ತನೆ ಸಣ್ಣ ಮಾತಲ್ಲ. ಹೊಸ ಸಮಾಜವೊಂದರ ನಿರ್ಮಾಣಕ್ಕೆ ಅಂಥದೇ ಕಸುವು ತುಂಬಿದ ಕ್ರಾಂತಿ, ಚಳವಳಿಯೊಂದರ ಅಗತ್ಯವಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಮಾನವ ಸಹಜ ಪ್ರವೃತ್ತಿಯಲ್ಲಿಯೇ ಈ ಕ್ರಾಂತಿ ಘಟಿಸಬೇಕಿದೆ.


ಪ್ರಕೃತಿಯನ್ನು ಮೀರಿದ eನವಂತ ತಾನೆಂಬ ಮಾನವನ ದುರಹಂಕಾರ ಇದಕ್ಕೆ ಕಾರಣ. ಖಗೋಳ ವಲಯದ ಸಮಸ್ತವನ್ನು ತಡಕಾಡಿ ಇದರ ಹಿಂದಿನ ರಹಸ್ಯ ಭೇದಿಸಬಲ್ಲೆ ಎಂಬ ಮಾನವ ವಲಯದ ಹಮ್ಮು ಹಾಗೂ ಪ್ರಕೃತಿಯಲ್ಲಿನ ಎಲ್ಲವೂ ತನಗಾಗಿಯೇ ಸ್ಪಷ್ಟಿಸಲ್ಪಟ್ಟದ್ದೆಂಬ ಭ್ರಮೆಯಿಂದ ಇಂಥದೊಂದು ‘ವೈಚಾರಿಕ ಮೌಢ್ಯಕ್ಕೆ ನಾವಿಂದು ಒಳಗಾಗುತ್ತಿದ್ದೇವೆ. ಪ್ರಗತಿ ತತ್ವದ ಮೂಲ ಆಶಯವನ್ನೇ ನಾವಿಂದು ಮರೆತುಹೋಗಿದ್ದೇವೆ. ಮಾನವ ಕೇಂದ್ರಿತ ಈ ಜಗದಲ್ಲಿ ಉಳಿದೆಲ್ಲವೂ ಗೌಣವಾಗಿದೆ. ನಾಗರೀಕತೆಯ ಆಂತರಿಕ ಸಾಂಗತ್ಯಕ್ಕೆ ಇಲ್ಲಿ ಅರ್ಥವೇ ಉಳಿದಿಲ್ಲ. ಮಾನವೀಯ ಭಾವತೀವ್ರತೆಯೇ ಮನುಷ್ಯನ ಅನ್ವರ್ಥವೆಂಬುದು ಈ ವ್ಯವಸ್ಥೆಯ ತರ್ಕಕ್ಕೆ ಸಿಲುಕಿ ನಾಶವಾಗಿದೆ. ಯಂತ್ರ ಯುಗದಲ್ಲಿ ಮನುಷ್ಯ ಆತ್ಮಹೀನವಾಗಿ ಬಿಟ್ಟಿದ್ದಾನೆ. ಈ ಬಗ್ಗೆ ಅಲ್ಲಲ್ಲಿ ಕೆಲ ಆತಂಕಗಳು ಧ್ವನಿಸಿದೆಯಾದರೂ ಜಾತ್ರೆಯ ಗದ್ದಲದೆಡೆಗೆ ದಾಟುವ ಪ್ರಯತ್ನ ಇಣುಕಿದ್ದರೂ ಅದು ಭೀಮನೆಗೆತವಾಗಿಲ್ಲ.

ಹೀಗಾಗಿ ಸಂಬಂಧಗಳೆನ್ನುವುದು ಆಧುನಿಕ ಯಾಂತ್ರಿಕ ಲೋಕ ನಡು ಮನೆಯ ಮಾತಾಗಿ ಮಾತ್ರ ಉಳಿದುಕೊಂಡಿದೆ. ಅದೊಂದು ಕನಸು. ‘ಸೌಹಾರ್ದ, ಸೋದರತೆ ಪ್ರೀತಿ, ವಿಶ್ವಾಸಗಳು ಈ ಸಮಾಜ ಬೆಳಗಿನೊಂದಿಗೆ ಮರೆತುಬಿಡುತ್ತಿರುವ ಸ್ವಲ್ಪ ಎಚ್ಚರದಲ್ಲಿ ನಾವಿದನ್ನು ಕೊನೆಪಕ್ಷ ನೆನಪು ಮಾಡಿಕೊಳ್ಳುತ್ತಲೂ ಇಲ್ಲ. ನಾಗರೀಕತೆಯ ಯಂತ್ರಯುಗ ಹತ್ತಿಕ್ಕ ಬಯಸುವುದರಲ್ಲಿ ಮಾನವೀಯ ಸಂಬಂಧಗಳೂ ಒಂದು. ಹಲವು ಸಂವೇದನೆಗಳ ಮೇಲೆ ಬೆಳೆದು ಬಂದ ಸಮಾಜಕ್ಕದು ಈಗ ಬೇಕಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳುವ ಕೆಲವು ಮೆಲುಕುಗಳನ್ನು ಹಂಚಿಕೊಳ್ಳಹೊರಟಿದ್ದೇನೆ. ಸಂಬಂಧಗಳ ಅಪಾರತೆಯ ಎದುರು ಇಂಥ ಪ್ರಯತ್ನಗಳು ಅನುಭವದ ಕೊರತೆಯನ್ನು ಎದುರಿಸುತ್ತವೆ. ವಸ್ತುನಿಷ್ಟ ಚರ್ಚೆಗಿಳಿದಾಗ ಅದರ ಸಂಕೀರ್ಣ, ಸಮಗ್ರತೆಯ ಬಗ್ಗೆ ಭಯ ಸಹಜ. ಪರಂಪರೆಯ ಹಿನ್ನೆಲೆಯಲ್ಲಿ ಸಂಬಂಧಗಳ ಸೌಂದರ್ಯಾನುಭವದಲ್ಲಿ ನನ್ನ ಮಿತಿಯೊಳಗೆ ಹಾಗೆಯೇ ಇಡಲು ಯತ್ನಿಸಿದ್ದೇವೆ. ಬೇರಾವುದೇ ಸಾಹಸ ಯಶಸ್ವಿ ಎನಿಸಲಾರದು. ಸಂಬಂಧಗಳೆಂಬುದೇ ಹಾಗೆ. ಅದು ಅನುಭವ ವಿಚಾರದ ಚೌಕಟ್ಟಿಗೆ ಒಳಗಾದದ್ದು. ಅದರ ವಿಶ್ಲೇಷಣೆ ತೀರಾ ಜಟಿಲ.

ವ್ಯಕ್ತಿಯ ವಿಮರ್ಶೆ ಸುತ್ತಲಿನ ಸಮಾಜದ ವಿಮರ್ಶೆಯೂ ಆಗುತ್ತದಾದ್ದರಿಂದ ಸಾಕಷ್ಟು ಎಚ್ಚರ ಅಗತ್ಯ. ಇಂಥ ಎಚ್ಚರದ ಸಂದರ್ಭದಲ್ಲಿ ಒಟ್ಟಾರೆ ವಿಷಯದ ಸಮಗ್ರತೆ ದೊರಕದಿದ್ದರೆ ಅದು ವೈಯಕ್ತಿಕ ಮಿತಿಯೇ ಹೊರತೂ ವಸ್ತುವಿನದ್ದಲ್ಲ. ಅದು ಗೊತ್ತಿದ್ದೂ ಈ ಪ್ರಯತ್ನಕ್ಕೆ ಕಾರಣ ಒಂದಷ್ಟು ಉಪಯುಕ್ತ ವಾದಿ ಚಿಂತನೆಯ ಅಭಿವ್ಯಕ್ತಿಗೆ ಹಾತೊರೆಯುತ್ತಿರುವುದು.


ತೀರಾ ಸಾವಯವದಾದಂಥ ಇಂಥ ವಸ್ತುಗಳ ಸಾಮಾಜಿಕ ಗ್ರಹಿಕೆ ಹಾಗೂ ಸಮಸ್ಯೆಗಳೆರಡೂ ಪ್ರಖರವಾದದ್ದು. ಯಾವುದೇ ನೆಲೆಯಿಂದ ನೋಡಿದರೂ ಅದು ಮುಗಿಯದ ಜಲರಾಶಿಯೇ. ಆದರೆ ಪ್ರಾತಿನಿಕ ಪ್ರಸ್ತಾಪಗಳು ಪ್ರಮುಖ ಸಂಬಂಧಗಳ ಜಾಡನ್ನು ಗುರುತಿಸಿಯಾವು ಎಂಬುದು ನನ್ನ ವಿಶ್ವಾಸ.

16 comments:

 1. Bhadthi yavare,

  besara maDikoLLabeDi kanDita nanage nimma vaicharika saahithya poorna lekhana artha agalilla.

  dayavittu neerina bagge baredashtu sulabhavada bhasheyalli haagu ade reetiya nammanta saamanyarige bekada vishayada bagge bareyiri.

  ee saahithya dinda nimage ittichigina bhuddijeevigala patta kodabahudu aadare namage enU upayogavilla

  Akshara Kumar
  +261-337538118

  ReplyDelete
 2. @Akshara avare...neevu khanditha bejaru madikollabedi...Ankana halegannadalliyonthu illa arthavagidiruvadkke...Matthomme odhi khanditha artha agothe...utthamavada lekahana bhadthi avre...Dhanyavaadhgalu..

  Nitesh Shetty Thirthahalli
  +968 95539019

  ReplyDelete
 3. Bhadthi Sir - Naanantoo mulaju illade heluttene. Nimma "Jalarashiyallondu Bindu" nanage artha agalilla. Tumba complicated ittu.

  ReplyDelete
 4. I agree with Akarsha and Raj:
  Thumba interest aaagi odoke start madddide, Amele naanu en odtha ideeni annode artha aaglilla!

  Eno badthiyavaru nammantha saamanyarige baredilla antha kaanutte!

  ReplyDelete
 5. ಭಡ್ತಿಯವರೆ, ನಿಮ್ಮ ಲೇಖನ ತುಂಬಾ ಅರ್ಥಪೂರ್ಣವಾಗಿದೆ. ಯಂತ್ರಯುಗದಲ್ಲಿ ಮಾನವ ಅತ್ಮಹೀನನಾಗುತ್ತಿದ್ದಾನೆ. ವಿಚಾರಪರತೆಯ ತುತ್ತತುದಿಯಲ್ಲಿರುವಾಗಲೇ ನಮಗೇ ಮಾನವ ಸಹಜ ಸಂಬಂಧಗಳು ನಗಣ್ಯವಾಗುತ್ತಿವೆ ಎಂಬ ದ್ವನಿ ಅಲ್ಲಿದೆ. ಟಿ.ಪಿ.ಕೈಲಾಸಂ ಹೇಳುವಂತೆ
  ಇಡೀ ಪ್ರಪಂಚವೇ ದುಡ್ಡಿನ ಬೆನ್ನುಹತ್ತಿರುವಾಗ. ಉದ್ಯೋಗಕ್ಕಾಗಿ ಶಿಕ್ಶಣ ಎನ್ನುವಂಥ ಈ ದಿನಗಳಲ್ಲಿ ಸಂಬಂಧಗಳಿಗೆ ಬೆಲೆಯಿಲ್ಲ. ನಿಮ್ಮ ಬರಹಗಳಿಗೆ
  ಸವಾಲು ಹಾಕಿದವರಿಗೆ ಸರಿಯದ ಉತ್ತರ ಕೊಟ್ಟಿದ್ದಿರಿ.

  ReplyDelete
 6. Ha..ha...ha... No comments...
  ಆದರೆ ಪೂರಾ ಓದಿದ್ದ೦ತೂ ಸತ್ಯ :)

  ReplyDelete
 7. Dear Badthi,

  I have been a avid reader of your column in VK and I am pleased to visit this blog site and read your blogs. However, I do not understand certain things about the fight between yourself,VB Pratap Simha on one side and RB on the other side. Can you please clarify the following for the benefit of readers/well wishers like me.

  1. Did you guys not know about RB's character before he started writing against you in his tabloid? Any body with minimum intelligence can realise that RB is a intellectually dishonest person who will stoop to any level to make some fast bucks?

  2. If you did know about RB's misdeeds why were you guys keeping quite for so long without exposing him? On the other hand we saw RB scratching VB's back and vice versa? Does this not also expose the kind of persons you guys are?

  3. What is the relevance of your professional rivalry for us readers and why should be bother about it. I have stopped reading all tabloids in Kannada, because I know they are not honest and true to their profession...not even a single one of them.

  4. Hypothertically, had RB not written against you in his tabloid, would you still be friends with him and turn a blind eye to his misdeeds?

  By answering the above questions you will be doing a huge favor to your admirers/readers and thereby put to rest the loose talk that is going around among the public.

  Thanks and regards,

  Guru

  ReplyDelete
 8. Good one!!I had to read it twice to fully understand:P

  ReplyDelete
 9. ಮಯೂರ ಅವರೇ,
  ನಾಯಿ ಬೊಗಳಿದರೆ ಆಕಾಶವೇನೂ ಉದುರಿ ಬೀಳೋಲ್ಲ. ಆದ್ರೆ ಅದು ನಮ್ಮನ್ನೇ ಕಚ್ಚೋಕೆ ಬಂದ್ರೆ ಬೆದರಿಸಲೇ ಬೇಕಲ್ವ? ನನ್ನ ಪ್ರಕಾರ ಭಡ್ತಿ ಯವರೂ ನಮ್ಮ ನಿಮ್ಮ ಹಾಗೇನೆ ಜನಸಾಮಾನ್ಯರು, ಅವರ ಕೆಲಸ ಅವ್ರು ಮಾಡಿಕೊಂಡು ಹೋಗ್ತಾ ಇದ್ರೂ. ಯಾವುದೋ ಬೀದಿ ನಾಯಿ ಅಟ್ಟಿಸಿಕೊಂಡು ಬಂತು ಅದಕ್ಕೆ ವಾಪಸ್ಸು ಗೂಸ ಕೊಡ್ತಾ ಇದಾರೆ ಅಷ್ಟೇ. ಮೇಲಾಗಿ ಸ್ವಾಮಿ ವಿವೇಕಾನಂದರೆ ಹೇಳಿದಾರೆ, ಏನೇ ಬಂದರೂ ಎದುರಿಸಿ ನಿಲ್ಲಿ ಅಂತ.
  ಭಡ್ತಿ ಯವರೂ ಇದರ ಬಗ್ಗೆ ಪ್ರತಿಕ್ರಿಯಿಸಿದರೆ ಒಳ್ಳೇದು.

  ReplyDelete
 10. ನಿಮ್ಮ ಬರಹ ಭಾರಿ ಚೆನ್ನಾಗಿದೆ. ಓದಿದೆ ಆದರೆ ಅರ್ಥ ಆಗಿದ್ದು ??????????????????????????????????????????????????????????????????????????????????????

  ReplyDelete
 11. This comment has been removed by the author.

  ReplyDelete
 12. ಭಡ್ತಿ ಜೀ....... ಲೇಖನದ ಅರ್ಥಪೂರ್ಣತೆಯ ಬಗ್ಗೆ ಎರಡು ಮಾತಿಲ್ಲ...... ಸವಾಲು ಹಾಕಿದವರಿಗೆ ಓದಿ ಕಣ್ಣುಗತ್ತಲೆ ಬಂದಿರಬಹುದು..... ಒಂದು ಸಣ್ಣ ವಿನಂತಿ :) ..... ನೀವೇ ಹೇಳಿದಂತೆ "ಹಿಂಸೆಗಳ ಮಲಿನವನ್ನು ಸೌಹಾರ್ದಮಯ ಬರಹಗಳ ಮೂಲಕ ತೊಳೆಯಲು ಯತ್ನಿಸದಿದ್ದರೆ ಆತ ಸಾರ್ಥಕ್ಯ ಕಾಣಲಾರ", ನಿಮ್ಮ ಮುಂದಿನ ಬರಹಗಳು ಕೊಂಚ ಎಲ್ಲರಿಗೂ ಸೌಹಾರ್ದಮಯವಾಗಿರಲಿ......... :)

  ReplyDelete
 13. ಸಂಬಂಧಗಳ ಜಟಿಲತೆಯನ್ನು ಅವಲೋಕಿಸುತ್ತ ಅವುಗಳ ನಶಿಸುವಿಕೆಗೆ ಇಂದಿನ ವೈಚಾರಿಕ ಹಾಗು ಯಾಂತ್ರಿಕ ಮನೋಸ್ಥಿತಿಯನ್ನು ಹೊಣೆಗಾರನನ್ನಾಗಿ ಮಾಡುವುದು ಪ್ರಸ್ತುತ ಅನ್ನಿಸೋದಿಲ್ಲ. ಮೊದಲನೆಯದಾಗಿ ಸಂಬಂಧಗಳನ್ನ ನಾವು ಕಾಲ ಹಾಗು ಪರಿಸ್ಥಿತಿಗೆ ತಕ್ಕುದಾಗಿ ನೋಡಬೇಕು. ಪ್ರಪಂಚವನ್ನು ಮೇಲಿನಿಂದ ನೋಡಿದಾಗ ನೀವು ಹೇಳಿರುವುದೆಲ್ಲ ನಿಜವೆಂದು ಭಾಸವಗುತ್ತದೆ ಆದರೆ ಸಂಬಂಧಗಳನ್ನ ನಾವು ಹುಡುಕಬೇಕಾಗಿರುವುದು ಮನುಷ್ಯನ ಒಳಗೆ. ಕುಡುಕನಿಗೂ ಕುಡಿಯಲು ಒಬ್ಬ ಗೆಳೆಯ ಬೇಕು ಹಾಗೆಯೆ ಕೊಲೆಗಡುಕನಿಗೂ ಒಬ್ಬ ಬಲಗೈ ಬಂಟ ಇರಲೇಬೇಕು. ಹುಟ್ಟುವ ಮೊದಲೇ ಮಗುವನ್ನು ಪ್ರೀತಿಸುವ ತಾಯಿ ಪ್ರೀತಿ ಇರುವ ಹಾಗೆ ಊಟ ಹಾಕಿದ ಧಣಿಗೆ ತೋರುವ ನಾಯಿ ಪ್ರೀತಿಯೂ ಉಂಟು.

  ನನ್ನ ಅನಿಸಿಕೆ ಪ್ರಕಾರ ನೀವು ಸಂಬಂಧಗಳನ್ನ ಮಹಲುಗಳಲ್ಲಿ ಹುಡುಕುವ ಪ್ರಯತ್ನ ಮಾಡುತ್ತ ಇದ್ದೀರ ಆದರೆ ಈ ಪ್ರಯತ್ನದಲ್ಲಿ ಗುಡಿಸಲುಗಳಲ್ಲಿ ಕಾಣುವ ಸಂಬಂಧಗಳನ್ನು ಮೂಲೆಗುಂಪು ಮಾಡುತ್ತಿದ್ದೀರ. ಒಬ್ಬ ವ್ಯಕ್ತಿಯ ವೈಯಕ್ತಿಕ ಲಾಭದಿಂದಾಗಿ ಮೂಡುವ ವಿಘಟನಾಶೀಲ ಮನೋಭಾವ ಕೇವಲ ಕ್ಷಣಿಕ ಮಾತ್ರ. ಮೂಲಭೂತವಾದ ಸಂಬಂಧಗಳ ಛಿದ್ರಕ್ಕೆ ಎಷ್ಟೇ ಪ್ರಯತ್ನಿಸಿದರೂ ಕೇವಲ ೨೦ ಓವರ್ ನ ಒಂದು ಕ್ರಿಕೆಟ್ ಪಂದ್ಯ ಇಡೀ ದೇಶವನ್ನೇ ಒಗ್ಗೂಡಿಸಬಲ್ಲದು. ಮನುಷ್ಯ ತನ್ನ ವಿಚಾರಪರತೆಯಿಂದ ಎಷ್ಟೇ ಮುಂದುವರಿದರೂ ಅವನು ಯಾವಗಲೂ ಸಂಘಜೀವಿ. ತನ್ನ ಮೂಲತತ್ವವನ್ನು ಎಂದಿಗೂ ಅವನಿಂದ ಮರೆಯಲು ಸಾಧ್ಯವಿಲ್ಲ.

  ನಿಮ್ಮ ಪ್ರಕಾರ ಜಗತ್ತನ್ನು ಇಂದು ’ಸಂಬಂಧಶೂನ್ಯತೆ’ ಆವರಿಸಿದೆ. ಆದರೆ ಇದೇ ಯಾಂತ್ರಿಕತೆ ಇಂದು ಸಂಬಂಧಗಳ ಉಳಿವಿಗೆ ನೆರವಾಗಿದೆ. ಕೆಲ ತಿಂಗಳುಗಳ ಮುಂಚೆ ನಿಮ್ಮ ಲೇಖನಗಳನ್ನ ಓದುವ ಮಂದಿ ಹಾಗು ನಿಮ್ಮ ಅಭಿಮಾನಿ ಬಳಗ ಎಷ್ಟು ಎಂಬ ಪರಿವೆಯೂ ನಿಮಗಿರಲಿಲ್ಲ ಆದರೆ ಒಂದು ’ಗಿಂಡಿಮಾಣಿ’ ನಿಮ್ಮ ಹಾಗು ಓದುಗರ ಸಂಬಂಧವನ್ನ ತೆಗೆದಿರಿಸಿದೆ. ಇದು ಈ ’ಯಾಂತ್ರಿಕ ಜಗತ್ತಿನ’ ಕೊಡುಗೆ. ಒಂದು ಫ಼ೇಸ್ಬುಕ್, ಒಂದು ಟ್ವಿಟ್ಟೆರ್ ಇಂದು ಜಗತ್ತನ್ನು ಒಂದು ಮಾಡುತ್ತಾ ಇದೆ.

  ಸಂಬಂಧಗಳನ್ನ ಕೇವಲ ಆಪ್ತತೆಯಿಂದ ಅಳಿಯುವುದು ತೀರ ಕ್ಶುಲ್ಲಕ ಅನ್ನಿಸುತ್ತದೆ. ಒಬ್ಬ ವ್ಯಕ್ತಿ ಇನ್ನೊಬ್ಬನೊಡನೆ ಮಾತನಾಡದೆಯೂ ಅವನೊಡನೆ ಒಂದು ಭಾವನಾತ್ಮಕ ಸಂಬಂಧ ಬೆಳೆಸಬಲ್ಲ. ಸಂಬಂಧ ಕೇವಲ ಇಬ್ಬರು ಮನುಷ್ಯರ ನಡುವೆ ಇರಬಹುದು ಎಂಬ ನಿಮ್ಮ ವಾದ ತುಂಬಾ ಕ್ಲೀಷೆಯಿಂದ ಕೂಡಿದೆ. ಮೊದಲೇ ಹೇಳಿದ ಹಾಗೆ ಸಂಬಂಧಗಳನ್ನ ನಾನಾ ರೂಪದಲ್ಲಿ ನೋಡಬಹುದು. ಅವನತಿಯತ್ತ ಸಾಗುತ್ತಿರುವ ಹುಲಿಯನ್ನು ಉಳಿಸುವ ಹೋರಾಟವೆ ಆಗಿರಬಹುದು, ಪ್ರಕೃತಿಯ ಹಸಿರನ್ನು ಉಳಿಸುವ ನೀಮ್ಮ ’ನೀರ್ಸಾಧಕ’ತನವೇ ಇರಬಹುದು, ಎಲ್ಲೋ ಭೂಕಂಪವಾದದ್ದಕ್ಕೆ ಇನ್ನೆಲ್ಲೋ ಮಿಡಿವ ಮನವಿರಬಹುದು ಎಲ್ಲವೂ ಒಂದೊಂದು ಸಂಬಂಧಗಳ ಪ್ರತೀಕ.

  ನಿಮ್ಮ ಮಾತುಗಳಲ್ಲಿ ಒಬ್ಬ ಸೋತ ಯೋಧನ ಅಸಹಾಯಕತೆಯಿದೆ, ವಾಸ್ತವವಾದಿಯ ನಿಷ್ಟುರತೆಯಿದೆ ಆದರೆ ನೀವು ವಾಸ್ತವ ಹಾಗು ಕಲ್ಪನೆಗಳನ್ನ ಅವಲೋಕಿಸುವುದರಲ್ಲಿ ಎಡವಿದ್ದೀರ ಎಂದು ನನ್ನ ಅನಿಸಿಕೆ. ಬಂಡವಾಳಶಾಹಿ ಆಧುನಿಕ ಯುಗವನ್ನು ಟೀಕಿಸುವ ಭರದಲ್ಲಿ ನೀವು ಮಾನವಸಂಬಂಧ ಜಾತಿ, ದೇಶ, ಭಾಷೆಗಳನ್ನು ಮೀರಿ ಬೆಳೆಯುತ್ತಿರುವುದನ್ನು ಮರೆಯುತ್ತಿದ್ದೀರ. ಎಂದೂ ಘಟಿಸದ ಸಾಮೂಹಿಕ ಮಾನವ ವಲಸೆಯ ಯುಗದಲ್ಲಿ ನಾವಿದ್ದೇವೆ. ಸಂಬಂಧಗಳ ಅರ್ಥ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆಯದಾಗಿರಬಹುದು ಆದರೆ ಅದರ ಮೌಲ್ಯ ಎಂದಿಗೂ ಎಲ್ಲೆಡೆಯೂ ಒಂದೆ.

  ಗೀತೆಯಲ್ಲಿ ಹೇಳಿರುವ ಹಾಗೆ,
  ಆಶ್ಚರ್ಯವತ್ ಪಶ್ಯತಿ ಕಶ್ಚಿದೇನಂ,
  ಆಶ್ಚರ್ಯವದ್ ವದತಿ ತಥೈವ ಚಾನ್ಯಃ |
  ಆಶ್ಚರ್ಯವಚ್ಚೈನಮನ್ಯ: ಶೃಣೋತಿ,
  ಶೃತ್ವಾಪ್ಯೇನಂ ವೇದ ನ ಚೈವ ಕಶ್ಚಿತ್||

  ಭಾವಾರ್ಥ:
  ಕೆಲವರು ಆತ್ಮವನ್ನು ಉತ್ಕೃಷ್ಟವಾಗಿ ನೋಡುತ್ತಾರೆ,
  ಕೆಲವರು ಆತ್ಮವನ್ನು ಉತ್ಕೃಷ್ಟವಾಗಿ ವರ್ಣಿಸುತ್ತಾರೆ,
  ಕೆಲವರು ಆತ್ಮವನ್ನು ಉತ್ಕೃಷ್ಟವಾಗಿ ಕೇಳುತ್ತಾರೆ,
  ಆದರೆ ಕೆಲವರು ಇಷ್ಟೆಲ್ಲಾ ತಿಳಿದ ಮೇಲೂ ಆತ್ಮದ ಉತ್ಕೃಷ್ಟತೆಯ ಬಗೆಗೆ ಅಜ್ನ್ಯಾನಿಗಳಾಗಿರುತ್ತಾರೆ

  ನೀವೇ ಹೇಳಿರುವ ಹಾಗೆ ಸಂಬಂಧಗಳ ವಿಶ್ಲೇಷಣೆ ತುಂಬಾ ಜಟಿಲ. ’ಅವರವರ ಭಾವಕೆ, ಅವರವರ ಭಕುತಿಗೆ’ ಎಂಬ ಗಾದೆಯಂತೆ ಸಂಬಂಧಗಳ ವಿಮರ್ಶೆಯೂ ವ್ಯಕ್ತಿ ಕೇಂದ್ರಿತ. ಆದರೆ ನಕಾರಾತ್ಮಕ ಭಾವನೆಯಲ್ಲಿ ಜಗತ್ತನ್ನು ಕಾಣುವುದಕ್ಕಿಂತ ಸಂಬಂಧಗಳ ಉಳಿಕೆಯಲ್ಲಿ ಯಾಂತ್ರಿಕ ಯುಗದ ಸಕರಾತ್ಮಕ ಕೊಡುಗೆಗಳ ಬಗೆಗಿನ ಚರ್ಚೆಯ ಅಗತ್ಯವಿದೆ. ನಿಮ್ಮ ಅನಿಸಿಕೆಗಳಿಗೆ ಗೌರವ ಕೊಡುತ್ತ ಈ ಆರೊಗ್ಯಕರ ಚರ್ಚೆ ಮುಂದುವರಿಯಲಿ ಎಂದು ಆಶಿಸುತ್ತೇನೆ.

  ಪ್ರಮೋದ...

  ReplyDelete
 14. "ಕೇವಲ ಶಬ್ದಾಡಂಬರವೇ ಸಾಹಿತ್ಯವೆಂದಾದರೇ ಅದೇನೂ ಬ್ರಹ್ಮವಿದ್ಯೆಯಲ್ಲ. ಅದರಿಂದ ಬರಗಾರ ತನ್ನ ದೊಡ್ಡಸ್ತಿಕೆ ಮೆರೆಯಬಹದು. ಆದರೆ ಓದುಗನ ಮನಸ್ಸು ಬಳುತ್ತದೆ. ವಿಷಯವನ್ನು ನೇರವಾಗಿ, ಸರಳವಾಗಿ ಹೇಳುವವನೇ ನನ್ನ ದೃಷ್ಟಿಯಲ್ಲಿ ಉತ್ತಮ ಬರಹಗಾರ. "
  ನಿಮ್ಮ ಲೇಖನ ಇದಕ್ಕೆ ಸರಿಯಾದ ಉದಾಹರಣೆ . ಬರೆದದ್ದು ಏನೋ ಚೆನ್ನಾಗಿದೆ.ಆದರೆ ಮನಸ್ಸು ತುಂಬ ಬಳಳುತ್ತದ್ದೆ . ನೀವು ಸರಳ ಶಬ್ದದಲ್ಲಿ ಬರೆಯಬಲ್ಲಿರಿ ಹಾಗೂ ಲೇಖನ ಶೈಲಿ ಚೆನ್ನಾಗಿದೆ. ದಯಮಾಡಿ ಸುಲಭವಾದ ಶಬ್ದಗಳನ್ನು ಉಪಯೋಗಿಸಿರಿ .
  ಪ್ರಮೋದ್ ಅವರೇ - ದಯಮಾಡಿ ನೀವೂ ಕೂಡ ಹೇಳಬೇಕಾದ್ದನ್ನು ಸರಳ ಪದಗಳಿಂದ ತಿಳಿಸಿ

  ReplyDelete
 15. Raj avare ondu gaade iro haage ' If you can't convince anyone then confuse them'...;)

  naanu confuse madakke praytna padta illa. nanna anisike li jagattinalli sambandhgalu innu nashisi hogilla.

  ReplyDelete