About Me

My photo
ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.

Thursday, January 27, 2011

ಮರುಗಿದರೆ ನಿಮ್ಮ ಮಾನಸಿಕ ಸ್ಥಿತಿ ಕದಡಿಬಿಟ್ಟಾನು, ಎಚ್ಚರ !

ಪ್ಪಿಕೊಳ್ಳುತ್ತೇನೆ. ನಮ್ಮ ಗುರಿ ಯಾವತ್ತೂ ವೈರಿಗಳ ವಿರುದ್ಧವೇ ಇರಬೇಕು. ನಾವು ಮಾಡುವ ದಾಳಿ ನೇರವಾಗಿ ಅವರನ್ನಷ್ಟೇ ಹಳಿಯಬೇಕೇ ವಿನಾ ಅವರ ಹೆಂಡತಿ ಮಕ್ಕಳು, ಸಂಬಂಗಳು, ಸ್ನೇಹಿತರು ಅವಲಂಬಿತರು ಇತ್ಯಾದಿ ಮುಗ್ಧರು ನಮ್ಮ ಅಸ್ತ್ರ ಪ್ರಯೋಗದಿಂದ ಘಾಸಿಗೊಳ್ಳಬಾರದು. ಯಾರ‍್ಯಾರೋ ಕೀಳು ಮಟ್ಟಕ್ಕೆ ಇಳಿಯುತ್ತಾರೆಂದ ಮಾತ್ರಕ್ಕೆ ನಾನು-ನನ್ನಂಥವರು ಆ ಮಟ್ಟದ ಬರವಣಿಗೆಗೆ ಇಳಿಯಬಾರದು. ಅದರಿಂದ ನಮ್ಮ ಆತ್ಮ ಗೌರವಕ್ಕೆ ಕುಂದುಂಟಾಗುತ್ತದೆ. ನನ್ನಂಥವರ ವ್ಯಕ್ತಿತ್ವದ ಮೌಲ್ಯ ಕಳೆದು ಹೋಗುತ್ತದೆ. ಅಂಥದ್ದೊಂದು ಪ್ರಜ್ಞೆ ನನ್ನಲ್ಲೂ ಇದೆ.


ಇದೇ ಸಂದರ್ಭದಲ್ಲಿ ಇಂಗ್ಲಿಷ್‌ನ ಹಳೆಯ ಗಾದೆಯೊಂದನ್ನು ನೆನಪಿಸಿಕೊಳ್ಳುತ್ತೇನೆ. ಯುದ್ಧ ಮತ್ತು ಪ್ರೀತಿಯಲ್ಲಿ ಯಾವುದೂ ತಪ್ಪಲ್ಲ ಎಂದಿದೆ ಆ ಮಾತು. ಪತ್ರಿಕೋದ್ಯಮದ ಹಿನ್ನೆಲೆಯಲ್ಲಿ ಇದೂ ಒಂದು ರೀತಿಯಲ್ಲಿ ಯುದ್ಧವೆಂದೇ ನಾನು ಪರಿಭಾವಿಸಿದ್ದೇನೆ. ಸಮಾಜದ ಕೆಳವರ್ಗದ, ಶೋಷಿತರ ಪರವೆಂಬ ಮುಖವಾಡ ಹೊತ್ತವರು ಪತ್ರಿಕೋದ್ಯಮದ ಹೆಸರಿನಲ್ಲಿ ನಡೆಸುತ್ತಿರುವ ದೌರ್ಜನ್ಯ, ಅನ್ಯಾಯ, ಅತ್ಯಾಚಾರ, ಅಕ್ರಮಗಳಿಗೆ ಲೆಕ್ಕ ಉಂಟೇ ? ಗೆರಿಲ್ಲಾ ಮಾದರಿಯ ಯುದ್ಧದಲ್ಲಿ ತೊಡಗಿರುವ ‘ನೀಲಿ ಪತ್ರಕರ್ತರು’ ಕಳೆದರೆಡು ದಶಕಗಳಲ್ಲಿ ಮಾಡಿದ ತೇಜೋವಧೆಗಳು, ವ್ಯಕ್ತಿತ್ವ ಹರಣಕ್ಕೆ ಮಿತಿ ಎಂಬುದು ಇದೆಯೇ. ಕನ್ನಡ ಓದುಗ ದೊರೆಗೆ ಇದರ ಅರಿವಿಲ್ಲದೇ ಇದೆಯೇ ? ಹೀಗಿದ್ದೂ, ಇಂಥ ಹೊಲಸನ್ನು ತುಂಬಿಯೇ ದಿನದಿಂದ ದಿನಕ್ಕೆ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಂಡು, ಇದೇ ನೈಜ ಪತ್ರಿಕೋದ್ಯಮ ಎಂಬಂತೆ ಬಿಂಬಿಸಿಕೊಂಡು ಮೆರೆದಾಡಿದ್ದು-ಮೆರೆದಾಡುತ್ತಿರುವುದು ಇಂದಿಗೂ ಪ್ರಶ್ನಾರ್ಹವಲ್ಲವೇ ?
ಸಮಾಜದ ಎಲ್ಲರ ನೈತಿಕತೆಯನ್ನು ಪ್ರಶ್ನಿಸುವ, ಮಠ-ಮಂದಿರಗಳೆನ್ನದೇ ಎಲ್ಲರನ್ನೂ ದೂಷಿಸುವ, ತನ್ನನ್ನು ಉಳಿದು ಬೇರೆಲ್ಲರೂ ಭ್ರಷ್ಟರೆಂದು ಹೇಳಿಕೊಳ್ಳುವ ಸೋಗಲಾಡಿತನಕ್ಕೆ ಏನೆಂದು ಹೆಸರು ಕೊಡುತ್ತೀರಿ ? ನೈತಿಕ ಅಧಃಪನವನ್ನೂ ಸುಂದರ, ಅತಿ ರಂಜಿತ ವಾಕ್ಯಗಳ ಮೂಲಕ ಸಮರ್ಥಿಸಿಕೊಂಡು ಬಿಟ್ಟರೆ ಕನ್ನಡಿಗ ಅದನ್ನು ಒಪ್ಪಿಕೊಂಡು ಬಿಡುತ್ತಾನೆಯೇ ? ಟ್ಯಾಬ್ಲಾಯ್ಡ್ ಗಾತ್ರದ ಪತ್ರಿಕೆಯೊಂದನ್ನು ಕೈಯಲ್ಲಿಟ್ಟುಕೊಂಡು ಬಿಟ್ಟರೆ ಏನನ್ನು ಬೇಕಾದರೂ ಮಾಡಿ ಜಯಿಸಿಕೊಂಡುಬಿಡಬಹುದು ಎಂಬ ಧೋರಣೆಯ ಬುಡಕ್ಕೇ ಒಮ್ಮೆ ಕೊಡಲಿ ಏಟು ಹಾಕಬೇಕಾದ ಅಗತ್ಯ ಇಲ್ಲವೇ ?


ಸ್ವಾಮೀ, ಧರ್ಮ ಬೋಧೆಯಷ್ಟು ಸುಲಭದ ಕೆಲಸ ಬೇರಾವುದೂ ಇಲ್ಲ. ಅದು ಯಾರಿಗೂ ಮಾರಾಟವಾಗಿಯೂ ಹೋಗಿಲ್ಲ. ಎಲ್ಲರಿಗಿಂತ ಮನೋಜ್ಞವಾಗಿ ಧರ್ಮಬೋಧೆ ಮಾಡಲು ನಮ್ಮಿಂದಲೂ ಸಾಧ್ಯ. ಆದರೆ ಪತ್ರಿಕಾ ಧರ್ಮಕ್ಕೆ ಬಂದರೆ ಪತ್ರಕರ್ತನೊಬ್ಬ ಮಾಡುವ ಅನ್ಯಾಯ, ಅಕ್ರಮಗಳನ್ನೂ ನೋಡಿಯೂ ಸಹಿಸಿಕೊಂಡರೆ, ಸುಮ್ಮನಿದ್ದರೆ, ಪ್ರತಿಭಟಿಸದೇ ಹೋದರೆ ಅದರಲ್ಲಿ ನಮ್ಮದೂ ಪಾಲಿದ್ದಂತೆ ಅಲ್ಲವೇ ? ಅವರಿಳಿಯುವ ಮಟ್ಟಕ್ಕೆ ನಾವಿಳಿಯಬೇಕೆಂದೇನೂ ಇಲ್ಲ; ಒಪ್ಪಿಕೊಳೋಣ. ಆದರೆ ಬೆಂಕಿ ಸುಡುತ್ತದೆ ಎಂಬುದರ ಅನುಭಾವಕ್ಕೆ ಸ್ವತಃ ಕೈ ಸುಟ್ಟುಕೊಂಡೇ ನೋಡಬೇಕೇ ಹೊರತೂ ಹಾಗೆಯೇ ಥಿಯರಿಯಿಂದ ಪ್ರಯೋಜನವಿಲ್ಲ. ಇನ್ನೊಬ್ಬರ ಹೆಂಡತಿ ಮಕ್ಕಳನ್ನು ವಿನಾ ಕಾರಣ ಹೀಗಳೆದಾಗ, ಆ ಮೂಲಕ ಯಾರದ್ದೋ ಚಾರಿತ್ರ್ಯವಧೆಗೆ ಮುಂದಾದಾಗ ಯಾವ ಪರಿಣಾಮವಾಗುತ್ತದೆ ಎಂಬುದು ‘ನರಿ ಕೊಳೆಗೆರೆ’ಯಂಥವರಿಗೆ ಗೊತ್ತಾಗುವುದಾದರೂ ಹೇಗೆ ? ಇಂಥ ತೇಜೋವಧೆಯ ಅಕಾರವನ್ನು ಅವರಿಗೆ ಮಾತ್ರ ಕನ್ನಡಿಗರು ಕೊಟ್ಟಿದ್ದಾರೆಯೇ ? ಅದಿಲ್ಲದಿದ್ದರೆ ಪ್ರತಾಪ್ ಸಿಂಹರ ಬಗ್ಗೆ ಬರೆಯುವ ಗೀಳು ಅಂಟಿಸಿಕೊಂಡಿರುವ ಕೊಳೆಗೆರೆಯಂಥವರು ತನ್ನ ಕೈ ಕೆರೆತ ನೀಗಿಸಿಕೊಳ್ಳಲು ಬರಕೊಳ್ಳಲಿ. ಆದರೆ ಪ್ರತಾಪ್ ವಿವಾಹವಾಗಿ ಇನ್ನೂ ವಾರ ಕಳೆಯುವ ಮೊದಲೇ ಆತನ ಹೆಂಡತಿಯ ಬಗ್ಗೆ(ತಾಯಿ, ತಂದೆ, ಸೋದರ, ಸೋದರಿಯರ ಬಗ್ಗೆಯೂ )ವಿನಾಕಾರಣ ತನ್ನ ನೀಲಿ ಪತ್ರಿಕೆಯಲ್ಲಿ ಫೋಟೋ ಸಹಿತ ಬರೆದದ್ದಾದರೂ ಹೇಗೆ ? ಅದೂ ಪ್ರತಾಪ್ ಸೇರಿದಂತೆ ನಾವೆಲ್ಲರೂ ಪತ್ರಿಕೆಗೆ ರಾಜೀನಾಮೆ ನೀಡಿ ನಿಶ್ಯಸ್ತ್ರರಾಗಿದ್ದ ಸಂದರ್ಭ ನೋಡಿ ದಾಳಿಗಿಳಿದದ್ದೂ ಗಂಡಸುತನವೇ ? ಇಷ್ಟು ಸಾಲದೆಂಬಂತೆ ನಮ್ಮೆಲ್ಲರ ಬಾಯಿಗೆ ಬಂದಂತೆ ಕಾರಿಕೊಂಡು ತನ್ನ ವಿಕೃತಿಯನ್ನು ಪ್ರದರ್ಶಿಸಿದ್ದು ಸರಿಯೇ ? ಇದನ್ನು ಕನ್ನಡಿಗರು ಸಹಿಸಿದರಾದರೂ ಹೇಗೆ?

ಇದು ಉದಾಹರಣೆ ಮಾತ್ರ. ಕಳೆದ ಇಪತ್ತು ವರ್ಷಗಳಲ್ಲಿ ಈತನ ವಾರದ ಅಚ್ಚರಿಯೆಂಬ ಹುಚ್ಚುತನದಲ್ಲಿ ಇಂಥ ಸಾವಿರಾರು ಹೆಂಗಸರ, ಮಕ್ಕಳ ತೇಜೋ ವಧೆಯಾಗಿದೆ. ಅದನ್ನು ಲೆಕ್ಕವಿಟ್ಟವರು ಇದ್ದಾರೆಯೇ ? ತಾನು ಬಹು ಸಂಭಾವಿತನೆಂದು ಹೇಳಿಕೊಳ್ಳುವ ಈ ನರಿ ಕೊಳೆಗೆರೆ ಈವರೆಗೆ ಎಷ್ಟು ಮುಗ್ಧ ಹೆಣ್ಣುಮಕ್ಕಳ ಶೀಲಹರಣ ಮಾಡಿದ್ದಾನೆಂಬುದರ ಅರಿವಿದೆಯೇ ? ಅಂದಿನಿಂದ ಇಂದಿನವರೆಗೆ ಅಣ್ಣ, ಅಪ್ಪ, ಗೆಳೆಯ, ಗುರು, ದಿಗ್ದರ್ಶಕ ಹೀಗೆ ಏನೇನೋ ಹೆಸರು ಹೇಳಿಕೊಂಡು ಅದೆಷ್ಟು ಹೆಣ್ಣು ಮಕ್ಕಳನ್ನು ತನ್ನ ಹಾಸಿಗೆಗೆ ಎಳೆದಿದ್ದಾನೆ ಎಂಬುದನ್ನು ಹೇಳಹೊರಟರೆ ಇದಕ್ಕಿಂತಲೂ ಅಸಹ್ಯವಾಗುತ್ತದೆ.


ತನ್ನ ಐವತ್ತನೆಯ ವಯಸ್ಸಿನ ನಂತರ, ಅದೂ ಎರಡು ಮದುವೆಯಾದ ಬಳಿಕ ಈ ಕೊಳೆಗೆರೆ ಮಹಾಶಯ ತನ್ನ ಮಗಳಿಗಿಂತಲೂ ಚಿಕ್ಕ ವಯಸ್ಸಿನ ಹೆಣ್ಣು ಮಗುವೊಬ್ಬಳಿಗೆ ‘ಲವ್ ಲೆಟರ್‘ ಬರೆದಿದ್ದಾನೆ ಎಂಬುದನ್ನು ನಂಬುತ್ತೀರಾ ? ಇವತ್ತಿಗೂ ಆನ್ ಲೈನ್ ಚಾಟಿಂಗ್‌ಗೆ ಇಳಿದು ಅಶ್ಲೀಲವಾಗಿ ಸೆಕ್ಸ್ ವಿಷಯವನ್ನು ಮುಗ್ಧ ಹೆಣ್ಣುಮಕ್ಕಳಿಗೆ ಬೋಸುತ್ತಾನೆ ಎಂಬುದರ ಅರಿವಿದೆಯೇ ? ತೀರಾ ಇತ್ತೀಚಿನ ಘಟನೆ-ಎಂಜಿನಿಯರಿಂಗ್ ಓದುತ್ತಿರುವ ಮಗನಿರುವ ಮಹಿಳೆಯೊಬ್ಬಳ ಮೇಲೆ ವಿನಾಕಾರಣ ಹರಿಹಾಯ್ದು, ಆಕೆ ಮತ್ತು ಆಕೆಯ ತಾಯಿಯನ್ನೂ ಹಾಸಿಗೆಗೆ ಕರೆದು ತನ್ನ ಹೇಸಿಗೆ ಬುದ್ಧಿ ಪ್ರದರ್ಶಿಸಿದ್ದಾನೆ ಎಂಬುದು ಗೊತ್ತೇ ? ಇವೆಲ್ಲಕ್ಕೂ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಸಂದರ್ಭ ಬಂದಾಗ ಅದು ಸೋಟಗೊಳ್ಳುತ್ತದೆ. ಮಾತ್ರವಲ್ಲ ಇವನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಹತ್ತಕ್ಕೂ ಹೆಚ್ಚು ಮಂದಿ ಪತ್ರಿಕೆಯೆದುರು ಸ್ಟೇಟ್‌ಮೆಂಟ್ ಕೊಡಲು ಸಜ್ಜಾಗಿ ನಿಂತಿದ್ದಾರೆ.


ಇಂಥವನ್ನೆಲ್ಲ ಸಹಿಸಿಕೊಂಡು ಸುಮ್ಮನಿರಬೇಕೇ ? ಇಂಥವನ ಬಗ್ಗೆ ಹೇಗೇ ಬರೆದರೂ ನನ್ನ ವ್ಯಕ್ತಿತ್ವಕ್ಕೆ ಖಂಡಿತಾ ಕುಂದುಂಟಾಗುವುದಿಲ್ಲ. ಇದರಿಂದ ನನ್ನ ನೈಜ ಅಭಿಮಾನಿಗಳು ಖಂಡಿತಾ ಮುನಿಸಿಕೊಳ್ಳುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಆತನ ಬಗ್ಗೆ ಬರೆಯವುದಿದ್ದರೆ ಅತ್ಯಂತ ಸೌಜನ್ಯಯುತ ಬರವಣಿಗೆ ಸಾಧ್ಯವೇ ಇಲ್ಲ. ಏಕೆಂದರೆ ಆತ ಈವರೆಗೆ ಮಾಡಿರುವುದೇ ಮೃಗಗಳೂ ಅಸಹ್ಯಪಡುವಂಥಾ ಕೆಲಸಗಳನ್ನು. ಹಾಗಿದ್ದ ಮೇಲೆ ಹೊಲಸನ್ನು ಸುಂದರ ಪದಗಳಲ್ಲಿ ಕಟ್ಟಿಕೊಡುವುದಾದರೂ ಹೇಗೆ; ಹೇಳಿ ಗೆಳೆಯರೇ ?


ಇಂಥ ಮಹಾನುಭಾವ ನನ್ನ ಬಗ್ಗೆ ಬರೆಯುತ್ತಾ ಶ್ರೀ ರಾಮಚಂದ್ರಾಪುರಮಠದ ಗುರುಕುಲದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯವನ್ನು ಮುಚ್ಚಿ ಹಾಕಲು ಯತ್ನಿಸಿದ್ದೇನೆ ಎನ್ನುವ ಅರೋಪ ಮಾಡಿದ್ದಾನೆ. ಯಾವ ಗುರುಕುಲದಲ್ಲಿ ಸ್ವಾಮಿ ಇದು ನಡೆದದ್ದು ? ನೀವು ಅದಕ್ಕೆ ಸಾಕ್ಷಿಯೇ ? ಆ ಗುರುಕುಲದ ಕುಲಪತಿಯಾಗಿದ್ದ ಶ್ರೀ ಜಗದೀಶ್ ಶರ್ಮರನ್ನು ತೀರಾ ಹತ್ತಿರದಿದಂದ ಬಲ್ಲ ವ್ಯಕ್ತಿ ನಾನು. ಭಾರತೀಯ ಗುರುಕುಲ ಪದ್ಧತಿಯನ್ನು ಸಂರಕ್ಷಿಸಲೋಸುಗವೇ ತನ್ನ ಜೀವನವನ್ನು ಮುಡುಪಿಟ್ಟ ಸಜ್ಜನನಾತ. ಅವರು ಮನಸ್ಸು ಮಾಡಿದ್ದರೆ, ಅವರಿಗಿರುವ ಸಂಸ್ಕೃತ ವಿದ್ವತ್‌ಗೆ ಇಂದು ಲಕ್ಷಾಂತರ ರೂ. ಸಂಬಳ ಪಡೆದು ಬಂಗಲೆ, ಕಾರು ಎಂದು ಆರಾಮವಾಗಿರಬಹುದಿತ್ತು. ಅದೆಲ್ಲವನ್ನು ಬಿಟ್ಟು ಹೊಸನಗರದ ಮೂಲೆಯೊಂದರಲ್ಲಿ ಹೋಗಿ ಕುಳಿತು, ಕಳೆದ ಹತ್ತು ವರ್ಷಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಜಗತ್ತೊಂದರ ಸೃಷ್ಟಿ ಮಾಡಿದ್ದಾರೆ. ಅದನ್ನು ಈ ಕೊಳೆಗೆರೆ ಒಮ್ಮೆಯಾದರೂ ಹೋಗಿ ನೋಡಿ ಬಂದಿದ್ದಾನಾ ? ಬುದ್ಧಿಜೀವಿಗಳೆಂದು ಫೋಸು ಕೊಡುತ್ತಾ ಈತ ಬಿಸಾಕುವ ಬಿಸ್ಕೆಟ್‌ಗೆ ಜೊಲ್ಲು ಸುರಿಸುವ ಕೆಲ ಪತ್ರಕರ್ತರು ಬರೆಯುತ್ತಾರೆಂದು ಅದನ್ನೇ ಪ್ರಕಟಿಸುವ ಈತನಿಗೂ ಪತ್ರಿಕಾ ಧರ್ಮವೆಂಬುದು ಉಂಟೇ? ಕೊನೆ ಪಕ್ಷ ಜಗದೀಶ ಶರ್ಮರನ್ನು ಒಮ್ಮೆಯಾದರೂ ಈತ ನೋಡಿದ್ದಾನಾ? ಮಾತನಾಡಿಸಿದ್ದಾನಾ ? ಈ ಬಗ್ಗೆ ಅವರ ಅಭಿಪ್ರಾಯ ಕೇಳಿದ್ದಾನಾ?
ಹೋಗಲಿ, ಶ್ರೀ ಜಗದೀಶ ಶರ್ಮರಿಂದ ಅನ್ಯಾಯವಾಗಿದೆ ಎಂದು ಹೇಳುವ ಹೆಣ್ಣುಮಗಳನ್ನಾಗಲೀ, ಆಕೆಯ ಹೆತ್ತವರನ್ನಾಗಲೀ ಮಾತನಾಡಿಸಿದ್ದಿದೆಯೇ? ಒಂದೊಮ್ಮೆ ಮಾತನಾಡಿಸಿದ್ದರೂ ಆಕೆಯ ಬಗ್ಗೆ ಕೊಳೆಗೆರೆಗೆ ಗೊತ್ತಿರುವದಕ್ಕಿಂತ ಹೆಚ್ಚಿನ ವಿಷಯ ನನಗೆ ಗೊತ್ತಿದೆ. ಹಾಗೆಂದು ಎದೆ ತಟ್ಟಿ ಹೇಳಿಕೊಳ್ಳಬಲ್ಲೆ. ಏಕೆಂದರೆ ಆಕೆ ಸ್ವತಃ ನನಗೆ ಸೋದರ ಸಂಬಂ ಎಂಬುದು ತಿಳಿದಿರಲಿ. ಆ ಬಾಲಕಿಯ ಬಗ್ಗೆ, ಆಕೆಯ ತಂದೆ-ತಾಯಿಯ ಬಗ್ಗೆ ಕೊಳೆಗೆರೆಗಿರುವುದಕ್ಕಿಂತ ಹೆಚ್ಚಿನ ಕಾಳಜಿ, ಪ್ರೀತಿ, ಗೌರವಗಳು ನನಗಿವೆ. ಪರಿಸ್ಥಿತಿಯ ಅನಿವಾರ್ಯತೆಗೆ ಸಿಲುಕಿಯೋ, ಕೆಲವರ ಪಿತೂರಿ, ಷಡ್ಯಂತರಕ್ಕೆ ಒಳಗಾಗಿಯೋ ಅಜ್ಞಾನದಿಂದಲೋ ಇಂಥ ಸುಳಿಯಲ್ಲಿ ಅವರು ಬಿದ್ದಿದ್ದಾರೆ. ಅದಿಲ್ಲದೇ ಅವರಿಗೆ ನಿಜಕ್ಕೂ ಅನ್ಯಾಯವಾಗಿದ್ದರೆ ಅದರ ವಿರುದ್ಧ ಮೊದಲು ಸಿಡಿದೇಳುವ ವ್ಯಕ್ತಿ ನಾನಾಗಿರುತ್ತಿದ್ದೆ. ಈಗಲೂ ಅದೇ ಸತ್ಯವೆಂದು ಶ್ರೀಮಾನ್ ಕೊಳೆಗೆರೆ ಸಾಬೀತು ಪಡಿಸಿದರೆ ಜೀವನದ ಕೊನೆಯವರೆಗೆ ಆತನ ಅಡಿಯಾಳಾಗಿರಲು ಸಿದ್ಧ.


ಅಷ್ಟಕ್ಕೂ, ಅಂಥ ನೈತಿಕತೆ ಆತನಿಗೆ ಅದೆಲ್ಲಿಂದ ಬರಬೇಕು ? ಗುರು, ಗುರುಕುಲ ಇವುಗಳ ಸ್ಥಾನ ಮಹಿಮೆ ಕೊಳೆಗೆರೆಯಂಥವನಿಗೆ ಹೇಗೆ ಅರಿವಿದ್ದೀತು? ತನ್ನಂತೆ ಎಲ್ಲ ಶಿಕ್ಷಕರೂ ಎಂಬ ಸಮಾನ ಭಾವ ಆತನದ್ದಿರಬೇಕು. ಏಕೆಂದರೆ ಆತ ಬೋಧನಾ ವೃತ್ತಿಬಿಟ್ಟಿದ್ದೇ ತನ್ನ ಶಿಷ್ಯಯೊಬ್ಬಳ ಮಾನಭಂಗಕ್ಕೆ ಯತ್ನಿಸಿದ ಬಳಿಕವೇ ಅಲ್ಲವೇ? ಬಳ್ಳಾರಿಯ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕನಾಗಿದ್ದಾಗ ಈತ ಪ್ರವಾಸದ ನೆಪ ಒಡ್ಡಿ ವಿದ್ಯಾರ್ಥಿನಿಯೊಬ್ಬಳ ಮಾನಭಂಗಕ್ಕೆ ಯತ್ನಿಸಿದಾಗ ಇಡೀ ಬಳ್ಳಾರಿ ತಿರುಗಿ ಬಿತ್ತು. ಇದೇ ಅನಂತ್‌ಕುಮಾರ್(ಆಗ ಎಬಿವಿಪಿ ಕಾರ್ಯದರ್ಶಿ) ನೇತೃತ್ವದಲ್ಲಿ ಬಳ್ಳಾರಿ ಬಂದ್ ಸಹ ಆಗಿತ್ತು. ಇನ್ನೂ ತನ್ನ ಪ್ರಾಣ ಉಳಿಯಲಿಕ್ಕಿಲ್ಲ ಎಂದುಕೊಂಡು ಎದ್ದೆನೋ ಬಿದ್ದೆನೋ ಎಂದು ಹುಬ್ಬಳ್ಳಿಗೆ ಓಡಿ ಬಂದದ್ದನ್ನು ಈ ಕೊಳೆಗೆರೆ ತನ್ನ ಖಾಸ್ ಬಾತ್‌ನಲ್ಲಿ ಎಂದಾದರೂ ಬರೆದುಕೊಂಡಿದ್ದಾನೆಯೇ ? ಈತ ಕಾಡಿಸಿ, ಪೀಡಿಸಿ ಮದುವೆಯಾದ್ದದು(ಮೊದಲನೇ) ತನಗಿಂತ ಹನ್ನೊಂದು ವರ್ಷ ಹಿರಿಯವರಾದ ತನ್ನ ಟ್ಯೂಷನ್ ಟೀಚರ್ ಅನ್ನು. ಹಾಗಿದ್ದ ಮೇಲೆ ‘ಗುರು’ ಪದದ ಬಗ್ಗೆ ಈತನಿಗೆ ಗೌರವವಾದರೂ ಹೇಗಿದ್ದೀತು?


ಇಂಥ ಮಹಾನುಭಾವ ಮತ್ತೂ ಈತನ ವರದಿಗಾರರು ಶ್ರೀ ರಾಮಚಂದ್ರಾಪುರಮಠದ ಗುರುಕುಲದ ಬಗ್ಗೆ ಮಾತನಾಡುತ್ತಾರೆ. ಅದರಲ್ಲಿ ಆದ ಅನ್ಯಾಯದ ಬಗ್ಗೆ ವರದಿಗಳು ಪತ್ರಿಕೆಗಳಲ್ಲಿ ಬಾರದಂತೆ ನಾನು ತಡೆದೆ ಎಂಬ ಆರೋಪ ಮಾಡುತ್ತಾನೆ. ಅದು ಸತ್ಯವೆಂದೇ ಅಂದುಕೊಳ್ಳೋಣ. ಅವತ್ತು ನಾನು ವಿಜಯ ಕರ್ನಾಟಕದಲ್ಲಿ ಉದ್ಯೋಗಿಯಾಗಿದ್ದೆ. ಸಂಪಾದಕರ ಸಾಮೀಪ್ಯ ಇತ್ತು ಎಂಬ ಕಾರಣಕ್ಕೆ ಆ ಒಂದು ಪತ್ರಿಕೆಯಲ್ಲಿ ವರದಿಯಾಗದಂತೆ ತಡೆಯಬಹುದಿತ್ತು. ಆದರೆ ಪ್ರಜಾವಾಣಿ, ಕನ್ನಡಪ್ರಭ ಸೇರದಂತೆ ಎಲ್ಲ ಪತ್ರಿಕೆಗಳ ಸಂಪಾದಕರು, ಸುದ್ದಿವಾಹಿನಿಗಳ ಮುಖ್ಯಸ್ಥರು ಕೇವಲ ನನ್ನ ಮಾತಿಗಾಗಿ ಸುದ್ದಿ ಪ್ರಕಟಿಸದೇ ಇರಲು ಕಾರಣ ಉಂಟೇ ? ಹಾಗೊಮ್ಮೆ ಪ್ರಕಟಿಸದೇ ಇದ್ದಾರೆಂದರೆ ಒಂದೋ ಸತ್ಯದ ಪರವಾಗಿರುವ ನನ್ನ ವ್ಯಕ್ತಿತ್ವದ ಅರಿವು ಅವರಿಗಿರಬೇಕು, ಇಲ್ಲವೇ ಆ ಎಲ್ಲ ಪತ್ರಿಕೆಗಳು ಸತ್ಯವನ್ನಷ್ಟೇ ಬರೆಯುವ ವಸ್ತುನಿಷ್ಠ, ವಿಶ್ವಾಸಾರ್ಹ ಮಾಧ್ಯಮಗಳಾಗಿರಬೇಕು. ಇಲ್ಲಿ ಎರಡೂ ಸತ್ಯ. ಮಾತೆತ್ತಿದರೆ ಸತ್ಯಸಂಧನೆಂದುಕೊಳ್ಳುವ ಈ ಕೊಳೆಗೆರೆಗೆ ನಿಜಕ್ಕೂ ಸಾಮರ್ಥ್ಯವಿದ್ದರೆ ಒಂದು ಸುದ್ದಿಯನ್ನು ಕನ್ನಡದ ಎಲ್ಲಾ ಮಾಧ್ಯಮಗಳಲ್ಲೂ ಪ್ರಕಟವಾಗದಂತೆ ತಡೆ ಹಿಡಿಯಲಿ.


ಸಾಧ್ಯವೇ ಇಲ್ಲ, ಏಕೆಂದರೆ ಕನ್ನಡದ ಸಂಪಾದಕರೆಲ್ಲರೂ ವಿವೇಚನಾಶೀಲರೆಂಬುದು ಈಗಾಗಲೇ ಸಾಬೀತಾಗಿದೆ. ಈತನ ಪತ್ರಿಕೆಯನ್ನು ಬಹಿಷ್ಕರಿಸುವ ಮೂಲಕ ಕನ್ನಡಿಗ ಓದುಗರೆಲ್ಲರೂ ವಿವೇಚನಾವಂತರೆಂಬುದಷ್ಟೇ ಸಾಬೀತಾಗಬೇಕಿದೆ. ಅದೂ ಇಷ್ಟರಲ್ಲೇ ಅಗಲಿದೆ.


ಗಿಂಡಿತೀರ್ಥ: ಕೊಳೆಗೇರಿಯಂಥವ ಇಂಥ ವಿಕೃತಿಯೂ ಒಂದು ಮಾನಸಿಕ ಅಸಮತೋಲನದ ಸ್ಥಿತಿ. ಆ ಬಗ್ಗೆ ಮರುಕ ಹುಟ್ಟುತ್ತದೆ. ಹಾಗೆಂದು ಅದಕ್ಕೆ ತಕ್ಷಣವೇ ಚಿಕಿತ್ಸೆ ಕೊಡಿಸದಿದ್ದರೆ ಇಂಥವರು ಇಡೀ ಸಮಾಜದ ಮಾನಸಿಕ ಸ್ಥಿತಿಯನ್ನು ಕದಡಿಬಿಡುತ್ತಾರೆ. ಎಚ್ಚರ !

20 comments:

  1. This article is really good. This is how you should fight him. God bless you !

    ReplyDelete
  2. ಉಗೀರಿ ಚೆನ್ನಾಗಿ..... ಆದರೆ ಎಷ್ಟೇ ಕ್ಯಾಕರ್ಸಿ ಉಗಿದರೂ ಅದರಲ್ಲೇ ಮುಖ ತೊಳೆದುಕೊಳ್ಳುವ ದಪ್ಪ ಚರ್ಮದ ಜನಕ್ಕೆ ಏನು ಮಾಡೋದು ಭಡ್ತಿ ಅಣ್ಣಾ ?????

    ReplyDelete
  3. ಪೀತ ಪತ್ರಿಕೋದ್ಯಮದ ಪಿತಾಮಹರಿಗೆ ನಿತ್ಯ "ಮಂಗಳಾರತಿ" ಮಾಡಿದರೂ ಕಡಿಮೆಯೇ.....

    ReplyDelete
  4. Khatarnaak gurugale!!!!!!!!!!!

    Sakkat article....Btw please post these to him so that he gets to see the mirror you guys have been showing across and lets expect some improvement....

    All the best to you Sir....

    ReplyDelete
  5. Karnataka itihasa'dalli atyanta hesigeya patrakarta..... nari kolegere

    ReplyDelete
  6. 'ಗಿಂಡಿಮಾಣಿ' ಕೆಲದಿನಗಳಿಂದ ನಾಪತ್ತೆಯಾಗಿದ್ದಕ್ಕೆ ಬೇಜಾರಾಗಿತ್ತು, ಎಲ್ಲಿ ನಮ್ಮ ಅನಿಸಿಕೆಗಳು ನಿಮಗೆ ಸರಿಬರಲಿಲ್ಲವೋ ಅಂತ... ಮುಂದುವರಿಸುತ್ತಿರುವುದಕ್ಕೆ ಧನ್ಯವಾದ.

    ಅವನ ಬಗ್ಗೆ ಬರೆಯೋದಿದ್ರೆ ಹೀಗೇ ಬರೀರಿ... ನೇರಾ ನೇರ. 'ತಿರಿಸಿ-ಮುರಿಸಿ' ಬರೆದರೆ ಹೆಚ್ಚಿನ ಓದುಗರಿಗಂತೂ ಇಷ್ಟ ಆಗಲ್ಲ ಅಂತ ಹಲವರ ಅನಿಸಿಕೆಗಳೇ ಹೇಳುತ್ತಿವೆ. ಇಂದಿನ ಬರಹದಲ್ಲಿ ಸ್ಪಷ್ಟ ಮಾತುಗಳಲ್ಲಿ ವಾಸ್ತವವನ್ನು ಬಿಚ್ಚಿಡುವ ಕೆಲಸಕ್ಕೆ ಮೊದಲು ಮಾಡಿದ್ದೀರಿ...ಇದು ಹೀಗೇ ಮುಂದುವರಿಯಲಿ...ಆದರೆ ಆ ಹಳೆಯ ಧಾಟಿ ಮಾತ್ರ ಬೇಡ,ಇದು ನಮ್ಮ ವಿನಂತಿ...

    ReplyDelete
  7. ultimate super agi ide.

    nimge nenapirabeku, swamiji yavaru gurugaLadanta sandarba (nanu gurugaLanna ashtu gauravisodilla, avara ella vichara nanage hiDisolla), shivamogga, sagara mukhyavagi malenaadinalli eetana patrike ge odugaru iralilla, aga eta maDida upaya enendare, gurugaLu mamsa tindiddare endu doddadagi baredaddu, amele pade pade sagarakke bandu bhashana bigidaddu, sumaru kaala eeta sagarada sutta muttala vishayavanne bareyutidda, aga ivana patrikeya prasara sankhye dweeguna vagittu, malenadina ella maneyallu hecchukammi eetana patrike kana sigutittu, nanu kuda eetana abhimaniyagidde, aadare bari naanu, nanna hendati, makkalu, aLiya endu swapachana maDikollalu shuru maDida mele avana patrike odalu asahyavagutittu,

    eeta dodda comment maDidda Vijay Sankeshwararige Lorry odisuvavanige sahityda bele enu gottu endu (Bhavana patrike nintaga) ade ee neecha tanu internet ninda kaddu bareyuttidda O Manaseyannu sariyagi naDesalu agade wwe wwe wwe enda.

    bereyavarige samayada baLake, samayakke palane bagge heLuva eeta, O Manase yannu yavattu kuda sari samayakke hora tandilla

    gomukha vyagra

    Regards
    Akshara Kumar
    +261-337538118

    ReplyDelete
  8. ಚೆನ್ನಾಗಿ ಬರೆದಿದ್ದೀರ ಸರ್. ಆದರೆ ಭಟ್ಟರು ಇಷ್ಟು ವರ್ಷ ಇವನೊಂದಿಗೆ ಹೇಗೆ ಸ್ನೇಹದಿಂದ ಇದ್ದರು ಅನ್ನೋದೇ ಅರ್ಥವಾಗಲ್ಲ. ಅಲ್ಲಿ ಅವನ ಪುಸ್ತಕ ಬಿಡುಗಡೆ ಮಾಡ್ತಾರೆ ಇಲ್ಲಿ ಪ್ರತಾಪ್‌ನ ಪುಸ್ತಕವನ್ನು ಬಿಡುಗಡೆ ಮಾಡ್ತಾರೆ. ಇವನ ಕಂತ್ರಿ ಬುದ್ಧಿ ತಿಳಿದುಕೊಳ್ಳೋಕೆ ಇಷ್ಟು ಸಮಯ ಬೇಕಾಯ್ತಾ?

    ReplyDelete
  9. ಒಮ್ಮೆ ಓದಿದ ನೆನಪು. ಈ ಕೊಳಗೆರೆ ಬರೇ ಹುಡುಗಿಯರನ್ನ ಕರ್ಕಂಡು ಟ್ರಿಪ್ ಹೋಗಿದ್ದ, ಅಲ್ಲಿ ಒಬ್ಬ ಹುಡುಗಿ ಅವಳ ಫ್ರೆಂಡ್ ಜೊತೆ ಏನೋ ಮನಸ್ತಾಪ ಮಾಡಿಕೊಂಡು ಏಕ ದಂ ಟ್ರಿಪ್ ಬಿಟ್ಟು ವಾಪಸು ಊರಿಗೆ ಹೋಗಿ ಇವನ ಬಗ್ಗೆ ಅಪಪ್ರಾಚಾರ ಮಾಡಿದ್ಲು. ಇವ ಅವಳ ಮಾನಕ್ಕೆ ಕೈ ಹಾಕಿದ ಅಂತೆಲ್ಲ ಅಪಪ್ರಚಾರ ಮಾಡಿದ್ಲು ಅಂತ ಹೀಗೆ ಅವ ಬರದು ಕೊಂಡಿದ್ದ. ಬರೆದವನು ಬುದೀವನನೋ ಇದನ್ನ ನಂಬಿದವರು ಬುದ್ದಿವನ್ತರೋ ಗೊತ್ತಾಗಲಿಲ್ಲ ?

    ReplyDelete
  10. ಮುಳ್ಳನ್ನು ಮುಳ್ಳಿಂದಲೇ ತೆಗೀಬೇಕು.

    ReplyDelete
  11. Mr. Bhadthi,
    Before I publish my comment I want to tell you that I don't know you or RB personaly. I can say that I have read both of your articles.
    But I want to make a point here. You are talking all these 'mis deeds' of a person (RB) only when you and your friends got a 'taste' of his writing. Till some time back he was your and your beloved editor's friend. In your blog or in your column or in any other way, you never told all those mis deeds to readers earlier. As you had said in your blog post, indirectly you supported such (RB) kind of people.

    ReplyDelete
  12. sir, its very disgusting that your enemy has a paper in his hand and u have a blog and u both engage in throwing mud at each others.there are some other good works to do dont u think so?

    ReplyDelete
  13. I don't know, what were the compulsions for Shri V Bhat to keep quit about Kolagere. I had almost believed that RB is a close friend of V Bhat, hence never took a stand about him. Anyway, whatever the compulsion be, I think V Bhat and team cannot disclose it to us at this juncture. I only hope that your new venture starts soon, where you can reach masses, rather than few (Net)izens and continue your work. I don't care whether it is Gindi Teertha or Last drop!! But just be there in print media.

    ReplyDelete
  14. ಹೊಲಸು ತಿನ್ನೊ ದೇವ್ರಿಗೆ ಹೆಂಡ ಕುಡಿಯುವ ಪೂಜಾರಿಯೆ ಸರಿ. ಕೆಸರಲ್ಲಿ ನಿಂತು ಜಗಳವಾಡುವವನಿಗೆ ಬಿಳಿ ಬಟ್ಟೆ ಹಾಕ್ಕೊಂಡು ಶುಭ್ರವಾಗಿ ಜಗಳ ಆದ್ಲಿಕ್ಕೆ ಆಗಲ್ಲ. ಅವ್ನ ಮಟ್ಟಕ್ಕೆ ಇಳಿದು ಯುದ್ದ ಮಾಡಲೇ ಬೇಕು. ಆಲ್ ದಿ ಬೆಸ್ಟ್ ಮಿ.ಭಡ್ತಿ

    ReplyDelete
  15. sir all the best for your true fight..
    This type of dangerous animal must and should be away from peoples..
    we are with u...

    ReplyDelete
  16. wonderully written.
    Antu kolegerege saddu hoduyuva gandede iruva obru kannadadalli huttidaralla, ade happy news bhadtiji.........

    ReplyDelete
  17. innU hechhina vichaaraviddare dayavittu bareyiri .naanu kelavu hudugiyarige ivana bagge tilisabeku..haage naaduttiri emba vishwasadomdige nimma pritiya abhimaani......

    ReplyDelete
  18. ವಾಸ್ತವವನ್ನು ತೆರೆದಿಟ್ಟಿದ್ದೀರ. ಅಭಿನಂದನೆಗಳು.

    ನಿಮ್ಮ ಜೊತೆ ಸದಾ ನಾವಿದ್ದೇವೆ

    ReplyDelete
  19. ಗುರುಕುಲದಲ್ಲಿ ಹಾಗಾಗಿದೆ, ಹೀಗಾಗಿದೆ ಅಂತ ಬರೆಯೋ, ಮಾತನಾಡುವವರು, ಅಲ್ಲಿನ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಹೇಗಿದೆ ಅಂತ ಒಮ್ಮೆಯಾದರೂ ನೋಡಿದ್ದರೆ ಗೊತ್ತಾಗ್ತಾಯಿತ್ತು ಅದರ ಹಿಂದಿರುವ ವ್ಯಕ್ತಿಯ ಸಾಮರ್ಥ್ಯದ ಬಗ್ಗೆ. ಸುಮ್ಮನೆ ಶಾಲೆ ಕಟ್ಟಿಸಿ, ನಾನೊಂದು ಶಾಲೆ ನಡೆಸುತ್ತಿದ್ದೇನೆ, ವಿದ್ಯಾರ್ಥಿಗಳ ಸಂಖ್ಯೆ ಇಷ್ಟಿದೆ ಅಂತೆಲ್ಲಾ ಹೇಳೋದು, ಮಾಡೋದು ಸುಲಭ. ಹುಲ್ಕೋಡು ಅಮ್ಮುಮ್ಮ ನ ಹತ್ತಿರ ದುಡ್ಡಿದ್ದರೆ ಆಕೆಯೂ ಶಾಲೆ ನಡೆಸುತ್ತಾಳೆ. ಆದರೆ ಅಲ್ಲಿ ಓದೋರಿಗೆ ಜೀವನವೆಂದರೇನು, ಜೀವನದ ಮಹತ್ವವೇನು ಎಲ್ಲವನ್ನೂ ಅವರಿಗೆ ಮನದಟ್ಟಾಗುವ ಹಾಗೆ ಹೇಳೊಕೊಡುವುದು, ಉತ್ತಮ ವಿದ್ಯಾರ್ಥಿಗಳನ್ನು ಹೊರತರುವುದು ಬಲು ಕಠಿಣ ಕೆಲಸ.

    ಒಮ್ಮೆ ರಾಮಚಂದ್ರಾಪುರಮಠದ ಗುರುಕುಲಕ್ಕೆ ಹೋಗಿ ನೋಡಿ, ಅಲ್ಲಿನ ವಿದ್ಯಾರ್ಥಿಗಳ ಹತ್ತಿರ ಮಾತನಾಡಿ. ಆಗ ತಿಳಿಯುತ್ತದೆ ಗುರುಕುಲವೇನೆಂದು. ಅಲ್ಲಿ ಓದಿದ ಕೃಷ್ಣಾನಂದ ಶರ್ಮ ಮೊನ್ನೆ ಮೊನ್ನೆ ತಿರುಪತಿಯಲ್ಲಿ ನಡೆದ ರಾಷ್ಟಮಟ್ಟದ ಸ್ಪರ್ಧೆಯಲ್ಲಿ ಎರಡು ಬಂಗಾರದ ಪದಕ, ಒಂದು ಬೆಳ್ಳಿ ಪದಕ ಗೆದ್ದಿದ್ದಾನೆ. ಆತನನ್ನು ತಿದ್ದಿ ತೀಡಿದ್ದು ಶ್ರೀಮಠದ ಗುರುಕುಲ.

    ಗುರುಕುಲದ ವೆಬ್ ಸೈಟ್ - http://shrigurukulam.org/

    ತಮ್ಮ ಜೀವನೋಪಾಯಕ್ಕೆ ಇನ್ನೊಬರ ಬಗ್ಗೆ ಇಲ್ಲ ಸಲ್ಲದ್ದನ್ನು ಬರೆಯುವವರ, ಅದನ್ನೇ ಸತ್ಯವೆಂದು ನಂಬುವವರ ಬಗ್ಗೆ ಹೇಸಿಗೆಯಾಗುತ್ತದೆ.

    ReplyDelete
  20. Bhadti should respond to the comment of Mr.Srinivas,published above. We all,like minded readers, expect it from Mr.Bhadti.

    From : Harihar Bhat

    ReplyDelete